Home
ಸುದ್ದಿಜಾಲ

ಡಿಸ್ಕೌಂಟ್‌ ಬೆಲೆಯಲ್ಲಿ ಒಪ್ಪೋ ಫೈಂಡ್‌ N3 ಫ್ಲಿಪ್ ಖರೀದಿಸಲು ಈ ಆಫರ್‌ ಬೆಸ್ಟ್‌!

ಪ್ರಮುಖ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಇದೀಗ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ (Flipkart Big Saving Days) ಮಾರಾಟ ಮೇಳವನ್ನು ಪ್ರಾರಂಭಿಸಿದ್ದು, ಆನ್‌ಲೈನ್‌ ಶಾಪಿಂಗ್‌ ಪ್ರಿಯರ ಗಮನ ಸೆಳೆದಿದೆ. ಅಂದಹಾಗೆ ಈ ಮಾರಾಟ ಮೇಳವು ಇದೇ ಮೇ 9 ರ ವರೆಗೂ ಚಾಲ್ತಿ ಇರಲಿದೆ. ಈ ಮಾರಾಟ ಮೇಳದಲ್ಲಿ ಒಪ್ಪೋ ಫೈಂಡ್‌ N3 ಫ್ಲಿಪ್ ಸ್ಮಾರ್ಟ್‌ಫೋನ್‌ ಆಕರ್ಷಕ ರಿಯಾಯಿತಿ ಪಡೆದಿದೆ.

ಹೌದು, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಈಗ ಬಿಗ್‌ ಸೇವಿಂಗ್‌ ಡೇಸ್‌ ಲೈವ್ ಇದ್ದು ಈ ಮಾರಾಟದಲ್ಲಿ ಒಪ್ಪೋ ಫೈಂಡ್‌ N3 ಫ್ಲಿಪ್ ಸ್ಮಾರ್ಟ್‌ಫೋನ್‌ ಶೇ 8% ರಷ್ಟು ರಿಯಾಯಿತಿ ಪಡೆದಿದೆ. ಈ ಫೋನಿನ 12 GB RAM + 256 GB ವೇರಿಯಂಟ್‌ 91,900ರೂ. ಗಳ ಆಫರ್‌ ಬೆಲೆಯಲ್ಲಿ ಲಭ್ಯ ಇದೆ. ಅಲ್ಲದೇ ಲಭ್ಯ ಇರುವ ಬ್ಯಾಂಕ್‌ ಆಫರ್‌ ಪಡೆದುಕೊಂಡರೆ, ಮತ್ತಷ್ಟು ಡಿಸ್ಕೌಂಟ್‌ನಲ್ಲಿ ಈ ಫೋನ್‌ ಖರೀದಿಸಬಹುದು.

ಡಿಸ್ಕೌಂಟ್‌ ಬೆಲೆಯಲ್ಲಿ ಒಪ್ಪೋ ಫೈಂಡ್‌ N3 ಫ್ಲಿಪ್ ಖರೀದಿಸಲು ಈ ಆಫರ್‌ ಬೆಸ್ಟ್‌!

ಇನ್ನು ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9200SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಜೊತೆಗೆ ಇದು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾ ರಚನೆ ಪಡೆದಿದೆ. ಇದರೊಂದಿಗೆ 4,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಒಳಗೊಂಡಿದೆ. ಹಾಗಾದರೇ ಒಪ್ಪೋ ಫೈಂಡ್‌ N3 ಫ್ಲಿಪ್ ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ ಫೈಂಡ್‌ N3 ಫ್ಲಿಪ್ - ಫೀಚರ್ಸ್‌ ಹೀಗಿವೆ

ಒಪ್ಪೋ ಫೈಂಡ್‌ N3 ಫ್ಲಿಪ್ ಮೊಬೈಲ್‌ 6.8 ಇಂಚಿನ ಫುಲ್‌ HD LTPO AMOLED ಇನರ್‌ ಡಿಸ್‌ಪ್ಲೇ ಇದ್ದು, 1,080x2,520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಮೊಬೈಲ್‌ 3.26 ಇಂಚಿನ ಕವರ್‌ ಡಿಸ್‌ಪ್ಲೇ ಅನ್ನು ಕೂಡಾ ಪಡೆದಿದೆ. ಹಾಗೆಯೇ ಕವರ್‌ ಡಿಸ್‌ಪ್ಲೇಯು ಅಮೋಲೆಡ್‌ ಪ್ಯಾನಲ್‌ ಅನ್ನು ಹೊಂದಿದ್ದು, 900 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ.

ಒಪ್ಪೋ ಫೈಂಡ್‌ N3 ಫ್ಲಿಪ್ ಮೊಬೈಲ್‌ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9200SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಇದು ಆಂಡ್ರಾಯ್ಡ್ 13 ನಲ್ಲಿ ಒಪ್ಪೋದ ColorOS 13.2 ಸ್ಕಿನ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಹಾಗೆಯೇ ARM ಇಮ್ಮಾರ್ಟಲಿಸ್-G715 MC11 GPU ಅನ್ನು ಪಡೆದಿರುವ ಜೊತೆಗೆ 12GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಆಯ್ಕೆ ಇದೆ.

ಒಪ್ಪೋ ಫೈಂಡ್‌ N3 ಫ್ಲಿಪ್ ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ನಲ್ಲಿ ಇದೆ. ಸೆಕೆಂಡರಿ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದ್ದು, ಹಾಗೆಯೇ ಮೂರನೇ ಕ್ಯಾಮೆರಾ 32 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಪಡೆದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.

ಒಪ್ಪೋ ಫೈಂಡ್‌ N3 ಫ್ಲಿಪ್ ಮೊಬೈಲ್‌ 4,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಪಡೆದುಕೊಂಡಿದ್ದು, ಇದಕ್ಕೆ ಅನುಗುಣವಾಗಿ 44W SuperVOOC ಚಾರ್ಜಿಂಗ್‌ಗೆ ಸಪೋರ್ಟ್ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.3, NFC, GPS ಮತ್ತು USB ಟೈಪ್-C ಪೋರ್ಟ್ ಆಯ್ಕೆ ಕಾಣಬಹುದಾಗಿದೆ.

ಇನ್ನು ಒಪ್ಪೋ ಫೈಂಡ್‌ N3 ಫ್ಲಿಪ್ ಮೊಬೈಲ್‌ ಕ್ರೀಮ್ ಗೋಲ್ಡ್, ಮಿಸ್ಟಿ ಪಿಂಕ್, ಸ್ಲೀಕ್ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಈ ಫೋನ್‌ ಅನ್ನು ಒಪ್ಪೋದ ಅಧಿಕೃತ ಆನ್‌ಲೈನ್ ಸ್ಟೋರ್, ಅಮೆಜಾನ್‌ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದು.

Best Mobiles in India

English summary
Flipkart Big Saving Days: Huge Price Drop on OPPO Find N3 Flip Phone. check out all offer and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+