ಇತ್ತೀಚಿನ ಈ 108ಎಂಪಿ ಕ್ಯಾಮೆರಾ ಫೋನಿಗೆ ಈಗ ಭರ್ಜರಿ ಡಿಸ್ಕೌಂಟ್!
ಪ್ರಮುಖ ಇ ಕಾಮರ್ಸ್ ತಾಣವಾಗಿ ಎನಿಸಿರುವ ಫ್ಲಿಪ್‌ಕಾರ್ಟ್ ಸಂಸ್ಥೆ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ (Big Saving Days) ಇನ್ನು ಚಾಲ್ತಿ ಇದೆ. ಈ ಮಾರಾಟ ಮೇಳವು ಆನ್‌ಲೈನ್ ಮೂಲಕ ಹೊಸ ಫೋನ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಖುಷಿ ನೀಡಿದೆ. ಈ ಮೇಳದಲ್ಲಿ ಇತ್ತೀಚಿನ ಇನ್ಫಿನಿಕ್ಸ್ ನೋಟ್ 40 ಪ್ರೊ 5G ಬಿಗ್ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ ಆಗಲಿದೆ.
ಹೌದು, ದೈತ್ಯ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಗ್ರಾಹಕರ ಗಮನ ಸೆಳೆಯುತ್ತಿದೆ. ಈ ಸೇಲ್ ಮೇಳವು ಇಂದು ಇದೇ ಮೇ 9 ರ ವರೆಗೂ ಚಾಲ್ತಿ ಇರಲಿದೆ. ಇನ್ನು ಈ ಸೇಲ್‌ನಲ್ಲಿ ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊಬೈಲ್ ಶೇ. 21% ರಷ್ಟು ನೇರ ರಿಯಾಯಿತಿ ಪಡೆದುಕೊಂಡಿದೆ. ಈ ಫೋನಿನ 8 GB RAM + 256 GB ವೇರಿಯಂಟ್ 21,999ರೂ. ಗಳ ಆಫರ್ ಬೆಲೆ ಲಭ್ಯ. ಅಲ್ಲದೇ ಆಯ್ದ ಬ್ಯಾಂಕ್‌ನಿಂದ ಕೊಡುಗೆ ಸಹ ಲಭ್ಯ.

ಅಂದಹಾಗೆ ಇನ್ಫಿನಿಕ್ಸ್ ನ ಈ ಮೊಬೈಲ್ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾ ಪಡೆದಿದ್ದು, ಇದರ ಜೊತೆಗೆ 4,600 mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಸಹ ಹೊಂದಿದೆ. ಅಲ್ಲದೇ ಮೀಡಿಯಾಟೆಕ್ ಡೈಮೆನ್ಸಿಟಿ 7020 6nm ಪ್ರೊಸೆಸರ್‌ನಲ್ಲಿ ಕಾರ್ಯ ಮಾಡಲಿದೆ. ಇನ್ನುಳಿದಂತೆ ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಇನ್ಫಿನಿಕ್ಸ್ ನೋಟ್ 40 ಪ್ರೊ 5G ಫೀಚರ್ಸ್ ಹೀಗಿವೆ
ಇನ್ಫಿನಿಕ್ಸ್ ನೋಟ್ 40 ಪ್ರೊ 5G ಸ್ಮಾರ್ಟ್‌ಫೋನ್ 6.78 ಇಂಚಿನ FHD+ ಕರ್ವ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಅನ್ನು ಪಡೆದಿದ್ದು, 120Hz ರಿಫ್ರೆಶ್ ರೇಟ್, 1300 ನಿಟ್ಸ್ ವರೆಗಿನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಅಲ್ಲದೇ 2160Hz PWM ಡಿಮ್ಮಿಂಗ್ ಆಯ್ಕೆ ಕೂಡಾ ಈ ಫೋನ್ ಹೊಂದಿದೆ. ಜೊತೆಗೆ ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದುಕೊಂಡಿದೆ.
ಇನ್ಫಿನಿಕ್ಸ್ ನೋಟ್ 40 ಪ್ರೊ 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7020 6nm ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ 8 GB RAM + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಒಳಗೊಂಡಿದೆ.
ಇನ್ಫಿನಿಕ್ಸ್ ನೋಟ್ 40 ಪ್ರೊ 5G ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರ ಮೊದಲ ಕ್ಯಾಮೆರಾವು 108 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಕ್ಯಾಮೆರಾವನ್ನು ಹೊಂದಿದೆ. ಇನ್ನು ಇದರ ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸಲ್ ಸೆನ್ಸಾರ್ ಆಯ್ಕೆ ಪಡೆದಿದೆ. ಇನ್ನು ಇದರ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಆಯ್ಕೆಯನ್ನು ಪಡೆದಿದೆ.
ಇನ್ಫಿನಿಕ್ಸ್ ನೋಟ್ 40 ಪ್ರೊ+ ಸ್ಮಾರ್ಟ್‌ಫೋನ್ 4,600mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯವನ್ನು ಒಳಗೊಂಡಿದೆ. ಇದರ ಜೊತೆಗೆ 100W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಪಡೆದುಕೊಂಡಿದೆ. ಅಲ್ಲದೇ ಇದು 20W ವೈರ್‌ಲೆಸ್ ಮ್ಯಾಗ್‌ಚಾರ್ಜ್ ಸೌಲಭ್ಯ ಕೂಡಾ ಪಡೆದಿದೆ. ಇದರೊಂದಿಗೆ ಫಿಂಗರ್‌ಫ್ರಿಂಟ್ ಸೆನ್ಸರ್ ಜೆಬಿಎಲ್-ಟ್ಯೂನ್ ಸ್ಟಿರಿಯೊ ಸ್ಪೀಕರ್, IP53 ರೇಟಿಂಗ್ ಸೇರಿದಂತೆ ಇತರೆ ಸೌಲಭ್ಯಗಳು ಇವೆ.
ಇನ್ನು ಇನ್ಫಿನಿಕ್ಸ್ ನೋಟ್ 40 ಪ್ರೊ+ ಸ್ಮಾರ್ಟ್‌ಫೋನ್ 8 GB RAM + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಆಗಲಿದೆ. ಹಾಗೆಯೇ ಈ ಫೋನ್ ಅನ್ನು ಗ್ರಾಹಕರು ಟೈಟಾನ್ ಗೋಲ್ಡ್ ಹಾಗೂ ವಿಂಟೆಜ್ ಗ್ರೀನ್ ಕಲರ್ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ. ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಖರೀದಿಗೆ ಸಿಗಲಿದೆ.


Click it and Unblock the Notifications








