Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್ ಸೇಲ್: ಈ ಐಫೋನ್‌ಗಳಿಗೆ ಭಾರೀ ಡಿಸ್ಕೌಂಟ್!

ಜನಪ್ರಿಯ ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಏನಾದರೊಂದು ವಿಶೇಷ ಸೇಲ್‌ ಆಯೋಜಿಸುತ್ತಲೇ ಇರುತ್ತದೆ. ಮುಖ್ಯವಾಗಿ ಎಲೆಕ್ಟ್ರಾನಿಕ್ ಹಾಗೂ ಗ್ಯಾಡ್ಜೆಟ್ಸ್‌ಗಳಿಗೆ ವಿಶೇಷ ಡಿಸ್ಕೌಂಟ್‌ ಸೇಲ್‌ ಅನ್ನು ಆಯೋಜಿಸಿ ಗಮನ ಸೆಳೆದಿದೆ. ಫ್ಲಿಪ್‌ಕಾರ್ಟ್‌ ಇದೀಗ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್ 2021 ಸೇಲ್‌ ಅನ್ನು ಆಯೋಜಿಸಿದೆ. ಈ ವಿಶೇಷ ಸೇಲ್‌ನಲ್ಲಿ ಆಯ್ದ ಕೆಲವು ನೂತನ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ 2021 ಸೇಲ್‌ ಇದೀಗ ಲೈವ್‌ ಆಗಿದೆ. ಇನ್ನು ಈ ಮಾರಾಟ ಮೇಳವು ಇದೇ ಡಿಸೆಂಬರ್ 21 ರ ವರೆಗೂ ಚಾಲ್ತಿ ಇರಲಿದೆ. ಈ ಮಾರಾಟ ಮೇಳದಲ್ಲಿ ಜನಪ್ರಿಯ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಪೀಕರ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಿಗೆ ಬೊಂಬಾಟ್ ರಿಯಾಯಿತಿಯನ್ನು ತಿಳಿಸಿದೆ. ಆಪಲ್ ಐಫೋನ್‌ಗಳಿಗೂ ಭರ್ಜರಿ ಡಿಸ್ಕೌಂಟ್‌ ಲಭ್ಯ. ಹಾಗಾದರೇ ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್‌ ಸೇಲ್‌ನಲ್ಲಿ ಡಿಸ್ಕೌಂಟ್‌ನಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಪಲ್‌ ಐಫೋನ್‌ 12 ಮಿನಿ

ಆಪಲ್‌ ಐಫೋನ್‌ 12 ಮಿನಿ

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟದ ಸಮಯದಲ್ಲಿ ಐಫೋನ್‌ 12 ಮಿನಿ ಫೋನಿಗೂ ಆಕರ್ಷಕ ರಿಯಾಯಿತಿ ಲಭ್ಯ. ಈ ಫೋನ್ 64GB ವೇರಿಯಂಟ್ 44,199 ರೂ. ಗಳ ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇನ್ನು ಐಫೋನ್ 12 ಮಿನಿ 5.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಯನ್ನು ಪಡೆದಿದೆ.

ಆಪಲ್‌ ಐಫೋನ್‌ 12

ಆಪಲ್‌ ಐಫೋನ್‌ 12

ಫ್ಲಿಪ್‌ಕಾರ್ಟ್ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಜನಪ್ರಿಯ ಐಫೋನ್‌ 12 ಫೋನಿಗೂ ಬೊಂಬಾಟ್ ರಿಯಾಯಿತಿ ಲಭ್ಯ. ಈ ಫೋನ್ 64GB ವೇರಿಯಂಟ್ 54,199 ರೂ. ಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್ ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಇನ್ನು ಈ ಫೋನ್ ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ.

ಐಫೋನ್ SE

ಐಫೋನ್ SE

ಫ್ಲಿಪ್‌ಕಾರ್ಟ್ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಐಫೋನ್ SE ಫೋನಿಗೂ ದೊಡ್ಡ ರಿಯಾಯಿತಿ ನೀಡಿದೆ. ಈ ಫೋನ್ 64GB ಸ್ಟೋರೇಜ್‌ನ ಬೇಸ್ ವೇರಿಯಂಟ್ 30,199 ರೂ. ಗಳ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಆಪಲ್ ಐಫೋನ್ SE 4.7 ಇಂಚಿನ ರೆಟಿನಾ ಎಚ್‌ಡಿ ಮಾದರಿಯ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 750x1334 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ವೈಟ್ ಬ್ಯಾಲೆನ್ಸ್ ಹೊಂದಿಸಲು ಟ್ರೂ ಟೋನ್ ಟೆಕ್ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 625 ನಿಟ್‌ಗಳ ಗರಿಷ್ಠ ಬ್ರೈಟ್‌ನೆಶ್‌ ಅನ್ನು ನೀಡಲಿದೆ. ಈ ಫೋನ್ A 13 ಬಯೋನಿಕ್ SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಐಒಎಸ್‌ 13 ಬೆಂಬಲ ನೀಡಲಿದೆ. ಈ ಐಫೋನ್‌ 64GB, 128GB, ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯ.

ರಿಯಲ್‌ GT ಮಾಸ್ಟರ್ ಆವೃತ್ತಿ

ರಿಯಲ್‌ GT ಮಾಸ್ಟರ್ ಆವೃತ್ತಿ

ಫ್ಲಿಪ್‌ಕಾರ್ಟ್ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ರಿಯಲ್‌ GT ಮಾಸ್ಟರ್ ಆವೃತ್ತಿ ಆಕರ್ಷಕ ಡಿಸ್ಕೌಂಟ್ ಪಡೆದಿದೆ. ಈ ಫೋನ್ 7,000ರೂ, ರಿಯಾಯಿತಿ ಪಡೆದಿದ್ದು, 18,999ರೂ. ಗಳ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ರಿಯಲ್‌ಮಿ GT ಮಾಸ್ಟರ್ ಆವೃತ್ತಿ 6.43-ಇಂಚಿನ ಫುಲ್‌ ಹೆಚ್‌ಡಿ+ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ ಒಳಗೊಂಡಿದ್ದು, ಆಂಡ್ರಾಯ್ಡ್‌ 11ರ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ ಕೂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 4,300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ರೆಡ್ಮಿ 9i ಸ್ಪೋರ್ಟ್‌

ರೆಡ್ಮಿ 9i ಸ್ಪೋರ್ಟ್‌

ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಬಜೆಟ್‌ ದರದ ರೆಡ್ಮಿ 9i ಸ್ಪೋರ್ಟ್‌ ಫೋನಿಗೂ ಬೊಂಬಾಟ್ ರಿಯಾಯಿತಿ ಲಭ್ಯ. ಈ ಫೋನ್ 8,499ರೂ. ಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ರೆಡ್ಮಿ 9i ಸ್ಪೋರ್ಟ್ ಸ್ಮಾರ್ಟ್‌ಫೋನ್‌ 6.53 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಮಿಡಿಯಾಟೆಕ್‌ ಹಿಲಿಯೋ G25 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.ಇದು ಆಂಡ್ರಾಯ್ಡ್ 10 ಆಧಾರಿತ MIUI 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 4GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇನ್ನು ಈ ಫೋನ್‌ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

Best Mobiles in India

English summary
Flipkart Big Saving Days Sale: Best Discounts On iPhone 12, iPhone 12 mini and More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+