Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ ಸೇಲ್‌: ಅಗ್ಗದ ಬೆಲೆಯ ಈ ಫೋನ್‌ಗಳಿಗೂ ಸಿಗುತ್ತೆ ಭರ್ಜರಿ ಡಿಸ್ಕೌಂಟ್‌!

ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ಆಯೋಜಿಸಿರುವ ಬಿಗ್‌ ಸೇವಿಂಗ್‌ ಡೇಸ್‌ (Flipkart Big Saving Days) ಮಾರಾಟ ಈಗ ಲೈವ್‌ ಆಗಿದೆ. ಈ ಮಾರಾಟ ಇದೇ ಮೇ 9 ರ ವರೆಗೂ ನಡೆಯಲಿದೆ. ಈ ವಿಶೇಷ ಸೇಲ್‌ ಮೇಳದಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳು ಬೊಂಬಾಟ್‌ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಹೊಸ ಮೊಬೈಲ್‌ ಖರೀದಿಸುವ ಗ್ರಾಹಕರಿಗೆ ಗುಡ್‌ನ್ಯೂಸ್‌ ಎನಿಸಿದೆ.

ಹೌದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಚಾಲ್ತಿ ಇದ್ದು ಈ ಮಾರಾಟದಲ್ಲಿ ಕೆಲವು ಅಗ್ಗದ ಮೊಬೈಲ್‌ಗಳು ಸಹ ಭರ್ಜರಿ ರಿಯಾಯಿತಿ ಪಡೆದಿವೆ. ಅವುಗಳಲ್ಲಿ ಮೊಟೊರೊಲಾ, ರಿಯಲ್‌ಮಿ, ರೆಡ್ಮಿ, ವಿವೋ, ಐಟೆಲ್‌, ಪೊಕೊ ಹಾಗೂ ಇನ್ಫಿನಿಕ್ಸ್‌ ಬ್ರ್ಯಾಂಡ್‌ಗಳ ಮೊಬೈಲ್‌ಗಳು ಸೇರಿವೆ. ಹಾಗಾದರೇ ಸಖತ್ ಡಿಸ್ಕೌಂಟ್‌ ಪಡೆದಿರುವ 5 ಅಗ್ಗದ ಬೆಲೆಯ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಫ್ಲಿಪ್‌ಕಾರ್ಟ್‌ ಸೇಲ್‌: ಅಗ್ಗದ ಬೆಲೆಯ ಈ ಫೋನ್‌ಗಳಿಗೂ ಭರ್ಜರಿ ಡಿಸ್ಕೌಂಟ್‌!

ರಿಯಲ್‌ಮಿ C51 ಮೊಬೈಲ್‌

ರಿಯಲ್‌ಮಿ C51 ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದೆ. ಇದರ ಡಿಸ್‌ಪ್ಲೇ 1600 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಈ ಫೋನ್‌ UNISOC T612 ಚಿಪ್‌ಸೆಟ್‌ ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಇದು ಆಂಡ್ರಾಯ್ಡ್‌ 13 ಓಎಸ್‌ ಬೆಂಬಲದೊಂದಿಗೆ ಕೆಲಸ ಮಾಡಲಿದೆ.

ಹಾಗೆಯೇ ಈ ಮೊಬೈಲ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಕೂಡಾ ಇದು ಪಡೆದುಕೊಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ ಆಫರ್‌ ಬೆಲೆಯು 7,999ರೂ. ಗಳು ಆಗಿದೆ.

ಪೊಕೊ M6 ಪ್ರೊ 5G

ಪೊಕೊ ಸಂಸ್ಥೆಯ ಈ ಮೊಬೈಲ್‌ 6.79 ಇಂಚಿನ ಫುಲ್‌ ಹೆಚ್‌ಡಿ + ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಹೊಂದಿದ್ದು, 2460 x 1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಪಡೆದಿದೆ. ಹಾಗೆಯೇ ಈ ಮೊಬೈಲ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಸಹ ಪಡೆದಿದೆ.

ಅದೇ ರೀತಿ ಈ ಮೊಬೈಲ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಕೂಡಾ ಇದು ಪಡೆದುಕೊಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನಿನ ದರವು 9,999ರೂ. ಗಳು ಆಗಿದೆ.

ಮೊಟೊ G24 ಪವರ್‌

ಮೊಟೊ G24 ಪವರ್‌ ಮೊಬೈಲ್‌ 6.6 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಫೋನ್ 90Hz ರಿಫ್ರೆಶ್ ರೇಟ್‌ ಆಯ್ಕೆ ಜೊತೆಗೆ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಡಾಲ್ಬಿ ಅಟ್ಮಾಸ್ ಸೌಲಭ್ಯ ಸಹ ಹೊಂದಿದೆ. ಇದರೊಂದಿಗೆ ಮೀಡಿಯಾ ಟೆಕ್ ಹಿಲಿಯೋ G85 12nm ಪ್ರೊಸೆಸರ್ ಮೂಲಕ ಕೆಲಸ ಮಾಡಲಿದ್ದು, ಆಂಡ್ರಾಯ್ಡ್‌ 14 ಅನ್ನು ಸಪೋರ್ಟ್ ಇದೆ.

ಅಲ್ಲದ ಈ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ 6,000mAh
ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪ್ರಯೋಜನ ಸಹ ಒಳಗೊಂಡಿದೆ. ಇನ್ನು ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನಿನ ದರವು 7,999ರೂ. ಗಳು ಆಗಿದೆ.

Best Mobiles in India

English summary
Flipkart Big Saving Days Sale: Big discount on POCO M6 5G, Moto G24 Power and more. Know deals, offers, pricing and more here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+