ಇಂದು ಫ್ಲಿಪ್‌ಕಾರ್ಟ್ 'ಬಿಗ್ ಶಾಪಿಂಗ್ ಡೇಸ್' ಮೇಳ ಆರಂಭ!
ಜನಪ್ರಿಯ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಆನ್‌ಲೈನ್ ಶಾಪಿಂಗ್ ಗ್ರಾಹಕರಿಗೆ ಸದಾ ರಿಯಾಯಿತಿ ಕೊಡುಗೆಗಳನ್ನು ಘೋಷಿಸುತ್ತಲೆ ಇದ್ದು, ಇದೀಗ ಮತ್ತೆ 'ಬಿಗ್ ಶಾಪಿಂಗ್ ಡೇಸ್' ಹೆಸರಿನಲ್ಲಿ ಬಂಪರ ಆಫರ್ ಮೇಳವನ್ನು ಆಯೋಜಿಸಿದೆ. ಈ ಶಾಪಿಂಗ್ ಮೇಳದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಸರಿಸ್ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗಿದ್ದು, ಹಾಗೇ ಸ್ಮಾರ್ಟ್‌ಫೋನ್‌ಗಳು ಸಹ ಡಿಸ್ಕೌಂಟ್ ಬೆಲೆಯಲ್ಲಿ ದೊರೆಯಲಿವೆ.

ಹೌದು, ಫ್ಲಿಪ್‌ಕಾರ್ಟ್ ಇದೇ ಮೇ 15 ರಿಂದ 19 ರ ವರೆಗೂ ನಾಲ್ಕು ದಿನಗಳ 'ಬಿಗ್ ಶಾಪಿಂಗ್ ಡೇಸ್' ಮೇಳವು ಆಯೋಜಿಸಿದ್ದು, ಈ ಮೇಳವು (ಮೇ.15) ನಾಳೆಯಿಂದ ಆರಂಭವಾಗಲಿದೆ. ಮೇಳದಲ್ಲಿ ಲ್ಯಾಪ್‌ಟಪ್, ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಫೋನ್‌ಗಳಿ ಸೇರಿದಂತೆ ಹಲವು ಗ್ಯಾಜೆಟ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿ ದೊರೆಯಲಿದ್ದು, ಗ್ರಾಹಕರಿಗೆ ಶಾಪಿಂಗ್ ಮಾಡಲು ಒಂದೊಳ್ಳೆ ಸಮಯ ಇದಾಗಿದೆ.

ಇನ್ನು ಕೆಲವು ಆಯ್ದ ಬ್ಯಾಂಕ್‌ಗಳ ಡೇಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದದ ಗ್ರಾಹಕರಿಗೆ ನೋ ಕಾಸ್ಟ್ ಇಎಮ್ಐ ಆಯ್ಕೆಯ ಪ್ರಯೋಜನ ನೀಡಲಿರುವ ಜೊತೆಗೆ ಆಯ್ದ ಉತ್ಪನ್ನಗಳ ಖರೀದಿಯ ಮೇಲೆ ಇನ್‌ಸ್ಟಂಟ್ ಶೇ.10% ರಿಯಾಯಿತಿ ಸಹ ದೊರೆಯಲಿದೆ. ಹಾಗಾದರೇ ಫ್ಲಿಪ್‌ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಮೇಳದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಿರುವ ಡಿಸ್ಕೌಂಟ್ ಬಗ್ಗೆ ತಿಳಿಯಲು ಮುಂದೆ ಓದಿರಿ.

ಆಫರ್‌ನಲ್ಲಿರುವ ನೋಕಿಯಾ ಸ್ಮಾರ್ಟ್‌ಫೋನ್‌ಗಳು
ಜನಪ್ರಯ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನ್ 12,999ರೂ.ಗಳಿಗೆ ದೊರೆಯಲಿದ್ದು, ಇದರ ಎಮ್‌ಆರ್‌ಪಿ ಬೆಲೆಯು 17,600ರೂ.ಗಳು ಆಗಿದೆ. ನೋಕಿಯಾ 5.1 ಪ್ಲಸ್ ಬೆಲೆಯು 13,199ರೂ.ಗಳು ಆಗಿದ್ದು, ಆದರೆ ಆಫರ್‌ನಲ್ಲಿ ಕೆವಲ 7,999ರೂ.ಗಳಿಗೆ ದೊರೆಯಲಿದೆ.

ಆಫರ್‌ನಲ್ಲಿರುವ ಆಸೂಸ್ ಸ್ಮಾರ್ಟ್‌ಫೋನ್‌ಗಳು
ಆಸೂಸ್ ಕಂಪನಿಯ 4GB RAM ಮತ್ತು 64GB ವೇರಿಯಂಟ್‌ನ ಝೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1 ಸ್ಮಾರ್ಟ್‌ಫೋನ್ ಬೆಲೆಯು 12,999 ಆಗಿದ್ದು, ಆಫರ್‌ನಲ್ಲಿ 8,999ರೂ.ಗಳಿಗೆ ದೊರೆಯಲಿದೆ. ಹಾಗೇ ಝೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ2 ಸ್ಮಾರ್ಟ್‌ಫೋನ್ ಆಫರ್‌ನಲ್ಲಿ 9,999ರೂ.ಗಳಿಗೆ ಲಭ್ಯವಾಗಿದ್ದು, ಇದರ ಬೆಲೆಯು 15,999ರೂ.ಗಳು ಆಗಿದೆ.

ಆಫರ್‌ನಲ್ಲಿರುವ ಹಾನರ್ ಸ್ಮಾರ್ಟ್‌ಫೋನ್‌ಗಳು
ಹಾನರ್ ಕಂಪನಿಯ ಹಾನರ್ 8ಎಕ್ಸ್ ಸ್ಮಾರ್ಟ್‌ಫೋನ್ ಆಫರ್ ಬೆಲೆಯು 14,999ರೂ.ಗಳು ಆಗಿದ್ದು, ಇದರ ಬೆಲೆಯು 19,999ರೂ.ಗಳು ಆಗಿದೆ. ಹಾನರ್ 10 ಲೈಟ್ ಸ್ಮಾರ್ಟ್‌ಫೋನ್ ಆಫರ್ ಬೆಲೆಯು 12,999ರೂ.ಗಳಲ್ಲಿ ದೊರೆಯಲಿದ್ದು, ಇದರ ಬೆಲೆಯು 16,999ರೂ.ಗಳು ಆಗಿದೆ. ಹಾನರ್ 9 ಲೈಟ್ ಆಫರ್ ಪ್ರೈಸ್ 9,999ರೂ.ಗಳು ಆಗಿದೆ.

ಆಫರ್‌ನಲ್ಲಿರುವ ಶಿಯೋಮಿ ಸ್ಮಾರ್ಟ್‌ಫೋನ್‌ಗಳು
ಶಿಯೋಮಿ ರೆಡ್ಮಿ 6 ಸ್ಮಾರ್ಟ್‌ಫೋನ್ ಆಫರ್ ಬೆಲೆಯು 6,999ರೂ.ಗಳು ಆಗಿದ್ದು, ಇದರ ಬೆಲೆಯು 8,999ರೂ.ಗಳು. ಹಾಗೇ ರೆಡ್ಮಿ ವೈ 2 ಸ್ಮಾರ್ಟ್‌ಫೋನ್ ಈ ಮೊದಲ ಬೆಲೆಯು 10,499ರೂ.ಗಳು ಆಗಿದ್ದು, ಆಫರ್‌ನಲ್ಲಿ 7,999ರೂ.ಗಳಿಗೆ ದೊರೆಯಲಿದೆ.

ಇತರೆ ಆಫರರ್‌ಗಳು
ಸ್ಮಾರ್ಟ್‌ಫೋನ್‌ಗಳಿಗಷ್ಟೆ ರಿಯಾಯಿತಿ ನೀಡಲಾಗಿಲ್ಲ ಬದಲಾಗಿ ಸ್ಮಾರ್ಟ್‌ಫೋನ್ ಆಕ್ಸಸರಿಸ್‌ಗಳಿಗೂ ಮತ್ತು ಹೆಡ್‌ಫೋನ್, ಇಯರ್‌ಫೋನ್, ಸ್ಪೀಕರ್ಸ್ ಹಾಗೂ ಇತರೆ ಗ್ಯಾಜೆಟ್ ಉತ್ಪನ್ನಗಳ ಮೇಲು ಡಿಸ್ಕೌಂಟ್ ಇರಲಿದೆ.


Click it and Unblock the Notifications








