'ಬಿಗ್ ಶಾಪಿಂಗ್ ಡೇಸ್'ನಲ್ಲಿ ಈ 5 ಗ್ಯಾಜೆಟ್‌ಗಳಿಗೆ ಬಿಗ್ ಡಿಸ್ಕೌಂಟ್!
ಆಫರ್‌ಗಳ ಬಿಗ್ ಇ ಕಾಮರ್ಸ್ ಮಾರುಕಟ್ಟೆಯೆಂದು ಗುರುತಿಸಿಕೊಂಡಿರುವ ಫ್ಲಿಪ್‌ಕಾರ್ಟ್ ಇದೀಗ ಬಿಗ್ ಶಾಪಿಂಗ್ ಡೇಸ್ ಮೇಳವನ್ನು ಆಯೋಜಿಸಿದೆ. ಈ ಮೇಳವು ಇದೇ ಜುಲೈ 15ರಂದು ಆರಂಭವಾಗಿದ್ದು ಇದೇ ಜುಲೈ 18ರಂದು ಕೊನೆಗೊಳ್ಳಲಿದೆ. ಶಾಪಿಂಗ್ ಮೇಳದಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಸ್ಮಾರ್ಟ್‌ಡಿವೈಸ್‌ಗಳು ಸೇರಿದಂತೆ ಹಲವು ಗ್ಯಾಜೆಟ್ ಉತ್ಪನ್ನಗಳು ಬಿಗ್ ಡಿಸ್ಕೌಂಟ್‌ನಲ್ಲಿ ದೊರೆಯಲಿವೆ.

ಹೌದು, ಫ್ಲಿಪ್‌ಕಾರ್ಟ್‌ನ 'ಬಿಗ್ ಶಾಪಿಂಗ್ ಡೇಸ್' ಮೇಳದಲ್ಲಿ ಗೂಗಲ್, ಸ್ಯಾಮ್‌ಸಂಗ್, ಹುವಾವೆ, ಸಿಯೋಮಿ, ಸೇರಿದಂತೆ ಪ್ರಮುಖ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್ ಲಭ್ಯವಿದ್ದು, ಹಾಗೆಯೇ ಆಯ್ದ ಪ್ರಮುಖ ಲ್ಯಾಪ್‌ಟಾಪ್‌ಗಳಿಗೂ, ಮತ್ತು ಸ್ಮಾರ್ಟ್‌ವಾಚ್ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ಆಫರ್ ಲಭ್ಯ ಇವೆ. ಹಾಗಾದರೇ ಫ್ಲಿಪ್‌ಕಾರ್ಟ್‌ನ ಬಿಗ್ ಶಾಪಿಂಗ್ ಡೇಸ್ ಮೇಳದಲ್ಲಿ ಲಭ್ಯವಿರುವ 5 ಬೆಸ್ಟ್ ಡೀಲ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಗೂಗಲ್ ಪಿಕ್ಸಲ್ 3
5.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ OLED ಡಿಸ್‌ಪ್ಲೇಯನ್ನು ಹೊಂದಿರುವ ಗೂಗಲ್ ಪಿಕ್ಸಲ್ 3 ಸ್ಮಾರ್ಟ್‌ಫೋನ್ ಡ್ಯುಯಲ್ ಫ್ರಂಟ್ ಫೇಸಿಂಗ್ ಸ್ಪೀಕರ್ ಆಯ್ಕೆಯನ್ನು ಒಳಗೊಂಡಿದೆ. 4GB RAM ಜೊತೆಗೆ 64GB ಮತ್ತು 128GB ಸ್ಟೋರೇಜ್ ಆಯ್ಕೆ ಇದ್ದು, ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್ ಶಕ್ತಿಯನ್ನು ತುಂಬಿಕೊಂಡಿದೆ. 71,000,ರೂ ಬೆಲೆಯ ಈ ಸ್ಮಾರ್ಟ್‌ಫೋನ್ ಆಫರ್‌ನಲ್ಲಿ 49,999,ರೂ.ಗಳಿಗೆ ದೊರೆಯಲಿದೆ.

ಶಿಯೋಮಿ ಪೊಕೊ ಎಫ್1
ಶಿಯೋಮಿಯ ಬೆಸ್ಟ್ ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್ ಆಗಿರುವ ಪೊಕೊ ಎಫ್1 ಬಿಗ್ ಶಾಪಿಂಗ್ ಡೇಸ್ ಮೇಳದಲ್ಲಿ 17,999ರೂ.ಗಳಿಗೆ ಲಭ್ಯವಾಗಲಿದೆ. ಇದರೊಂದಿಗೆ 5000ರೂ.ಗಳ ಎಕ್ಸ್‌ಚೇಂಜ್ ಆಫರ್ ಸಹ ಇದೆ. 6GB/8GB RAM ಮತ್ತು 64GB/128GB/256GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದ್ದು, 4,000mAh ಬ್ಯಾಟರಿಯೊಂದಿಗೆ, ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್ ಶಕ್ತಿಯನ್ನು ಒಳಗೊಂಡಿದೆ.

ಆಪಲ್ ವಾಚ್ ಸಿರೀಸ್ 4
ಆಪಲ್ ವಾಚ್ ಸಿರೀಸ್ 4 ಡಿವೈಸ್ 40mm ಮತ್ತು 44mm ಗಾತ್ರದ ಆಯ್ಕೆಯಲ್ಲಿದ್ದು, ಮಾಡರ್ನ್ ಡಿಸೈನ್‌ನಲ್ಲಿದೆ. ಹಾಗೆಯೇ ಸ್ವಿಮ್ಮ ಪ್ರೊಫ್ ಬಾಡಿ, ಬಿಲ್ಟ್ ಇನ್ ಜಿಪಿಎಸ್ ಫೀಚರ್ಸ್‌ಗಳೊಂದಿಗೆ ಅತ್ಯುತ್ತಮ ಬ್ಯಾಟರಿ ಬಾಳಿಕೆಯ ಶಕ್ತಿ ಹೊಂದಿದೆ. ಇಸಿಜಿ ಮತ್ತು ಡೈಲಿ ಆಕ್ಟಿವಿಟಿಗಳನ್ನು ಟ್ರಾಕ್ ಮಾಡುವ ಆಯ್ಕೆಗಳನ್ನು ಒಳಗೊಂಡಿದೆ. ಬಿಗ್ ಶಾಪಿಂಗ್ ಸೇಲ್ ಮೇಳದಲ್ಲಿ 34,900ರೂ.ಗಳಿಗೆ ದೊರೆಯಲಿದೆ.

ಆಸೂಸ್ ವಿವೋಬುಕ್ 14
8ನೇ ತಲೆಮಾರಿನ ಕೋರ್ i5-8265U ಪ್ರೊಸೆಸರ್ ಶಕ್ತಿಯನ್ನು ಹೊಂದಿರುವ ಆಸೂಸ್ ವಿವೋಬುಕ್ 14 ಲ್ಯಾಪ್‌ಟಾಪ್ 14 ಇಂಚಿನ ಹೆಚ್‌ಡಿ ಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. 8GB RAM ಮತ್ತು 512GB SSD ಸ್ಟೋರೇಜ್ ಸೌಲಭ್ಯವನ್ನು ಒಳಗೊಂಡಿರುದ್ದು, ಫಿಂಗರ್‌ಪ್ರಿಂಟ್ ರಿಡರ್ ಆಯ್ಕೆ ಇದೆ. ಹಾಗೆಯೇ ಪ್ರಿ ಇನ್‌ಸ್ಟಾಲ್‌ಡ್ ವಿಂಡೊಸ್ 10 ಓಎಸ್ ಹೊಂದಿದ್ದು, ಆಫರ್‌ನಲ್ಲಿ 46,990ರೂ.ಗಳಿಗೆ ದೊರೆಯಲಿದೆ.

ಸ್ಮಾರ್ಟ್‌ಡಿವೈಸ್ ಮತ್ತು ಹೋಮ್ ಪ್ರೊಡೆಕ್ಟ್
ಫ್ಲಿಪ್‌ಕಾರ್ಟ್‌ನ 'ಬಿಗ್ ಶಾಪಿಂಗ್ ಡೇಸ್' ಮೇಳದಲ್ಲಿ ಫಿಟ್‌ಬಿಟ್ ಚಾರ್ಜ್ ಡಿವೈಸ್ 4,999ರೂ.ಗೆ ಲಭ್ಯವಿದ್ದು, ಆಪಲ್ ಸ್ಮಾರ್ಟ್‌ವಾಚ್ ಸೆರೀಸ್ 3 ಡಿವೈಸ್ 24,900ರೂ.ಗಳಿಗೆ ದೊರೆಯಲಿದೆ. ಹಾಗೆಯೇ ಶಿಯೋಮಿ ಮಿ ಸ್ಮಾರ್ಟ್ ಕ್ಯಾಮೆರಾ 1,990ರೂ.ಗಳಿಗೆ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಸಬಹುದಾಗಿದೆ. ಗೂಗಲ್ ಹೋಮ್ ಮತ್ತು ಮಿನಿ ಸ್ಮಾರ್ಟ್ ಸ್ಪೀಕರ್ಸ್‌ಗಳು 2,499ರೂ.ಗಳಿಗೆ ಲಭ್ಯವಾಗಲಿದೆ.


Click it and Unblock the Notifications








