ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್‌ ಸೇಲ್‌ನಲ್ಲಿ ನೋಕಿಯಾ ಟಿವಿಗಳಿಗೆ ಆಫರ್‌!

|

ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಈಗಾಗಲೇ ಒಂದಿಲ್ಲೊಂದು ಆಫರ್‌ಗಳಿಂದ ಗ್ರಾಹಕರ ಮನಗೆದ್ದಿದೆ. ಅದರಲ್ಲಿಯೂ ಫ್ಲಿಪ್‌ಕಾರ್ಟ್‌ ಆಯೋಜಿಸುವ ಬಿಗ್ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಆಯ್ದ ಕೆಲವು ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್‌ ಲಭ್ಯ ಇರುತ್ತದೆ. ಈ ನಿಟ್ಟಿನಲ್ಲಿ ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಟಿವಿ ಹಾಗೂ ಸ್ಮಾರ್ಟ್‌ಫೋನ್ ಖರೀದಿಸುವವರು ಈ ದಿನಗಳಿಗಾಗಿ ಕಾದಿರುತ್ತಾರೆ. ಅಂತಹ ಗ್ರಾಹಕರಿಗೆ ಫ್ಲಿಪ್‌ಕಾರ್ಟ್‌ ಈಗ ಭಾರಿ ಗುಡ್‌ನ್ಯೂಸ್‌ ನೀಡಿದೆ.

ಡೇಸ್‌ ಸೇಲ್

ಹೌದು, ಇ-ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ ಶುರುವಾಗಲಿರುವ ಬಿಗ್ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಈ ಬಾರಿ ಸ್ಮಾರ್ಟ್‌ಟಿವಿ ಖರೀದಿಸುವವರಿಗೆ ಖುಷಿ ಸುದ್ದಿ ನೀಡಿದೆ. ಈ ಸೇಲ್‌ನಲ್ಲಿ ಸಂಸ್ಥೆಯು ಒಟ್ಟು ಆರು ನೋಕಿಯಾ ಸ್ಮಾರ್ಟ್‌ಟಿವಿಗಳನ್ನು ತರಲಿದೆ. 32ಇಂಚು, 43 ಇಂಚು, 50 ಇಂಚು, 55 ಇಂಚು, 65 ಇಂಚಿನ ಗಾತ್ರದ ಮಾಡೆಲ್‌ನಲ್ಲಿ ಇರಲಿವೆ. ಇನ್ನು 32 ಇಂಚಿನ ನೋಕಿಯಾ ಸ್ಮಾರ್ಟ್‌ಟಿವಿಯ ಬೆಲೆಯು ಜಸ್ಟ್‌ 12,999ರೂ. ಎನ್ನಲಾಗಿದೆ.

ನೋಕಿಯಾದ

ಹಾಗೆಯೇ ನೋಕಿಯಾದ 43 ಇಂಚಿನ ಹೆಚ್‌ಡಿ ರೆಡಿ ಟಿವಿ ಬೆಲೆಯು 22,999 ರೂ. ಆಗಿರಲಿದ್ದು, ಇನ್ನು ಫುಲ್ ಹೆಚ್‌ಡಿ ರೂಪಾಂತರದ ಬೆಲೆ 28,999ರೂ. ಆಗಿರಲಿದೆ. ನೋಕಿಯಾ 50 ಇಂಚಿನ ಟಿವಿಯ ಬೆಲೆ 33,999ರೂ, ಅದೇ ರೀತಿ 55 ಇಂಚಿನ ಟಿವಿ ಬೆಲೆಯು 39,999ರೂ ಹಾಗೂ ಕೊನೆಯದಾಗಿ 65 ಇಂಚಿನ ಸ್ಮಾರ್ಟ್‌ಟಿವಿಯ ಬೆಲೆ 59,999 ರೂ. ಆಗಿರಲಿದೆ ಎಂದು ಹೇಳಲಾಗಿದೆ.

ಸ್ಮಾರ್ಟ್

ನೋಕಿಯಾ ಸ್ಮಾರ್ಟ್ ಟಿವಿ ಶ್ರೇಣಿಯು ಮೈಕ್ರೋ ಡಿಮ್ಮಿಂಗ್, ಮ್ಯಾಕ್ಸ್‌ಬ್ರೈಟ್ ಡಿಸ್ಪ್ಲೇ ಮತ್ತು ಸುಧಾರಿತ ಕಾಂಟ್ರಾಸ್ಟ್ ಅನುಪಾತವನ್ನು ಒಳಗೊಂಡಂತೆ ಉತ್ತಮ ಮತ್ತು ಜೀವನ-ರೀತಿಯ ವೀಕ್ಷಣೆಯ ಗುಣಮಟ್ಟ ಮತ್ತು ಪ್ರದರ್ಶನವನ್ನು ಖಚಿತಪಡಿಸುತ್ತದೆ. ಟಿವಿಗಳಲ್ಲಿ 50 ಇಂಚಿನ, 55 ಇಂಚಿನ, ಮತ್ತು 65 ಇಂಚಿನ ಮಾದರಿಗಳಲ್ಲಿ 48W ಧ್ವನಿ ಶಕ್ತಿ (30W ಸ್ಪೀಕರ್‌ಗಳು + 18W ಟ್ವೀಟರ್‌ಗಳು) ಮತ್ತು 32 ಇಂಚಿನ ಮತ್ತು 43 ಇಂಚಿನ ಮಾದರಿಗಳಲ್ಲಿ 39W ಧ್ವನಿ ಶಕ್ತಿ (24W ಸ್ಪೀಕರ್‌ಗಳು + 15W ಟ್ವೀಟರ್‌ಗಳು) ಅಳವಡಿಸಲಾಗಿದೆ.

ಆಂಡ್ರಾಯ್ಡ್

ನೋಕಿಯಾ ಸ್ಮಾರ್ಟ್ ಟಿವಿಗಳು ಆಂಡ್ರಾಯ್ಡ್ 9.0 ನಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಕ್ವಾಡ್-ಕೋರ್ ಪ್ರೊಸೆಸರ್ನಿಂದ ನಿಯಂತ್ರಿಸಲ್ಪಡುತ್ತವೆ. RAM ಗೆ ಸಂಬಂಧಿಸಿದಂತೆ, UHD ಶ್ರೇಣಿ (43-ಇಂಚು, 50-ಇಂಚು, 55-ಇಂಚು, 65-ಇಂಚು) 2GB RAM ಮತ್ತು 16GB ಆಂತರಿಕ ಸಂಗ್ರಹಣೆಯನ್ನು ಹೊಂದಿದ್ದರೆ, FHD ರೂಪಾಂತರಗಳು 1.5GB RAM ಮತ್ತು 8GB ಆಂತರಿಕ ಸಂಗ್ರಹಣೆಯನ್ನು ಹೊಂದಿವೆ. ಟಿವಿಗಳು ಮೂರು ಯುಎಸ್‌ಬಿ ಪೋರ್ಟ್‌ಗಳನ್ನು ಮತ್ತು ಎರಡು ಎಚ್‌ಡಿಎಂಐ ಪೋರ್ಟ್ ಜೊತೆಗೆ ಅಂತರ್ನಿರ್ಮಿತ ವೈಫೈ ಮತ್ತು ಬ್ಲೂಟೂತ್ ಅನ್ನು ಹೊಂದಿವೆ.

Best Mobiles in India

English summary
Flipkart has announced six Nokia Smart TVs ahead of the Big Billion Shopping Days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X