Home
ಸುದ್ದಿಜಾಲ

ಹಬ್ಬದ ಸೇಲ್ ವೇಳೆ ಫೋನ್‌ಗಳಿಗೆ ಬೊಂಬಾಟ್ ಆಫರ್ ಘೋಷಿಸಿದ 'ಫ್ಲಿಪ್‌ಕಾರ್ಟ್‌'!

ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಏನಾದರೊಂದು ವಿಶೇಷ ಸೇಲ್‌ ಆಯೋಜಿಸುತ್ತಲೇ ಮುನ್ನಡೆದಿದೆ. ಸೇಲ್‌ ನಲ್ಲಿ ಎಲೆಕ್ಟ್ರಾನಿಕ್ ಹಾಗೂ ಗ್ಯಾಡ್ಜೆಟ್ಸ್‌ಗಳಿಗೆ ಭಾರೀ ರಿಯಾಯಿತಿ ಕೊಡುಗೆಗಳನ್ನು ನೀಡುತ್ತ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಇದೀಗ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಫ್ಲಿಪ್‌ಕಾರ್ಟ್‌ ಈಗ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್ 2021 ಸೇಲ್‌ ಅನ್ನು ಘೋಷಿಸಿದೆ. ಈ ಹಬ್ಬದ ಸೇಲ್‌ನಲ್ಲಿ ಆಯ್ದ ಕೆಲವು ನೂತನ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ರಿಯಾಯಿತಿಗಳನ್ನು ತಿಳಿಸಿದೆ.

ಹಬ್ಬದ ಸೇಲ್ ವೇಳೆ ಫೋನ್‌ಗಳಿಗೆ ಬೊಂಬಾಟ್ ಆಫರ್ ಘೋಷಿಸಿದ 'ಫ್ಲಿಪ್‌ಕಾರ್ಟ್‌'!

ಹೌದು, ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಬಿಗ್ ಸೇವಿಂಗ್ ಡೇಸ್ 2021 ಸೇಲ್‌ ಅನ್ನು ಘೋಷಿಸಿದೆ. ಈ ಸೇಲ್ ಇದೇ ಅಕ್ಟೋಬರ್ 3ರಂದು ಶುರುವಾಗಲಿದ್ದು, ಅಕ್ಟೋಬರ್ 10ರ ವರೆಗೂ ಚಾಲ್ತಿ ಇರಲಿದೆ ಎಂದು ತಿಳಿಸಿದೆ. ಇನ್ನು ಫ್ಲಿಪ್‌ಕಾರ್ಟ್‌ ತಾಣವು 'ಕರ್ಟನ್ ರೈಸರ್ ಡೀಲ್‌ಗಳು' - Curtain Raiser Deals ಅಡಿಯಲ್ಲಿ ಕೆಲವು ಫೋನ್‌ಗಳನ್ನು ಲಿಸ್ಟ್‌ ಮಾಡಿದ್ದು, ಗ್ರಾಹಕರು ಬಿಗ್ ಸೇವಿಂಗ್ ಡೇಸ್ 2021 ಸೇಲ್‌ ಪ್ರಾರಂಭಕ್ಕೂ ಮುನ್ನ ಖರೀದಿಸಬಹುದಾಗಿದೆ.

ಮುಖ್ಯವಾಗಿ ಈ ಸೇಲ್‌ನಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ದೊರೆಯಲಿದೆ. ಹೆಚ್ಚುವರಿಯಾಗಿ, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರು ಹೆಚ್ಚುವರಿ 10% ತ್ವರಿತ ರಿಯಾಯಿತಿ ಪಡೆಯಬಹುದು. ಹಾಗೆಯೇ ಯುಪಿಐ ಪೇಮೆಂಟ್‌ಗಳಲ್ಲಿಯೂ ರಿಯಾಯಿತಿ ಪಡೆಯಬಹುದು. ಹಾಗಾದರೇ ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್‌ ಸೇಲ್‌ನಲ್ಲಿ ರಿಯಾಯಿತಿಯಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹಬ್ಬದ ಸೇಲ್ ವೇಳೆ ಫೋನ್‌ಗಳಿಗೆ ಬೊಂಬಾಟ್ ಆಫರ್ ಘೋಷಿಸಿದ 'ಫ್ಲಿಪ್‌ಕಾರ್ಟ್‌'!

ಆಪಲ್ ಐಫೋನ್ SE (2020) ಡಿಸ್ಕೌಂಟ್
ಆಪಲ್ ಐಫೋನ್ SE (2020) 4.7-ಇಂಚಿನ ರೆಟಿನಾ ಎಚ್‌ಡಿ ಮಾದರಿಯ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 750x1334 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ವೈಟ್ ಬ್ಯಾಲೆನ್ಸ್ ಹೊಂದಿಸಲು ಟ್ರೂ ಟೋನ್ ಟೆಕ್ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 625 ನಿಟ್‌ಗಳ ಗರಿಷ್ಠ ಬ್ರೈಟ್‌ನೆಶ್‌ ಅನ್ನು ನೀಡಲಿದೆ. ಇದು A 13 ಬಯೋನಿಕ್ SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಐಒಎಸ್‌ 13 ಬೆಂಬಲ ನೀಡಲಿದೆ. ಇನ್ನು ಈ ಐಫೋನ್ 64GB, 128GB, ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯ. ಕರ್ಟನ್ ರೈಸರ್ ಡೀಲ್‌ಗಳು ಅಡಿಯಲ್ಲಿ ಈ ಫೋನ್ 64GB ವೇರಿಯಂಟ್ 25,999ರೂ.ಗಳಲ್ಲಿ ಕಾಣಿಸಿಕೊಂಡಿದೆ.

ರಿಯಲ್‌ಮಿ 8i
ರಿಯಲ್‌ಮಿ 8i ಸ್ಮಾರ್ಟ್‌ಫೋನ್‌ 6.6-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೋ G96 ಪ್ರೊಸೆಸರ್ ಹೊಂದಿದೆ. ಜೊತೆಗೆ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಅಲ್ಲದೆ 5GB RAM ವರೆಗೆ ವಿಸ್ತರಿಸುಬಹುದಾದ ವರ್ಚುವಲ್‌ RAM ಆಯ್ಕೆಯನ್ನು ಸಹ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಹೊಂದಿದೆ. ಎರಡು ಮತ್ತು ಮೂರನೇ ಕ್ಯಾಮೆರಾ 2MP ಸೆನ್ಸಾರ್‌ ಹೊಂದಿದೆ. ಇದು 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕರ್ಟನ್ ರೈಸರ್ ಡೀಲ್‌ಗಳು ಅಡಿಯಲ್ಲಿ ಈ ಫೋನಿನ ಬೇಸ್‌ ವೇರಿಯಂಟ್ 12,999ರೂ.ಗಳಿಗೆ ಕಾಣಿಸಿಕೊಂಡಿದೆ.

ಹಬ್ಬದ ಸೇಲ್ ವೇಳೆ ಫೋನ್‌ಗಳಿಗೆ ಬೊಂಬಾಟ್ ಆಫರ್ ಘೋಷಿಸಿದ 'ಫ್ಲಿಪ್‌ಕಾರ್ಟ್‌'!

ಗೂಗಲ್ ಪಿಕ್ಸಲ್ 4a
ಫ್ಲಿಪ್‌ಕಾರ್ಟ್‌ ಕರ್ಟನ್ ರೈಸರ್ ಡೀಲ್‌ಗಳು ಅಡಿಯಲ್ಲಿ ಗೂಗಲ್ ಪಿಕ್ಸಲ್ 4a ಫೋನ್ ಆಫರ್‌ನಲ್ಲಿ ಕಾಣಿಸಿಕೊಂಡಿದೆ. ಮಾರಾಟದ ವೇಳೆ ಈ ಫೋನ್‌ ಅನ್ನು 25,999 ರೂ.ಗಳಿಗೆ ಖರೀದಿಸಬಹುದು.

ಪೊಕೊ X3 ಪ್ರೊ
ಫ್ಲಿಪ್‌ಕಾರ್ಟ್‌ ಕರ್ಟನ್ ರೈಸರ್ ಡೀಲ್‌ಗಳು ಅಡಿಯಲ್ಲಿ ಪೊಕೊ X3 ಪ್ರೊ ಆಫರ್‌ನಲ್ಲಿ ಕಾಣಿಸಿಕೊಂಡಿದೆ. 6GB RAM + 128GB ಸ್ಟೋರೇಜ್ ಹೊಂದಿರುವ ಫೋನ್ ಅನ್ನು 16,999ರೂ.ಗಳಿಗೆ ಪಡೆಯಬಹುದು. ಹಾಗೆಯೇ 8GB RAM + 128GB ಸ್ಟೋರೇಜ್ ಮಾದರಿಯನ್ನು 18,999ರೂ.ಗಳಿಗೆ ಖರೀದಿಸಬಹುದು.

Best Mobiles in India

English summary
Flipkart Curtain Raiser Sale Begins: Massive Discount On These Smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+