Nothing phone: ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್! ನಥಿಂಗ್ ಫೋನ್ 2ಗೆ ಸಖತ್ ಡಿಸ್ಕೌಂಟ್.. ಭರ್ಜರಿ ಉಳಿತಾಯ
ಸ್ಮಾರ್ಟ್‌ಫೋನ್ (Smartphone) ಖರೀದಿ ಮಾಡುವುದು ಅಥವಾ ಹೊಸ ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಆಗುವುದು ಎಲ್ಲರಿಗೂ ಇಷ್ಟವಾಗುವ ವಿಷಯ. ಆದರೆ ಹಲವರಿಗೆ ಆರ್ಥಿಕ ಸಮಸ್ಯೆಯಿಂದ ಹೊಸ ಫೋನ್ ಖರೀದಿ ಮಾಡಲು ಆಗುವುದಿಲ್ಲ. ಈ ಕಾರಣಕ್ಕೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಆಗಾಗ್ಗೆ ವಿಶೇಷ ಸೇಲ್ ಆಯೋಜನೆ ಮಾಡುವ ಮೂಲಕ ಸ್ಮಾರ್ಟ್ ಡಿವೈಸ್‌ಗಳಿಗೆ ಭರ್ಜರಿ ಡಿಸ್ಕೌಂಟ್ ನೀಡುತ್ತವೆ.
ಹೌದು, ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡಲು ಇಚ್ಚಿಸಿದ್ದರೆ ಅಥವಾ ಹಳೆಯ ಫೋನ್‌ನಿಂದ ಹೊಸ ಫೋನ್‌ಗೆ ಅಪ್‌ಗ್ರೇಡ್ ಆಗಬೇಕು ಎಂದುಕೊಂಡಿದ್ದರೆ ನೀವು ಭಾರೀ ಆಫರ್‌ನಲ್ಲಿ ನಥಿಂಗ್ ಫೋನ್ 2 (Nothing phone 2) ಅನ್ನು ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಅನ್ನು ಇತ್ತೀಚೆಗಷ್ಟೇ ಲಾಂಚ್ ಮಾಡಲಾಗಿದ್ದು, ಅಮೋಲೆಡ್ ಡಿಸ್‌ಪ್ಲೇ ಆಯ್ಕೆ, 512GB ಇಂಟರ್ ಸ್ಟೋರೇಜ್ ಸೇರಿದಂತೆ ವಿಶೇಷ ಫೀಚರ್ಸ್ ಅನ್ನು ಹೊಂದಿದೆ. ಹಾಗಿದ್ರೆ, ಈ ಫೋನ್ ಇತರೆ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ನಥಿಂಗ್ ಫೋನ್ 2 ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್‌ನ ಆಫರ್ ವಿಚಾರ ತಿಳಿಯುವ ಮುನ್ನ ಇದರ ಪ್ರಮುಖ ಫೀಚರ್ಸ್ ಕಡೆ ಕಣ್ಣಾಯಿಸೋಣ. ಅಂದರೆ ಈ ಫೋನ್ 6.7 ಇಂಚಿನ LTPO OLED ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಈ ಡಿಸ್‌ಪ್ಲೇ 1080 x 2412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 120Hz ರಿಫ್ರೆಶ್ ರೇಟ್, 1600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದ್ದು, 20:9 ಆಕಾರ ಅನುಪಾತದೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನೊಂದಿಗೆ ರಕ್ಷಣೆ ಪಡೆದಿದೆ.
ನಥಿಂಗ್ ಫೋನ್ 2 ಪ್ರೊಸೆಸರ್ ಮಾಹಿತಿ: ಈ ಫೋನ್ ಕ್ವಾಲ್ಕಾಮ್ SM8475 ಸ್ನಾಪ್‌ಡ್ರಾಗನ್ 8+ ಜನ್ 1 (4 nm) ಪ್ರೊಸೆಸರ್ ಬಲ ಪಡೆದಿದ್ದು, ಇದು ಆಕ್ಟಾ ಕೋರ್ (1x3.0 GHz ಕಾರ್ಟೆಕ್ಸ್-X2 & 3x2.5 GHz ಕಾರ್ಟೆಕ್ಸ್-A710 & 4x1.80 GHz ಕಾರ್ಟೆಕ್ಸ್-A510) ಬಲದೊಂದಿಗೆ ಅಡ್ರಿನೊ 730 ಜಿಪಿಯು ಬಲ ಪಡೆದುಕೊಂಡಿದೆ. ಹಾಗೆಯೇ ಆಂಡ್ರಾಯ್ಡ್ 13 ಓಎಸ್ ಅನ್ನು ರನ್ ಮಾಡಲಿದೆ. ಉಳಿದಂತೆ 128GB 8GB RAM, 256GB 12GB RAM, 512GB 12GB RAM ನ ವಿವಿಧ ವೇರಿಯಂಟ್ ಈ ಫೋನ್ ಕಾಣಿಸಿಕೊಂಡಿದೆ.
ನಥಿಂಗ್ ಫೋನ್ 2 ಕ್ಯಾಮೆರಾ ರಚನೆ: ಇನ್ನು ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ, ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅಂದರೆ 50 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ ಹಾಗೂ 50 ಮೆಗಾಪಿಕ್ಸೆಲ್‌ನ ಅಲ್ಟ್ರಾವೈಡ್ ಸೆನ್ಸರ್ ಇದ್ದು, ಇವು ಎಲ್‌ಇಡಿ ಫ್ಲ್ಯಾಶ್, ಪನೋರಮಾ, ಎಚ್‌ಡಿಆರ್ ಫೀಚರ್ಸ್ ಅನ್ನು ಹೊಂದಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ನಥಿಂಗ್ ಫೋನ್ 2 ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 4700mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 45W ವೈರ್ಡ್ ಚಾರ್ಜಿಂಗ್ ಮೂಲಕ 55 ನಿಮಿಷಗಳಲ್ಲಿ 100% ಚಾರ್ಜಿಂಗ್ ಮಾಡಲಿದೆ. ಅದೇ ರೀತಿ 15W ವೈರ್‌ಲೆಸ್ ಚಾರ್ಜಿಂಗ್‌ನಲ್ಲಿ 130 ನಿಮಿಷಗಳಲ್ಲಿ 100% ಚಾರ್ಜಿಂಗ್ ಮಾಡಬಹುದು. ಇದರೊಂದಿಗೆ
5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ ಸಹ ಇದೆ. ಇದರೊಂದಿಗೆ ಅತ್ಯುತ್ತಮವಾದ ಸುಧಾರಿತ ಬ್ಲೂಟೂತ್ ಆವೃತ್ತಿ, ವೈ-ಫೈ ಸೌಲಭ್ಯ ಪಡೆದುಕೊಂಡಿದೆ.
ನಥಿಂಗ್ ಫೋನ್ 2 ಆಫರ್ ವಿವರ: ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಸೇಲ್‌ನಲ್ಲಿ (Flipkart Big Diwali Sale) ನಥಿಂಗ್ ಫೋನ್ 2 ಗೆ ಉತ್ತಮ ಆಫರ್ ನೀಡಲಾಗಿದೆ.128 GB ಹಾಗೂ 8 GB RAM ಆಯ್ಕೆಯ ಫೋನ್ ಗೆ 20% ಡಿಸ್ಕೌಂಟ್ ನೀಡಲಾಗಿದ್ದು, ಈ ಮೂಲಕ ಹತ್ತು ಸಾವಿರ ರಿಯಾಯಿತಿಯೊಂದಿಗೆ 39,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಎಸ್‌ಬಿಐ ಬ್ಯಾಂಕ್ ಕಾರ್ಡ್ ಬಳಕೆ ಮಾಡಿ ಖರೀದಿ ಮಾಡಿದ್ರೆ 10% ತ್ವರಿತ ರಿಯಾಯಿತಿ ಸಿಗಲಿದೆ.

ಇಷ್ಟೇ ಅಲ್ಲದೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದಲ್ಲಿಯೂ 10% ಡಿಸ್ಕೌಂಟ್ ಸಿಗಲಿದೆ. ಜೊತೆಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಇಎಮ್‌ಐ ವ್ಯವಹಾರದಲ್ಲಿ ನೆಟ್ ಕಾರ್ಟ್ ಮೌಲ್ಯ 24,990 ರೂ. ಮತ್ತು ಅದಕ್ಕಿಂತ ಹೆಚ್ಚಿದ್ದರೆ ಇನ್ನೂ ಹೆಚ್ಚಿನ ಡಿಸ್ಕೌಂಟ್ ಸಿಗಲಿದೆ. ಅಷ್ಟೇ ಅಲ್ಲದೆ ಪೇಟಿಎಮ್ ವಾಲೆಟ್‌ನಲ್ಲಿ ಖರೀದಿ ಮಾಡಿದ್ರೆ 100 ಕ್ಯಾಶ್‌ಬ್ಯಾಕ್, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೇಲೆ 5% ಕ್ಯಾಶ್‌ಬ್ಯಾಕ್ ಜೊತೆಗೆ 1,407ರೂ.ಗಳಿಂದ ಆರಂಭ ಆಗುವ ಇಎಮ್‌ಐ ಆಯ್ಕೆಯನ್ನೂ ಸಹ ನೀಡಲಾಗಿದೆ.


Click it and Unblock the Notifications








