Home
ಸುದ್ದಿಜಾಲ

ಆಫರ್‌ಗಳ ಅಡ್ಡಾ ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳಿಗೆ ಅಧಿಕ ಡಿಸ್ಕೌಂಟ್!

ಈಗಂತೂ ಇ-ಕಾಮರ್ಸ್‌ ತಾಣಗಳು ಬಹುತೇಕ ಎಲ್ಲರ ಫೇವರೇಟ್ ಶಾಪಿಂಗ್ ಸ್ಪಾಟ್‌ಗಳಾಗಿದೆ ಎಂದರೇ ತಪ್ಪಾಗಲಾರದು. ಏಕೆಂದರೇ ಪ್ರತಿ ಖರೀದಿಗೂ ಏನಾದರೊಂದು ಕೊಡುಗೆ ಲಭಿಸುತ್ತದೆ. ಅದು ವಿಶೇಷ ಮತ್ತು ಹಬ್ಬದ ದಿನಗಳಲ್ಲಿ ಇ-ಕಾಮರ್ಸ್ ತಾಣಗಳು ಅಧಿಕ ಡಿಸ್ಕೌಂಟ್ ಘೋಷಿಸುತ್ತವೆ. ಹೀಗಾಗಿ ಸ್ಮಾರ್ಟ್‌ಫೋನ್ ಖರೀದಿಸುವವರಂತೂ ಆಫರ್‌ಗಳನ್ನು ಎದುರು ನೋಡುತ್ತಿರುತ್ತಾರೆ. ಅವರಿಗಾಗಿ ಫ್ಲಿಪ್‌ಕಾರ್ಟ್‌ ಈಗ ಆಫರ್ ನೀಡಿದೆ.

ಇ-ಕಾಮರ್ಸ್‌  ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ದೀಪಾವಳಿ ಹಬ್ಬದ ಪ್ರಯುಕ್ತ ಐದು ದಿನಗಳ 'ಬಿಗ್ ದೀಪಾವಳಿ ಸೇಲ್' ಮೇಳವನ್ನು ಆಯೋಜಿಸಿದೆ. ಈ ಮೇಳವು ಇದೇ ಅಕ್ಟೋಬರ್‌ 21ರಿಂದ 'ಬಿಗ್ ದೀಪಾವಳಿ ಸೇಲ್' ಮೇಳ ಆರಂಭವಾಗಲಿದ್ದು, ಇದೇ ಅಕ್ಟೋಬರ್ 25ರ ವರೆಗೂ ಇರಲಿದೆ. ಈ ಅವಧಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿಗಳು ಸಿಗಲಿವೆ. ಮುಖ್ಯವಾಗಿ ರೆಡ್ಮಿ, ವಿವೋ ಮತ್ತು ರಿಯಲ್‌ ಮಿ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ಲಭ್ಯವಾಗಲಿವೆ. ಹಾಗಾದರೇ ಫ್ಲಿಪ್‌ಕಾರ್ಟ್‌ ಆಯೋಜಿಸಿರುವ 'ಬಿಗ್ ದೀಪಾವಳಿ ಸೇಲ್' ಮೇಳದಲ್ಲಿ ಬೆಸ್ಟ್‌ ಡೀಲ್‌ನಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಎಕ್ಸ್‌ಟ್ರಾ ಡಿಸ್ಕೌಂಟ್‌

ಎಕ್ಸ್‌ಟ್ರಾ ಡಿಸ್ಕೌಂಟ್‌

ಫ್ಲಿಪ್‌ಕಾರ್ಟ್‌ ಬಿಗ್ ದೀಪಾವಳಿ ಸೇಲ್‌ ಮೇಳದ ಅವಧಿಯಲ್ಲಿ ಫ್ಲಿಪ್‌ಕಾರ್ಟ್‌ ಪ್ಲಸ್‌ ಸದಸ್ಯರಿಗೆ ಅಕ್ಟೋಬರ್ 20ರಂದು 8PM ಗಂಟೆಗೆ ಆಫರ್ ಆಕ್ಸಸ್ ಅವಕಾಶ ದೊರೆಯಲಿದೆ. ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌, ಮತ್ತು ಇನ್ನಿತರ ಗ್ಯಾಜೆಟ್ಸ್‌ಗಳಿಗೆ ಎಕ್ಸ್‌ಟ್ರಾ ಡಿಸ್ಕೌಂಟ್‌ ಲಭ್ಯವಾಗುವ ಸೂಚನೆ ಫ್ಲಿಪ್‌ಕಾರ್ಟ್‌ ನೀಡಿದೆ. ಹಾಗೆಯೇ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ಮತ್ತು ಎಸ್‌ಬಿಐ ಕ್ರೆಡಿಟ್‌ ಅಥವಾ ಡೆಬಿಟ್ ಕಾರ್ಡ್‌ ಬಳಸುವ ಗ್ರಾಹಕರಿಗೆ ಶೇ.10 ಡಿಸ್ಕೌಂಟ್‌ ಸಿಗಲಿದೆ.

ರೆಡ್ಮಿ ನೋಟ್ 7S-ಆಫರ್

ರೆಡ್ಮಿ ನೋಟ್ 7S-ಆಫರ್

ಶಿಯೋಮಿಯ ರೆಡ್ಮಿ ನೋಟ್ 7S ಸ್ಮಾರ್ಟ್‌ಫೋನ್ 6.3 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. 3GB ಮತ್ತು 32GB ವೇರಿಯಂಟ್‌ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್ ಮೇಳದಲ್ಲಿ 8,999ರೂ.ಗಳಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ 11,999ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದೆ.

ರಿಯಲ್‌ ಮಿ 5-ಡಿಸ್ಕೌಂಟ್

ರಿಯಲ್‌ ಮಿ 5-ಡಿಸ್ಕೌಂಟ್

ರಿಯಲ್‌ ಮಿ 5 ಸ್ಮಾರ್ಟ್‌ಫೋನ್ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ನ ಸಾಮರ್ಥ್ಯ ಪಡೆದುಕೊಂಡಿದೆ. ಹಿಂದರಿಯಲ್ಲಿ ನಾಲ್ಕು ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, 5000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಈ ಫೋನ್ 9,999ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದ್ದು, ಆದರೆ ಬಿಗ್ ದೀಪಾವಳಿ ಸೇಲ್ ಮೇಳದಲ್ಲಿ 8,999ರೂ.ಗಳಿಗೆ ದೊರೆಯಲಿದೆ.

'ರಿಯಲ್‌ ಮಿ XT'ಗೆ ರಿಯಾಯಿತಿ

'ರಿಯಲ್‌ ಮಿ XT'ಗೆ ರಿಯಾಯಿತಿ

6.4 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿರುವ 'ರಿಯಲ್‌ ಮಿ XT' ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ 64ಎಂಪಿಯ ಕ್ಯಾಮೆರಾ ಒಳಗೊಂಡಿದೆ. 4000mAh ಸಾಮರ್ಥ್ಯದ ಬ್ಯಾಟರಿ ಪಡೆದಿದ್ದು, ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಈ ಫೋನ್ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್ ಮೇಳದಲ್ಲಿ 15,999ರೂ.ಗಳಿಗೆ ದೊರೆಯಲಿದೆ.

ರೆಡ್ಮಿ ನೋಟ್ 7 ಪ್ರೊ ಬೆಲೆ ಇಳಿಕೆ

ರೆಡ್ಮಿ ನೋಟ್ 7 ಪ್ರೊ ಬೆಲೆ ಇಳಿಕೆ

ಶಿಯೋಮಿಯ ರೆಡ್ಮಿ ನೋಟ್‌ 7 ಪ್ರೊ 13,999ರೂ.ಗಳಾಗಿದ್ದು, ಆದರೆ ಈ ಸೇಲ್ ಮೇಳದಲ್ಲಿ 11,999ರೂ.ಗಳಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ 6.3 ಇಂಚಿನ ವಾಟರ್‌ಡ್ರಾಪ್ ನಾಚ್ ಮಾದರಿಯ ಡಿಸ್‌ಪ್ಲೇ ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ 4000 mAh ಬ್ಯಾಟರಿ ಬಾಳಿಕೆ, 48ಎಂಪಿ ರಿಯರ್ ಕ್ಯಾಮೆರಾ ಸೌಲಭ್ಯಗಳನ್ನು ಒಳಗೊಂಡಿದೆ.

ವಿವೋ Z1 ಪ್ರೊ ಡಿಸ್ಕೌಂಟ್

ವಿವೋ Z1 ಪ್ರೊ ಡಿಸ್ಕೌಂಟ್

ವಿವೋ ಸಂಸ್ಥೆಯ ಹೊಸ ವಿವೋ Z1 ಪ್ರೊ ಸ್ಮಾರ್ಟ್‌ಫೋನ್ 6.53 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್‌ನ ಸಾಮರ್ಥ್ಯ ಪಡೆದುಕೊಂಡಿದೆ. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಆಯ್ಕೆ ಇದ್ದು, 5000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಈ ಫೋನ್ 14,990ರೂ.ಗಳ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದ್ದು, ಆದರೆ ಬಿಗ್ ದೀಪಾವಳಿ ಸೇಲ್ ಮೇಳದಲ್ಲಿ 12,990ರೂ.ಗಳಿಗೆ ದೊರೆಯಲಿದೆ.

ರೆಡ್ಮಿ ಕೆ20 ಪ್ರೊ ಆಫರ್

ರೆಡ್ಮಿ ಕೆ20 ಪ್ರೊ ಆಫರ್

ಫ್ಲಿಪ್‌ಕಾರ್ಟ್‌ ಬಿಗ್ ದೀಪಾವಳಿ ಸೇಲ್ ಮೇಳದಲ್ಲಿ 'ರೆಡ್ಮಿ ಕೆ20' ಮತ್ತು 'ರೆಡ್ಮಿ ಕೆ20 ಪ್ರೊ' ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಡಿಸ್ಕೌಂಟ್‌ ಪಡೆಯಲಿದ್ದು, 19,999ರೂ.ಗಳಿಂದ ಖರೀದಿಗೆ ಲಭ್ಯವಾಗಲಿವೆ. ಹಾಗೆಯೇ ಸ್ನ್ಯಾಪ್‌ಡ್ರಾಗನ್ 439 ಪ್ರೊಸೆಸರ್‌ ಹೊಂದಿರುವ 'ರೆಡ್ಮಿ A7 ಸ್ಮಾರ್ಟ್‌ಫೋನ್' ಎಂಟ್ರಿ ಲೆವೆಲ್ ಫೋನ್ ಆಗಿದ್ದು, 4999ರೂ.ಗಳಿಗೆ ಸಿಗಲಿದೆ.

Best Mobiles in India

English summary
Flipkart is slated to host its ‘Big Diwali Sale’ from October 21 till October 25. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+