ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್ ಆರಂಭ: ಈ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್!
ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು ಅದೂ ಸಹ ಅತ್ಯುತ್ತಮ ಫೋನ್‌ಗಳನ್ನು ಆಫರ್ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದು ಉತ್ತಮ ಸಮಯ. ಯಾಕೆಂದರೆ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್ ಅರಂಭಿಸುತ್ತಿದ್ದು, ಈ ಮೂಲಕ ಭರ್ಜರಿ ಡಿಸ್ಕೌಂಟ್‌ನಲ್ಲಿ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ.
ಹೌದು, ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್ ನಲ್ಲಿ ಪಿಕ್ಸೆಲ್, ರೆಡ್ಮಿ, ವಿವೋ, ನಥಿಂಗ್ ಹಾಗೂ ಆಫಲ್ ಸೇರಿದಂತೆ ವಿವಿಧ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ. ಹಾಗಿದ್ರೆ ಯಾವೆಲ್ಲಾ ಫೋನ್‌ಗಳನ್ನು ಈ ಆಫರ್‌ನಲ್ಲಿ ಖರೀದಿ ಮಾಡಬಹುದು, ಈ ಫೋನ್ ಖರೀದಿ ಮೇಲೆ ಬ್ಯಾಂಕ್ ಆಫರ್ ಏನಾದರೂ ಇದೆಯಾ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಎಂದಿನಿಂದ ಈ ಸೇಲ್: ಫ್ಲಿಪ್‌ಕಾರ್ಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಇದೀಗ ಹೊಸ ಸೇಲ್ ಅನ್ನು ಘೋಷಣೆ ಮಾಡಿದ್ದು, ಇದು ಈಗಾಗಲೇ ಆರಂಭವಾಗಿದೆ. ಅಂತೆಯೇ ಈ ಮಾರಾಟ ಮಾರ್ಚ್ 30 ರವರೆಗೆ ಮುಂದುವರಿಯುತ್ತದೆ. ಈ ವೇಳೆ ನೀವು ಈ ಕೆಳಗೆ ತಿಳಿಸಲಾದ ಪ್ರಮುಖ 5G ಫೋನ್‌ಗಳಲ್ಲಿ ಯೋಗ್ಯವಾದ ಫೋನ್‌ಗಳನ್ನು ಖರೀದಿ ಮಾಡಬಹುದು.
ಐಫೋನ್ 13: ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್‌ನಲ್ಲಿ ನೀವು 128GB ಸ್ಟೋರೇಜ್ ವೇರಿಯಂಟ್‌ಗೆ 61,999 ರೂ. ಗಳ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು. ಈ ಫೋನ್ ಮಾರುಕಟ್ಟೆಯಲ್ಲಿ 69,900 ರೂ. ಗಳ ಮೂಲ ದರ ಹೊಂದಿದೆ. ಇದರೊಂದಿಗೆ ನಿಮ್ಮ ಬಳಿ ಏನಾದರೂ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಇದ್ದರೆ 2,000 ರೂ. ಗಳ ಹೆಚ್ಚುವರಿ ರಿಯಾಯಿತಿಯನ್ನೂ ಸಹ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ 59,999ರೂ. ಗಳಿಗೆ ಖರೀದಿ ಮಾಡಬಹುದು.
ರೆಡ್ಮಿ ನೋಟ್ 12 ಪ್ರೊ: ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಮಾರಾಟ ಆಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಇದೂ ಪ್ರಮುಖವಾಗಿದ್ದು, ಈ ಫೋನ್ ಅನ್ನು ನೀವು 22,999ರೂ. ಗಳ ದರದಲ್ಲಿ ಖರೀದಿ ಮಾಡಬಹುದು. ಇದರ ಸಾಮಾನ್ಯದ ದರ 24,999ರೂ. ಗಳಾಗಿದೆ. ಇನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ ಖರೀದಿ ಮಾಡಿದರಷ್ಟೇ ಈ ಆಫರ್ ಲಭ್ಯ ಎಂಬುದು ತಿಳಿದಿರಲಿ.

ವಿವೋ V27 : ವಿವೋ V27 ಸ್ಮಾರ್ಟ್‌ಫೋನ್‌ನ 128GB ಸ್ಟೋರೇಜ್ ಮಾದರಿ ಬೆಲೆ 32,999 ರೂ. ಗಳಾಗಿದ್ದು, ನೀವು ಇದನ್ನು 30,499 ರೂ. ಗಳಿಗೆ ಖರೀದಿ ಮಾಡಬಹುದು. ಹಾಗೆಯೇ ಈ ಫೋನ್ ಖರೀದಿ ವೇಳೆ ನೀವು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಬಳಕೆ ಮಾಡಿಕೊಂಡರೆ 2,500 ರೂ. ಗಳ ರಿಯಾಯಿತಿ ಲಭ್ಯವಾಗಲಿದೆ. ಇದು 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಮೀಡಿಯಾಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ನಥಿಂಗ್ ಫೋನ್ (1): ಅತ್ಯುತ್ತಮ ಕ್ಯಾಮೆರಾ ಫೀಚರ್ಸ್ ಇರುವ ಫೋನ್ ಖರೀದಿ ಮಾಡಬೇಕು ಎಂದವರುಗೆ ಇದು ಯೋಗ್ಯವಾಗಿದೆ. ಅಂತೆಯೇ ಇದು 32,999 ರೂ. ಗಳ ಸಾಮಾನ್ಯ ದರ ಹೊಂದಿದ್ದು, 29,999 ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅದಾಗ್ಯೂ ನೀವು ಈ ವಿಶೇಷ ಮಾರಾಟದಲ್ಲಿ ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಇದು 6.55 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಾಮ್ SM7325-AE ಸ್ನಾಪ್‌ಡ್ರಾಗನ್ 778G+ 5G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಪಿಕ್ಸೆಲ್ 6a: ಪಿಕ್ಸೆಲ್ 6a ಸ್ಮಾರ್ಟ್‌ಫೋನ್ ಸಹ ಉತ್ತಮ ಕ್ಯಾಮೆರಾ ಬಯಸುವವರಿಗೆ ಅತ್ಯುತ್ತಮ ಫೋನ್ ಆಗಿದೆ. ಅದರಂತೆ ಈ ಫೋನ್ 31,999 ರೂ. ಗಳ ಮೂಲ ದರ ಹೊಂದಿದ್ದು, ಹೆಚ್‌ಡಿಎಫ್‌ಸಿ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ ಈ ಫೋನ್ ಅನ್ನು ನೀವು 29,999 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಹಾಗೆಯೇ ಈ ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು ಗೂಗಲ್ ಟೆನ್ಸರ್ ಪ್ರೊಸೆಸರ್ ಬಲ ಪಡೆದುಕೊಂಡಿದೆ.


Click it and Unblock the Notifications








