ಫ್ಲಿಪ್‌ಕಾರ್ಟ್‌ನ ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಧಮಾಕಾ ಆಫರ್!

|

ಜನಪ್ರಿಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಫ್ಲಿಪ್‌ಕಾರ್ಟ್‌ ಇದೀಗ ಫ್ಲಿಪ್‌ಕಾರ್ಟ್‌ ಎಂಡ್‌ ಆಫ್‌ ಸೀಸನ್‌ ಸೇಲ್‌ 2022 ಅನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ಇದೇ ಜೂನ್ 11 ರಿಂದ ಪ್ರಾರಂಭವಾಗಿದ್ದು, ಇದೇ ಜೂನ್ 17 ರ ವರೆಗೂ ಚಾಲ್ತಿ ಇರಲಿದೆ. ಈ ಸಿಮೀತ ಅವಧಿಯ ಸೇಲ್‌ ನಲ್ಲಿ ಮೊಬೈಲ್‌ ಹಾಗೂ ಸ್ಮಾರ್ಟ್‌ಫೋನ್‌ ಡಿವೈಸ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಾಗಲಿದೆ.

ಆಯೋಜಿಸಿರುವ

ಹೌದು, ಫ್ಲಿಪ್‌ಕಾರ್ಟ್‌ ತಾಣವು ಆಯೋಜಿಸಿರುವ ಫ್ಲಿಪ್‌ಕಾರ್ಟ್‌ ಎಂಡ್‌ ಆಫ್‌ ಸೀಸನ್‌ ಸೇಲ್‌ 2022 ಇದೀಗ ಲೈವ್‌ ಆಗಿದೆ. ಈ ಸೇಲ್‌ ನಲ್ಲಿ ಮೊಟೊರೊಲಾ, ಸ್ಯಾಮ್‌ಸಂಗ್, ವಿವೋ, ಆಪಲ್ ಸೇರಿದಂತೆ ಇತರೆ ಕೆಲವು ಬ್ರ್ಯಾಂಡ್‌ಗಳ ಮೊಬೈಲ್‌ಗಳಿಗೆ ಆಕರ್ಷಕ ರಿಯಾಯಿತಿ ತಿಳಿಸಿದೆ.

ಲಭ್ಯವಾಗಲಿದೆ

ಹಾಗೆಯೇ ಈ ಸೇಲ್‌ನಲ್ಲಿ ಆಕ್ಸಸ್‌ ಬ್ಯಾಂಕ್, ಕೊಟಕ್ ಬ್ಯಾಂಕ್ ಹಾಗೂ ಆರ್‌ಬಿಎಲ್‌ ಬ್ಯಾಂಕ್‌ ಕಾರ್ಡ್‌ ಬಳಕೆದಾರರಿಗೆ ಶೇ. 10 ಪರ್ಸೆಂಟ್‌ ವರೆಗೂ ಇನ್‌ಸ್ಟಂಟ್‌ ರಿಯಾಯಿತಿ ಸಹ ಲಭ್ಯವಾಗಲಿದೆ. ಇದರೊಂದಿಗೆ ಪೇಟಿಎಮ್‌ ಹಾಗೂ ಇತರೆ ಯುಪಿಐ ಆಪ್‌ ಮೂಲಕ ಪೇಮೆಂಟ್‌ ಮಾಡಿದರೇ, ಶೇ. 10 ಪರ್ಸೆಂಟ್‌ ವರೆಗೂ ಡಿಸ್ಕೌಂಟ್‌ ದೊರೆಯುತ್ತದೆ. ಹಾಗಾದರೇ ಫ್ಲಿಪ್‌ಕಾರ್ಟ್‌ ಎಂಡ್‌ ಆಫ್‌ ಸೀಸನ್‌ ಸೇಲ್‌ 2022 ರಲ್ಲಿ ಆಕರ್ಷಕ ಡಿಸ್ಕೌಂಟ್‌ ಪಡೆದ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಪಲ್‌ ಐಫೋನ್‌ 12

ಆಪಲ್‌ ಐಫೋನ್‌ 12

ಸದ್ಯ ಫ್ಲಿಪ್‌ಕಾರ್ಟ್ ಜನಪ್ರಿಯ ಐಫೋನ್ 12 ಫೋನಿಗೆ ರಿಯಾಯಿತಿ ತಿಳಿಸಿದೆ. 64GB ಸ್ಟೋರೇಜ್ ರೂಪಾಂತರಕ್ಕೆ 53,999ರೂ. ಬೆಲೆಯಲ್ಲಿ ದೊರೆಯಲಿದೆ. ಹಾಗೆಯೇ ZestMoney ಮೂಲಕ ಯಾವುದೇ ವೆಚ್ಚವಿಲ್ಲದ EMI ಕೊಡುಗೆಯೂ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಫೋನ್ A14 ಬಯೋನಿಕ್ ಚಿಪ್‌ ಪ್ರೊಸೆಸರ್‌ನೊಂದಿಗೆ ಚಾಲಿತವಾಗಿದೆ. ಐಫೋನ್ 12 ಫೋನ್ 6.1 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ರಕ್ಷಿಸಲಾಗಿದೆ. ಇದು 12 ಮೆಗಾ ಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 12 ಮೆಗಾ ಪಿಕ್ಸೆಲ್ ಟ್ರೂಡೆಪ್ತ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A53 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ A53 5G

ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A53 5G ಆಕರ್ಷಕ ಬೆಲೆ ಪಡೆದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A53 5G ಫೋನ್ 6GB RAM + 128GB ಸ್ಟೋರೇಜ್ ವೇರಿಯಂಟ್‌ 31,499ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. 14,500ರೂ. ವರೆಗೂ ಎಕ್ಸ್‌ಚೇಂಜ್‌ ಕೊಡುಗೆ ಸಹ ಲಭ್ಯವಾಗಲಿದೆ. ಇನ್ನು ಈ ಫೋನ್ ರಿಫ್ರೆಶ್ ದರದೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ+ ಸೂಪರ್ AMOLED ಡಿಸ್ಪ್ಲೇ ಹೊಂದಿದೆ. ಇದು ಆಕ್ಟಾ ಕೋರ್ Exynos ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು 5,000mAh ಬ್ಯಾಟರಿ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 64 ಮೆಗಾ ಪಿಕ್ಸೆಲ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಮೊಟೊರೊಲಾ G60

ಮೊಟೊರೊಲಾ G60

ಫ್ಲಿಪ್‌ಕಾರ್ಟ್‌ನ ಸೇಲ್‌ನಲ್ಲಿ ಮೊಟೊರೊಲಾ G60 ಫೋನ್ ಆಕರ್ಷಕ ಕೊಡುಗೆ ಪಡೆದಿದೆ. ಈ ಫೋನ್ 6GB RAM + 128GB ಸ್ಟೋರೇಜ್ ರೂಪಾಂತರ 14,999ರೂ. ಗಳ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಎಕ್ಸ್‌ಚೇಂಜ್ ಕೊಡುಗೆ ಸೇರಿದರೇ ಈ ಫೋನ್ 12,500ರೂ. ವರೆಗೂ ಪಡೆಯಬಹುದು. ಇನ್ನು ಈ ಫೋನ್‌ 6.78 ಇಂಚಿನ ಪೂರ್ಣ HD+ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಈ ಫೋನ್ ಸ್ನ್ಯಾಪ್‌ಡ್ರಾಗನ್ 732G SoC ಪ್ರೊಸೆಸರ್‌ ಪಡೆದಿದ್ದು, 6,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದಲ್ಲದೇ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸೆಲ್‌ನಲ್ಲಿದೆ ಹಾಗೂ ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಅನ್ನು ಒಳಗೊಂಡಿದೆ.

ವಿವೋ T1 44W

ವಿವೋ T1 44W

ಫ್ಲಿಪ್‌ಕಾರ್ಟ್‌ ಎಂಡ್‌ ಆಫ್‌ ಸೀಸನ್‌ ಸೇಲ್‌ 2022 ನಲ್ಲಿ ವಿವೋ T1 44W ಫೋನ್ 6GB RAM + 128GB ವೇರಿಯಂಟ್ 15,999ರೂ. ಬೆಲೆಯಲ್ಲಿ ದೊರೆಯಲಿದೆ. ಎಕ್ಸ್‌ಚೇಂಜ್ ಆಫರ್ ಸಹ ಲಭ್ಯ. ಇನ್ನು ಈ ಫೋನ್ 6.44 ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ ಹೊಂದಿದೆ. ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು ದೀರ್ಘಾವಧಿಯ 5,000mAh ಬ್ಯಾಟರಿಯನ್ನು ಸಹ ಪ್ಯಾಕ್ ಮಾಡುತ್ತದೆ.

Best Mobiles in India

English summary
Flipkart End of Season Sale 2022: Best Deals These on Smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X