Home
ಸುದ್ದಿಜಾಲ

ಗೂಗಲ್ ಕಚೇರಿಗೂ ಸೆಡ್ಡುಹೊಡೆಯುವಂತಿದೆ ಬೆಂಗಳೂರಿನಲ್ಲಿನ 'ಫ್ಲಿಪ್‌ಕಾರ್ಟ್' ಹೊಸ ಕಚೇರಿ!!

ಬೆಂಗಳೂರಿನಲ್ಲಿ ಹುಟ್ಟಿ ಭಾರತದಲ್ಲಿಯೇ ಹೆಸರಾಗಿರುವ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಬೆಂಗಳೂರು ನಗರದ ಹೊರಬಾಗದಲ್ಲಿರುವ ರಿಂಗ್ ರೋಡಿನಲ್ಲಿ ತನ್ನ ನೂತನ ಕಚೇರಿಯನ್ನು ಪ್ರಾರಂಭಿಸಿದೆ.

By Bhaskar N J

ಬೆಂಗಳೂರಿನಲ್ಲಿ ಹುಟ್ಟಿ ಭಾರತದಲ್ಲಿಯೇ ಹೆಸರಾಗಿರುವ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಬೆಂಗಳೂರು ನಗರದ ಹೊರಬಾಗದಲ್ಲಿರುವ ರಿಂಗ್ ರೋಡಿನಲ್ಲಿ ತನ್ನ ನೂತನ ಕಚೇರಿಯನ್ನು ಪ್ರಾರಂಭಿಸಿದೆ. ಇದೇ ಮಾರ್ಚ್ 31 ರಂದು ಉದ್ಘಾಟನೆಯಾದ ಫ್ಲಿಪ್‌ಕಾರ್ಟ್ ಕಂಪೆನಿಯ ನೂತನ ಕಟ್ಟಡ ಗೂಗಲ್, ಆಪಲ್, ಫೇಸ್‌ಬುಕ್‌ ಕಂಪೆನಿಗಳನ್ನು ನೆನಪಿಸುತ್ತಿದೆ.!

ಹೌದು, ನಗರದ ಹೊರಬಾಗದಲ್ಲಿರುವ ಔಟರ್ ರಿಂಗ್ ರಸ್ತೆಯಲ್ಲಿರುವ ರಾಯಭಾರ ಟೆಕ್ ವಿಲೇಜ್‌ನಲ್ಲಿ ಫ್ಲಿಪ್‌ಕಾರ್ಟ್‌ನ ನೂತನ ಕಟ್ಟಡ ಅನಾವರಣಗೊಂಡಿದೆ. ಇದೇ ಮೊದಲ ಬಾರಿಗೆ ಭಾರತೀಯ ಟೆಕ್ ಕಂಪೆನಿಯೊಂದು ತನ್ನ ಕಚೇರಿಯಲ್ಲಿಯೇ ಮನರಂಜನಾ ಸೇವೆಗಳನ್ನು ತನ್ನೆಲ್ಲಾ ನೌಕರರಿಗಾಗಿ ನೀಡಿರುವುದು ಭಾರತದ ಉದ್ಯಮ ಇತಿಹಾಸದಲ್ಲಿಯೇ ಮೊದಲಾಗಿದೆ.

ಗೂಗಲ್ ಕಚೇರಿಗೂ ಸೆಡ್ಡುಹೊಡೆಯುವಂತಿದೆ ಬೆಂಗಳೂರಿನಲ್ಲಿನ 'ಫ್ಲಿಪ್‌ಕಾರ್ಟ್'ಕಚೇರಿ!!

8.3 ಲಕ್ಷ ಚದರ ಅಡಿ ವಿಸ್ತಿರ್ಣದಲ್ಲಿ ನಿರ್ಮಾಣವಾಗಿರುವ 30 ಅಂತಸ್ತುಗಳುಳ್ಳ ಫ್ಲಿಪ್‌ಕಾರ್ಟ್ ನೂತನ ಕಟ್ಟಡದಲ್ಲಿ 7,387 ಜನರು ಕುಳಿತು ಕಾರ್ಯನಿರ್ವಹಿಸುವಷ್ಟು ದೊಡ್ಡದಾಗಿದ್ದು, ಕಟ್ಟಡದೊಳಗೆ ಫುಡ್ ಕೋರ್ಟ್, ಜಿಮ್, ಡೇಕೇರ್, ವಿಆರ್ ಮತ್ತು ಸ್ನೂಕರ್ ಗೇಮ್ಸ್ ಆಡುವಂತೆ ನೂತನ ಕಟ್ಟಡವನ್ನು ರೂಪಿಸಲಾಗಿದೆ ಎಂದು ಫ್ಲಿಪ್‌ಕಾರ್ಟ್ ಮಾಧ್ಯಮಗಳಿಗೆ ತಿಳಿಸಿದೆ.

ಗೂಗಲ್ ಕಚೇರಿಗೂ ಸೆಡ್ಡುಹೊಡೆಯುವಂತಿದೆ ಬೆಂಗಳೂರಿನಲ್ಲಿನ 'ಫ್ಲಿಪ್‌ಕಾರ್ಟ್'ಕಚೇರಿ!!

ಕಟ್ಟಡದ ಒಳಗೆ ಇಷ್ಟೆಲ್ಲಾ ಸೌಲಭ್ಯಗಳನ್ನು ಕಲ್ಪಿಸಿರುವ ಫ್ಲಿಪ್‌ಕಾರ್ಟ್, ಟೆಕ್ ವಿಲೇಜ್‌ನಲ್ಲಿ ಕ್ರಿಕೆಟ್, ಗಾಲ್ಫ್ ಸಿಮ್ಯುಲೇಟರ್ ಮತ್ತು ಬಾಸ್ಕೆಟ್‌ಬಾಲ್ ಸೇರಿ ಹಲವು ಹೊರಾಂಗಣ ಕ್ರೀಡೆಗಳನ್ನು ಆಡುವಂತಹ ಜಾಗವನ್ನು ನಿರ್ಮಿಸಿದೆ. ಕಂಪೆನಿಗಾಗಿ ದುಡಿಯುವ ಉದ್ಯೋಗಿಗಳಿಗೆ ಎಲ್ಲಾ ಸೇವೆಗಳನ್ನು ನೀಡುವುದು ನಮ್ಮ ಗುರಿ ಎಂದು ಫ್ಲಿಪ್‌ಕಾರ್ಟ್ ಹೇಳಿಕೊಂಡಿದೆ.

ಗೂಗಲ್ ಕಚೇರಿಗೂ ಸೆಡ್ಡುಹೊಡೆಯುವಂತಿದೆ ಬೆಂಗಳೂರಿನಲ್ಲಿನ 'ಫ್ಲಿಪ್‌ಕಾರ್ಟ್'ಕಚೇರಿ!!

ವಿಶಿಷ್ಟ ಯುರೋಪಿಯನ್ ಟೌನ್ ಪರಿಕಲ್ಪನೆಯ ಮೇಲೆ ಮಿನಿ-ಸಿಟಿ ಎಂಬಂತೆ ಫ್ಲಿಪ್ಕಾರ್ಟ್ ತನ್ನ ಮುಖ್ಯ ಕಚೇರಿಯನ್ನು ರೂಪಿಸಲಾಗಿದ್ದು, ಸರಳ ಮತ್ತು ಸ್ಮಾರ್ಟ್ ಆಗಿ ರೂಪಿತವಾಗಿರುವ ಕಟ್ಟಡದಲ್ಲಿ ವ್ಯವಹಾರದ ವೇರ್‌ಹೌಸಿಂಗ್ ಮತ್ತು ಲಾಜಿಸ್ಟಿಕ್ಸ್ ಭಾಗಗಳೊಂದಿಗೆ ಅಗತ್ಯವಾದ ಸಂಪರ್ಕವನ್ನು ತರಲಾಗಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿರುವುದು ಗೂಗಲ್ ಕಚೇರಿಯನ್ನು ನೆನಪಿಸುತ್ತಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಓದಿರಿ: ನಕಲಿ ಐಫೋನ್ ಅನ್ನು ಸುಲಭವಾಗಿ ಗುರುತಿಸುವುದು ಹೇಗೆ?!!

Best Mobiles in India

English summary
Ecommerce major Flipkart is consolidating all its offices to operate from one campus.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+