ಮೊದಲೇ ಕಡಿಮೆ ಬೆಲೆ.. ಮತ್ತೆ ಡಿಸ್ಕೌಂಟ್! Vivo T3x 5G ಫೋನಿಗೆ ಭರ್ಜರಿ ಆಫರ್
ವಿವೋ ಫೋನ್‌ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಾರೆ. ಇನ್ನು ಆಫರ್ ಇದೆ ಅಂದ್ರೆ, ಬಿಡ್ತಾರಾ..? ಹೌದು, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇ ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ 'ಫ್ಲ್ಯಾಗ್‌ಶಿಪ್ ಸೇಲ್-2024' (Flipkart Flagship Sale 2024) ಆರಂಭವಾಗಿದೆ. ಈ ವಿಶೇಷ ಮಾರಾಟದಲ್ಲಿ ಅನೇಕ ಪ್ರಮುಖ ಕಂಪನಿಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್ ಘೋಷಿಸಲಾಗಿದೆ. ಅದರಂತೆ, ವೀವೋ ಕಂಪನಿಯ ಜನಪ್ರಿಯ ವಿವೋ T3x 5G (Vivo T3x 5G) ಫೋನ್ ಖರೀದಿ ಮೇಲೆಯೂ ಭರ್ಜರಿ ಆಫರ್ ನೀಡಲಾಗುತ್ತಿದೆ. ಬನ್ನಿ, ಈ ವಿವೋ ಫೋನಿನ ಬೆಲೆ ಎಷ್ಟು? ಆಫರ್‌ಗಳೇನು? ಮತ್ತು ಈ ಫೋನಿನ ಫೀಚರ್ಸ್‌ಗಳನ್ನು ತಿಳಿಯೋಣ.
ನೀವು ಹೊಸ ವಿವೋ ಫೋನ್ ಖರೀದಿಸಲು ಮನಸ್ಸು ಮಾಡಿದ್ದರೆ, ಈ ಫೋನ್ ನಿಮಗೆ ಉತ್ತಮ ಆಯ್ಕೆಯಾಗಲಿದೆ. ವಿವೋ T3X 5G ಫೋನ್ ಅನ್ನು ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಶೇ.22 ರಷ್ಟು 13,499 ರೂ.ಗಳ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಈ ಫೋನ್ ಖರೀದಿಸಿದರೆ 1,500 ರೂ. ಡಿಸ್ಕೌಂಟ್ ಕೂಡ ಪಡೆಯಬಹುದು. ಆಫರ್‌ನೊಂದಿಗೆ ನೀವು ಈ ವಿವೋ ಫೋನನ್ನು ಕೇವಲ 11,999 ರೂ.ಗೆ ಮನೆಗೆ ಕೊಡೊಯ್ಯಬಹುದು.

ವಿವೋ T3x 5G ಫೋನಿನ ಫೀಚರ್ಸ್
ಡಿಸ್ಪ್ಲೇ: ವಿವೋ T3x 5G ಸ್ಮಾರ್ಟ್‌ಫೋನ್ ಅನ್ನು 6.72 ಇಂಚಿನ ಪೂರ್ಣ HD+ ಡಿಸ್ಪ್ಲೇಯೊಂದಿಗೆ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಇದರ ಡಿಸ್ಪ್ಲೇ 120 Hz ರಿಫ್ರೆಶ್ ರೇಟ್, 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು ಇತರ ಹಲವು ಉತ್ತಮ ಫೀಚರ್ಸ್‌ಗಳನ್ನು ಹೊಂದಿದೆ. ಈ ಫೋನ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಸಹ ಹೊಂದಿದೆ.
ಪ್ರೊಸೆಸರ್: ಈ ವಿವೋ T3x 5G ಸ್ಮಾರ್ಟ್‌ಫೋನ್ Snapdragon 6 Gen 1 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು Android 14 OS ಅನ್ನು ಆಧರಿಸಿ FuntouchOS 14 ನಲ್ಲಿಯೂ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್: ವಿವೋ T3x 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 50 ಮೆಗಾಪಿಕ್ಸೆಲ್ ಮುಖ್ಯ (f/1.8 ದ್ಯುತಿರಂಧ್ರದೊಂದಿಗೆ) ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆನ್ಸಾರ್ ಜೊತೆಗೆ f/2.4 ಅಪರ್ಚರ್ ಹೊಂದಿದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ, ಈ ಫೋನ್ ಎಲ್ಇಡಿ ಫ್ಲ್ಯಾಷ್ ಹೊಂದಿದೆ.

ಈ ಸುದ್ದಿ ಓದಿದ್ದೀರಾ?: 20,000 ಡಿಸ್ಕೌಂಟ್! ಆ.10ಕ್ಕೆ OnePlusನ ದುಬಾರಿ ಫೋನ್ ಸೇಲ್; ಬೆಲೆ ನೋಡಿ
ಸ್ಟೋರೇಜ್: ವಿವೋ T3X 5G ಮೊಬೈಲ್ 4GB RAM ಮತ್ತು 128GB ಸ್ಟೋರೇಜ್ ಹೊಂದಿದೆ. ಈ ಫೋನ್ ಮೆಮೊರಿ ವಿಸ್ತರಣೆಯನ್ನು ಸಹ ಬೆಂಬಲಿಸುತ್ತದೆ. ನೀವು 1TB ವರೆಗೆ ಮೆಮೊರಿ ಕಾರ್ಡ್ ಅನ್ನು ಬಳಸಲು ಮೈಕ್ರೋ SD ಕಾರ್ಡ್ ಸ್ಲಾಟ್ ಬೆಂಬಲವಿದೆ. ಈ ಫೋನ್ ನಿರ್ದಿಷ್ಟವಾಗಿ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್ ಅನ್ನು ಹೊಂದಿದೆ.
ಬ್ಯಾಟರಿ ಬ್ಯಾಕಪ್: ವಿವೋ T3X 5G ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ದೀರ್ಘ ಬ್ಯಾಟರಿ ಬ್ಯಾಕಪ್ ನೀಡಲಿದೆ. ಫೋನಿನ ಬ್ಯಾಟರಿಯನ್ನು ಚಾರ್ಜ್ ಮಾಡಲು 44W ಫಾಸ್ಟ್ ಚಾರ್ಜಿಂಗ್ ಸೌಲಭ್ಯವೂ ಇದೆ. ನೀವು ಈ ಫೋನ್ ಅನ್ನು ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು.
ಕನೆಕ್ಟಿವಿಟಿ ಆಯ್ಕೆಗಳು: ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್, 5G, Dual 4G VoLTE, Wi-Fi 6 802.11 ax, Bluetooth 5.1, GPS, USB Type-C ಸೇರಿದಂತೆ ವಿವಿಧ ಸಂಪರ್ಕ ಬೆಂಬಲವನ್ನು ಹೊಂದಿದೆ. ಜೊತೆಗ, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಇದೆ.


Click it and Unblock the Notifications