ಫ್ಲಿಪ್‌ಕಾರ್ಟ್ ಫ್ಲಿಪ್‌ಸ್ಟಾರ್ಟ್ ಆಫರ್ : ಫೋನ್‌ಗಳಿಗೆ ಭಾರಿ ಡಿಸ್ಕೌಂಟ್!
ಇ-ಕಾಮರ್ಸ್ ತಾಣಗಳು ಆಫರ್‌ಗಳ ಅಡ್ಡಾಗಳಾಗಿ ಗುರುತಿಸಿಕೊಂಡಿವೆ. ವಿಶೇಷ ದಿನಗಳಂದು ಹಾಗೂ ತಿಂಗಳ ಕೊನೆಯಲ್ಲಿ ಪ್ರತಿ ಉತ್ಪನ್ನಕ್ಕೂ ಏನಾದರೂ ರಿಯಾಯಿತಿ ಕೊಡುಗೆ ಇದ್ದೆ ಇರುತ್ತದೆ. ಇನ್ನು ಹಬ್ಬಗಳು ಬಂದರಂತೂ ಇ-ಕಾಮರ್ಸ್ ತಾಣಗಳು ಆಫರ್‌ಗಳ ಸುರಿಮಳೆಯೇ ನಡೆಸುತ್ತವೆ. ಅಂತಹದೊಂದು ಕೊಡುಗೆಯನ್ನು ಇದೀಗ ಫ್ಲಿಪ್‌ಕಾರ್ಟ್ ಆಯೋಜಿಸಿ ಗಮಸ ಸೆಳೆದಿದೆ.

ಹೌದು, ಜನಪ್ರಿಯ ಫ್ಲಿಪ್‌ಕಾರ್ಟ್ ಹೊಸ ವರ್ಷ 2020 ಸ್ವಾಗತದ ಪ್ರಯುಕ್ತ ಫ್ಲಿಪ್‌ಸ್ಟಾರ್ಟ್ ಡೇಸ್ ಸೇಲ್ ಮೇಳವನ್ನು ಆಯೋಜಿಸಿದೆ. ಮೂರು ದಿನಗಳ ಈ ಸೇಲ್ ಮೇಳವು ಇಂದಿನಿಂದ (ಜನವರಿ 1) ಆರಂಭವಾಗಿದ್ದು, ಇದೇ ಜನವರಿ 3 ರ ವರೆಗೂ ಇರಲಿದೆ. ಈ ಅವಧಿಯಲ್ಲಿ ಫ್ಲಿಪ್‌ಕಾರ್ಟ್ ಎಲ್ಲಾ ಪ್ರಮುಖ ಉತ್ಪನ್ನ ವಿಭಾಗಗಳಲ್ಲಿ ನೂರಾರು ಡೀಲ್‌ಗಳನ್ನು ನೀಡುತ್ತದೆ.

ಇನ್ನು ಹೆಚ್ಚುವರಿ ರಿಯಾಯಿತಿಗಳನ್ನು ಒದಗಿಸಲು ಫ್ಲಿಪ್‌ಕಾರ್ಟ್ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಮತ್ತು ಮಾರಾಟದ ಸಮಯದಲ್ಲಿ ಆಯ್ದ ಉತ್ಪನ್ನಗಳ ಮೇಲೆ ಯಾವುದೇ ವೆಚ್ಚವಿಲ್ಲದ ಇಎಂಐ(ನೋ ಕಾಸ್ಟ್ ಇಎಮ್‌ಐ) ಮತ್ತು ಎಕ್ಸ್‌ಚೇಂಜ್ ಕೊಡುಗೆಗಳನ್ನು ನೀಡುವುದಾಗಿ ಹೇಳಿದೆ. ಹಾಗೆಯೇ ಆಯ್ದ ಡೆಬಿಟ್ ಕಾರ್ಡ್‌ಗಳೊಂದಿಗೆ ಫ್ಲಿಪ್‌ಕಾರ್ಟ್ ಇಎಂಐ ಆಯ್ಕೆಗಳನ್ನು ಸಹ ಗ್ರಾಹಕರಿಗೆ ನೀಡುತ್ತದೆ.

ಈ ಫ್ಲಿಪ್‌ಕಾರ್ಟ್‌ನ ಫ್ಲಿಪ್‌ಸ್ಟಾರ್ಟ್ ಡೇಸ್ ಸೇಲ್ ಅವಧಿಯಲ್ಲಿ ಎಲೆಕ್ಟ್ರಾನಿಕ್ಸ್ ಪರಿಕರಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ಸಿಗಲಿದೆ. ಇದರ ಹೊರತಾಗಿ, ಟಿವಿಗಳು, ಎಸಿಗಳು ಮತ್ತು ರೆಫ್ರಿಜರೇಟರ್‌ಗಳು ಸಹ ಶೇಕಡಾ 50 ರಷ್ಟು ರಿಯಾಯಿತಿಯೊಂದಿಗೆ ಲಭ್ಯ ಆಗಲಿವೆ. ಜೊತೆಗೆ ಇತ್ತೀಚಿನ ಹೊಸ ಸ್ಮಾರ್ಟ್‌ಫೋನ್‌ಗಳಿಗೂ ವಿಶೇಷ ಡಿಸ್ಕೌಂಟ್ ಲಭ್ಯವಾಗಲಿವೆ.

ಸೇಲ್ ಮೇಳದಲ್ಲಿ ಶಿಯೋಮಿ ರೆಡ್ಮಿ ಮತ್ತು ರಿಯಲ್ ಮಿ ಸ್ಮಾರ್ಟ್‌ಫೋನ್‌ಗಳಿಗೂ ರಿಯಾಯಿತಿ ಇದ್ದು, ಎಂಟ್ರಿ ಲೆವೆಲ್ ರಿಯಲ್‌ಮಿ 5 ಎಸ್ ಫೋನ್ 9,999 ರೂಗಳಿಗೆ ಲಭ್ಯ. ಈ ಫೋನ್ 64 ಜಿಬಿ ರಾಮ್ ಮತ್ತು 4 ಜಿಬಿ RAM ಹೊಂದಿದ್ದು, 48ಎಂಪಿ ಸೆನ್ಸಾರ್ ಕ್ಯಾಮೆರಾ ಪಡೆದಿದೆ. ಜೊತೆಗೆ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಆರಂಭಿಕ ರಿಯಲ್ ಮಿ ಎಕ್ಸ್ 2 ಸ್ಮಾರ್ಟ್‌ಫೋನ್ 16,999 ರೂ. ಬೆಲೆಗೆ ಸಿಗಲಿದೆ. ಈ ಫೋನ್ ಕ್ವಾಡ್ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಪಡೆದಿದೆ.

ಶಿಯೋಮಿಯ ಜನಪ್ರಿಯ ರೆಡ್ಮಿ ನೋಟ್ 7 ಪ್ರೊ ಫೋನ್ ಈ ಸೇಲ್ ಮೇಳದಲ್ಲಿ 9,999 ರೂ.ಗಳ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇನ್ನು ಈ ಫೋನ್ 4 ಜಿಬಿ RAM, 64 ಜಿಬಿ ಸಂಗ್ರಹ, 6.3-ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ , ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 675 SoC ಅನ್ನು ಪಡೆದಿದೆ.


Click it and Unblock the Notifications








