Flipkart GOAT Sale 2024: ಫೋನ್, ವಾಚ್, ಟಿವಿ, ಲ್ಯಾಪ್‌ಟಾಪ್‌ಗಳಿಗೆ ಭರ್ಜರಿ ಡಿಸ್ಕೌಂಟ್!
ಇ ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಗೋಟ್ ಸೇಲ್ (Flipkart GOAT Sale 2024) ಮಾರಾಟ ಮೇಳವನ್ನು ಆಯೋಜಿಸಿದೆ. ಈ ಮಾರಾಟದಲ್ಲಿ ಫೋನ್‌ಗಳು ಸೇರಿದಂತೆ ಲ್ಯಾಪ್‌ಟಾಪ್, ಸ್ಮಾರ್ಟ್ ಟಿವಿ, ಸ್ಪೀಕರ್ಸ್ ಅಲ್ಲದೇ ಇತರೆ ಹಲವು ಗೃಹೋಪಯೋಗಿ ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಅಂದಹಾಗೆ ಈ ಮಾರಾಟ ಮೇಳವು ಜುಲೈ 20 ರಿಂದ ಪ್ರಾರಂಭ ಆಗಲಿದ್ದು, ಆದರೆ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ (Flipkart Plus member) ಜುಲೈ 19 ರಿಂದ ಸೇಲ್ ತೆರೆದಿರುತ್ತದೆ.
ಹೌದು, ಫ್ಲಿಪ್‌ಕಾರ್ಟ್ ಆಯೋಜಿಸಿರುವ ಫ್ಲಿಪ್‌ಕಾರ್ಟ್ ಗೋಟ್ ಸೇಲ್ (Flipkart GOAT Sale 2024) ಜಾಹಿರಾತುಗಳು ಮೂಲಕ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಈ ಮಾರಾಟ ಮೇಳದಲ್ಲಿ ವಿಶೇಷವಾಗಿ ಕೆಲವು ಆಯ್ದ ಹೊಸ ಫೋನ್‌ಗಳು ಸಖತ್ ರಿಯಾಯಿತಿ ದರದಲ್ಲಿ ಲಭ್ಯ ಆಗಲಿವೆ. ಅಂದಹಾಗೆ ಈ ಮಾರಾಟ ಮೇಳವು ಜುಲೈ 25 ರ ವರೆಗೂ ಚಾಲ್ತಿ ಇರಲಿದೆ. ಹೆಚ್ಚುವರಿಯಾಗಿ ಬ್ಯಾಂಕ್ ಆಫರ್ ಸಹ ಲಭ್ಯ ಇರಲಿವೆ. ಹಾಗಾದರೇ ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಭರ್ಜರಿ ಆಫರ್
ಫ್ಲಿಪ್‌ಕಾರ್ಟ್ ಗೋಟ್ ಸೇಲ್ (Flipkart GOAT Sale 2024) ಮಾರಾಟದ ಟೀಸರ್ ಪೇಜ್ ಫ್ಲಿಪ್‌ಕಾರ್ಟ್ ತಾಣವು ಐಫೋನ್ 15, ಗ್ಯಾಲಕ್ಸಿ S23, ನಥಿಂಗ್ ಫೋನ್ 2a, ಗೂಗಲ್ ಪಿಕ್ಸಲ್ 7 ಸೇರಿದಂತೆ ಕೆಲವು ಫೋನ್‌ಗಳಿಗೆ ಹೆಚ್ಚಿನ ರಿಯಾಯಿತಿಗಳನ್ನು ನೀಡುತ್ತದೆ ಎಂದು ತಿಳಿಸುತ್ತದೆ.
ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ಫೋನ್
ಫೀಚರ್ಸ್ ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ಫೋನ್ 6.32 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಪಡೆದಿದ್ದು, ಇದು ಆಕ್ಟಾ-ಕೋರ್ ಟೆನ್ಸರ್ G2 SoC ಪ್ರೊಸೆಸರ್ ಹೊಂದಿದೆ. ಹಾಗೆಯೇ 8GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಈ ಫೋನ್ ಸೇಲ್‌ನಲ್ಲಿ 32,999ರೂ. ಗಳಿಗೆ ಲಭ್ಯ ಆಗಲಿದೆ.
ಮೊಟೊರೊಲಾ G34 5G ಫೋನ್
ಮೊಟೊರೊಲಾ G34 5G ಮೊಬೈಲ್ 6.5 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದು ಪಂಚ್-ಹೋಲ್ ವಿನ್ಯಾಸದೊಂದಿಗೆ ಫ್ಲಾಟ್ ಡಿಸ್‌ಪ್ಲೇ ಎನಿಸಿಕೊಂಡಿದೆ. ಅಲ್ಲದೇ ಇದು ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಇದು ಆಂಡ್ರಾಯ್ಡ್ 14 ಓಎಸ್ ಸಪೋರ್ಟ್‌ನಲ್ಲಿ ಕೆಲಸ ಮಾಡಲಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯವನ್ನು ಒಳಗೊಂಡಿದೆ. ಈ ಫೋನ್ ಸೇಲ್‌ನಲ್ಲಿ 9,999ರೂ. ಗಳಿಗೆ ಲಭ್ಯ ಆಗಲಿದೆ.
ಮೊಟೊರೊಲಾ ರೇಜರ್ 50 ಫ್ಯೂಶನ್ ಫೋನ್
ಮೊಟೊರೊಲಾ ರೇಜರ್ 50 ಫ್ಯೂಶನ್ ಫೋನ್ 6.7 ಇಂಚಿನ 3D ಕರ್ವ್ಡ್ pOLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಡಿಸ್‌ಪ್ಲೇಯು 2400 × 1080p ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದೆ. ಅಲ್ಲದೇ ಕ್ವಾಲ್ಕಮ್ ಸ್ನಾಪ್ಡ್ರಾಗನ್ 7s ಜೆನ್ 3 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಸಹ ಇದೆ.
ಇದರೊಂದಿಗೆ ಈ ಫೋನ್ 8GB + 128GB ಹಾಗೂ 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. 5,000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದರ ಜೊತೆಗೆ 68W ಟರ್ಬೋ ಪವರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.


Click it and Unblock the Notifications








