Smartphones: ಫ್ಲಿಪ್‌ಕಾರ್ಟ್‌ನಿಂದ ಹಬ್ಬದ ವಿಶೇಷ ಸೇಲ್; ಈ ಸ್ಮಾರ್ಟ್‌ಫೋನ್‌ಗಳಿಗೆ ಸಖತ್ ಆಫರ್!
ಸ್ಮಾರ್ಟ್‌ಫೋನ್‌ಗಳು (Smartphones) ಇಂದು ಬಳಕೆದಾರರ ಅಗತ್ಯ ಡಿವೈಸ್ ಆಗಿ ಜನಪ್ರಿಯತೆ ಪಡೆದುಕೊಂಡಿವೆ. ಅದರಲ್ಲೂ ಕೆಲವು ದಿನಗಳ ಹಿಂದೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ (Flipkart Big Billion Days Sale) ಸಾಕಷ್ಟು ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಆಫರ್ ಅನ್ನು ಘೋಷಣೆ ಮಾಡಲಾಗಿತ್ತು. ಈಗ ಮತ್ತೊಮ್ಮೆ ವಿಶೇಷ ಸೇಲ್ ಅನ್ನು ಫ್ಲಿಪ್‌ಕಾರ್ಟ್ ಘೋಷಣೆ ಮಾಡಿದೆ.
ಹೌದು, ಫ್ಲಿಪ್‌ಕಾರ್ಟ್ (Flipkart) ಇದೀಗ ಹಬ್ಬದ ವಿಶೇಷ ಸೇಲ್ ಆಗಿರುವ ಗ್ರ್ಯಾಂಡ್ ಫೆಸ್ಟಿವ್ ಡೇ ಸೇಲ್ (Grand Festive Day Sale) ಅನ್ನು ಘೋಷಣೆ ಮಾಡಿದೆ. ಈ ಸೇಲ್ ಅಕ್ಟೋಬರ್ 16 ರಿಂದ ಆರಂಭ ಆಗಿದ್ದು, ಅಕ್ಟೋಬರ್ 20 ನೇ ತಾರೀಖಿನ ವರೆಗೂ ಇರಲಿದೆ. ಇದರಲ್ಲಿ ಗ್ರಾಹಕರು ಬ್ಯಾಂಕ್ ಆಫರ್, ವಿನಿಮಯ ಆಫರ್ ಸೇರಿದಂತೆ ವಿವಿಧ ರೀತಿಯಲ್ಲಿ ಆಫರ್ ಮೇಲೆ ಆಫರ್ ಪಡೆದುಕೊಳ್ಳಬಹುದು. ಹಾಗಿದ್ರೆ, ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಏನೆಲ್ಲಾ ಡಿಸ್ಕೌಂಟ್ ನೀಡಲಾಗಿದೆ ನೋಡೋಣ ಬನ್ನಿ.

ವಿವೋ V29 5G : ಈ ಸ್ಮಾರ್ಟ್‌ಫೋನ್ (vivo V29 5G) ಗೆ ಈಗ ವಿವಿಧ ಬ್ಯಾಂಕ್ ಆಫರ್ ನೀಡಲಾಗಿದೆ. ಅಂದರೆ 8GB RAM ಹಾಗೂ 128 GB ಇಂಟರ್ ಸ್ಟೋರೇಜ್ ಆಯ್ಕೆಯ ಸ್ಮಾರ್ಟ್‌ಫೋನ್ ಅನ್ನು ನೀವು 32,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 6.78 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 50MP + 8MP + 2MP ಕ್ಯಾಮೆರಾ ಹಾಗೂ 50MP ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಫೋನ್ ಖರೀದಿ ವೇಳೆ ನೀವು ಐಸಿಐಸಿಐ ಬ್ಯಾಂಕ್ ಕಾರ್ಡ್, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆ ಮಾಡಬಹುದು.
ಮೊಟೊರೊಲಾ ಎಡ್ಜ್40 ನಿಯೋ: ಈ ಫೋನ್(MOTOROLA Edge 40 Neo) ಅನ್ನು ನೀವು ಈ ವಿಶೇಷ ಸೇಲ್‌ನಲ್ಲಿ 24,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 29,999ರೂ. ಗಳಾಗಿದೆ. ಈ ಫೋನ್ 6.55 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, 50MP + 13MP ನ ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 32MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ ಈ ಫೋನ್ ಡೈಮೆನ್ಸಿಟಿ 7030 ಪ್ರೊಸೆಸರ್ ಬಲ ಹಾಗೂ 12 GB RAM ಮತ್ತು 256 GB ಇಂಟರ್ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S22 5G: ಈ ಸ್ಮಾರ್ಟ್‌ಫೋನ್ (SAMSUNG Galaxy S22 5G) ಅನ್ನು ನೀವು 49,999ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದರ ಸಾಮಾನ್ಯ ದರ
85,999ರೂ.ಗಳಾಗಿದೆ. ಇದರೊಂದಿಗೆ 6.1ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯೊಂದಿಗೆ 50MP + 12MP + 10MP ಯ ಟ್ರಿಪಲ್ ರಿಯಲ್ ಕ್ಯಾಮೆರಾ ಆಯ್ಕೆ ಹಾಗೂ10MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದರೊಟ್ಟಿಗೆ ಸ್ನಾಪ್‌ಡ್ರಾಗನ್ 8 ಜನ್ 1 ಪ್ರೊಸೆಸರ್ ಬಲದೊಂದಿಗೆ 8 GB RAM ಹಾಗೂ 128 GB ಸ್ಟೋರೇಜ್ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G: ಈ ಫೋನ್ (Samsung Galaxy S21 FE 5G) ಅನ್ನು ನೀವು 44,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 69,999ರೂ.ಗಳಾಗಿದೆ. ಈ ಫೋನ್ 6.4 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 12MP + 12MP + 8MP (OIS) ರಿಯರ್ ಕ್ಯಾಮೆರಾ ಸೆನ್ಸರ್ ಹಾಗೂ 32MP ಸೆಲ್ಫಿ ಕ್ಯಾಮೆರಾದ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಫೋನ್ ಸ್ನಾಪ್‌ಡ್ರಾಗನ್ 888 ಪ್ರೊಸೆಸರ್ ಬಲ ಪಡೆದುಕೊಂಡಿದೆ.

ಪೊಕೊ M6 ಪ್ರೊ: ಈ ಫೋನ್ (POCO M6 Pro 5G) ಅನ್ನು ಸಹ ಬಹಳ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಇದರ ಸಾಮಾನ್ಯ ದರ 15,999ರೂ.ಗಳಾಗಿದ್ದು, ಇದನ್ನು ನೀವು 11,999ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದರೊಂದಿಗೆ 6.79 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಆಯ್ಕೆ ಹಾಗೂ 50MP + 2MP ರಿಯರ್ ಕ್ಯಾಮೆರಾದೊಂದಿಗೆ 8MP ಸೆಲ್ಫಿ ಕ್ಯಾಮೆರಾ ಆಯ್ಕೆ ಹಾಗೂ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್ ಬಲ ಪಡೆದುಕೊಂಡಿದೆ. ಇದರೊಂದಿಗೆ 4 GB RAM ಮತ್ತು 128 GB ಇಂಟರ್ ಸ್ಟೋರೇಜ್‌ನಲ್ಲಿ ಈ ಫೋನ್ ಲಭ್ಯ.


Click it and Unblock the Notifications








