Home
ಸುದ್ದಿಜಾಲ

ಭರ್ಜರಿ ಡಿಸ್ಕೌಂಟ್ : ಫ್ಲಿಪ್‌ಕಾರ್ಟ್‌ನ 'ಗ್ರ್ಯಾಂಡ್ ಗ್ಯಾಜೆಟ್‌ ಡೇಸ್' ಶುರು!

ಆನ್‌ಲೈನ್‌ ಶಾಪಿಂಗ್ ಪ್ರಿಯರ ನೆಚ್ಚಿನ ತಾಣವಾಗಿರುವ ಫ್ಲಿಪ್‌ಕಾರ್ಟ್‌, ಪ್ರತಿ ತಿಂಗಳು ಒಂದಿಲ್ಲೊಂದು ಭರ್ಜರಿ ಆಫರ್‌ಗಳ ಮೇಳವನ್ನು ಆರಂಭಿಸಿರುತ್ತದೆ. ಅದರಂತೆಯೇ ಇದೀಗ 'ಗ್ರ್ಯಾಂಡ್‌ ಗ್ಯಾಜೆಟ್‌ ಡೇಸ್' ಸೇಲ್ ಮೇಳವನ್ನು ಆಯೋಜಿಸಿದ್ದು, ಗ್ಯಾಜೆಟ್ ಪ್ರಿಯರನ್ನು ಕೈಬಿಸಿ ಕರೆಯುತ್ತಿದೆ. ಎರಡು ದಿನಗಳ ಈ ಮೇಳವು ಇಂದಿನಿಂದ (ಇದೇ ಜುಲೈ.25) ಶುರುವಾಗಿದ್ದು, ಇದೇ ಜುಲೈ 27ರಂದು ಮುಕ್ತಾಯವಾಗಲಿದೆ.

ಭರ್ಜರಿ ಡಿಸ್ಕೌಂಟ್ : ಫ್ಲಿಪ್‌ಕಾರ್ಟ್‌ನ 'ಗ್ರ್ಯಾಂಡ್ ಗ್ಯಾಜೆಟ್‌ ಡೇಸ್' ಶುರು!

ಫ್ಲಿಪ್‌ಕಾರ್ಟ್‌ ಜಾಲತಾಣವು ಆಯೋಜಿಸಿರುವ 'ಗ್ರ್ಯಾಂಡ್ ಗ್ಯಾಜೆಟ್‌ ಡೇಸ್' ಸೇಲ್ ಮೇಳದಲ್ಲಿ, ಲ್ಯಾಪ್‌ಟಾಪ್‌, ಪವರ್‌ಬ್ಯಾಂಕ್, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಆಡಿಯೊ ಡಿವೈಸ್‌, ಗೇಮಿಂಗ್ ಡಿವೈಸ್, ಕ್ಯಾಮೆರಾಗಳು, ಸ್ಮಾರ್ಟ್‌ಹೋಮ್ ಡಿವೈಸ್‌ಗಳು, ಮೊಬೈಲ್ ಆಕ್ಸಸರಿಸ್‌, ಡಾಟಾ ಸ್ಟೋರೇಜ್, ಸೇರಿದಂತೆ ಇನ್ನು ಹಲವಾರು ಗ್ಯಾಜೆಟ್‌ ಉತ್ಪನ್ನಗಳ ಮೇಲೆ ಭಾರಿ ಡಿಸ್ಕೌಂಟ್‌ ಆಫರ್‌ಗಳು ಲಭ್ಯ ಇವೆ.

ಭರ್ಜರಿ ಡಿಸ್ಕೌಂಟ್ : ಫ್ಲಿಪ್‌ಕಾರ್ಟ್‌ನ 'ಗ್ರ್ಯಾಂಡ್ ಗ್ಯಾಜೆಟ್‌ ಡೇಸ್' ಶುರು!

ಲ್ಯಾಪ್‌ಟಾಪ್‌ಗಳ ಮೇಲೆ ಶೇ.25% ಡಿಸ್ಕೌಂಟ್‌, ಹೆಡ್‌ಫೋನ್‌ ಮತ್ತು ಸ್ಪೀಕರ್‌ಗಳ ಮೇಲೆ ಶೇ.70% ಡಿಸ್ಕೌಂಟ್‌, ಪವರ್‌ಬ್ಯಾಂಕ್‌ ಡಿವೈಸ್‌ಗಳ ಆರಂಭಿಕ ಬೆಲೆಯು 325ರೂ.ಗಳು ಹಾಗೂ 99ರೂ.ಗಳಿಂದ ಮೊಬೈಲ್‌ ಆಕ್ಸಸರಿಸ್‌ಗಳು ದೊರೆಯಲಿವೆ. ಹಾಗಾದರೇ ಫ್ಲಿಪ್‌ಕಾರ್ಟ್‌ ಆಯೋಜಿಸಿರುವ 'ಗ್ರ್ಯಾಂಡ್ ಗ್ಯಾಜೆಟ್‌ ಡೇಸ್' ಸೇಲ್‌ನಲ್ಲಿ ಇತರೆ ಯಾವೆಲ್ಲಾ ಭರ್ಜರಿ ಆಫರ್‌ಗಳಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಲ್ಯಾಪ್‌ಟಾಪ್‌ಗಳಿಗೆ ಡಿಸ್ಕೌಂಟ್

ಲ್ಯಾಪ್‌ಟಾಪ್‌ಗಳಿಗೆ ಡಿಸ್ಕೌಂಟ್

ಆಸೂಸ್‌, ಹೆಚ್‌ಪಿ, ಡೆಲ್, ಲೆನೊವಾ, ಆಪಲ್, ಸೇರಿದಂತೆ ಜನಪ್ರಿಯ ಕಂಪನಿಗಳ ವಿವಿಧ ಶ್ರೇಣಿಗಳ ಲ್ಯಾಪ್‌ಟಾಪ್‌ಗಳ ಮೇಳದಲ್ಲಿ ಲಭ್ಯವಿದ್ದು, ಅವುಗಳಿಗೆ ಡಿಸ್ಕೌಂಟ್‌ ಸಹ ನೀಡಲಾಗಿದೆ. ಲ್ಯಾಪ್‌ಟಾಪ್‌ ಖರೀದಿಯ ಮೇಲೆ ಶೇ. 25% ಡಿಸ್ಕೌಂಟ್‌ ದೊರೆಯಲಿದ್ದು, ಎಕ್ಸ್‌ಚೇಂಜ್ ಅವಕಾಶವು ಸಹ ಇದೆ. 15,000ರೂ.ಗಳ ಪ್ರೈಸ್‌ಟ್ಯಾಗ್‌ನ ಒಳಗೂ ಲ್ಯಾಪ್‌ಟಾಪ್‌ಗಳು ದೊರೆಯುತ್ತವೆ.

ಟ್ಯಾಬ್ಲೆಟ್ಸ್ ಡಿವೈಸ್‌ ಆಫರ್‌

ಟ್ಯಾಬ್ಲೆಟ್ಸ್ ಡಿವೈಸ್‌ ಆಫರ್‌

ಟ್ಯಾಬ್‌ ಡಿವೈಸ್‌ಗಳಿಗೂ ಅತ್ಯುತ್ತಮ ಡಿಸ್ಕೌಂಟ್‌ ನೀಡಿದ್ದು, ಆಪಲ್ ಐಫೋಡ್ 128 GB ವೇರಿಯಂಟ್‌ 35,490ರೂ, 8GB ಸಂಗ್ರಹದ ಅಲ್ಕಾಟೆಲ್ 1ಟಿ 7 ಟ್ಯಾಬ್ಲೆಟ್ 4,299ರೂ, ಲೆನೊವೊ ಟ್ಯಾಬ್‌ 7,999ರೂ. ಲೆನೊವೊ ಫ್ಯಾಬ್ಲೆಟ್ 9,999ರೂ, ಹಾನರ್ ಟ್ಯಾಬ್ಲೆಟ್‌ಗಳು 11,499ರೂ.ಗಳು ಮತ್ತು ಲೆನೊವೊ ಟ್ಯಾಬ್ಲೆಟ್‌ಗಳು 12,990ರೂ. ಹಾಗೂ 27, 999 ರೂ.ಗಳಿಂದ ಸ್ಯಾಮ್‌ಸಂಗ್ ಟ್ಯಾಬ್ಲೆಟ್‌ಗಳು ಲಭ್ಯ.

ಪವರ್‌ಬ್ಯಾಂಕ್‌ ಆಫರ್‌

ಪವರ್‌ಬ್ಯಾಂಕ್‌ ಆಫರ್‌

ಗ್ರ್ಯಾಂಡ್‌ ಗ್ಯಾಜೆಟ್‌ ಡೇಸ್‌ ಸೇಲ್‌ನಲ್ಲಿ ಪವರ್‌ಬ್ಯಾಂಕ್‌ಗಳಿಗೂ ಭರ್ಜರಿ ಡಿಸ್ಕೌಂಟ್‌ ನೀಡಲಾಗಿದೆ. ಸಿಸ್ಕಾ, ಪಿಲಿಪ್ಸ್, ಅಮೆರಾನ್, ಲೆನೊವೊ ಸೇರಿದಂತೆ ಪ್ರಮುಖ ಕಂಪನಿಗಳ ಪವರ್‌ಬ್ಯಾಂಕ್‌ಗಳು ಲಭ್ಯವಿದ್ದು, 10000mAh ಮತ್ತು ಅದಕ್ಕೂ ಹೆಚ್ಚಿನ ಬ್ಯಾಟರಿ ಪವರ್‌ ಸಾಮರ್ಥ್ಯದ ಆಯ್ಕೆಗಳಲ್ಲಿ ದೊರೆಯಲಿವೆ. ಆರಂಭಿಕ ಬೆಲೆಯು 325ರೂ.ಗಳಾಗಿದೆ.

ಸ್ಪೀಕರ್‌ ಆಫರ್‌

ಸ್ಪೀಕರ್‌ ಆಫರ್‌

ಮೇಳದಲ್ಲಿ ವಾಯರ್‌ಲೆಸ್‌ ಹೆಡ್‌ಫೋನ್, ಬ್ಲೂಟೂತ್ ಸ್ಪೀಕರ್ಸ್‌, ಸೌಂಡ್‌ ಬಾರ್, ಇಯರ್‌ಪೋಡ್‌, ನೆಕ್‌ಬ್ಯಾಂಡ್‌ ಲ್ಯಾಪ್‌ಟಾಪ್‌ ಸ್ಪೀಕರ್ಸ್‌ಗಳು ಸೇರಿದಂತೆ ಹಲವು ಬಗೆಯ ಆಡಿಯೊ ಉತ್ಪನ್ನಗಳ ಮೇಲೆ ರಿಯಾಯಿತಿ ಲಭ್ಯ. ಜೆಬಿಎಲ್, ಬಾಸ್‌, ಸ್ಕಲ್‌ಕ್ಯಾಂಡಿ, ಸೋನಿ, ಸ್ಯಾಮ್‌ಸಂಗ್ ಇತರೆ ಕಂಪನಿಗಳ ಆಡಿಯೊ ಡಿವೈಸ್‌ಗಳು ಆಫರ್‌ನಲ್ಲಿ ಲಭ್ಯವಾಗಲಿವೆ.

ಇತರೆ ಉತ್ಪನ್ನಗಳು

ಇತರೆ ಉತ್ಪನ್ನಗಳು

ಈ ಮೇಳದಲ್ಲಿ ಪೆನ್‌ಡ್ರೈವ್‌ ಮತ್ತು ಮೊಬೈಲ್‌ ಆಕ್ಸಸರಿಸ್ ಉತ್ಪನ್ನಗಳು 99ರೂ.ಗಳಿಂದ ಆರಂಭ. ಕ್ಯಾಮೆರಾ ಲೆನ್ಸ್‌ಗಳಿಗೂ ಅತ್ಯುತ್ತಮ ಎಕ್ಸ್‌ಚೇಂಜ್ ಆಫರ್‌ ನೀಡಲಾಗಿದೆ. 3,399ರೂ.ಗಳ ಪ್ರಾರಂಭಿಕ ಬೆಲೆಯಿಂದ ಹಾರ್ಡ್‌ಡಿಸ್ಕ್‌ ಡಿವೈಸ್‌ಗಳು ದೊರೆಯಲಿವೆ. ಹೇರ್‌ ಟ್ರಿಮ್ಮರ್‌ ಆರಂಭಿಕ ಬೆಲೆಯು 299ರೂ.ಗಳಾಗಿದ್ದು, ಯುಎಸ್‌ಬಿ ಕೇಬಲ್, ವಾಯರ್‌ಲೆಸ್‌ ಚಾರ್ಜರ್‌ ಉತ್ಪನ್ನಗಳು ದೊರೆಯಲಿವೆ.

Best Mobiles in India

English summary
Flipkart is hosting The Grand Gadget Sale from today. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+