Home
ಸುದ್ದಿಜಾಲ

iPhone: ವರ್ಷದ ಮೊದಲ ಆಫರ್! ಆಪಲ್‌ ಐಫೋನ್ 14 ಖರೀದಿ ವೇಳೆ 20 ಸಾವಿರಕ್ಕಿಂತ ಹೆಚ್ಚು ಉಳಿತಾಯ

ಐಫೋನ್‌ಗಳು (iPhone) ಹೆಚ್ಚು ಬೆಲೆ ಹೊಂದಿದ್ದರೂ ಸಹ ಹೆಚ್ಚು ಸೇಲ್‌ ಆಗುವ ಫೋನ್‌ಗಳಾಗಿವೆ. ಯಾಕೆಂದರೆ ಸಾಕಷ್ಟು ಜನರು ಈ ಫೋನ್‌ಗಳ ಬೆಲೆಗಿಂತ ಇದರಲ್ಲಿರುವ ವಿಶೇಷತೆಗೆ ಮಾರುಹೋಗಿ ಈ ಫೋನ್‌ಗಳನ್ನು ಖರೀದಿ ಮಾಡುತ್ತಾರೆ. ಆದರೆ, ಇನ್ನೂ ಕೆಲವೊಂದಷ್ಟು ಜನರು ಈ ಫೋನ್‌ ಬೆಲೆ ಯಾವಾಗ ಕಡಿಮೆ ಆಗುತ್ತದೆ ಎಂದು ಕಾದು ಕುಳಿತಿರುತ್ತಾರೆ.

ಹೌದು, ಆಪಲ್‌ನ ಐಫೋನ್‌ಗಳು ದುಬಾರಿ ಆದರೂ ಸಹ ಬಹಳ ಬೇಡಿಕೆ ಇರುವ ಫೋನ್‌ಗಳಾಗಿವೆ. ಈ ಫೋನ್‌ಗಳ ಫೀಚರ್ಸ್‌ಗೆ ಸರಿಸಮನಾದ ಫೋನ್‌ಗಳೇ ಇಲ್ಲ ಎಂಬಂತೆ ಮಾರುಕಟ್ಟೆಯಲ್ಲಿ ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳನ್ನು ಹೆಚ್ಚು ಹೆಚ್ಚು ಖರೀದಿ ಮಾಡುತ್ತಿದ್ದಾರೆ. ಈ ಬೆಳವಣಿಗೆ ನಡುವೆ ವರ್ಷದ ಆರಂಭದಲ್ಲಿ ವಿಶೇಷ ಸೇಲ್‌ ಮೂಲಕ ಐಫೋನ್ 14 (iPhone 14) ಗೆ ಭರ್ಜರಿ ಆಫರ್ ನೀಡಲಾಗಿದೆ. ಹಾಗಿದ್ರೆ, ಎಲ್ಲಿ ಈ ಆಫರ್?, ಇದರ ಪ್ರಮುಖ ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಆಪಲ್‌ ಐಫೋನ್ 14 ಗೆ ಆಫರ್: ಐಫೋನ್ 14 ಅನ್ನು 2022 ರಲ್ಲಿ ಐಫೋನ್‌ 14 ಪ್ರೊ ಮತ್ತು ಪ್ಲಸ್‌ (iPhone 14 Pro, Plus) ಫೋನ್‌ಗಳ ಜೊತೆಗೆ 79,900 ರೂಗಳ ಆರಂಭಿಕ ಬೆಲೆಗೆ ಅನಾವರಣ ಮಾಡಲಾಗಿತ್ತು. ಆದರೆ, ಆಪಲ್‌ ಐಫೋನ್ 15 ಸರಣಿಯ (iPhone 15 series) ಫೋನ್‌ಗಳನ್ನು ಅನಾವರಣ ಮಾಡಿದ ಬಳಿಕ ಈ ಫೋನ್‌ಗಳ ಮೇಲೆ 10,000 ರೂ.ಗಳ ಬೆಲೆ ಇಳಿಕೆ ಮಾಡಲಾಯಿತು.ಈ ನಡುವೆ ಈಗ ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್‌ನಲ್ಲಿ (Flipkart Big Bachat Dhamaal Sale) ಭಾರಿ ರಿಯಾಯಿತಿಯಲ್ಲಿ ಲಭ್ಯವಿದೆ.

ವರ್ಷದ ಮೊದಲ ಆಫರ್!ಆಪಲ್‌ ಐಫೋನ್14 ಖರೀದಿ ವೇಳೆ 20 ಸಾವಿರಕ್ಕಿಂತ ಹೆಚ್ಚು ಉಳಿತಾಯ

ಆಪಲ್‌ ಐಫೋನ್ 14 ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 69,900 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, 15% ರಿಯಾಯಿತಿ ಪಡೆಯುವ ಮೂಲಕ 58,999 ರೂ.ಗಳ ದರದಲ್ಲಿ ಕಾಣಿಸಿಕೊಂಡಿದೆ. ಆದರೆ, ನೀವು ಈ ಫೋನ್‌ ಅನ್ನು ಇದೀಗ ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಂದರೆ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟಿನ ಮೇಲೆ 1500 ರೂಪಾಯಿಗಳನ್ನು ಆಫರ್ ಲಭ್ಯ ಇದೆ. ಇಷ್ಟೇ ಅಲ್ಲದೆ ಹತ್ತಕ್ಕೂ ಹೆಚ್ಚು ಬ್ಯಾಂಕ್‌ ಆಫರ್ ಸಹ ಲಭ್ಯ ಇದೆ.

ಇದರೊಂದಿಗೆ ವಿನಿಮಯ ಆಫರ್ ಘೋಷಣೆ ಮಾಡಲಾಗಿದ್ದು, ಈ ಮೂಲಕ 28 ಸಾವಿರ ರೂ.ಗಳ ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಎಲ್ಲಾ ಕೊಡುಗೆಗಳು ಮತ್ತು ರಿಯಾಯಿತಿಗಳೊಂದಿಗೆ, ನೀವು ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು 30 ಸಾವಿರ ರೂ.ಗಳ ಆಸುಪಾಸಿನಲ್ಲಿ ಖರೀದಿ ಮಾಡಬಹುದಾಗಿದೆ. ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

ವರ್ಷದ ಮೊದಲ ಆಫರ್!ಆಪಲ್‌ ಐಫೋನ್14 ಖರೀದಿ ವೇಳೆ 20 ಸಾವಿರಕ್ಕಿಂತ ಹೆಚ್ಚು ಉಳಿತಾಯ

ಇನ್ನು ಈ ಫೋನ್ ಆಪಲ್‌ ಐಫೋನ್ 13 (iPhone 13) ನಂತೆಯೇ ಅದೇ ಚಿಪ್‌ಸೆಟ್‌ನ ಕಾರ್ಯನಿರ್ವಹಿಸಲಿದೆ. ಆದರೆ ಹೆಚ್ಚಿನ ಕೋರ್‌ಗಳನ್ನು ಮಾತ್ರ ಪಡೆದಿದೆ. ಇದರೊಂದಿಗೆ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇಯನ್ನು ಹೊಂದಿದ್ದು, ವಿಡಿಯೋ ಕರೆಗಳು ಮತ್ತು ಸೆಲ್ಫಿಗಳಿಗಾಗಿ 12 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.ಇದರೊಂದಿಗೆ ಈ ಸ್ಮಾರ್ಟ್‌ಫೋನ್ 12 ಮೆಗಾಪಿಕ್ಸೆಲ್‌ನ ಡ್ಯುಯಲ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಉತ್ತಮ ಕ್ಯಾಮೆರಾ ಫೀಚರ್ಸ್‌ ಪಡೆದಿದೆ.

ವರ್ಷದ ಮೊದಲ ಆಫರ್!ಆಪಲ್‌ ಐಫೋನ್14 ಖರೀದಿ ವೇಳೆ 20 ಸಾವಿರಕ್ಕಿಂತ ಹೆಚ್ಚು ಉಳಿತಾಯ

ಹಾಗೆಯೇ ಈ ಫೋನ್ 5G, 4G VOLTE, 4G, 3G, 2G ಬೆಂಬಲಿತ ನೆಟ್‌ವರ್ಕ್‌ಗಳು, ಬ್ಲೂಟೂತ್ ಆವೃತ್ತಿ v5.3, ಫೇಸ್ ಐಡಿ, ಬ್ಯಾರೋಮೀಟರ್, ಹೈ-ಡೈನಾಮಿಕ್ ರೇಂಜ್ ಗೈರೋ, ಹೈ-ಜಿ ಅಕ್ಸೆಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸರ್, ಡ್ಯುಯಲ್ ಆಂಬಿಯೆಂಟ್ ಲೈಟ್ ಸೆನ್ಸರ್‌ಗಳನ್ನು ಈ ಫೋನ್‌ ಹೊಂದಿದ್ದು, ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡಲಿದೆ. ಜೊತೆಗೆ 3279 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಈ ಫೋನ್‌ ಪ್ಯಾಕ್‌ ಆಗಿದೆ.

Best Mobiles in India

English summary
A special offer is now being announced for iPhone. Accordingly, a great offer has been announced on Flipkart for iPhone 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+