Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ ಹೋಳಿ ಸೇಲ್‌ 2023; ಕೈಗೆಟಕುವ ಬೆಲೆಯಲ್ಲಿ ಖರೀದಿಸಿ ಐಫೋನ್‌13,14!

ಭಾರತದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುವ ಹೋಳಿ ಹಬ್ಬಕ್ಕೆ ಪ್ರಮುಖ ಇ-ಕಾಮರ್ಸ್‌ ತಾಣಗಳಾದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಸ್ಮಾರ್ಟ್‌ಡಿವೈಸ್‌ಗಳಿಗೆ ಭರ್ಜರಿ ಆಫರ್‌ ಘೋಷಣೆ ಮಾಡಿದ್ದು, ಈ ಮೂಲಕ ದುಬಾರಿ ಬೆಲೆಯ ಡಿವೈಸ್‌ಗಳನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ.

ಹೌದು, ಫ್ಲಿಪ್‌ಕಾರ್ಟ್‌ ಹೋಳಿ ಸೇಲ್‌ 2023 ಗೆ 'ಬಿಗ್ ಬಚತ್ ಧಮಾಲ್ ಸೇಲ್ 2023' ಎಂಬ ಹೆಸರು ನೀಡಿದ್ದು, ಈ ಸೇಲ್‌ನಲ್ಲಿ ಗ್ರಾಹಕರು ವಿವಿಧ ಕಂಪೆನಿಯ ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅದರಲ್ಲೂ ಆಪಲ್‌ ಫೋನ್‌ ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದು ಉತ್ತಮ ಸಮಯ. ಹಾಗಿದ್ರೆ, ಆಪಲ್‌ನ ಯಾವ ಫೋನ್‌ಗೆ ಆಫರ್‌ ಇದೆ?, ಆಫರ್‌ ಬೆಲೆ ಏನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಫ್ಲಿಪ್‌ಕಾರ್ಟ್‌ ಹೋಳಿ ಸೇಲ್‌ 2023;ಕೈಗೆಟಕುವ ಬೆಲೆಯಲ್ಲಿ ಖರೀದಿಸಿ ಐಫೋನ್‌13,14!

ಐಫೋನ್‌ 14 ಗೆ ಬಿಗ್‌ ಡಿಸ್ಕೌಂಟ್‌

ಐಫೋನ್ ಖರೀದಿ ಮಾಡಬೇಕು ಎಂದು ಕನಸು ಕಂಡಿದ್ದವರಿಗೆ ಇದು ನನಸು ಮಾಡಿಕೊಳ್ಳುವ ಕಾಲ. ಯಾಕೆಂದರೆ ಈ ದುಬಾರಿ ಫೋನ್‌ ಅನ್ನು ನೀವು 44,999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 79,900 ರೂ. ಗಳ ಸಾಮಾನ್ಯ ದರ ಹೊಂದಿದ್ದು, ಫ್ಲಿಪ್‌ಕಾರ್ಟ್ 9 % ರಿಯಾಯಿತಿ ಘೋಷಣೆ ಮಾಡಿದೆ. ಈ ಮೂಲಕ ಈ ಫೋನ್‌ 71,999 ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ಅದಾಗ್ಯೂ ನೀವು ಇನ್ನೂ ಹೆಚ್ಚಿನ ಡಿಸ್ಕೌಂಟ್‌ ನಲ್ಲಿ ಐಫೋನ್‌ ಖರೀದಿ ಮಾಡಬಹುದು. ಇದಕ್ಕಾಗಿ ಖರೀದಿದಾರರು ಹೆಚ್‌ಡಿಎಫ್‌ಸಿ ಕ್ರೆಡಿಟ್ ಬಳಕೆ ಮಾಡಿಕೊಂಡು ಕೊಂಡುಕೊಂಡರೆ 4,000 ರೂ. ಗಳ ರಿಯಾಯಿತಿ ಲಭ್ಯವಾಗಲಿದೆ. ಅದರಂತೆ 67,999 ರೂ.ಗೆ ಐಫೋನ್ ಬೆಲೆ ಇಳಿಯಲಿದೆ. ಹಾಗೆಯೇ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಹೊಂದಿರುವವರು ಶೇಕಡಾ 5 % ಕ್ಯಾಶ್‌ಬ್ಯಾಕ್ ಸಹ ಪಡೆದುಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್‌ ಹೋಳಿ ಸೇಲ್‌ 2023;ಕೈಗೆಟಕುವ ಬೆಲೆಯಲ್ಲಿ ಖರೀದಿಸಿ ಐಫೋನ್‌13,14!

ಇನ್ನು ವಿನಿಮಯ ಆಫರ್‌ ಸಹ ಲಭ್ಯವಾಗಲಿದ್ದು, ಈ ಮೂಲಕ ಖರೀದಿ ಮಾಡಲು ಮುಂದಾದರೆ ನಿಮ್ಮ ಹಳೆಯ ಫೋನ್‌ ಅನ್ನು ಬಳಕೆ ಮಾಡಿಕೊಂಡು 23,000 ರೂ. ಗಳ ವರೆಗೂ ರಿಯಾಯಿತಿ ಪಡೆಯಬಹುದು. ಫೋನ್‌ ಉತ್ತಮ ಕಾರ್ಯಕ್ಷಮತೆ ಹೊಂದಿದ್ದು, ಇಷ್ಟೇ ರಿಯಾಯಿತಿ ಲಭ್ಯವಾದರೆ ಐಫೋನ್ 14 ಅನ್ನು ಕೇವಲ 44,999 ರೂ. ಗಳಿಗೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಐಫೋನ್‌ 13 ಗೂ ಭಾರೀ ಆಫರ್‌

ಅತಿ ಹೆಚ್ಚು ಸೇಲ್ ಆಗಿರುವ ಹಾಗೂ ಸೇಲ್‌ ಆಗುತ್ತಿರುವ ಐಫೋನ್ 13 ಗೂ ಸಹ ಈ ಆಫರ್‌ ಲಭ್ಯವಾಗಲಿದ್ದು, ಗ್ರಾಹಕರು ಕೇವಲ 36,999ರೂ. ಗಳಿಗೆ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ. ಅಂದರೆ 128GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯಂಟ್‌ಗೆ 69,900 ರೂ. ಗಳ ಬೆಲೆ ಇದ್ದು, ಫ್ಲಿಪ್‌ಕಾರ್ಟ್‌ನಲ್ಲಿ 11 % ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಈ ಫೋನ್ 61,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ಇನ್ನು 61,999 ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿರುವ ಈ ಫೋನ್‌ ಅನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಲು ಅವಕಾಶ ಇದ್ದು, ಅದರಲ್ಲಿ ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ ಹೆಚ್ಚುವರಿ 2,000 ರೂ. ಗಳ ಡಿಸ್ಕೌಂಟ್‌ ಸಿಗಲಿದೆ. ಹಾಗೆಯೇ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ ಹೊಂದಿರುವವರು ಈ ಫೋನ್‌ ಖರೀದಿಯಲ್ಲಿ 5 % ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್‌ ಹೋಳಿ ಸೇಲ್‌ 2023;ಕೈಗೆಟಕುವ ಬೆಲೆಯಲ್ಲಿ ಖರೀದಿಸಿ ಐಫೋನ್‌13,14!

ಇದನ್ನು ಹೊರತುಪಡಿಸಿ ವಿನಿಮಯ ಆಫರ್‌ಅನ್ನು ಸಹ ಘೋಷಣೆ ಮಾಡಲಾಗಿದ್ದು, ಈ ಮೂಲಕ 36,999 ರೂ. ಗಳಿಗೆ ಈ ಐಫೋನ್‌ 13 ಅನ್ನು ಖರೀದಿ ಮಾಡಬಹುದಾಗಿದೆ. ಅಂದರೆ ನಿಮ್ಮ ಹಳೆಯ ಫೋನ್ ಉತ್ತಮ ರೀತಿಯಲ್ಲಿದ್ದರೆ 23,000 ರೂ. ಗಳ ವರೆಗೂ ಈ ಫೋನ್‌ಗೆ ರಿಯಾಯಿತಿ ಲಭ್ಯವಾಗಲಿದೆ.

Best Mobiles in India

English summary
Flipkart has announced discounts on flagship smartphones through Flipkart Holi Sale 2023. Accordingly, iPhone 13 and iPhone 14 are also heavily discounted.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+