ಫ್ಲಿಪ್‌ಕಾರ್ಟ್ ಸೇಲ್ ಲೈವ್: ಈ ದುಬಾರಿ ಫೋನ್‌ಗಳಿಗೂ ಭರ್ಜರಿ ಡಿಸ್ಕೌಂಟ್ ಲಭ್ಯ!
ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ತನ್ನ ವೆಬ್‌ಸೈಟ್‌ನಲ್ಲಿ ಒಂದಿಲ್ಲೊಂದು ಮಾರಾಟ ಮೇಳಗಳನ್ನು ಆಯೋಜಿಸುತ್ತಲೇ ಬಂದಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಡಿಸ್ಕೌಂಟ್‌ನಲ್ಲಿ ಹಲವು ಗ್ಯಾಜೆಟ್ಸ್‌ಗಳನ್ನು ಖರೀದಿಸುವುದಕ್ಕೆ ಅವಕಾಶ ನೀಡುತ್ತಿದೆ. ಇದೀಗ ಫ್ಲಿಪ್‌ಕಾರ್ಟ್ ಮೊಬೈಲ್ ಫೋನ್ಸ್ ಬೊನಾಂಜಾ ಸೇಲ್ ಆಯೋಜಿಸಿದ್ದು, ಕೆಲವು ಸ್ಮಾರ್ಟ್‌ಫೋನ್‌ಗಳು ಭಾರೀ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿವೆ.
ಹೌದು, ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಮೊಬೈಲ್ ಫೋನ್ಸ್ ಬೊನಾಂಜಾ ಸೇಲ್ ಪ್ರಾರಂಭಿಸಿದ್ದು, ಈ ಮಾರಾಟ ಮೇಳವು ಇದೇ ಡಿಸೆಂಬರ್ 6ರ ವರೆಗೂ ಚಾಲ್ತಿ ಇರಲಿದೆ. ಈ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ಆಫರ್ ಲಭ್ಯ ಮಾಡಿದ್ದು, ಕೆಲವು ಜನಪ್ರಿಯ ಫೋನ್‌ಗಳು ಡಿಸ್ಕೌಂಟ್ ಬೆಲೆಗೆ ಲಭ್ಯ ಇವೆ. ಹಾಗಾದರೆ ಆಫರ್‌ನಲ್ಲಿ ಲಭ್ಯ ಇರುವ ಕೆಲವು ಅತ್ಯುತ್ತಮ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 12 ಫೋನ್
ಐಫೋನ್ 12 OLED ಡಿಸ್‌ಪ್ಲೇ ಪಡೆದಿದ್ದು, A14 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಕೆಲಸ ಮಾಡಲಿದೆ. ಇದು ಎರಡು ಕ್ಯಾಮೆರಾ ಸೆನ್ಸಾರ್ ಆಯ್ಕೆ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಸೆನ್ಸಾರ್ ಆಗಿವೆ. ಹಾಗೆಯೇ ಈ ಐಫೋನ್ IP68 ವಾಟರ್ ರೆಸಿಸ್ಟಂಟ್ ಸೌಲಭ್ಯ ಸಹ ಪಡೆದಿದೆ. ಇನ್ನು ಈ ಫೋನ್ ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ಬೆಲೆಯು 46,999ರೂ. ಆಗಿದ್ದು, ಇತರೆ ಕೊಡುಗೆ ಸೇರಿ 39,999ರೂ. ಗಳಿಗೂ ಖರೀದಿಸಬಹುದು.
ಗೂಗಲ್ ಪಿಕ್ಸೆಲ್ 7
ಗೂಗಲ್ ಸಂಸ್ಥೆಯ ಈ ಸ್ಮಾರ್ಟ್‌ಫೋನ್ 6.32 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು ಆಕ್ಟಾ-ಕೋರ್ ಟೆನ್ಸರ್ G2 SoC ಪ್ರೊಸೆಸರ್ ಹೊಂದಿದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ಬೆಲೆಯು 43,999ರೂ. ಆಗಿದ್ದು, ಇತರೆ ಕೊಡುಗೆ ಸೇರಿ 39,999ರೂ. ಗಳಿಗೂ ಖರೀದಿಸಬಹುದು.

ರೆಡ್ಮಿ ನೋಟ್ 12 ಪ್ರೊ 5G
ಈ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಪಡೆದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 1080SoC ಪ್ರೊಸೆಸರ್ ವೇಗವನ್ನು ಒಳಗೊಂಡಿದೆ. ಹಾಗೆಯೇ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಇದರೊಂದಿಗೆ 5,000mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ಬೆಲೆಯು 20,999ರೂ. ಆಗಿದ್ದು, ಇತರೆ ಕೊಡುಗೆ ಸೇರಿ 17,999ರೂ. ಗಳಿಗೂ ಖರೀದಿಸಬಹುದು.

ಮೊಟೊ G54 5G
ಈ ಸ್ಮಾರ್ಟ್‌ಫೋನ್ 6.5 ಇಂಚಿನ ಫುಲ್ ಹೆಚ್‌ಡಿ+ LED ಡಿಸ್‌ಪ್ಲೇ ಹೊಂದಿದ್ದು, ಇದು 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಮೀಡಿಯಾಟೆಕ್ ಡೈಮೆನ್ಸಿಟಿ 7020 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದರ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಇನ್ನು ಇದರ ಬ್ಯಾಟರಿ ಬಲ 6000 mAh ಸಾಮರ್ಥ್ಯದಲ್ಲಿ ಇದೆ. ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ಬೆಲೆಯು 16,999ರೂ. ಆಗಿದ್ದು, ಇತರೆ ಕೊಡುಗೆ ಸೇರಿ 12,999ರೂ. ಗಳಿಗೂ ಖರೀದಿಸಬಹುದು.


Click it and Unblock the Notifications








