Home
ಸುದ್ದಿಜಾಲ

ಫ್ಲಿಪ್‌ಕಾರ್ಟ್ 'ಮೊಬೈಲ್ ಬೊನಾಂಜಾ' ಸೇಲ್‌ನಲ್ಲಿ ಈ ಫೋನ್‌ಗಳಿಗೆ ಬಿಗ್‌ ಡಿಸ್ಕೌಂಟ್!

ಆನ್‌ಲೈನ್‌ ಮಾರುಕಟ್ಟೆಯಲ್ಲಿ ಆಫರ್‌ಗಳಿಗೆನು ಬರವಿಲ್ಲ. ಹಲವು ಇ ಕಾಮರ್ಸ್‌ ತಾಣಗಳು ಆನ್‌ಲೈನ್‌ನಲ್ಲಿ ಖರೀದಿಸಿದಾಗ ಡಿಸ್ಕೌಂಟ್‌ ನೀಡುತ್ತದೆ. ಅವುಗಳಲ್ಲಿ ಇ ಕಾಮರ್ಸ್ ದೈತ್ಯವೆಂದೆ ಬಿಂಬಿತವಾಗಿರುವ ಫ್ಲಿಪ್‌ಕಾರ್ಟ್‌ ಸದಾ ಒಂದಿಲ್ಲೊಂದು ಸೇಲ್‌ ಮೇಳವನ್ನು ಆಯೋಜಿಸಿ, ಆಫರ್‌ಗಳ ಅಡ್ಡಾ ಎನಿಸಿಕೊಂಡಿದೆ. ಇದೀಗ ಸಂಸ್ಥೆಯು ಗ್ಯಾಜೆಟ್‌ಗಳಿಗೆ ಭರ್ಜರಿ ಡಿಸ್ಕೌಂಟ್ ನೀಡುವ 'ಮೊಬೈಲ್‌ ಬೊನಾಂಜಾ' ಸೇಲ್‌ ಮೇಳವನ್ನು ಶುರುಮಾಡಿದೆ.

ಫ್ಲಿಪ್‌ಕಾರ್ಟ್ ಮೊಬೈಲ್ ಬೊನಾಂಜಾ ಸೇಲ್‌ನಲ್ಲಿ ಈ ಫೋನ್‌ಗಳಿಗೆ ಬಿಗ್‌ ಡಿಸ್ಕೌಂಟ್!

ಹೌದು, ಫ್ಲಿಪ್‌ಕಾರ್ಟ್‌ ತನ್ನ ಜನಪ್ರಿಯ ಮೊಬೈಲ್ 'ಬೊನಾಂಜ್ ಸೇಲ್' ಮೇಳವನ್ನು ಆಯೋಜಿಸಿದ್ದು, ಇದೇ ಜೂನ್ 17 ರಿಂದ ಆರಂಭವಾಗಿರುವ ಈ ಸೇಲ್‌ ಮೇಳವು ಇದೇ ಜೂನ್ 21ರ ವರೆಗೂ ನಡೆಯಲಿದೆ. ಪ್ರಮುಖ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿಗಳು ದೊರೆಯಲಿದ್ದು, ಹಾಗೆಯೇ ಎಕ್ಸ್‌ಚೇಂಜ್ ಬೇನಿಫಿಟ್‌ ಸಹ ಸೇರಲಿದೆ. ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂದಿರುವ ಗ್ರಾಹಕರಿಗೆ ಇದು ಸಕಾಲವಾಗಿದೆ.

ಫ್ಲಿಪ್‌ಕಾರ್ಟ್ ಮೊಬೈಲ್ ಬೊನಾಂಜಾ ಸೇಲ್‌ನಲ್ಲಿ ಈ ಫೋನ್‌ಗಳಿಗೆ ಬಿಗ್‌ ಡಿಸ್ಕೌಂಟ್!

ಮೇಳದಲ್ಲಿ ಆಕ್ಸಸ್‌ ಬ್ಯಾಂಕ್‌ ತನ್ನ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಗ್ರಾಹಕರಿಗೆ ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್‌ ನೀಡಲಿದೆ. ಇಎಮ್‌ಐ ಟ್ರಾನ್ಸಾಕ್ಶನ್‌ಗಳ ಮೇಲೆ ಫ್ಲಿಪ್‌ಕಾರ್ಟ್‌ ಸಹ 250ರೂ.ಗಳ ರಿಯಾಯಿತಿ ನೀಡಲಿದೆ. ಹಾಗಾದರೇ ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಮೊಬೈಲ್‌ ಬೊನಾಂಜ್‌ ಸೇಲ್ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ರೆಡ್ಮಿ ನೋಟ್ 6 ಪ್ರೊ

ರೆಡ್ಮಿ ನೋಟ್ 6 ಪ್ರೊ

ಶಿಯೋಮಿಯ ಜನಪ್ರಿಯ ರೆಡ್ಮಿ ನೋಟ್ 6 ಪ್ರೊ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ ಮೊಬೈಲ್‌ ಬೊನಾಂಜಾ ಸೇಲ್‌ ಮೇಳದಲ್ಲಿ 13,999ರೂ.ಗಳಿಗೆ ದೊರೆಯಲಿದೆ. ಎರಡು ವೇರಿಯಂಟ್‌ಗಳನ್ನು ಹೊಂದಿದ್ದು, ಆದರೆ ಆಫರ್‌ನಲ್ಲಿ 6GB RAM + 64GB ಸ್ಟೋರೇಜ್ ವೇರಿಯಂಟ್ ಮಾದರಿಯೊಂದೆ ದೊರೆಯಲಿದೆ.

ರೆಡ್ಮಿ 6

ರೆಡ್ಮಿ 6

ರೆಡ್ಮಿ 6 ಸ್ಮಾರ್ಟ್‌ಫೋನ್‌ ಎರಡು ಸ್ಟೋರೇಜ್‌ ವೇರಿಯಂಟ್ ಮಾದರಿಯಲ್ಲಿ ಲಭ್ಯವಿದ್ದು, ಅವುಗಳು ಕ್ರಮವಾಗಿ 32GB ಮತ್ತು 64GB ಆಗಿವೆ. ಈ ಎರಡು ವೇರಿಯಂಟ್‌ಗಳು ಫ್ಲಿಪ್‌ಕಾರ್ಟ್‌ ಮೊಬೈಲ್‌ ಬೊನಾಂಜಾ ಆಫರ್‌ನಲ್ಲಿ 7499ರೂ.ಗಳಿಗೆ ದೊರೆಯಲಿವೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರೇರ್‌ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ.

ಆಸೂಸ್‌ 5Z

ಆಸೂಸ್‌ 5Z

ಈ ಸ್ಮಾರ್ಟ್‌ಫೋನ್ 6.2 ಇಂಚಿನ ಬೆಜಲ್‌ಲೆಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್‌ ಶಕ್ತಿಯನ್ನು ಒಳಗೊಂಡಿದೆ. ಜೊತೆಗೆ ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ಆಯ್ಕೆಯನ್ನು ಹೊಂದಿದೆ. 3300 mAh ಬ್ಯಾಟರಿ ಪವರ್‌ ಪಡೆದುಕೊಂಡಿದ್ದು, ಇದರೊಂದಿಗೆ v3.0. ಕ್ವಿಕ್‌ ಚಾರ್ಜರ್ ಸೌಲಭ್ಯವನ್ನು ಹೊಂದಿದೆ. ಆಫರ್‌ನಲ್ಲಿ ಈ ಫೋನ್‌ ಬೆಲೆಯು 21,999ರೂ.ಗಳು.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ50

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ50

ಗ್ಯಾಲ್ಯಾಕ್ಸಿ ಸರಣಿಯ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಎ50 ಸ್ಮಾರ್ಟ್‌ಪೋನ್ 25ಎಂಪಿ + 5ಎಂಪಿ + 8ಎಂಪಿ ಸಾಮರ್ಥ್ಯದ ತ್ರಿವಳಿ ಕ್ಯಾಮೆರಾ ಮತ್ತು 25ಎಂಪಿ ಸೆಲ್ಫಿ ಕ್ಯಾಮೆರಾ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಹಾಗೆಯೇ 4000mAh ಸಾಮರ್ಥ್ಯದಲ್ಲಿದ್ದು, ದೀರ್ಘ ಬ್ಯಾಟರಿ ಬಲವನ್ನು ಪಡೆದಿದೆ. ಆಫರ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಬೆಲೆಯು 18,490ರೂ.ಗಳು ಆಗಿದೆ.

ಐಫೋನ್ ಎಕ್ಸ್‌

ಐಫೋನ್ ಎಕ್ಸ್‌

ಐಫೋನ್ ಎಕ್ಸ್‌ ಫೋನ್‌ 1125 x2436 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.8 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. 256GB ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದುಕೊಂಡಿದ್ದು, 3 GB RAMನಲ್ಲಿ ಕೆಲಸ ನಿರ್ವಹಿಸುತ್ತದೆ. ಫ್ಲಿಪ್‌ಕಾರ್ಟ್‌ ಮೊಬೈಲ್ ಬೊನಾಂಜಾ ಸೇಲ್‌ ಮೇಳದಲ್ಲಿ ಈ ಐಫೋನ್ ಆರಂಭಿಕ ಬೆಲೆಯು 66,499ರೂ.ಗಳು ಆಗಿದೆ.

ವಿವೋ ವಿ15 ಪ್ರೊ

ವಿವೋ ವಿ15 ಪ್ರೊ

ವಿವೋದ ಜನಪ್ರಿಯ ಫ್ಲ್ಯಾಗ್‌ಶಿಪ್‌ ಮಾದರಿಯ ಈ ಸ್ಮಾರ್ಟ್‌ಫೋನ್ 32ಎಂಪಿಯ ಸೆಲ್ಫಿ ಪಾಪ್‌ಅಪ್‌ ಕ್ಯಾಮೆರಾದಿಂದ ಟ್ರೆಂಡ್ ಹುಟ್ಟುಹಾಕಿದೆ. ಹಾಗೆಯೇ 48ಎಂಪಿ + 8ಎಂಪಿ + 5ಎಂಪಿ ರೇರ್‌ ಕ್ಯಾಮೆರಾ ಆಯ್ಕೆಯನ್ನು ಸಹ ಒಳಗೊಂಡಿದೆ. 6GB RAM ಮತ್ತು 3700mAh ಬ್ಯಾಟರಿ ಆಯ್ಕೆಗಳು ಇದರ ವಿಶೇಷ ಫೀಚರ್ಸ್‌ಗಳಾಗಿವೆ. ಆಫರ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಬೆಲೆಯು 26,990ರೂ.ಗಳು ಆಗಿದೆ.

ಒಪ್ಪೊ ಎಫ್‌11 ಪ್ರೊ

ಒಪ್ಪೊ ಎಫ್‌11 ಪ್ರೊ

ಈ ಸ್ಮಾರ್ಟ್‌ಫೋನ್‌ ಹಿಂಬದಿ 48ಎಂಪಿ + 5ಎಂಪಿ ಸಾಮರ್ಥ್ಯದ ಡ್ಯುಯಲ್ ರೇರ್ ಕ್ಯಾಮೆರಾ ಆಯ್ಕೆ ಹೊಂದಿದ್ದು, ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ನೀಡಲಾಗಿದೆ. 4020mAh ಬ್ಯಾಟರಿ ಶಕ್ತಿಯನ್ನು ಒಳಗೊಂಡಿದ್ದು. 4GB RAM ಮತ್ತು 128GB ಸ್ಟೋರೇಜ್ ಸ್ಥಳಾವಕಾಶವನ್ನು ಹೊಂದಿದೆ. ಫ್ಲಿಪ್‌ಕಾರ್ಟ್‌ ಮೊಬೈಲ್ ಬೊನಾಂಜಾ ಸೇಲ್‌ ಮೇಳದಲ್ಲಿ ಈ ಫೋನ್‌ ಬೆಲೆ 17,990ರೂ.ಗಳು ಆಗಿದೆ.

Best Mobiles in India

English summary
The Flipkart Mobiles Bonanza sale will end on June 21. The sale has already begun. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+