ಫ್ಲಿಪ್‌ಕಾರ್ಟ್ 'ಮಂತ್ ಎಂಡ್ ಮೊಬೈಲ್ ಫೆಸ್ಟ್'!..ಭರ್ಜರಿ ಡಿಸ್ಕೌಂಟ್!
ಆನ್‌ಲೈನ್ ಶಾಪಿಂಗ್ ಪ್ರಿಯರು ಇದೀಗ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನತ್ತ ಮುಖಮಾಡಿದ್ದು, ಜನಪ್ರಿಯ ಸ್ಮಾರ್ಟ್‌ಫೋನ್ ಖರೀದಿಸುವ ತರಾತುರಿಯಲ್ಲಿದ್ದಾರೆ. ಯಾಕೆ ಅಂತೀರಾ?..ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಈ ಬಾರಿಯು 'ಮಂತ್ ಎಂಡ್ ಮೊಬೈಲ್ ಫೆಸ್ಟ್' ಸೇಲ್ ಆಯೋಜಿಸಿದ್ದು, ಈ ಮೇಳದಲ್ಲಿ ಪ್ರಮುಖ ಕಂಪನಿಗಳ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್ ನೀಡುತ್ತಿದೆ.

ಹೌದು, ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ 'ಮಂತ್ ಎಂಡ್ ಮೊಬೈಲ್ ಫೆಸ್ಟ್' ಸೇಲ್ ನಡೆಯುತ್ತಿದ್ದು, ಇದೇ ಜುಲೈ 31ಕ್ಕೆ ಕೊನೆಯಾಗಲಿದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ಆಫರ್ ನೀಡುತ್ತಿದ್ದು, ಗೂಗಲ್, ಹಾನರ್, ಮೊಟೊರೊಲಾ, ಶಿಯೋಮಿ ಸೇರಿದಂತೆ ಇತರೆ ಕಂಪನಿಗಳ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ ಲಭ್ಯವಿದೆ. ಹಾಗೆಯೇ ಕೇಲವು ಆಯ್ದ ಫೋನ್‌ಗಳ ಮೇಲೆ ಎಕ್ಸ್‌ಚೇಂಜ್ ಬೇನಿಫಿಟ್ಸ್‌ಗಳು ದೊರೆಯಲಿವೆ.

ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ನೋಟ್ 9, ಒಪ್ಪೊ ರೆನೋ 10x ಝೂಮ್ ಮತ್ತು ಹಾನರ್ 20 ಫೋನ್ ಒಳಗೊಂಡಂತೆ ಇನ್ನು ಕೇಲವು ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಫ್ಲಿಪ್‌ಕಾರ್ಟ್ ಮೇಳದಲ್ಲಿ ನೋ ಕಾಸ್ಟ್ ಇಎಮ್‌ಐ ಸೌಲಭ್ಯವು ದೊರೆಯಲಿವೆ. ಹಾಗಾದರೇ ಫ್ಲಿಪ್‌ಕಾರ್ಟ್ ಮಂತ್ ಎಂಡ್ ಸೇಲ್‌ನಲ್ಲಿ ಆಫರ್ ಲಭ್ಯ ಇರುವ ಸ್ಮಾರ್ಟ್‌ಫೋನ್‌ಗಳನ್ನು ನೋಡೋಣ ಬನ್ನಿರಿ.

ಹಾನರ್ 9N
5.84 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯೊಂದಿಗೆ 13ಎಂಪಿ + 2ಎಂಪಿ ಸೆನ್ಸಾರ್‌ನ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಬಲದ ಕ್ಯಾಮೆರಾ ಒಳಗೊಂಡಿದೆ. ಆಕ್ಟಾ ಕೋರ್ ಕಿರಿನ್ 659 ಪ್ರೊಸೆಸರ್ ಸಾಮರ್ಥ್ಯದಲ್ಲಿದ್ದು, 4GB RAM + 64GB ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದಿದೆ. ಫ್ಲಿಪ್‌ಕಾರ್ಟ್ ಮೇಳದಲ್ಲಿ ಆಫರ್ ಬೆಲೆಯು 8,999ರೂ.ಗಳು ಆಗಿದೆ.

ಪೊಕೊ ಎಫ್1
ಡ್ಯುಯಲ್ ಕ್ಯಾಮೆರಾ ಆಯ್ಕೆ ಹೊಂದಿದ್ದು, ಅವುಗಳು ಕ್ರಮವಾಗಿ 12ಎಂಪಿ + 5ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿವೆ. 20ಎಂಪಿ ಸೆಲ್ಫಿ ಕ್ಯಾಮೆರಾ ಒಳಗೊಂಡಿದ್ದು, ಜೊತೆಗೆ 6.18 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. 6GB RAM + 128GB ಆಂತರಿಕ ಸ್ಟೋರೇಜ್ ಸ್ಥಳಾವಕಾಶದ ವೇರಿಯಂಟ್ ಆಫರ್ ಬೆಲೆಯು 18,999ರೂ.ಗಳು ಆಗಿದೆ.

ನೋಕಿಯಾ 6.1
ನೋಕಿಯಾ 6.1 ಸ್ಮಾರ್ಟ್‌ಫೋನ್ 5.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯೊಂದಿಗೆ, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 630 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಹಿಂಬದಿಯಲ್ಲಿ 16ಎಂಪಿ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, 3000 mAh ಬ್ಯಾಟರಿ ಶಕ್ತಿಯನ್ನು ಪಡೆದಿದೆ. 4GB RAM + 64GB ಸ್ಟೋರೇಜ್ ವೇರಿಯಂಟ್‌ನ ಆಫರ್ ಬೆಲೆಯು 7,999ರೂ.ಗಳು ಆಗಿದೆ.

ಹಾನರ್ 7s
ಹಾನರ್ 7s ಸ್ಮಾರ್ಟ್‌ಫೋನ್ 2GB RAM + 16GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, 5.45 ಇಂಚಿನ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ಮೀಡಿಯಾ ಟೆಕ್ MT6739 ಕಾರ್ಟೆಕ್ಸ್ A53 ಪ್ರೊಸೆಸರ್ ಪಡೆದಿದ್ದು, ಹಿಂಬದಿ 13ಎಂಪಿ ಮತ್ತು 5ಎಂಪಿ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫ್ಲಿಪ್‌ಕಾರ್ಟ್‌ನ ಮೇಳದಲ್ಲಿ ಈ ಫೋನ್ ಬೆಲೆಯು 5,499ರೂ.ಗಳು ಆಗಿವೆ.

ಮೊಟೊ G7
6.2 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಹಿಂಬದಿಯಲ್ಲಿ 12ಎಂಪಿ + 5ಎಂಪಿ ಸೆನ್ಸಾರ್ ಬಲದ ಕ್ಯಾಮೆರಾ ಆಯ್ಕೆ ಹೊಂದಿದೆ. ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾ ನೀಡಲಾಗಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 632 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಫ್ಲಿಪ್‌ಕಾರ್ಟ್‌ನ ಮೇಳದಲ್ಲಿ ಈ ಫೋನ್ ಬೆಲೆಯು 16,999ರೂ.ಗಳ ಪ್ರೈಸ್‌ಟ್ಯಾಗ್ ಅನ್ನು ಹೊಂದಿದೆ.


Click it and Unblock the Notifications








