'ಬಿಗ್ ಬ್ಯಾಟರಿ ಲೈಫ್' ಸ್ಮಾರ್ಟ್‌ಫೋನ್‌ಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಆಫರ್!
ಪ್ರಸ್ತುತ ಸ್ಮಾರ್ಟ್‌ಫೋನ್ ಅವಶ್ಯಕವಾಗಿದ್ದು, ಬಿಟ್ಟಿರಲಂತೂ ಆಗದು. ಆದರೆ ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರ ಬ್ಯಾಟರಿ ಬ್ಯಾಕ್‌ಅಪ್ ಬರುತ್ತಿಲ್ಲವೆಂದು ಹೇಳುತ್ತಿರುತ್ತಾರೆ ಅಲ್ಲವೇ. ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಗಳು ಸ್ಮಾರ್ಟ್‌ಫೋನ್‌ಗೆ ದೀರ್ಘಕಾಲದ ಬೆಂಬಲ ನೀಡುತ್ತವೆ ಹೀಗಾಗಿ ನೀವೆನಾದರೂ ಹೆಚ್ಚಿನ mAh ಸಾಮರ್ಥ್ಯದ ಬ್ಯಾಟರಿಯುಳ್ಳ ಸ್ಮಾರ್ಟ್‌ಫೋನ್ ಖರೀದಿಸುವು ಪ್ಲ್ಯಾನ್ ಹೊಂದಿದ್ದರೇ ಅದಕ್ಕಿಗ ಫ್ಲಿಪ್‌ಕಾರ್ಟ್‌ನಲ್ಲಿ ಸಮಯ ಕೂಡಿ ಬಂದಿದೆ ನೋಡಿ.

ಹೌದು, ಜನಪ್ರಿಯ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ 'ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ ಡೇಸ್' ಸೇಲ್ ಮೇಳವನ್ನು ಆಯೋಜಿಸಿದೆ. ಐದು ದಿನಗಳ ಕಾಲ ನಡೆಯುವ ಈ ಮೇಳವು ಇದೇ ಜೂನ್26(ನೆನ್ನೆ) ಆರಂಭವಾಗಿದ್ದು, ಇದೇ ಜೂನ್30ರ ವರೆಗೂ ನಡೆಯಲಿದೆ. ಈ ಮೇಳದಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ ಬೆಂಬಲಿತ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ಕೊಡುಗೆಗಳು ಲಭ್ಯವಾಗಲಿವೆ.

ಹಾಗೆಯೇ ಶಿಯೋಮಿ, ಒಪ್ಪೊ, ವಿವೋ, ಮೊಟೊರೊಲಾ, ರಿಯಲ್ ಮಿ, ಆಸೂಸ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಿಗೆ ಆಫರ್ ಇದೆ. ಬಜೆಟ್ ಸ್ಮಾರ್ಟ್‌ಫೋನ್, ಬಿಗ್ ಬ್ಯಾಟರಿ ಲೈಫ್ ಸ್ಮಾರ್ಟ್‌ಫೋನ್‌ಗಳಿಗೂ ಸಹ ಬಂಪರ್ ಡಿಸ್ಕೌಂಟ್ ನೀಡಲಾಗಿದೆ. ಹಾಗಾದರೇ 'ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ ಡೇಸ್'ನಲ್ಲಿ ಯಾವೆಲ್ಲಾ ಬಿಗ್ ಬ್ಯಾಟರಿ ಸ್ಮಾರ್ಟ್‌ಫೋನ್‌ಗಳಿಗೆ ಆಫರ್ ಇದೆ ಎನ್ನುವುದನ್ನು ನೋಡೋಣ ಬನ್ನಿರಿ.

ರೆಡ್ಮಿ ಮಿ ನೋಟ್ 5 ಪ್ರೊ
ರೆಡ್ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ 6 GB RAM ಮತ್ತು 64 GB ಆಂತರಿಕ ಸಂಗ್ರಹ ಶಕ್ತಿಯನ್ನು ಹೊಂದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್ ಈ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 4000 mAh ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದೆ. ಇದರ ಬೆಲೆಯು 11,999ರೂ.ಗಳು ಆಗಿದೆ.

ಮೊಟೊರೊಲಾ ಒನ್ ಪವರ್
ಮೊಟೊರೊಲಾ ಒನ್ ಪವರ್ 5000 mAh ಸಾಮರ್ಥ್ಯದ ಬಿಗ್ ಬ್ಯಾಟರಿ ಲೈಫ್ ಅನ್ನು ಪಡೆದುಕೊಂಡಿದ್ದು, 4GB RAM ಮತ್ತು 64 GB ಆಂತರಿಕ ಸಂಗ್ರಹ ಶಕ್ತಿಯನ್ನು ಹೊಂದಿದೆ. ಈ ಫೋನ್ ಸಹ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್ ಈ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಆಫರ್ ಬೆಲೆಯು 12,999ರೂ.ಗಳು ಆಗಿದೆ.

ಒಪ್ಪೊ A3s
ಒಪ್ಪೊದ A3s ಸ್ಮಾರ್ಟ್‌ಫೋನ್ 4 GB RAM ಮತ್ತು 64 GB ಆಂತರಿಕ ಸಂಗ್ರಹ ಶಕ್ತಿಯನ್ನು ಹೊಂದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 450 ಪ್ರೊಸೆಸರ್ ಈ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 4230 mAh ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದೆ. ಇದರ ಬೆಲೆಯು 10,990ರೂ.ಗಳು ಆಗಿದೆ.

ರಿಯಲ್ ಮಿ 3 ಪ್ರೊ
ಮೊಟೊರೊಲಾ ಒನ್ ಪವರ್ 4045 mAh ಸಾಮರ್ಥ್ಯದ ಬಿಗ್ ಬ್ಯಾಟರಿ ಲೈಫ್ ಅನ್ನು ಪಡೆದುಕೊಂಡಿದ್ದು, 6 GB RAM ಮತ್ತು 64 GB ಮತ್ತು 128GB ಆಂತರಿಕ ಸಂಗ್ರಹ ಶಕ್ತಿಯ ಆಯ್ಕೆಗಳನ್ನು ಹೊಂದಿದೆ. ಸಹ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 710 AIE ಪ್ರೊಸೆಸರ್ ಈ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಆಫರ್ ಬೆಲೆಯು 13,999ರೂ.ಗಳು ಆಗಿದೆ.

ಆಸೂಸ್ ಮ್ಯಾಕ್ಸ್ ಎಂ1
ಆಸೂಸ್ ಮ್ಯಾಕ್ಸ್ ಎಂ1 ಸ್ಮಾರ್ಟ್‌ಫೋನ್ 3GB RAM ಮತ್ತು 32GB ಆಂತರಿಕ ಸಂಗ್ರಹ ಶಕ್ತಿಯನ್ನು ಹೊಂದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 430 ಪ್ರೊಸೆಸರ್ ಈ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 4000 mAh ಬಿಗ್ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದೆ. ಇದರ ಬೆಲೆಯು 6,499ರೂ.ಗಳು ಆಗಿದೆ.

ಇತರೆ ಬಿಗ್ ಬ್ಯಾಟರಿ ಫೋನ್ಸ್
ಶಿಯೋಮಿಯ 3000mAh ಬ್ಯಾಟರಿ ಬಲದ 'ರೆಡ್ಮಿ ಗೋ' ಸ್ಮಾರ್ಟ್‌ಫೋನ್ ಬೆಲೆಯು 4,499ರೂ.ಗಳು ಆಗಿದೆ. 4000 mAh ಬ್ಯಾಟರಿ ಶಕ್ತಿಯನ್ನು ಪಡೆದಿರುವ 'ಇನ್‌ಫೋಕಸ್ ಹಾಟ್ ಎಸ್3ಎಕ್ಸ್' ಸ್ಮಾರ್ಟ್‌ಫೋನ್ ಬೆಲೆಯು 7,999ರೂ.ಗಳು ಆಗಿದೆ. ಹಾಗೆಯೇ ಲೆನೊವೊ K9 ನೋಟ್ (3760 mAh) 9,999ರೂ.ಗಳು ಮೊಟೊ E5 ಪ್ಲಸ್ ( 5000 mAh) ಬೆಲೆಯು 7,999ರೂ.ಗಳು ಆಗಿದೆ.


Click it and Unblock the Notifications








