Home
ಸುದ್ದಿಜಾಲ

ಕಡಿಮೆ ಬೆಲೆಗೆ ಸಿಗುತ್ತೆ 256GB ಸ್ಟೋರೇಜ್‌ನ ಈ ಫೋನ್‌!..6000mAh ಬ್ಯಾಟರಿ ಇದೆ!

ಫ್ಲಿಪ್‌ಕಾರ್ಟ್‌ ದೀಪಾವಳಿ ಹಬ್ಬದ ಅಂಗವಾಗಿ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ಲಭ್ಯ ಮಾಡಿದೆ. ಆ ಪೈಕಿ ಸ್ಯಾಮ್‌ಸಂಗ್‌ ಸಂಸ್ಥೆಯು ಮೊಟೊರೊಲಾ G64 5G (Motorola G64 5G) ಫೋನ್‌ ಸಖತ್ ಡಿಸ್ಕೌಂಟ್‌ ಬೆಲೆ ಪಡೆದುಕೊಂಡಿದೆ. ಅಂದಹಾಗೆ ಈ ಫೋನ್‌ 8GB RAM + 256GB ಸ್ಟೋರೇಜ್‌ನ ವೇರಿಯಂಟ್‌ ಆಯ್ಕೆ ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ.

ಹೌದು, ಫ್ಲಿಪ್‌ಕಾರ್ಟ್‌ ತಾಣವು ಆಯೋಜಿಸಿರುವ ದೀಪಾವಳಿ ವಿಶೇಷ ಮಾರಾಟದಲ್ಲಿ ಮೊಟೊರೊಲಾ G64 5G (Motorola G64 5G) ಫೋನ್‌ ಶೇ. 25% ರಷ್ಟು ನೇರ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 12 GB RAM + 256 GB ಸ್ಟೋರೇಜ್‌ ವೇರಿಯಂಟ್‌ ಆಫರ್‌ನಲ್ಲಿ 14,999 ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಹೆಚ್ಚುವರಿಯಾಗಿ ಕೆಲವು ಆಯ್ದ ಬ್ಯಾಂಕ್‌ಗಳಿಂದ ಡಿಸ್ಕೌಂಟ್‌ ಕೂಡಾ ಪಡೆಯಬಹುದಾಗಿದೆ.

ಕಡಿಮೆ ಬೆಲೆಗೆ ಸಿಗುತ್ತೆ 256GB ಸ್ಟೋರೇಜ್‌ನ ಈ ಫೋನ್‌!..6000mAh ಬ್ಯಾಟರಿ ಇದೆ!

ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಪ್ರೊಸೆಸರ್‌ ಪವರ್‌ ಪಡೆದುಕೊಂಡಿದ್ದು, 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದೆ. ಇನ್ನು ಈ ಫೋನ್‌ ಐಸ್ ಲಿಲಾಕ್, ಮಿಂಟ್ ಗ್ರೀನ್ ಮತ್ತು ಪರ್ಲ್ ಬ್ಲೂ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಹಾಗಾದರೇ ಮೊಟೊರೊಲಾ G64 5G ಮೊಬೈಲ್‌ನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ಮೊಟೊರೊಲಾ G64 5G - ಫೀಚರ್ಸ್‌ ಮಾಹಿತಿ

ಮೊಟೊರೊಲಾ G64 5G ಮೊಬೈಲ್‌ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LCD ಅನ್ನು ಡಿಸ್‌ಪ್ಲೇ ಹೊಂದಿದ್ದು, ಈ ಫೋನಿನ ಡಿಸ್‌ಪ್ಲೇಯು 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಪೋರ್ಟ್‌ ಪಡೆದಿದೆ. ಇದಲ್ಲದೆ ಸ್ಕ್ರೀನ್‌ ಕಡಿಮೆ ಅಂಚಿನ ರಚನೆ ಹೊಂದಿದ್ದು, ಈ ಡಿಸ್‌ಪ್ಲೇ 120 Hz ರಿಫ್ರೆಶ್‌ ರೇಟ್‌ ಸೌಲಭ್ಯ ಒಳಗೊಂಡಿದೆ. ಅಲ್ಲದೇ ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್‌ ಸಪೋರ್ಟ್‌ ಕೂಡಾ ಒಳಗೊಂಡಿದೆ.

ಮೊಟೊರೊಲಾ G64 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಸಪೋರ್ಟ್‌ ಆಗಿ ಆಂಡ್ರಾಯ್ಡ್‌ 14 ಓಎಸ್‌ ಕೆಲಸ ಮಾಡಲಿದೆ. ಹಾಗೆಯೇ ಇದು 8 GB + 128 GB ಸ್ಟೋರೇಜ್‌ ಹಾಗೂ 12 GB RAM + 256 GB ಆಂತರೀಕ ಸ್ಟೋರೇಜ್‌ ಆಯ್ಕೆಗಳನ್ನು ಕೂಡಾ ಒಳಗೊಂಡಿದ್ದು, 24 GB ವರೆಗೂ RAM ಬೂಸ್ಟ್‌ ಸೌಲಭ್ಯ ಸಹ ಇದೆ.

ಮೊಟೊರೊಲಾ G64 5G ಮೊಬೈಲ್‌ ಮೂರು ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೌಲಭ್ಯ ಪಡೆದಿದೆ. ಎರಡನೇ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹಾಗೂ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ನಲ್ಲಿ ಇವೆ. ಇನ್ನು ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ಮೊಟೊರೊಲಾ G64 5G ಮೊಬೈಲ್‌ 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಪಡೆದುಕೊಂಡಿದ್ದು, ಇದು ಪ್ಲಸ್‌ ಪಾಯಿಂಟ್‌ ಎನಿಸಿದೆ. ಇದಕ್ಕೆ ಪೂರಕವಾಗಿ 33 W ಟರ್ಬೋ ಪವರ್‌ ಚಾರ್ಜಿಂಗ್ ಸೌಲಭ್ಯ ಸಹ ಒದಗಿಸಲಾಗಿದೆ. ಇನ್ನು ಈ ಫೋನ್‌ ಐಸ್ ಲಿಲಾಕ್, ಮಿಂಟ್ ಗ್ರೀನ್ ಮತ್ತು ಪರ್ಲ್ ಬ್ಲೂ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ.

Best Mobiles in India

English summary
Flipkart offers massive discounts on Motorola G64 5G Phone. check out offer price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+