Home
ಸುದ್ದಿಜಾಲ

Flipkart: ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ 2024 ದಿನಾಂಕ ಘೋಷಣೆ! ಈ ಎಲ್ಲಾ ಡಿವೈಸ್‌ಗಳಿಗೆ ಭರ್ಜರಿ ಆಫರ್

ಫ್ಲಿಪ್‌ಕಾರ್ಟ್ (Flipkart) ಈಗಾಗಲೇ ಸಾಕಷ್ಟು ವಿಶೇಷ ಸೇಲ್‌ಗಳನ್ನು ಆಯೋಜನೆ ಮಾಡುವ ಮೂಲಕ ಗ್ರಾಹಕರಿಗೆ ಭಿನ್ನ ರೀತಿಯ ಸ್ಮಾರ್ಟ್‌ ಡಿವೈಸ್‌ಗಳನ್ನು ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡಿದೆ. ಅದರಂತೆ ಈಗ ತನ್ನ ಗ್ರಾಹಕರಿಗೆ ಮತ್ತೊಂದು ಸೇಲ್‌ ಮೂಲಕ ಖುಷಿ ಸುದ್ದಿ ನೀಡಿದೆ.

ಹೌದು, ಫ್ಲಿಪ್‌ಕಾರ್ಟ್ ವೆಬ್‌ಸೈಟ್ ತನ್ನ ರಿಪಬ್ಲಿಕ್ ಡೇ ಸೇಲ್ 2024 ರ (Flipkart Republic Day Sale 2024) ದಿನಾಂಕಗಳನ್ನು ಪ್ರಕಟ ಮಾಡಿದೆ. ಈ ವಿಶೇಷ ಸೇಲ್‌ಗಾಗಿ ಸಾಕಷ್ಟು ಜನರು ಬಹಳ ಕುತೂಹಲದಿಂದ ಕಾದು ಕುಳಿತಿದ್ದರು. ಯಾಕೆಂದರೆ ಈ ಸೇಲ್‌ನಲ್ಲಿ ಫೋನ್‌ಗಳು, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ವಾಚ್‌, ಇಯರ್‌ಬಡ್ ಮತ್ತು ಸ್ಮಾರ್ಟ್ ಟಿವಿ ಸೇರಿದಂತೆ ಅನೇಕ ಸ್ಮಾರ್ಟ್‌ ಡಿವೈಸ್‌ಗಳಿಗೆ ದೊಡ್ಡ ಕೊಡುಗೆ ನೀಡಲಾಗುತ್ತಿದೆ. ಹಾಗಿದ್ರೆ, ತಡಯಾಕೆ ಬನ್ನಿ ಈ ಸೇಲ್‌ ಯಾವಾಗ ಆರಂಭ?,ಯಾವೆಲ್ಲಾ ಡಿವೈಸ್‌ಗಳು ಈ ಸೇಲ್‌ನಲ್ಲಿ ಲಭ್ಯ ಇದೆ ಅನ್ನೋದನ್ನು ಇಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ 2024 ದಿನಾಂಕ ಘೋಷಣೆ! ..

ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ 2024: ಈ ವಿಶೇಷ ಸೇಲ್‌ನ ಟೀಸರ್ ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ನಲ್ಲಿ (Flipkart website) ಲೈವ್ ಆಗಿದ್ದು ಜನವರಿ 14 ರಿಂದ ಸೇಲ್ ಆರಂಭ ಆಗಲಿದೆ. ಹಾಗೆಯೇ ಜನವರಿ 19 ರವರೆಗೆ ಈ ವಿಶೇಷ ಸೇಲ್‌ ಮುಂದುವರಿಯುತ್ತದೆ. ಜೊತೆಗೆ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಈ ಸೇಲ್ ಈವೆಂಟ್‌ಗೆ ಒಂದು ದಿನದ ಮುಂಚಿನ ಪ್ರವೇಶವನ್ನು ಪಡೆಯಬಹುದಾಗಿದೆ.

ಈ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿ, ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು ಮತ್ತು ಹಾಸಿಗೆಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿಯನ್ನು ನೀಡುವುದಾಗಿ ಟೀಸರ್ ನಲ್ಲಿ ಉಲ್ಲೇಖ ಮಾಡಲಾಗಿದ್ದು, ಇತರೆ ಗ್ಯಾಜೆಟ್‌ಗಳ ಮೇಲೂ ಶೇಕಡಾ 85 ರಷ್ಟು ರಿಯಾಯಿತಿ ಸಿಗಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಸೌಂದರ್ಯ ಮತ್ತು ಆಟಿಕೆ ವಸ್ತುಗಳಿಗೂ ಶೇಕಡಾ 85 ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಟೀಸರ್‌ ಮೂಲಕ ತಿಳಿದುಬಂದಿದೆ.

ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ 2024 ದಿನಾಂಕ ಘೋಷಣೆ! ..

ಉಳಿದಂತೆ ಆಪಲ್‌ ಸ್ಯಾಮ್‌ಸಂಗ್‌ ಹಾಗೂ ರಿಯಲ್‌ಮಿ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಬೆಲೆ ಇಳಿಕೆ ಆಗಲಿದೆ. ವಿಷಯ ಏನೆಂದರೆ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್‌ಗಳಲ್ಲಿನ ಡೀಲ್‌ಗಳನ್ನು ಬಹಿರಂಗಪಡಿಸಿಲ್ಲ. ಅದಾಗ್ಯೂ ಐಫೋನ್ 14 ಮತ್ತು ಪಿಕ್ಸೆಲ್ 7 a (iPhone 14, Pixel 7a) ಹೆಚ್ಚಿನ ರಿಯಾಯಿತಿಗಳನ್ನು ಪಡೆಯಲಿದೆ ಎಂದು ಲೇವಡಿ ಮಾಡಲಾಗಿದೆ.

ಇದರೊಂದಿಗೆ ಫ್ಲಿಪ್‌ಕಾರ್ಟ್ ಬ್ಯಾನರ್‌ ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE, ಮೊಟೊರೊಲಾ ಎಡ್ಜ್‌ 40 ನಿಯೋ, ಸ್ಯಾಮ್‌ಸಂಗ್‌ F14 5G, ರಿಯಲ್‌ಮಿ C53, ರಿಯಲ್‌ಮಿ 11X 5G, ಮೊಟೊ G54 5G ಹಾಗೂ ಇನ್ನೂ ಹೆಚ್ಚಿನ ಫೋನ್‌ಗಳಲ್ಲಿ ಆಫರ್ ಇದೆ ಎಂದು ತಿಳಿದುಬಂದಿದೆ. ಈ ಆಫರ್ ವಿಭಾಗದಲ್ಲಿ ವಿವೋ X100 ಸರಣಿ, ಒಪ್ಪೋ ರೆನೋ 11 ಸರಣಿ, ಇನ್ಪಿನಿಕ್ಸ್‌ ಸ್ಮಾರ್ಟ್‌ 8, ರೆಡ್ಮಿ ನೋಟ್‌ 13 ಪ್ರೊ ಸರಣಿ ಫೋನ್‌ಗಳು ಸಹ ಕಾಣಿಸಿಕೊಳ್ಳಲಿದೆ.

ಇನ್ನು ಈ ಸೇಲ್‌ನಲ್ಲಿ ಕ್ಯಾಶ್‌ಬ್ಯಾಕ್, ಎಕ್ಸ್‌ಚೇಂಜ್ ಆಫರ್‌ಗಳು, ನೋ ಕಾಸ್ಟ್ ಇಎಮ್‌ಐ ಆಫರ್‌ಗಳು ಸಹ ಲಭ್ಯ ಇದ್ದು, ಈ ಮೂಲಕ ಕಡಿಮೆ ಬೆಲೆಯೊಂದಿಗೆ ನಿಮ್ಮಿಷ್ಟದ ಸ್ಮಾರ್ಟ್‌ ಡಿವೈಸ್‌ಗಳನ್ನು ಖರೀದಿ ಮಾಡುವ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ 2024 ದಿನಾಂಕ ಘೋಷಣೆ! ..

ಅಮೆಜಾನ್‌ನಲ್ಲೂ ವಿಶೇಷ ಸೇಲ್‌: ಫ್ಲಿಪ್‌ಕಾರ್ಟ್‌ ಪ್ರತಿಸ್ಪರ್ಧಿ ಅಮೆಜಾನ್‌ (Amazon) ಕೂಡ ಗಣರಾಜ್ಯೋತ್ಸವದ ವಿಶೇಷ ಮಾರಾಟವನ್ನು ಘೋಷಣೆ ಮಾಡಿದ್ದು, ಈ ಸೇಲ್‌ 14 ರಿಂದ ಆರಂಭ ಆಗಲಿದೆ. ಈ ಸೇಲ್‌ನಲ್ಲಿ ವಿವಿಧ ಸ್ಮಾರ್ಟ್‌ಫೋನ್‌ಗಳು 40% ಗೂ ಅಧಿಕ ಡಿಸ್ಕೌಂಟ್‌ ಪಡೆಯಲಿವೆ ಎಂದು ತಿಳಿದುಬಂದಿದೆ. ಅಲ್ಲದೆ ಅಮೆಜಾನ್ ಪ್ರೈಮ್ (Amazon Prime) ಸದಸ್ಯತ್ವ ಹೊಂದಿರುವ ಬಳಕೆದಾರರು ಒಂದು ದಿನ ಮೊದಲೇ ಈ ವಿಶೇಷ ಸೇಲ್‌ ಪ್ರಯೋಜನ ಪಡೆಯಬಹುದಾಗಿದೆ.

Best Mobiles in India

English summary
Flipkart Republic Day Sale 2024 Date Announced. This sale offers great deals on many smart devices including phones, laptops, tablets, smartwatches.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+