Flipkart Republic Day Sale: ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್!
ಸದ್ಯ ಇ -ಕಾಮರ್ಸ್ ತಾಣಗಳು ಪ್ರಮುಖ ಆಫರ್ ಅಡ್ಡಾಗಳಾಗಿ ಗುರುತಿಸಿಕೊಂಡಿದ್ದು, ಗ್ರಾಹಕರಿಗೆ ಆನ್‌ಲೈನ್ ಶಾಪಿಂಗ್ ಮಾಡಲು ಸೆಳೆಯುತ್ತಿವೆ. ಅದರಲ್ಲಿಯೂ ವಿಶೇಷ ದಿನಗಳು, ತಿಂಗಳ ಕೊನೆ ದಿನಗಳಂದು ಇ-ಕಾಮರ್ಸ್ ತಾಣಗಳು ಹೆಚ್ಚಿನ ಕೊಡುಗೆ ನೀಡಲು ಮುಂದಾಗುತ್ತವೆ. ಇದೀಗ ಜನಪ್ರಿಯ ಫ್ಲಿಪ್‌ಕಾರ್ಟ್ ತಾಣವು ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಸೇಲ್ ಮೇಳವನ್ನು ಘೋಷಿಸಿದೆ.

ಹೌದು, ಗಣರಾಜ್ಯೋತ್ಸವ ದಿನದ ಪ್ರಯುಕ್ತ ಫ್ಲಿಪ್‌ಕಾರ್ಟ್ ತಾಣವು 'ರಿಪಬ್ಲಿಕ್ ಡೇ ಸೇಲ್' ಮೇಳವನ್ನು ಆಯೋಜಿಸಿದೆ. ಇದೇ ಜನೆವರಿ 19ರಿಂದ ಶುರುವಾಗಿರುವ ಈ ಸೇಲ್ ವೇಳವು ಈಗ ಚಾಲ್ತಿಯಲ್ಲಿದ್ದು, ಇದೇ ಜನೆವರಿ 22ರಂದು ಮುಕ್ತಾಯವಾಗಲಿದೆ. ಈ ಮೇಳದಲ್ಲಿ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ ತಿಳಿಸಿದ್ದು, ಅದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಡಿಸ್ಕೌಂಟ್ ದೊರೆಯುತ್ತದೆ. ಹಾಗಾದರೆ ಫ್ಲಿಪ್‌ಕಾರ್ಟ್‌ನ ರಿಪಬ್ಲಿಕ್ ಡೇ ಸೇಲ್ ಮೇಳದಲ್ಲಿ ಬೆಸ್ಟ್ ಆಫರ್ ಪಡೆದಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ.

ಹಾನರ್ 9X
ಜನಪ್ರಿಯ ಹಾನರ್ ಸಂಸ್ಥೆಯ ಹಾನರ್ 9X ಸ್ಮಾರ್ಟ್‌ಫೋನ್ ಸೇಲ್ ಮೇಳದಲ್ಲಿ 12,999ರೂ.ಗಳಿಗೆ ಲಭ್ಯ ಇದೆ. ಈ ಫೋನ್ 6.59ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 4GB RAM, 128GB ಸ್ಟೋರೇಜ್ ಆಯ್ಕೆಯನ್ನು ಪಡೆದಿದ್ದು, ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿದೆ. ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ನಲ್ಲಿದೆ. 4,000mAh ಬ್ಯಾಟರಿ ಪಡೆದಿದ್ದು, ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಇದೆ.

ವಿವೋ Z1 ಪ್ರೊ
ಚೀನಾ ಮೂಲದ ವಿವೋ ಸಂಸ್ಥೆಯ ಹೊಸ ವಿವೋ Z 1 ಪ್ರೊ ಫೋನ್ ಸಹ ಭಾರಿ ಡಿಸ್ಕೌಂಟ್ ಪಡೆದಿದೆ. 15,990ರೂ. ಬೆಲೆಯ ಈ ಫೋನ್ ಇದೀಗ 10,990ರೂ.ಗಳಿಗೆ ಸಿಗಲಿದೆ. ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಹೊಂದಿದ್ದು, 32ಎಂಪಿ ಸೆಲ್ಫಿ ಕ್ಯಾಮೆರಾ ಪಡೆದಿದೆ. ಹಾಗೆಯೇ 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತದೆ. 4GB RAM ಮತ್ತು 6GB RAM ವೇರಿಯಂಟ್ ಆಯ್ಕೆ ಇದೆ.

ಶಿಯೋಮಿ ರೆಡ್ಮಿ 8A
ಶಿಯೋಮಿಯ ಎಂಟ್ರಿ ಲೆವೆಲ್ ಫೋನ್ ಆಗಿರುವ ರೆಡ್ಮಿ 8A ಫೋನ್ ಇದೀಗ ಸೇಲ್ ಮೇಳದಲ್ಲಿ 5,999ರೂ.ಗಳಿಗೆ ದೊರೆಯುತ್ತದೆ. ಈ ಫೋನ್ ಸ್ನ್ಯಾಪ್‌ಡ್ರಾಗನ್ 439 ಪ್ರೊಸೆಸರ್ ಹೊಂದಿದ್ದು, 2GB or 3GB RAM ಆಯ್ಕೆ ಪಡೆದಿದೆ. ಹಿಂಬದಿಯಲ್ಲಿ 12ಎಂಪಿಯ ಕ್ಯಾಮೆರಾ ಇದ್ದು, 8ಎಂಪಿ ಸೆಲ್ಫಿ ಕ್ಯಾಮೆರಾ ಆಯ್ಕೆ ಇದೆ. ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದಿದೆ.

ಮೊಟೊರೊಲಾ ಒನ್ ಆಕ್ಷನ್
ಮೊಟೊರೊಲಾ ಇತ್ತೀಚಿಗೆ ಬಿಡುಗಡೆ ಮಾಡಿರುವ ಒನ್ ಆಕ್ಷನ್ ಸ್ಮಾರ್ಟ್‌ಫೋನ್ ಸಹ ಆಫರ್‌ನಲ್ಲಿ ಲಭ್ಯವಿದೆ. ಇದೀಗ ಸೇಲ್ ಮೇಳದಲ್ಲಿ ಕೇವಲ 8,999ರೂ.ಗಳಿಗೆ ಲಭ್ಯವಿದೆ. Exynos 9609 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. ಆಂಡ್ರಾಯ್ಡ್ ಪೈ ಓಎಸ್ ಬೆಂಬಲ ಇದ್ದು, 3,500mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಒಳಗೊಂಡಿದೆ.

ಆಪಲ್ ಐಫೋನ್ XS
ಆಪಲ್‌ನ ಪ್ರಮುಖ ಐಫೋನ್ ಮಾದರಿಗಳಲ್ಲಿ ಒಂದಾಗಿರುವ ಐಫೋನ್ XS ಫೋನ್ ಇದೀಗ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿದೆ. 89,900ರೂ. ಬೆಲೆಯಲ್ಲಿ ಲಾಂಚ್ ಆಗಿದ್ದ ಈ ಫೋನ್ ಈಗ 49,999ರೂ.ಗಳಿಗೆ ಸಿಗಲಿದೆ. ಹಾಗೆಯೇ ಇಎಮ್‌ಐ ಸೌಲಭ್ಯದ ಆಯ್ಕೆಯು ಇದೆ. 5.8 ಇಂಚಿನ ಸೂಪರ್ ರೇಟಿನಾ ಡಿಸ್‌ಪ್ಲೇ ಇದ್ದು, A12 ಬಯೋನಿಕ್ ಚಿಪ್‌ಸೇಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ.


Click it and Unblock the Notifications








