Just In
- 5 hrs ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 6 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 6 hrs ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 7 hrs ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
Don't Miss
- Sports
ಕಿರಿಯ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವು ನಮಗೆ ದೊಡ್ಡ ಸ್ಫೂರ್ತಿ ನೀಡಿದೆ; ಹರ್ಮನ್ಪ್ರೀತ್ ಕೌರ್
- Movies
Bettada Hoo: 'ಬೆಟ್ಟದ ಹೂ' ಮಾಲಿನಿ ಅಮ್ಮ ಮಂದ್ರಾ ಮದುವೆ ಆದ್ಮೇಲೆ ಫುಲ್ ಮಿಂಚಿಂಗ್..!
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡರಲ್ಲೂ ಆಫರ್ ಇದೆ, ಆದ್ರೆ ಯಾವುದು ಬೆಸ್ಟ್!
ಹಬ್ಬದ ಪ್ರಯುಕ್ತ ಜನಪ್ರಿಯ ಇ ಕಾಮರ್ಸ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಭರ್ಜರಿ ಆಫರ್‌ಗಳನ್ನು, ರಿಯಾಯಿತಿಗಳನ್ನು ಘೋಷಿಸಿದ್ದು, ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ಹಬ್ಬದ ಮೇಳೆಯಲ್ಲಿ ಬಹುತೇಕ ಗ್ರಾಹಕರು ಗ್ಯಾಜೆಟ್ಸ್‌ಗಳನ್ನು ಖರೀದಿಸಲು ಮುಂದಾಗುತ್ತಾರೆ ಎನ್ನುವ ಕಾರಣಕ್ಕೆ, ಈ ಇ-ಕಾಮರ್ಸ್ ತಾಣಗಳು ಗ್ಯಾಜೆಟ್ ಉತ್ಪನ್ನಗಳಿಗೂ ಸಹ ವಿಶೇಷ ಡಿಸ್ಕೌಂಟ್ ತಿಳಿಸಿವೆ. ಆದ್ರೆ, ಯಾವ ಇ-ಕಾಮರ್ಸ್‌ನಲ್ಲಿ ಹೆಚ್ಚು ಆಫರ್ ಸಿಗಲಿದೆ ಎನ್ನುವ ಕೌತುಕ ಗ್ರಾಹಕರಲ್ಲಿ ಮೂಡಿರುತ್ತದೆ.

ಹೌದು, ಅಮೆಜಾನ್ ಆಯೋಜಿಸಿರುವ 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್' ಮತ್ತು ಫ್ಲಿಪ್‌ಕಾರ್ಟ್ ಆಯೋಜಿಸಿರುವ 'ದಿ ಬಿಗ್ ಬಿಲಿಯನ್ ಡೇಸ್' ಸೇಲ್ ಮೇಳಗಳು ಇಂದಿನಿಂದಲೇ (ಸೆಪ್ಟೆಂಬರ್ 29ರಿಂದ) ಆರಂಭವಾಗಿವೆ ಹಾಗೂ ಇದೇ ಅಕ್ಟೋಬರ್ 4ರಂದು ಮುಕ್ತಾಯವಾಗಲಿವೆ. ಈ ಎರಡು ಇ-ಕಾಮರ್ಸ್ ಸಂಸ್ಥೆಯಗಳ ಆಫರ್ ಮೇಳವು ಒಂದೇ ವೇಳೆಗೆ ಇರುವುದರಿಂದ ಗ್ರಾಹಕರಿಗೆ ಖುಷಿ ಒಂದೆಡೇ ಆದ್ರೆ, ಯಾವ ತಾಣದಲ್ಲಿ ಖರೀದಿಸಬೇಕು ಎನ್ನುವ ಪ್ರಶ್ನೆ ಇನ್ನೊಂದೆಡೆ.

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡು ತಾಣಗಳಲ್ಲಿ ನೋ-ಕಾಸ್ಟ್ ಇಎಮ್‌ಐ ಆಯ್ಕೆ ಮತ್ತು ಪೇ ಲೆಟರ್ ಆಯ್ಕೆಗಳು ಲಭ್ಯವಿದ್ದು, ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್‌ಗಳಿಂದ ಶೇ.10% ಡಿಸ್ಕೌಂಟ್ ಸಹ ನೀಡುತ್ತಿವೆ. ಈ ಆಫರ್ ಸಮಯದಲ್ಲಿ ಬಹುತೇಕರು ಸ್ಮಾರ್ಟ್‌ಫೋನ್ ಖರೀದಿಸುವ ಪ್ಲ್ಯಾನ್ ಮಾಡಿರುತ್ತಾರೆ, ಅದಕ್ಕಾಗಿ ಈ ಲೇಖನದಲ್ಲಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಬೆಸ್ಟ್ ಆಫರ್ ಇರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಸಿಲಾಗಿದೆ. ಮುಂದೆ ಓದಿರಿ.

ಅಮೆಜಾನ್‌ನಲ್ಲಿ-ಒನ್‌ಪ್ಲಸ್ 7T
ಹೊಸದಾಗಿ ಬಿಡುಗಡೆ ಆಗಿರುವ ಒನ್‌ಪ್ಲಸ್ 7T ಸ್ಮಾರ್ಟ್‌ಫೋನ್ ಅಮೆಜಾನ್ ತಾಣದಲ್ಲಿ ಖರೀದಿಗೆ ಲಭ್ಯ ಇರುತ್ತದೆ. ಒನ್‌ಪ್ಲಸ್ 7T ಫೋನಿನ 8GB RAM ಮತ್ತು 128GB ವೇರಿಯಂಟ್ ಬೆಲೆಯು 37,999ರೂ.ಗಳಾಗಿದ್ದು, ಹಾಗೆಯೇ 8GB RAM ಮತ್ತು 256GB ವೇರಿಯಂಟ್ ಬೆಲೆಯು 39,999ರೂ.ಗಳಾಗಿದೆ. ಆದ್ರೆ ಅಮೆಜಾನ್ ತಾಣದಲ್ಲಿ ಎಸ್‌ಬಿಐ ಕಾರ್ಡ್ ಬಳಸಿ ಖರೀದಿಸಿದರೇ ಶೇ.10% ಡಿಸ್ಕೌಂಟ್ ಸಿಗಲಿದೆ.

ಅಮೆಜಾನ್‌ನಲ್ಲಿ-ಒನ್‌ಪ್ಲಸ್ 7 ಪ್ರೊ
ಇತ್ತೀಚಿಗೆ ಬಿಡುಗಡೆ ಆಗಿರುವ ಒನ್‌ಪ್ಲಸ್ ಕಂಪನಿಯ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ 'ಒನ್‌ಪ್ಲಸ್ 7 ಪ್ರೊ' ಫೋನಿಗೆ ಭರ್ಜರಿ ಆಫರ್ ತಿಳಿಸಿಲಾಗಿದೆ. ಒನ್‌ಪ್ಲಸ್ 7 ಪ್ರೊ 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ಗೆ 5,000ರೂ.ಗಳ ಡಿಸ್ಕೌಂಟ್ ನೀಡಲಾಗಿದ್ದು, 44,999ರೂ.ಗಳಿಗೆ ದೊರೆಯಲಿದೆ. ಪಾಪ್‌ಅಪ್ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ 49,999ರೂ.ಗಳಿಗೆ ಬಿಡುಗಡೆ ಆಗಿತ್ತು.

ಅಮೆಜಾನ್‌ನಲ್ಲಿ-ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ನೋಟ್ 10
ಸ್ಯಾಮ್‌ಸಂಗ್ ಸಂಸ್ಥೆಯ ಗ್ಯಾಲ್ಯಾಕ್ಸಿ ನೋಟ್ 10 ಸ್ಮಾರ್ಟ್‌ಫೋನ್ಗೂ ಸಹ ಆಫರ್ ನೀಡಲಾಗಿದ್ದು, 8GB RAM ಮತ್ತು 256GB ವೇರಿಯಂಟ್ ಸ್ಮಾರ್ಟ್‌ಫೋನ್ 5,001ರೂ. ಡಿಸ್ಕೌಂಟ್ ಪಡೆದುಕೊಂಡಿದೆ. ಹಾಗೆಯೇ 6GB RAM ಮತ್ತು 128GB ವೇರಿಯಂಟ್ ಸ್ಮಾರ್ಟ್‌ಫೋನ್ 75,000ರೂ.ಬೆಲೆಯನ್ನು ಹೊಂದಿದ್ದು, ಆದರೆ ಅಮೆಜಾನ್ ಸೇಲ್ ಮೇಳದಲ್ಲಿ 69,999ರೂ.ಗಳಿಗೆ ಸಿಗಲಿದೆ.

ಅಮೆಜಾನ್‌ನಲ್ಲಿ-ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ನೋಟ್ 9
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಸಹ ಬೆಸ್ಟ್ ಆಫರ್ ಪಡೆದಿದೆ. 6GB RAM ಮತ್ತು 128GB ವೇರಿಯಂಟ್ ಸ್ಮಾರ್ಟ್‌ಫೋನ್ ಬೆಲೆಯು 73,600ರೂ.ಗಳಾಗಿದ್ದು, ಆದರೆ ಈ ಸ್ಮಾರ್ಟ್‌ಫೋನಿಗೆ 30,601ರೂ. ಬಿಗ್ ಡಿಸ್ಕೌಂಟ್ ನೀಡಲಾಗಿದೆ. ಹೀಗಾಗಿ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು 42,999ರೂ.ಗಳಿಗೆ ಖರೀದಿಸಬಹುದಾಗಿದೆ.

ಅಮೆಜಾನ್‌ನಲ್ಲಿ-ಇತರೆ ಬೆಸ್ಟ್ ಡೀಲ್
ಹುವಾವೆ ಮೇಟ್ 20 ಪ್ರೊ, ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30 ಮತ್ತು ಶಿಯೋಮಿ ರೆಡ್ಮಿ 7 ಸ್ಮಾರ್ಟ್‌ಫೋನ್‌ಗಳು ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಬಿಗ್ ಡಿಸ್ಕೌಂಟ್ ಪಡೆದುಕೊಂಡಿದೆ. ಹುವಾವೆ ಮೇಟ್ 20 ಪ್ರೊ 6GB RAM, 128GB ವೇರಿಯಂಟ್ 49,990ರೂ.ಗಳಿಗೆ ಲಭ್ಯವಾಗಲಿದ್ದು, ಗ್ಯಾಲ್ಯಾಕ್ಸಿ ಎಂ30 9,999ರೂ.ಗಳಿಗೆ ಹಾಗೂ ರೆಡ್ಮಿ 7 ((2GB RAM, 32GB ) 5,999ರೂ.ಗಳಿಗೆ ಸಿಗಲಿವೆ.

ಫ್ಲಿಪ್‌ಕಾರ್ಟ್‌ನಲ್ಲಿ- ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್9
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್9 ಸ್ಮಾರ್ಟ್‌ಫೋನ್‌ಗೆ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಬಿಗ್ ಡಿಸ್ಕೌಂಟ್ ನೀಡಲಾಗಿದೆ. 64GB ಸ್ಟೋರೇಜ್ ಸಾಮರ್ಥ್ಯದ ವೇರಿಯಂಟ್ ಬೆಲೆಯು 62,500ರೂ.ಗಳಾಗಿದ್ದು, ಒಟ್ಟು 35,501ರೂ.ಗಳ ಬಿಗ್ ಡಿಸ್ಕೌಂಟ್ ಪಡೆದುಕೊಂಡಿದೆ. ಹೀಗಾಗಿ ಸದ್ಯ 29,999ರೂ.ಗಳಿಗೆ ಲಭ್ಯವಾಗಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ- ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A50
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A50 64GB ಆಂತರಿಕ ಸ್ಟೋರೇಜ್ ವೇರಿಯಂಟ್ ಬೆಲೆಯು 21,000ರೂ.ಗಳಾಗಿದೆ. ಆದ್ರೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮೇಳದಲ್ಲಿ 4,001ರೂ.ಗಳ ಬೆಲೆ ಕಡಿತದಿಂದಾಗಿ ಗ್ರಾಹಕರಿಗೆ 16,999ರೂ.ಗಳಿಗೆ ದೊರೆಯುತ್ತದೆ. ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಫೀಚರ್ ಹೊಂದಿದೆ ಮತ್ತು 25ಎಂಪಿ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಫ್ಲಿಪ್‌ಕಾರ್ಟ್‌ನಲ್ಲಿ- ಗೂಗಲ್ ಪಿಕ್ಸಲ್ 3
64 GB ಸ್ಟೋರೇಜ್ ವೇರಿಯಂಟ್‌ನ 'ಗೂಗಲ್ ಪಿಕ್ಸಲ್ 3' ಸ್ಮಾರ್ಟ್‌ಫೋನ್ ಬೆಲೆಯು 71,000ರೂ.ಗಳಾಗಿದ್ದು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮೇಳದಲ್ಲಿ 28,001ರೂ ಡಿಸ್ಕೌಂಟ್ ನೀಡಲಾಗಿದೆ. ಹೀಗಾಗಿ 42,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 'ಗೂಗಲ್ ಪಿಕ್ಸಲ್ 3a' ಸ್ಮಾರ್ಟ್‌ಫೋನ್ 15,001 ಡಿಸ್ಕೌಂಟ್ ಪಡೆದಿದ್ದು, 29,999ರೂ.ಗಳಿಗೆ ದೊರೆಯಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ- ಶಿಯೋಮಿ ಪೊಕೊ ಎಫ್1
ಶಿಯೋಮಿ ಪೊಕೊ ಎಫ್1 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, 21,999ರೂ. ಪ್ರೈಸ್‌ಟ್ಯಾಗ್ ಪಡೆದಿದೆ. ಆದರೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮೇಳದಲ್ಲಿ 7,000ರೂ.ಗಳ ಡಿಸ್ಕೌಂಟ್ ಪಡೆದಿದ್ದು, 14,999ರೂ.ಗಳಿಗೆ ಖರೀದಿಸಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470