Home
ಸುದ್ದಿಜಾಲ

ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ವಾಚ್‌ ಬೆಲೆಯಲ್ಲಿ ಭಾರೀ ಇಳಿಕೆ!..ಆಫರ್‌ ಏನು?

ಸ್ಯಾಮ್‌ಸಂಗ್ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇತರೆ ಸ್ಮಾರ್ಟ್‌ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಆ ಪೈಕಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಸರಣಿಯ ಡಿವೈಸ್‌ಗಳು ಗ್ರಾಹಕರ ಗಮನ ಸೆಳೆದಿದ್ದು, ಆಕರ್ಷಕ ಫೀಚರ್ಸ್‌ ಪಡೆದಿವೆ. ಖುಷಿ ವಿಚಾರವೆಂದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್‌ 5 ಡಿವೈಸ್‌ ಭರ್ಜರಿ ಡಿಸ್ಕೌಂಟ್‌ ದರದಲ್ಲಿ ಲಭ್ಯ.

ಹೌದು, ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಫ್ಲಿಪ್‌ಕಾರ್ಟ್‌ ಸೇಲ್ ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಸ್ಮಾರ್ಟ್‌ಫೋನ್‌ ಆಕರ್ಷಕ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಡಿವೈಸ್‌ 13,999ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಪ್ರೊ ಡಿವೈಸ್‌ 37,999 ರೂ. ದರದಲ್ಲಿ ಕಾಣಿಸಿಕೊಂಡಿದೆ.

ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ವಾಚ್‌ ಬೆಲೆಯಲ್ಲಿ ಭಾರೀ ಇಳಿಕೆ!..ಆಫರ್‌ ಏನು?

ಇದರೊಂದಿಗೆ ಹೆಚ್ಚುವರಿಯಾಗಿ ಬ್ಯಾಂಕ್‌ ಆಫರ್‌ ಸಹ ಲಭ್ಯವಾಗಲಿದೆ. ಹಾಗೆಯೇ ಈ ಸ್ಮಾರ್ಟ್‌ ವಾಚ್‌ ಸರಣಿಯು 1.5 GB RAM ಮತ್ತು 16 GB ಇಂಟರ್‌ ಸ್ಟೋರೇಜ್‌ ಬಲವನ್ನು ಪಡೆದಿದೆ. ಸೆನ್ಸಾರ್ ಆಪ್ಟಿಕಲ್ ಹಾರ್ಟ್‌ಬೀಟ್‌ ಸೆನ್ಸಾರ್‌, ಎಲೆಕ್ಟ್ರಿಕಲ್ ಹಾರ್ಟ್ ಸಿಗ್ನಲ್ ಮತ್ತು ಬಯೋ ಎಲೆಕ್ಟ್ರಿಕಲ್ ಇಂಪೆಡಾನ್ಸ ಅನಾಲಿಸಿಸ್ ನಂತಹ ಫೀಚರ್ಸ್‌ ಒಳಗೊಂಡಿದೆ. ಇತರೆ ಫೀಚರ್ಸ್ ಬಗ್ಗೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ವಾಚ್‌ ಬೆಲೆಯಲ್ಲಿ ಭಾರೀ ಇಳಿಕೆ!..ಆಫರ್‌ ಏನು?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಫೀಚರ್ಸ್‌ : ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಸ್ಮಾರ್ಟ್‌ವಾಚ್‌ನ 44 mm ರೂಪಾಂತರವು 1.4 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದರ 40 mm ರೂಪಾಂತರದ ಆಯ್ಕೆಯು 1.2 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಡ್ಯುಯಲ್-ಕೋರ್ ಎಕ್ಸಿನೋಸ್‌ W920 SoC ಪ್ರೊಸೆಸರ್‌ ಹೊಂದಿದೆ.

ಇದಕ್ಕೆ ಪೂರಕವಾಗಿ WearOS 3.5 ಆಧಾರಿತ One UI ವಾಚ್ 4.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 1.5GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಬಲವನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಹೊಸ ಸ್ಯಾಮ್‌ಸಂಗ್‌ ಬಯೋ ಆಕ್ಟಿವ್‌ ಸೆನ್ಸಾರ್‌ ಅನ್ನು ಹೊಂದಿದೆ. ಈ ಸೇನ್ಸಾರ್‌ ಆಪ್ಟಿಕಲ್ ಹಾರ್ಟ್‌ಬೀಟ್‌ ಸೆನ್ಸಾರ್‌, ಎಲೆಕ್ಟ್ರಿಕಲ್ ಹಾರ್ಟ್ ಸಿಗ್ನಲ್ ಮತ್ತು ಬಯೋ ಎಲೆಕ್ಟ್ರಿಕಲ್ ಇಂಪೆಡಾನ್ಸ ಅನಾಲಿಸಿಸ್ ಅನ್ನು ಸಂಯೋಜಿಸಲಿದೆ. ಗ್ಯಾಲಕ್ಸಿ ವಾಚ್‌ 5 44mm ರೂಪಾಂತರವು 410mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಆದರೆ 40mm ರೂಪಾಂತರವು 284mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ವಾಚ್‌ ಬೆಲೆಯಲ್ಲಿ ಭಾರೀ ಇಳಿಕೆ!..ಆಫರ್‌ ಏನು?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಪ್ರೊ ಫೀಚರ್ಸ್‌ : ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 5 ಪ್ರೊ ಸ್ಮಾರ್ಟ್‌ವಾಚ್‌ 1.4 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ WearOS 3.5-ಆಧಾರಿತ One UI ವಾಚ್ 4.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಡಿ-ಬಕಲ್ ಸ್ಪೋರ್ಟ್ ಬ್ಯಾಂಡ್‌ನೊಂದಿಗೆ ಟೈಟಾನಿಯಂ ಕೇಸ್ ಅನ್ನು ಒಳಗೊಂಡಿದೆ.

ಹಾಗೆಯೇ 1.5GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಬಲವನ್ನು ಪಡೆದಿದೆ. ಗ್ಯಾಲಕ್ಸಿ ವಾಚ್‌ 5 ಪ್ರೊ ಸ್ಮಾರ್ಟ್‌ವಾಚ್‌ ಟ್ರ್ಯಾಕ್ ಬ್ಯಾಕ್ ಫೀಚರ್ಸ್‌ ಅನ್ನು ನೀಡಲಿದೆ. ಇದು ಪಾದಯಾತ್ರಿಕರು, ಮೌಂಟೆನ್‌ ಬೈಕರ್‌ಗಳು ಬಳಸುವುದಕ್ಕೆ ಸೂಕ್ತವಾಗಲಿದೆ. ಏಕೆಂದರೆ ಈ ವಾಚ್‌ನಲ್ಲಿ ಹೈಕಿಂಗ್ ಮತ್ತು ಸೈಕ್ಲಿಂಗ್ ಮಾರ್ಗಗಳನ್ನು ಡೌನ್‌ಲೋಡ್ ಮಾಡಬಹುದು.

ಇನ್ನು ಈ ಸ್ಮಾರ್ಟ್‌ವಾಚ್‌ ಕೂಡ ಸ್ಯಾಮ್‌ಸಂಗ್‌ನ ಬಯೋಆಕ್ಟಿವ್ ಸೆನ್ಸಾರ್‌ , ಅಕ್ಸಿಲೆರೊಮೀಟರ್, ಬಾರೋಮೀಟರ್, ಗೈರೊಸ್ಕೋಪ್, ದಿಕ್ಸೂಚಿ ಮತ್ತು ಲೈಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಗ್ಯಾಲಕ್ಸಿ ವಾಚ್‌ 5 ಪ್ರೊ ಸ್ಮಾರ್ಟ್‌ ವಾಚ್‌ ಬ್ಲ್ಯಾಕ್ ಟೈಟಾನಿಯಂ ಮತ್ತು ಗ್ರೇ ಟೈಟಾನಿಯಂ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Flipkart Sale: Best Deal on Samsung Galaxy Watch 5 and Galaxy Watch 5 Pro. Check offer Price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+