ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ: ಪ್ರತಿ ಆಫರ್‌ಗಳು ಬಿಗ್
ವಿವಿಧ ವಸ್ತುಗಳ ಮೇಲೆ ಡಿಸ್ಕೌಂಟ್ ಅಲ್ಲದೇ ರೂ.1500ಕ್ಕಿಂತ ಹೆಚ್ಚಿನ ಖರೀದಿಯ ಮೇಲೆ SBI ಕಾರ್ಡುದಾರರಿಗೆ 10% ಡಿಸ್ಕೌಂಟ್ ಅನ್ನು ಫ್ಲಿಪ್ ಕಾರ್ಟ್ ನೀಡುತ್ತಿದೆ.
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಮತ್ತೆ ಬಂದಿದ್ದು, LED TV, ಸ್ಮಾರ್ಟ್‌ವಾಚ್ ಮತ್ತು ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ ಅನ್ನು ನೀಡಿದೆ. ಸೆಪ್ಟೆಂಬರ್ 24ರ ವರೆಗೂ ಈ ಸೇಲ್ ನಡೆಯಲಿದ್ದು, ಗ್ರಾಹಕರು ಎಲೆಕ್ಟ್ರಾನಿಕ್ ವಸ್ತುಗಳಲ್ಲದೇ ಬಟ್ಟೆ, ಶೂ, ಸೇರಿಂದತೆ ಹಲವು ವಸ್ತುಗಳ ಮೇಲೆ ಡಿಸ್ಕೌಂಟ್ ಅನ್ನು ಪಡೆಯಬಹುದಾಗಿದೆ.

ಓದಿರಿ: ಆನ್‌ಲೈನಿನಲ್ಲಿ ಆಧಾರ್-ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡುವುದು ಹೇಗೆ?
ವಿವಿಧ ವಸ್ತುಗಳ ಮೇಲೆ ಡಿಸ್ಕೌಂಟ್ ಅಲ್ಲದೇ ರೂ.1500ಕ್ಕಿಂತ ಹೆಚ್ಚಿನ ಖರೀದಿಯ ಮೇಲೆ SBI ಕಾರ್ಡುದಾರರಿಗೆ 10% ಡಿಸ್ಕೌಂಟ್ ಅನ್ನು ಫ್ಲಿಪ್ ಕಾರ್ಟ್ ನೀಡುತ್ತಿದೆ. ಹೆಚ್ಚಿನ ಡಿಸ್ಕೌಂಟ್ ಯಾವ ವಸ್ತುಗಳ ಮೇಲೆ ಲಭ್ಯವಿದೆ ಎನ್ನುವದನ್ನು ನೋಡುವ.

ಆಪಲ್ ವಾಚ್ ಸೀರೀಸ್ 2
ಆಪಲ್ ವಾಚ್ ಸೀರೀಸ್ 2 ಫ್ಲಿಪ್‌ಕಾರ್ಟ್ ನಲ್ಲಿ ರೂ. 29,900ಕ್ಕೆ ಲಭ್ಯವಿದೆ (ದರ:33,500). ಆಪಲ್ ವಾಚ್ ಸೀರೀಸ್ 2 ಬಿಲ್ಟ್ ಇನ್ ಜಿಪಿಎಸ್ ಅನ್ನು ಕಾಣಬಹುದಾಗಿದ್ದು, ನಿಮ್ಮ ವ್ಯಾಯಾಮದ ಚಟುವಟಿಕೆಗಳನ್ನು ದಾಖಲಿಸಲು ಇದು ಸಹಾಯ ಮಾಡುತ್ತದೆ. ಈ ವಾಚ್ ನಲ್ಲಿ ಹೃದಯ ಬಡಿತವನ್ನು ದಾಖಲಿಸಿಕೊಳ್ಳುವ ಮಾನಿಟರ್ ಕೂಡ ಇದೆ.

ಗೂಗಲ್ ಕ್ರೋಮ್ ಕಾಸ್ಟ್ 2:
ನಿಮ್ಮ ಸಾಮಾನ್ಯ ಟಿವಿಯನ್ನು ಸ್ಮಾರ್ಟ್ ಮಾಡುವ ಗೂಗಲ್ ಕ್ರೋಮ್ ಕಾಸ್ಟ್ ಸ್ಟ್ರೀಮಿಂಗ್ ಸಾಧನದ ಮೇಲೆಯೂ ಆಫರ್ ಇದೆ. ಗೂಗಲ್ ಕ್ರೋಮ್ ಕಾಸ್ಟ್ 2 ರೂ. 2,799 (ದರ 3,399)ಕ್ಕೆ ದೊರೆಯುತ್ತಿದೆ. ಇದು ಆಪಲ್ ಟಿವಿ ಮತ್ತು ಫೈರ್ ಟಿವಿಯಂತೆಯೇ ಕಾರ್ಯನಿರ್ವಹಿಸುತ್ತದೆ. ನೀವು ಟಿವಿಯಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸುತ್ತಿದ್ದರೇ ನಿಮಗೆ ಒಳ್ಳೆ ಆಯ್ಕೆ ಇದು.

ಪ್ಯಾನಾಸಾನಿಕ್ 40 ಇಂಚ್ FHD LED TV:
ಫ್ಲಿಪ್‌ಕಾರ್ಟ್ ನಲ್ಲಿ ಪ್ಯಾನಾಸಾನಿಕ್ 40 ಇಂಚ್ ಫುಲ್ FHD LED TV ರೂ.26,999 (ದರ 41,900)ಕ್ಕೆ ದೊರೆಯುತ್ತಿದೆ. ಅಲ್ಲದೇ ನಿಮ್ಮ ಹಳೆಯ ಟಿವಿಗೆ ರೂ. 12,000 ವರೆಗೆ ಏಕ್ಸ್‌ಚೇಂಜ್ ದೊರೆಯಲಿದೆ. ಅಲ್ಲದೇ ನೀವು SBI ಡೆಬಿಟ್ ಅಥವಾ ಕ್ರೆಡಿಟ್ ಕಾಡ್‌ನೊಂದಿಗೆ ಪಾವತಿಸಿದಾಗ ಹೆಚ್ಚುವರಿ ರೂ.2,699 ತ್ವರಿತ ರಿಯಾಯಿತಿ ಪಡೆಯಬಹುದು.

ಸೋನಿ ಬ್ರಾವಿಯಾ 43-ಇಂಚಿನ FHD ಸ್ಮಾರ್ಟ್ LED:
ಬಿಗ್ ಬಿಲಿಯನ್ ಡೇ ಮಾರಾಟದ ಒಂದು ಭಾಗವಾಗಿ ಫ್ಲಿಪ್‌ಕಾರ್ಟ್ ನಲ್ಲಿ ಸೋನಿ ಬ್ರಾವಿಯಾ 43-ಇಂಚಿನ FHD ಸ್ಮಾರ್ಟ್ LED ಟಿವಿ ರೂ.54,999 (ದರ ರೂ.65,900)ಕ್ಕೆ ಲಭ್ಯವಿದೆ. ಹಳೇಯ ಟಿವಿಯ ಮೇಲೆ ವಿನಿಮಯ ಬೋನಸ್ ರಿಯಾಯಿತಿ ರೂ.14,000 ವರೆಗೆ ಪಡೆಯಬಹುದು. SBI ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡಿನ ಖರೀದಿಯ ಮೇಲೆ ರೂ. 4,500 ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು.

ಜಿಯೋ ಫೈ ಡೇಟಾ ಕಾರ್ಡ್:
ಜಿಯೋ ಫೈ ಡೇಟಾ ಕಾರ್ಡ್ ಪ್ರಸ್ತುತ ರೂ. 999 (ದರ:2,329)ಕ್ಕೆ ದೊರೆಯುತ್ತಿದೆ. ಇದಕ್ಕಾಗಿ ನೀವು ಜಿಯೋ ಸಿಮ್ ಅನ್ನು ಪ್ರತ್ಯೇಕವಾಗಿ ಪಡೆಯಬೇಕು, ಜಿಯೋ ಟ್ಯಾರಿಫ್ ಪ್ಲಾನ್ ಅನ್ನು ರಿರ್ಜಾಜ್ ಮಾಡಿಸಿಕೊಳ್ಳಬೇಕು. ಇದು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತಿದೆ.


Click it and Unblock the Notifications








