Home
ಸುದ್ದಿಜಾಲ

ಆನ್‌ಲೈನ್‌ನಲ್ಲಿ ಫೋನ್ ಬುಕ್ ಮಾಡುವ ಮುನ್ನ ಎಚ್ಚರ! ಒಬ್ಬರಿಗೆ ಎರಡು ಬಾರಿ ಖಾಲಿ ಬಾಕ್ಸ್ ಕಳುಹಿಸಿದ ಫ್ಲಿಪ್‌ಕಾರ್ಟ್‌

By Srinidhi

ದೇಶದಲ್ಲಿ ಆನ್‌ಲೈನ್ ಮಾರುಕಟ್ಟೆಯೂ ಸಖತ್ ಸದ್ದು ಮಾಡುತ್ತಿದ್ದು, ರಿಯಾಯಿತಿ, ಫ್ಲಾಷ್‌ಸೇಲ್, ಕ್ಯಾಷ್ ಬ್ಯಾಕ್ ಸೇರಿದಂತೆ ಹಲವು ಆಫರ್ ಗಳನ್ನು ನೀಡುವ ಮೂಲಕ ಆಫ್‌ಲೈನ್‌ ಮಾರುಕಟ್ಟೆಗಿಂತಲೂ ಆಕರ್ಷಕ ಬೆಲೆಗೆ ವಸ್ತುಗಳನ್ನು ಇ-ಕಾರ್ಮಸ್ ಸೈಟ್‌ಗಳು ಮಾರಾಟ ಮಾಡುತ್ತಿವೆ. ಆದರೆ ದಿನದಿಂದ ದಿನಕ್ಕೆ ಆನ್‌ಲೈನಿನಲ್ಲಿ ಶಾಪಿಂಗ್‌ ಮಾಡಿದ ಸಂದರ್ಭದಲ್ಲಿ ವಂಚನೆಗೊಳಗಾಗುವ ಪ್ರಕರಣಗಳು ಹೆಚ್ಚಾಗುತ್ತಿದೆ.

ಒಬ್ಬರಿಗೆ ಎರಡು ಬಾರಿ ಖಾಲಿ ಬಾಕ್ಸ್ ಕಳುಹಿಸಿದ ಫ್ಲಿಪ್‌ಕಾರ್ಟ್‌

ಮೊನ್ನೆ ತಾನೇ ರಾಜ್ಯದ ಚಿಕ್ಕಮಗಳೂರಿನಲ್ಲಿ ಅಮೆಜಾನ್‌ಗೆ ಸಿಬ್ಬಂದಿಯೇ 1.8 ಕೋಟಿ ಟೋಪಿ ಹಾಕಿದ್ದ ಪ್ರಕರಣವೂ ಮಾಸುವ ಮುನ್ನವೇ, ಬೆಳಗಾವಿಯ ವ್ಯಕ್ತಿಯೊಬ್ಬರಿಗೆ ಫ್ಲಿಪ್‌ ಕಾರ್ಟ್ ಎರಡು ಬಾರಿ ಸ್ಮಾರ್ಟ್‌ಫೋನ್ ಬುಕ್ ಮಾಡಿದ ಸಂದರ್ಭದಲ್ಲಿ ಖಾಲಿ ಬಾಕ್ಸ್ ಕಳುಹಿಸಿರುವ ಘಟನೆ ವರದಿಯಾಗಿದೆ. ಲೆನೊವೊ ನೋಟ್ ಸ್ಮಾರ್ಟ್‌ಫೋನ್ ಬುಕ್ ಮಾಡಿದವರಿಗೆ ಲೆನೊವೊ ಕಂಪನಿಯ ಬಾಕ್ಸ್ ಮಾತ್ರ ಬಂದಿದೆ ಎನ್ನಲಾಗಿದೆ. ಈ ಹಿಂದೆಯೇ ಅದೇ ಗ್ರಾಹಕರಿಗೆ ಮೊಬೈಲ್ ಬುಕ್ ಮಾಡಿದ ಸಂದರ್ಭದಲ್ಲಿ ಖಾಲಿ ಬಾಕ್ಸ್ ಬಂದಿತ್ತು.

ಓದಿರಿ: ಫ್ಲಾಷ್‌ಸೇಲ್‌ನಲ್ಲಿ Mi TV 4 ಮತ್ತು Mi TV 4A: ಇಲ್ಲಿದೇ ಸೇಲ್ ಕುರಿತ ಸಂಪೂರ್ಣ ಮಾಹಿತಿ

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ನಿವಾಸಿ ವರ್ಧಮಾನ ಬಾಲೋಜಿ ಎಂಬುವವರು ಎರಡು ಬಾರಿ ಮೊಬೈಲ್ ಬುಕ್ ಮಾಡಿ ಮೋಸ ಹೋದವರಾಗಿದ್ದಾರೆ. ಈ ಹಿಂದೆ ಒಮ್ಮೆ ಮೊಬೈಲ್ ಬುಕ್ ಮಾಡಿದ ಸಂದರ್ಭದಲ್ಲಿ ಖಾಲಿ ಬಾಕ್ಸ್ ಬಂದಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ಅವರು ಈ ಬಾರಿ ಆನ್ ಲೈನ್ ಮೂಲಕ ಬಂದಿದ್ದ ಪ್ಯಾಕ್ ತೆರೆಯುವುದನ್ನು ಮೊಬೈಲ್ ನಲ್ಲಿ ವೀಡಿಯೊ ಮಾಡಿಕೊಂಡಿದ್ದಾರೆ.

ಒಬ್ಬರಿಗೆ ಎರಡು ಬಾರಿ ಖಾಲಿ ಬಾಕ್ಸ್ ಕಳುಹಿಸಿದ ಫ್ಲಿಪ್‌ಕಾರ್ಟ್‌

ಕ್ಯಾಷ್ ಆನ್ ಡಿಲಿವರಿ ಸೇವೆಯನ್ನು ಬಳಕೆ ಮಾಡಿಕೊಂಡಿದ್ದರೂ ಸಹ ಈ ಬಾರಿ ಮೊಬೈಲ್ ಬದಲು ಖಾಲಿ ಬಾಕ್ಸ್ ಸಿಕ್ಕಿದ್ದು, ಹಣ ನೀಡಿಯೇ ಪಾರ್ಸೆಲ್ ಪಡೆದಿದ್ದ ಅವರು, ಪಾರ್ಸೆಲ್ ಒಪನ್ ಮಾಡಿ ನೋಡಿದ ಮತ್ತೊಮ್ಮೆ ಮೋಸ ಹೋಗಿರುವುದನ್ನು ತಿಳಿದಿದ್ದಾರೆ. ಸದ್ಯ ಅವರು ಫ್ಲಿಪ್‌ಕಾರ್ಟ್‌ ವಿರುದ್ಧ ಕೇಸ್ ದಾಖಲಿಸುವ ಪ್ರಯತ್ನವನ್ನು ಮಾಡುತ್ತಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?

ನೀವು ಸಹ ಎಂದಾದರು ಆನ್‌ಲೈನಿಲ್ಲಿ ಸ್ಮಾರ್ಟ್‌ಫೋನ್ ಖರೀದಿಸಿದ ಸಂದರ್ಭದಲ್ಲಿ ಪಾರ್ಸೆಲ್ ಸ್ವೀಕರಿಸಿದ ನಂತರದಲ್ಲಿ ತಕ್ಷಣವೇ ಒಪನ್ ಮಾಡುವ ಬದಲು, ನೀವು ಬಾಕ್ಸ್ ತರೆಯುವುದನ್ನು ಸಾಧ್ಯವಾದರೆ ವೀಡಿಯೊ ಮಾಡಿಕೊಳ್ಳಿ. ಇಲ್ಲವಾದರೆ ನಿಜವಾಗಿಯೂ ಖಾಲಿ ಬಾಕ್ಸ್ ಬಂದಿದ್ದರೆ ನೀವು ಅದನ್ನು ಸಾಕ್ಷಿ ಸಮೇತ ತೋರಿಸುವ ಮಾಡುವ ಅವಕಾಶವನ್ನು ಕಳೆದುಕೊಳ್ಳುವಿರಿ.

Best Mobiles in India

English summary
Flipkart send empty boxes to the customer. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+