Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ನ ಸೇಲ್‌ನಲ್ಲಿ ಐಫೋನ್‌ 12 ಫೋನಿಗೆ ಭರ್ಜರಿ ಡಿಸ್ಕೌಂಟ್‌!

ಜನಪ್ರಿಯ ಇ- ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಒಂದಿಲ್ಲೊಂದು ವಿಶೇಷ ಸೇಲ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತ ಸಾಗಿದೆ. ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್‌ ಇದೀಗ ಸ್ಮಾರ್ಟ್‌ಫೋನ್ ಕಾರ್ನಿವಲ್ ಸೇಲ್ ಮೇಳವನ್ನು ಆಯೋಜಿಸಿದೆ. ಈ ಸೇಲ್‌ ಮೇಳದಲ್ಲಿ ಜನಪ್ರಿಯ ಫೋನ್‌ ಮಾಡೆಲ್‌ಗಳಿಗೆ ಜೊತೆಗೆ ಇತ್ತೀಚಿಗಿನ ಕೆಲವು ನೂತನ ಫೋನ್‌ಗಳಿಗೂ ಭರ್ಜರಿ ರಿಯಾಯಿತಿ ತಿಳಿಸಿದೆ. ಆ ಪೈಕಿ ಇತ್ತೀಚಿನ ಹೊಸ ಆಪಲ್ ಐಫೋನ್‌ 12 ಭರ್ಜರಿ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಐಫೋನ್‌ ಪ್ರಿಯರ ಗಮನ ಸೆಳೆದಿದೆ.

ಪ್ಲಾಟ್‌ಫಾರ್ಮ್‌

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಈಗ ಸ್ಮಾರ್ಟ್‌ಫೋನ್ ಕಾರ್ನಿವಲ್ ಸೇಲ್‌ ಆರಂಭಿಸಿದೆ. ಈ ಸೇಲ್ ಮೇಳವು ಇದೇ ಸೆಪ್ಟೆಂಬರ್ 2ರಿಂದ ಶುರುವಾಗಿದ್ದು, ಸೆಪ್ಟಂಬರ್ 8ರ ವರೆಗೂ ಚಾಲ್ತಿ ಇರಲಿದೆ. ಫ್ಲಿಪ್‌ಕಾರ್ಟ್‌ನ ಈ ಮೇಳದಲ್ಲಿ ಆಪಲ್ ಐಫೋನ್‌ 12 ಸರಣಿಯ ಫೋನ್‌ಗಳು ಆಕರ್ಷಕ ಡಿಸ್ಕೌಂಟ್‌ ಪಡೆದಿದ್ದು, ಮುಖ್ಯವಾಗಿ ಐಫೋನ್ 12 ಫೋನ್ ಒಟ್ಟು 12,901ರೂ.ಗಳ ರಿಯಾಯಿತಿ ಹೊಂದಿದ್ದು, ಭಾರೀ ಗಮನ ಸೆಳೆದಿದೆ.

ಎಕ್ಸ್‌ಚೇಂಜ್

ಫ್ಲಿಪ್‌ಕಾರ್ಟ್‌ ಸ್ಮಾರ್ಟ್‌ಫೋನ್ ಕಾರ್ನಿವಲ್ ಸೇಲ್‌ನಲ್ಲಿ ಐಫೋನ್ 12 ಫೋನ್ ಬಿಗ್ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿದೆ. 79,900ರೂ. ಗಳಿದ್ದ ಈ ಐಫೋನ್ ರಿಯಾಯಿತಿ ನಂತರ ಈಗ 66,999ರೂ.ಗಳ ಬೆಲೆಯಲ್ಲಿ ಲಭ್ಯವಾಗಲಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ 15,000ರೂ.ಗಳ ವರೆಗೆ ಎಕ್ಸ್‌ಚೇಂಜ್ ಆಫರ್‌ ಸಹ ನೀಡಿದೆ. ಇನ್ನುಳಿದಂತೆ ಐಫೋನ್ 12 ಫೋನ್ ಫೀಚರ್ಸ್‌ಗಳು ಏನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆಪಲ್ ಐಫೋನ್‌ 12 ಫೀಚರ್ಸ್‌

ಆಪಲ್ ಐಫೋನ್‌ 12 ಫೀಚರ್ಸ್‌

ಐಫೋನ್ 12 ಫೋನ್ OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಡಿಸ್ಕೌಂಟ್‌ನಲ್ಲಿ

ಅದೇ ರೀತಿ ಫ್ಲಿಪ್‌ಕಾರ್ಟ್‌ ಸ್ಮಾರ್ಟ್‌ಫೋನ್ ಕಾರ್ನಿವಲ್ ಸೇಲ್‌ನಲ್ಲಿ ಐಫೋನ್ 12 ಮಿನಿ ಸಹ 9,901ರೂ.ಗಳ ಆಕರ್ಷಕ ರಿಯಾಯಿತಿ ಪಡೆದಿದೆ. ಸದ್ಯ ಫ್ಲಿಪ್‌ಕಾರ್ಟ್‌ನ ಸೇಲ್‌ನಲ್ಲಿ 59,999ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಆಪಲ್ ಐಫೋನ್‌ 11 ಸಹ ಭರ್ಜರಿ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿದ್ದು, 51,999ರೂ.ಗಳ ದರದಲ್ಲಿ ಗ್ರಾಹಕರಿಗೆ ಲಭ್ಯ ಆಗುತ್ತದೆ. ಜೊತೆಗೆ ಐಫೋನ್ XR ಕೂಡಾ ಬುಗ್ ರಿಯಾಯಿತಿ ಪಡೆದಿದ್ದು, ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ 42,999ರೂ.ಗಳಿಗೆ ಸಿಗಲಿದೆ.

ಐಫೋನ್ 12 ಮಿನಿ ಫೀಚರ್ಸ್‌

ಐಫೋನ್ 12 ಮಿನಿ ಫೀಚರ್ಸ್‌

ಐಫೋನ್ 12 ಮಿನಿ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ.

ಆಪಲ್ ಐಫೋನ್ 11 ಫೀಚರ್ಸ್‌

ಆಪಲ್ ಐಫೋನ್ 11 ಫೀಚರ್ಸ್‌

ಆಪಲ್ ಐಫೋನ್ 11 ಫೋನ್ 6.1 ಇಂಚಿನ ಡಿಸ್‌ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ವೇಗದ ಚಿಪ್‌ಸೆಟ್‌ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್‌ ಪಡೆದುಕೊಂಡಿದೆ. ಆಪಲ್‌ ಎಕ್ಸ್‌ಆರ್‌ಗಿಂತ ಇದರ ಬ್ಯಾಟರಿ ಲೈಫ್ ಅಧಿಕವಾಗಿದೆ. ಹಿಂಬದಿಯ ಎರಡು ಕ್ಯಾಮೆರಾಗಳು 12ಎಂಪಿ ಸೆನ್ಸಾರ್‌ ಬೆಂಬಲವನ್ನು ಪಡೆದಿದ್ದು, ಇದರೊಂದಿಗೆ ನೈಟ್‌ಮೋಡ್‌, 4K ವಿಡಿಯೊ, ಸ್ಲೋ ಮೋಶನ್ ಫೀಚರ್ಸ್‌ಗಳನ್ನು ಪಡೆದಿದೆ.

ಐಫೋನ್ 11 ಮತ್ತು ಐಫೋನ್ 12 ಕ್ಯಾಮೆರಾ

ಐಫೋನ್ 11 ಮತ್ತು ಐಫೋನ್ 12 ಕ್ಯಾಮೆರಾ

ಐಫೋನ್ 11 ಮತ್ತು ಐಫೋನ್ 12 ಎರಡೂ ಒಂದೇ ಹಿಂಬದಿಯ ಕ್ಯಾಮೆರಾ ವಿನ್ಯಾಸದೊಂದಿಗೆ ಬರುತ್ತವೆ, ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುವ ಸಾಧನಗಳು. ಎರಡು ಸಾಧನಗಳ ಕ್ಯಾಮೆರಾಗಳ ನಡುವೆ ವಾಸ್ತವವಾಗಿ ಅನೇಕ ಹೋಲಿಕೆಗಳಿವೆ. ಐಫೋನ್ 11 ಮತ್ತು ಅದರ ಉತ್ತರಾಧಿಕಾರಿ ಪ್ಯಾಕ್ ಒಂದೇ ರೀತಿಯ ಎರಡು ಕ್ಯಾಮೆರಾ ಸಂವೇದಕಗಳಲ್ಲಿ - 12 ಎಂಪಿ ಅಲ್ಟ್ರಾ-ವೈಡ್ ಮತ್ತು 12 ಎಂಪಿ ವೈಡ್-ಆಂಗಲ್ ಸೆನ್ಸರ್‌ಗಳು. ಎರಡೂ ಫೋನ್‌ಗಳ ಹಿಂದಿನ ಕ್ಯಾಮೆರಾಗಳು ಬಳಕೆದಾರರನ್ನು 4 ಕೆ ಯಲ್ಲಿ 24 ಎಫ್‌ಪಿಎಸ್, 30 ಎಫ್‌ಪಿಎಸ್ ಮತ್ತು 60 ಎಫ್‌ಪಿಎಸ್‌ನಲ್ಲಿ ರೆಕಾರ್ಡ್ ಮಾಡಲು ಅನುಮತಿಸುತ್ತದೆ.

Best Mobiles in India

English summary
Flipkart Smartphone Carnival Sale: Big Discount On iPhone 12.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+