Home
ಸುದ್ದಿಜಾಲ

ಸ್ಮಾರ್ಟ್‌ಫೋನ್ ಕಾರ್ನಿವಲ್ ಸೇಲ್: ರಿಯಲ್‌ಮಿ ಫೋನ್‌ಗಳಿಗೆ ದೊಡ್ಡ ಮೊತ್ತದ ಡಿಸ್ಕೌಂಟ್‌!

ರಿಯಲ್‌ಮಿ ಮೊಬೈಲ್ ಕಂಪನಿಯು ಇದೀಗ ತನ್ನ ಆಯ್ದ ಸ್ಮಾರ್ಟ್‌ಫೋನ್‌ ಮಾಡೆಲ್‌ಗಳಿಗೆ ಆಕರ್ಷಕ ಡಿಸ್ಕೌಂಟ್‌ ಘೋಷಿಸಿದೆ. ರಿಯಲ್‌ಮಿ ಕಂಪನಿಯು ಸಂಸ್ಥೆಯು ಮತ್ತು ಇ- ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಜಂಟಿಯಾಗಿ 'ಸ್ಮಾರ್ಟ್‌ಫೋನ್ ಕಾರ್ನಿವಲ್' ಸೇಲ್ ಮೇಳವನ್ನು ಆಯೋಜಿಸಿದ್ದು, ಈ ವಿಶೇಷ ಮಾರಾಟದಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ರಿಯಾಯಿತಿ ತಿಳಿಸಲಾಗಿದೆ.

ಕಾಮರ್ಸ್‌

ಹೌದು, ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್‌ ತಾಣವು ಸ್ಮಾರ್ಟ್‌ಫೋನ್ ಕಾರ್ನಿವಲ್ ಸೇಲ್‌ ಆರಂಭಿಸಿದ್ದು, ಐದು ದಿನಗಳ ಈ ಸೇಲ್ ಇದೇ ಮಾರ್ಚ್ 8ರಿಂದ ಶುರುವಾಗಿದೆ. ಫ್ಲಿಪ್‌ಕಾರ್ಟ್‌ ಮತ್ತು ರಿಯಲ್‌ಮಿ ಅಧಿಕೃತ ವೆಬ್‌ಸೈಟ್‌ನಲ್ಲಿ ಸದ್ಯ 'ಸ್ಮಾರ್ಟ್‌ಫೋನ್ ಕಾರ್ನಿವಲ್' ಸೇಲ್‌ ಮೇಳವು ಚಾಲ್ತಿ ಇದ್ದು, ಇದೇ ಮಾರ್ಚ್ 12ರಂದು ಈ ಸೇಲ್ ಮುಕ್ತಾಯವಾಗಲಿದೆ. ಹಾಗಾದರೇ ಈ ಸೇಲ್‌ ಮೇಳದಲ್ಲಿ ಯಾವೆಲ್ಲಾ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ರಿಯಲ್‌ಮಿ

ಈ ಸೇಲ್‌ ಮೇಳದಲ್ಲಿ ಗ್ರಾಹಕರು ಕಂಪನಿಯ ಜನಪ್ರಿಯ ರಿಯಲ್‌ಮಿ ಎಕ್ಸ್ 7 ಪ್ರೊ 5G, ರಿಯಲ್‌ಮಿ ನಾರ್ಜೊ 30 ಪ್ರೊ 5G, ರಿಯಲ್‌ಮಿ 7, ರಿಯಲ್‌ಮಿ 7 ಪ್ರೊ, ರಿಯಲ್‌ಮಿ ನಾರ್ಜೊ 20 ಪ್ರೊ, ರಿಯಲ್‌ಮಿ 5 ಪ್ರೊ, ರಿಯಲ್‌ಮಿ ಸಿ 15, ರಿಯಲ್‌ಮಿ ಎಕ್ಸ್ 50 ಪ್ರೊ 5G ಮತ್ತು ರಿಯಲ್‌ಮಿ ನಾರ್ಜೊ 30ಎ ಸೇರಿದಂತೆ ಇತರ ಉತ್ಪನ್ನಗಳ ಮೇಲೂ ಆಕರ್ಷಕ ಕೊಡುಗೆಗಳನ್ನು ಪಡೆಯಬಹುದು.

ಸೂಪರ್‌ಜೂಮ್

ರಿಯಲ್‌ಮಿ ಎಕ್ಸ್‌ 50 ಪ್ರೊ 5G ಸ್ಮಾರ್ಟ್‌ಫೋನ್‌ 10,000ರೂ, ರಿಯಾಯಿತಿ. ರಿಯಲ್‌ಮಿ ಎಕ್ಸ್ 3 ಸೂಪರ್‌ಜೂಮ್ ಫೋನ್‌ 5,000ರೂ. ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿವೆ. ಹಾಗೆಯೇ ರಿಯಲ್‌ಮಿ ಎಕ್ಸ್ 3 ಫೋನ್ 3000ರೂ. ರಿಯಾಯಿತಿ ಪಡೆದಿದ್ದು, ರಿಯಲ್‌ಮಿ 5 ಪ್ರೊ, ರಿಯಲ್‌ಮಿ 6 ಮತ್ತು ರಿಯಲ್‌ಮಿ 6 ಪ್ರೊ ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 2000ರೂ.ಗಳ ರಿಯಾಯಿತಿ ಕೊಡುಗೆಯನ್ನು ಪಡೆದಿವೆ. ಅದೇ ರೀತಿ ರಿಯಲ್‌ಮಿ ನಾರ್ಜೊ 20 ಪ್ರೊ, ರಿಯಲ್‌ಮಿ ಸಿ 15, ರಿಯಲ್‌ಮಿ 7 ಪ್ರೊ ಮತ್ತು ರಿಯಲ್‌ಮಿ ಸಿ3 ಫೋನ್‌ಗಳು ಕ್ರಮವಾಗಿ 1000ರೂ. ರಿಯಾಯಿತಿಯಲ್ಲಿ ಕಾಣಿಸಿಕೊಂಡಿವೆ.

ಲಭ್ಯವಾಗಲಿದೆ

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಕೊಡುಗೆಗಳು ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಲಭ್ಯವಿರುತ್ತವೆ. ಗ್ರಾಹಕರು 20,000ರೂ.ಗಳಿಂತ ಹೆಚ್ಚಿನ ಮೊತ್ತದ ಸ್ಮಾರ್ಟ್‌ಫೋನ್‌ ಖರೀದಿಸಿದರೇ ಸುಮಾರು 1,250ರೂ.ಗಳ ವರೆಗೂ ಡಿಸ್ಕೌಂಟ್‌ ಲಭ್ಯವಾಗಲಿದೆ. ಹಾಗೆಯೇ 12,500ರೂ. ದಿಂದ 20,000ರೂ. ವರೆಗಿನ ದರದಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಿದರೇ ಸುಮಾರು 1,000ರೂ. ರಿಯಾಯಿತಿ ಲಭ್ಯವಾಗಲಿದೆ. ಇನ್ನು 12,500ರೂ. ಒಳಗಿನ ಫೋನ್ ಖರೀದಿಸಿದರೇ ಸುಮಾರು 750ರೂ.ಗಳ ಡಿಸ್ಕೌಂಟ್‌ ಲಭ್ಯ.

Best Mobiles in India

English summary
Flipkart Smartphone Carnival Sale: Amazing Offers And Discount On Realme Smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+