2015ರ ಗೂಗಲ್ ಟಾಪ್ ಸರ್ಚ್ ಪಟ್ಟಿಯಲ್ಲಿ ಸನ್ನಿಲಿಯೋನ್, ಸಲ್ಮಾನ್ ಖಾನ್
ಹೊಸ ವರ್ಷ ಮುನ್ನೋಡುತ್ತಿರುವ ಪ್ರಪಂಚದ ಜನತೆ ಈಗ ಹಳೆಯ ಸಂಗತಿಗಳನ್ನು ಮೆಲುಕು ಹಾಕುತ್ತಾ ಮುಂದಿನ ಶುಭಗಳಿಗೆಯ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಜನರು ಮಾತ್ರವಲ್ಲದೇ ಈ ಒಂದು ರೂಢಿ ಟೆಕ್ ಸಂಸ್ಥೆಗಳಿಗೂ ಇದೆ ಎಂಬುದನ್ನು ಮರೆಯೋಹಾಗಿಲ್ಲ. ಹೌದು, ಗೂಗಲ್ ಸಹ ಪ್ರಪಂಚದಾದ್ಯಂತ ತನ್ನ 2015 ರ ಟಾಪ್ ಸರ್ಚ್ ಮಾಹಿತಿಗಳನ್ನು ಮೆಲುಕು ಹಾಕಿ ಜನರ ಮುಂದಿಟ್ಟಿದೆ.
ಓದಿರಿ: ಮೈನವಿರೇಳಿಸುವ ಗೂಗಲ್ ಮ್ಯಾಪ್ ಸಾಹಸ ಫೋಟೋಗಳು
ಗೂಗಲ್ ತನ್ನ ಸರ್ಚ್ ಇಂಜಿನ್‌ನಲ್ಲಿ 2015 ರಲ್ಲಿ ಜನರು ಹುಡುಕಾಡಿದ ಟಾಫ್ ವಿಷಯಗಳ ಪಟ್ಟಿಯನ್ನು ಭಾರತವು ಸೇರಿದಂತೆ ಹಲವು ರಾಷ್ಟ್ರಗಳ ವಯಕ್ತಿಕ ಟಾಪ್ ಸರ್ಚ್ ಮಾಹಿತಿಯನ್ನು ವಿಷಯಾನುಸಾರವಾಗಿ ನೀಡಿದೆ. ಟೆಕ್ ಪ್ರಿಯರು ಮಾತ್ರವಲ್ಲದೇ ಈ ಮಾಹಿತಿಯನ್ನು ಖಂಡಿತವಾಗಿ ಎಲ್ಲರೂ ತಿಳಿಯಲೇಬೇಕು. ಕಡೆ ಪಕ್ಷ ಜಗತ್ತಿನನಾದ್ಯಂತ ಪ್ರಖ್ಯಾತ ಮೊಬೈಲ್‌ಗಳು, ವ್ಯಕ್ತಿಗಳು, ಸೆಲೆಬ್ರಿಟಿಗಳು, ಸ್ಥಳಗಳು, ಆನ್‌ಲೈನ್ ಮಾರುಕಟ್ಟೆಗಳು ಯಾವುವು ಎಂದು ಮತ್ತು ಅಧಿಕವಾಗಿ ಜನರು ಏನನ್ನು ಇಂಟರ್ನೆಟ್‌ನಲ್ಲಿ ಹುಡುಕುತ್ತಿದ್ದಾರೆ ಎಂಬುದಾದರು ತಿಳಿಯುತ್ತದೆ. ಹಾಗಾದರೆ ಇಂತಹ ವಿಷಯಗಳನ್ನು ಗಿಜ್‌ಬಾಟ್ ನಿಮ್ಮ ಮುಂದಿಡುತ್ತಿದ್ದು ಈ ಲೇಖನದ ಸ್ಲೈಡರ್‌ಗಳಿಂದ ಜನರು ಗೂಗಲ್ ಸರ್ಚ್‌ನಲ್ಲಿ 2015 ರಲ್ಲಿ ಹುಡುಕಾಡಿದ ಟಾಪ್ ಮಾಹಿತಿಗಳನ್ನು ತಿಳಿಯಿರಿ.

ಗೂಗಲ್ ಟ್ರೆಂಡ್ಸ್ - ಮೊಬೈಲ್ ಡಿವೈಸ್ - ಭಾರತ
ಮೊಬೈಲ್ ಡಿವೈಸ್‌ಗಳ ವರ್ಗದಲ್ಲಿ 2015 ರಲ್ಲಿ ಭಾರತದಾದ್ಯಂತ ಅಧಿಕವಾಗಿ ಯು ಯುರೆಕಾ ಜನರಿಂದ ಹುಡುಕಾಡಲ್ಪಟ್ಟಿದೆ.

ಗೂಗಲ್ ಟ್ರೆಂಡ್ಸ್ - ಆನ್‌ಲೈನ್ ಮಾರುಕಟ್ಟೆ -ಭಾರತ
ಆನ್‌ಲೈನ್ ಮಾರುಕಟ್ಟೆ ವರ್ಗದಲ್ಲಿ ಫ್ಲಿಪ್‌ಕಾರ್ಟ್ 2015 ರಲ್ಲಿ ಅತಿ ಹೆಚ್ಚು ಸರ್ಚ್ ಆಗಿದೆ.

ಗೂಗಲ್ ಟ್ರೆಂಡ್ಸ್ - ಟ್ರೆಂಡಿಂಗ್ ಸರ್ಚ್-ಭಾರತ
ಗೂಗಲ್ ಟ್ರೆಂಡಿಂಗ್ ಸರ್ಚ್ ವರ್ಗದ ಟಾಪ್ ಸರ್ಚ್ ಪಟ್ಟಿಯಲ್ಲಿ ಐಸಿಸಿ ಕ್ರಿಕೆಟ್ ಕಪ್ 2015 ಮೊದಲ ಸ್ಥಾನದಲ್ಲಿದೆ.

ಗೂಗಲ್ ಟ್ರೆಂಡ್ - ಜನರು 2015 -ಭಾರತ
ಗೂಗಲ್‌ನಲ್ಲಿ 2015 ರಲ್ಲಿ ಅಧಿಕವಾಗಿ ಪ್ರೇಕ್ಷಕ ವರ್ಗದಲ್ಲಿ ಸನ್ನಿಲಿಯೋನ್‌ಳನ್ನು ಸರ್ಚ್ ಮಾಡಲಾಗಿದೆ.

ಗೂಗಲ್ ಟ್ರೆಂಡ್ಸ್ - ಟ್ರೆಂಡಿಂಗ್ ಸಿನಿಮಾ 2015 -ಭಾರತ
ಗೂಗಲ್ ಟ್ರೆಂಡಿಂಗ್ ಸಿನಿಮಾ ವರ್ಗದಲ್ಲಿ ಭಾರತದಾದ್ಯಂತ 2015ರಲ್ಲಿ ಅಧಿಕವಾಗಿ ತೆಲುಗು ಸಿನಿಮಾ 'ಬಾಹುಬಲಿ'ಯನ್ನು ಸರ್ಚ್ ಮಾಡಲಾಗಿದೆ.

ಗೂಗಲ್ ಟ್ರೆಂಡ್ - ಬಾಲಿವುಡ್ ನಟ -ಭಾರತ
ಗೂಗಲ್ ಸರ್ಚ್‌ನಲ್ಲಿ ಬಾಲಿವುಡ್ ನಟ ವರ್ಗದಲ್ಲಿ ಅಧಿಕವಾಗಿ ನಟ 'ಸಲ್ಮಾನ್ ಖಾನ್' ರನ್ನು 2015 ರಲ್ಲಿ ಅಧಿಕವಾಗಿ ಸರ್ಚ್‌ನಲ್ಲಿ ಹುಡುಕಾಡಲಾಗಿದೆ.

ಗೂಗಲ್ ಟ್ರೆಂಡ್ಸ್ - ಬಾಲಿವುಡ್ ನಟಿ 2015 - ಭಾರತ
ಸನ್ನಿಲಿಯೋನ್

ಗೂಗಲ್ ಟ್ರೆಂಡ್ - ಸ್ಪೋರ್ಟ್ ಮ್ಯಾನ್ -ಭಾರತ
ಭಾರತದಲ್ಲಿ ಸ್ಪೋರ್ಟ್ ಮ್ಯಾನ್ ವರ್ಗದಲ್ಲಿ ಕ್ರಿಕೆಟ್ ಆಟಗಾರ 'ವಿರಾಟ್ ಕೊಹ್ಲಿ' ಯವರನ್ನು ಅಧಿಕವಾಗಿ ಗೂಗಲ್ ನಲ್ಲಿ ಸರ್ಚ್ ಮಾಡಲಾಗಿದೆ.

ಗೂಗಲ್ ಟ್ರೆಂಡ್ - ಟ್ರೆಂಡಿಂಗ್ ಟೆಕ್ ಗ್ರಾಹಕ 2015 - ಪ್ರಪಂಚ
ಗೂಗಲ್ ಸರ್ಚ್ ಬಾರ್‌ನಲ್ಲಿ ಪ್ರಪಂಚದಾದ್ಯಂತ 2015 ರಲ್ಲಿ ಅಧಿಕವಾಗಿ ಐಫೋನ್ 6S ಅನ್ನು ಹುಡುಕಾಡಲಾಗಿದೆ.

ಗೂಗಲ್ ಟ್ರೆಂಡ್ - ಟ್ರೆಂಡಿಂಗ್ ಸರ್ಚ್ 2015 -ಪ್ರಪಂಚ
ಲಾಮರ್ ಒಡಮ್‌ನನ್ನು 2015ರಲ್ಲಿ ಜಗತ್ತಿನಾದ್ಯಂತ ಅಧಿಕವಾಗಿ ಸರ್ಚ್ ಮಾಡಲಾಗಿದೆ. ಈತನು ಅಮೇರಿಕದ ಮಾಜಿ ಪ್ರೊಫೇಸನಲ್ ಬಾಸ್ಕೆಟ್ ಬಾಲ್ ಆಟಗಾರ.

ಗೂಗಲ್ ಟ್ರೆಂಡ್- ಟ್ರೆಂಡಿಂಗ್ ಗ್ಲೋಬಲ್ ಸುದ್ದಿ 2015- ಪ್ರಪಂಚ
2015 ರಲ್ಲಿ ಪ್ರಪಂಚದಾದ್ಯಂತ ಫ್ರೆಂಚ್ ಕಾರ್ಟೂನ್ ವರದಿಯ ನಿಯತಕಾಲಿಕೆ ಚಾರ್ಲಿ ಹೆಬ್ಡೊ ಬಗ್ಗೆ ಹೆಚ್ಚು ಹುಡುಕಾಡಲಾಗಿದೆ.

ಗೂಗಲ್ ಟ್ರೆಂಡ್ಸ್ - ಟ್ರೆಂಡಿಂಗ್ ಜನರು 2015 - ಪ್ರಪಂಚ
ಈತನನ್ನು ಟ್ರೆಂಡಿಂಗ್ ಸರ್ಚ್ ಮಾತ್ರವಲ್ಲದೇ ಟ್ರೆಂಡಿಂಗ್ ಪ್ರೇಕ್ಷಕ ವರ್ಗದಲ್ಲೂ ಹೆಚ್ಚು ಹುಡುಕಾಡಿರುವ ಬಗ್ಗೆ ಗೂಗಲ್ ಮಾಹಿತಿ ನೀಡಿದೆ.

ಗೂಗಲ್ ಟ್ರೆಂಡ್ಸ್ - ಟ್ರೆಂಡಿಂಗ್ ಸಿನಿಮಾ 2015- ಪ್ರಪಂಚ
ಪ್ರಪಂಚದಾದ್ಯಂತ ಗೂಗಲ್ ನಲ್ಲಿ 2015 ರಲ್ಲಿ ಜುರಾಸಿಕ್ ವರ್ಲ್ಡ್ ಸಿನಿಮಾವನ್ನು ಅಧಿಕವಾಗಿ ಹುಡುಕಾಡಲಾಗಿದೆ.

ಗೂಗಲ್ ಟ್ರೆಂಡಿಂಗ್ - ಟ್ರೆಂಡಿಂಗ್ ಟಿವಿ ಶೋ 2015 - ಪ್ರಪಂಚ
ಬಿಗ್ ಬ್ರದರ್ ಬ್ರೆಜಿಲ್

ಗೂಗಲ್ ಟ್ರೆಂಡ್ಸ್ - ಟ್ರೆಂಡಿಂಗ್ ಮ್ಯೂಸಿಕ್ ಕಲಾವಿದ 2015 - ಪ್ರಪಂಚ
ಅಡೆಲೆ, ಈಕೆ ಇಂಗ್ಲೀಷ್ ಹಾಡುಗಾರತಿ ಹಾಗೂ ಗೀತೆ ರಚನೆಗಕಾರಳು. ಪ್ರಪಂಚದಾದ್ಯಂತ 2015 ರಲ್ಲಿ ಅತಿ ಹೆಚ್ಚಿನದಾಗಿ ಹುಡುಕಾಡಲ್ಪಟ್ಟಿದ್ದು, ಹಾಡುಗಾರತಿ ವರ್ಗದಲ್ಲಿ ಇವಲೇ ಟಾಪ್ ಸ್ಥಾನದಲ್ಲಿ ಹುಡುಕಾಡಲ್ಪಟ್ಟಿದ್ದಾಳೆ.

ಗೂಗಲ್ ಟ್ರೆಂಡ್ಸ್- ಟ್ರೆಂಡಿಂಗ್ ನಷ್ಟ 2015 - ಪ್ರಪಂಚ
ಬಾಬಿ ಕ್ರಿಸ್ಟಿನ


Click it and Unblock the Notifications








