ಫ್ಲಿಪ್‌ಕಾರ್ಟ್ ಸೂಪರ್ ವ್ಯಾಲ್ಯೂ ಡೇಸ್ ಸೇಲ್ 2024: ಈ ಫೋನ್‌ಗಳು ಭಾರೀ ಕಡಿಮೆ ಬೆಲೆಗೆ ಲಭ್ಯ
ನೀವು ಆಫರ್ ಬೆಲೆಗೆ ಫೋನ್ ಖರೀದಿ ಮಾಡಲು ಮುಂದಾಗಿದ್ದರೆ ಇದು ಉತ್ತಮ ಸಮಯ. ಯಾಕೆಂದರೆ ಪ್ರಮುಖ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ಸೂಪರ್ ವ್ಯಾಲ್ಯೂ ಡೇಸ್ ಸೇಲ್ 2024 (Flipkart Super Value Days Sale 2024) ಅನ್ನು ಘೋಷಣೆ ಮಾಡಿದೆ.
ಹೌದು, ಈ ವಿಶೇಷ ಸೇಲ್‌ನಲ್ಲಿ ನೀವು ಕೆಲವು ಫೋನ್‌ಗಳನ್ನು ಭಾರೀ ಕಡಿಮೆ ಅಥವಾ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಫ್ಲಿಪ್‌ಕಾರ್ಟ್ ಸೂಪರ್ ವ್ಯಾಲ್ಯೂ ಡೇಸ್ ಸೇಲ್ ಈಗ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಆಗಿದ್ದು, ಸ್ಮಾರ್ಟ್‌ಫೋನ್‌ಗಳ ಮೇಲೆ ನೀವು ನಂಬಲಾಗದ ಕೊಡುಗೆಗಳನ್ನು ಪಡೆಯಬಹುದಾಗಿದೆ. ನಿಮ್ಮ ಫೋನ್ ಅನ್ನು ಅಪ್‌ಗ್ರೇಡ್ ಮಾಡಲು ಅಥವಾ ಹೊಸದನ್ನು ಖರೀದಿಸಲು ನೀವು ಮುಂದಾಗಿದ್ದರೆ ಇಲ್ಲಿವೆ ನೋಡಿ ಆಫರ್ ಬೆಲೆಗೆ ಲಭ್ಯ ಇರುವ ಫೋನ್‌ಗಳು.

ಐಫೋನ್ 13: ಐಫೋನ್ 13 (iPhone 13) ಅನ್ನು ಈಗ ನೀವು 53,999 ರೂಗಳ ಆರಂಭಿಕ ಬೆಲೆಯೊಂದಿಗೆ ಖರೀದಿ ಮಾಡಬಹುದಾಗಿದೆ. ಆದಾಗ್ಯೂ, ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಲು ಮುಂದಾದರೆ ಈ ಫೋನ್ ಮೇಲೆ 4,000 ರೂಪಾಯಿಗಳ ತ್ವರಿತ ರಿಯಾಯಿತಿ ಪಡೆಯಬಹುದಾಗಿದೆ. ಇದರಿಂದಾಗಿ, ಈ ಫೋನ್ ಅನ್ನು ನೀವು 49,999 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ.
ರಿಯಲ್‌ಮಿ 12+ 5G: ರಿಯಲ್‌ಮಿ 12+ 5G (Realme 12+ 5G) ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡುವಾಗ 3,000 ರೂ.ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಇದರಿಂದಾಗಿ 20,999 ರೂ.ಗಳ ಸಾಮಾನ್ಯ ಬೆಲೆ ಇರುವ ಈ ಫೋನ್ ಅನ್ನು 18,049 ರೂ.ಗಳಿಗೆ ಖರೀದಿ ಮಾಡಿದಂತೆ ಆಗುತ್ತದೆ. ಅದರಲ್ಲೂ 8GB/128GB ಸ್ಟೋರೇಜ್ ಆಯ್ಕೆಯ ಫೋನ್‌ಗೆ ಈ ಆಫರ್ ಸೌಲಭ್ಯ ಕಲ್ಪಿಸಿಕೊಡಲಾಗಿದೆ.

ರೆಡ್ಮಿ ನೋಟ್ 13 ಪ್ರೊ 5G: ಈ ಸ್ಮಾರ್ಟ್‌ಫೋನ್ (Redmi Note 13 Pro 5G) ಅನ್ನು 21,999 ರೂ.ಗಳ ಆರಂಭಿಕ ಬೆಲೆಯೊಂದಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ 8GB/128GB ಸ್ಟೋರೇಜ್ ವೇರಿಯಂಟ್ ಫೋನ್ 25,999 ರೂ.ಗಳ ಬೆಲೆ ಹೊಂದಿದೆ. ಇನ್ನು ಎಲ್ಲಾ ಸ್ಟೋರೇಜ್ ವೇರಿಯಂಟ್ ಆಯ್ಕೆಗೂ ಸಹ ಈ ವಿಶೇಷ ಆಫರ್ ಅನ್ನು ನೀಡಲಾಗಿದೆ.
ವಿವೋ V30e: ಹೊಸದಾಗಿ ಲಾಂಚ್ ಆಗಿರುವ ವಿವೋ V30e (Vivo V30e) ಸ್ಮಾರ್ಟ್‌ಫೋನ್ ಅನ್ನು ಎಸ್‌ಬಿಐ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಂದರೆ, ಈ ಫೋನ್ ಮೇಲೆ 2,500 ರೂ.ಗಳ ರಿಯಾಯಿತಿಯೊಂದಿಗೆ ಖರೀದಿಸಬಹುದಾಗಿದೆ. ಈ ಫೋನ್‌ನ ಆರಂಭಿಕ ಬೆಲೆ 25,499 ರೂ.ಗಳಾಗಿದೆ.
ಇನ್ಫಿನಿಕ್ಸ್ ನೋಟ್ 40 ಪ್ರೊ 5G: ಈ ಸ್ಮಾರ್ಟ್ ಫೋನ್‌ನ (Infinix Note 40 Pro 5G) ಮೂಲ ವೇರಿಯಂಟ್ 20,999ರೂ.ಗಳಾಗಿದೆ. ಹೆಚ್ಚುವರಿಯಾಗಿ, ಗ್ರಾಹಕರು ಒನ್‌ಕಾರ್ಡ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಮತ್ತು ಬ್ಯಾಂಕ್ ಆಫರ್ ಬರೋಡಾ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ನೋ-ಕಾಸ್ಟ್ ಇಎಂಐ ಆಯ್ಕೆಯಲ್ಲಿ ಶೇಕಡಾ 5 ರಷ್ಟು ಕ್ಯಾಶ್‌ಬ್ಯಾಕ್ ಇದೆ.
ಪೊಕೊ M6 ಪ್ರೊ 5G ಸ್ಮಾರ್ಟ್‌ಫೋನ್: ಈ ಸ್ಮಾರ್ಟ್‌ಫೋನ್ (Poco M6 Pro 5G) ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6GB RAM ಮತ್ತು 128GB ಇಂಟರ್ ಸ್ಟೋರೇಜ್ ಬಲದೊಂದಿಗೆ ಲಭ್ಯ ಇದೆ. ಇದು 6.79 ಇಂಚಿನ ಪಂಚ್-ಹೋಲ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, FHD+ ರೆಸಲ್ಯೂಶನ್, 90Hz ರಿಫ್ರೆಶ್ ರೇಟ್ ಮತ್ತು 550 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. 9,499ರೂ.ಗಳ ಬೆಲೆಗೆ ಲಭ್ಯ ಇದೆ.

ಇದರೊಂದಿಗೆ ಫ್ಲಿಪ್‌ಕಾರ್ಟ್ ಈಗ ಪಿಕ್ಸೆಲ್ ಡೇಸ್ ಸೇಲ್ ಅನ್ನೂ ಸಹ ಆಯೋಜನೆ ಮಾಡಲಿದೆ. ಅದರಲ್ಲಿ ಗೂಗಲ್ ಪಿಕ್ಸೆಲ್ 8 ಅನ್ನು ಖರೀದಿ ಮಾಡುವಾಗ 10,000 ರೂಪಾಯಿಗಳ ಬೃಹತ್ ರಿಯಾಯಿತಿ ಸಿಗಲಿದೆ. ಈ ಮೂಲಕ ನೀವು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.


Click it and Unblock the Notifications








