Flipkart: ಫ್ಲಿಪ್‌ಕಾರ್ಟ್ ಇನ್ಮುಂದೆ ಈ 20 ನಗರಗಳಲ್ಲಿ ಒಂದೇ ದಿನದಲ್ಲಿ ಡೆಲಿವರಿ ನೀಡಲಿದೆ!
ಫ್ಲಿಪ್‌ಕಾರ್ಟ್ (Flipkart) ಪ್ರಮುಖ ಇ-ಕಾಮರ್ಸ್ ಸೈಟ್ (E-commerce site) ಎನಿಸಿಕೊಂಡಿದ್ದು, ಗ್ರಾಹಕರು ಈ ಪ್ಲಾಟ್ ಫಾರ್ಮ್ ಮೂಲಕ ತಮ್ಮಿಷ್ಟದ ಯಾವುದೇ ವಸ್ತುಗಳನ್ನು ಅದರಲ್ಲೂ ಸ್ಮಾರ್ಟ್ ಡಿವೈಸ್‌ಗಳನ್ನು ಕಡಿಮೆ ದರದಲ್ಲಿ ಖರೀದಿ ಮಾಡುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಫ್ಲಿಪ್‌ಕಾರ್ಟ್ ಭರ್ಜರಿ ಸುದ್ದಿಯೊಂದನ್ನು ನೀಡಿದೆ.
ಹೌದು, ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಇನ್ಮುಂದೆ ಆರ್ಡರ್ ಮಾಡಿದ ಒಂದೇ ದಿನದಲ್ಲಿ ಆ ವಸ್ತುಗಳನ್ನು ಡೆಲಿವರಿ (order Delivery) ಮಾಡುತ್ತದೆ. ಈ ವಿಷಯ ಕೇಳಿ ನಿಮಗೆ ಶಾಕ್ ಆಗಿರಬಹುದು. ಯಾಕೆಂದರೆ ಈ ಮೊದಲು ನಾಲ್ಕು ದಿನಕ್ಕೂ ಅಧಿಕ ಅಥವಾ ಒಂದು ವಾರ ಸಮಯವನ್ನು ತೆಗೆದುಕೊಳ್ಳಲಾಗುತ್ತಿತ್ತು. ಗಮನಿಸಬೇಕಾದ ವಿಷಯ ಏನೆಂದರೆ ಮೆಟ್ರೋ ಮತ್ತು ನಾನ್-ಮೆಟ್ರೋ ನಗರಗಳಲ್ಲಿಯೂ ಈ ಸೇವೆ ಲಭ್ಯ ಇರಲಿದೆ. ಹಾಗಿದ್ರೆ, ನಿಖರವಾಗಿ ಯಾವೆಲ್ಲಾ ನಗರಗಳಲ್ಲಿ ಈ ಸೇಲೆ ಲಭ್ಯ ಇರಲಿದೆ?, ಇದು ಎಂದಿನಿಂದ ಆರಂಭ ಎಂಬ ಮಾಹಿತಿ ಇಲ್ಲಿದೆ ನೋಡಿ.

ಫ್ಲಿಪ್‌ಕಾರ್ಟ್‌ನಿಂದ ಒಂದೇ ದಿನದಲ್ಲಿ ಡೆಲಿವರಿ: ಫ್ಲಿಪ್‌ಕಾರ್ಟ್‌ನ ಈ ಹೊಸ ಕ್ರಮವು ಆರಂಭದಲ್ಲಿ ಅಹಮದಾಬಾದ್, ಬೆಂಗಳೂರು, ಭುವನೇಶ್ವರ್, ಕೊಯಮತ್ತೂರು, ಚೆನ್ನೈ, ದೆಹಲಿ, ಗುವಾಹಟಿ, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತ್ತಾ, ಲಕ್ನೋ, ಲುಧಿಯಾನ, ಮುಂಬೈ, ನಾಗ್ಪುರ, ಪುಣೆ, ಪಾಟ್ನಾ, ರಾಯ್‌ಪುರ, ಸಿಲಿಗುರಿ ಮತ್ತು ವಿಜಯವಾಡ ಸೇರಿದಂತೆ ನಗರಗಳಾದ್ಯಂತ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ.
ಈ ಉಪಕ್ರಮವು ಫೆಬ್ರವರಿಯಿಂದ ಆರಂಭ ಆಗಲಿದೆ ಎಂದು ಫ್ಲಿಪ್‌ಕಾರ್ಟ್ ಅಧಿಕಾರಿಗಳು ತಿಳಿಸಿದ್ದು, ದೇಶಾದ್ಯಂತ ಹೆಚ್ಚಿನ ಗ್ರಾಹಕರಿಗೆ ಸೇವೆ ನೀಡಲು ಮುಂದಿನ ಹಲವಾರು ತಿಂಗಳುಗಳಲ್ಲಿ ಇನ್ನೂ ಹೆಚ್ಚಿನ ನಗರಗಳನ್ನು ಸೇರಿಸಿಕೊಳ್ಳಲಾಗುತ್ತದೆ ಎಂದು ಮಾಹಿತಿ ತಿಳಿದುಬಂದಿದೆ. ಅಲ್ಲದೆ ಗ್ರಾಹಕರು ಕೇವಲ ಮೆಟ್ರೋ ನಗರಗಳಲ್ಲದೇ, ಮೆಟ್ರೋ ಅಲ್ಲದ ನಗರಗಳಲ್ಲೂ ಸಹ ಈ ಸೇವೆ ಪಡೆಯಬಹುದಾಗಿದೆ.

ಇನ್ನು ದೇಶದ ಎಲ್ಲಾ ಕಡೆಯಿಂದ ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಲು ಜನರು ಇಷ್ಟಪಡುತ್ತಾರೆ ಎಂದು ಪರಿಗಣಿಸಿ ನಾವು 20 ನಗರಗಳಿಗೆ ಒಂದೇ ದಿನ ವಿತರಣೆಯನ್ನು ಒದಗಿಸಲು ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ಗ್ರಾಹಕರ ತೃಪ್ತಿಯಲ್ಲಿ ಮುಂಚೂಣಿಯಲ್ಲಿ ಉಳಿಯುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತೇವೆ ಎಂದು ಫ್ಲಿಪ್‌ಕಾರ್ಟ್ ಗ್ರೂಪ್‌ನ ಗ್ರಾಹಕ ಅನುಭವ ಮತ್ತು ಮರುಕಾಮರ್ಸ್ ವ್ಯಾಪಾರದ ಪೂರೈಕೆ ಸರಪಳಿಯ ಮುಖ್ಯಸ್ಥ ಹೇಮಂತ್ ಬದ್ರಿ ಹೇಳಿದ್ದಾರೆ.
ಗ್ರಾಹಕರನ್ನು ಸಂತೋಷಪಡಿಸಲು ಹೆಚ್ಚಿನ ನಗರಗಳನ್ನು ಸೇರಿಸಲಿದ್ದೇವೆ. ಇದಕ್ಕಾಗಿ ನಮ್ಮ ಕೆಲಸ ಆರಂಭ ಆಗಲಿದೆ. ಈ ಉಪಕ್ರಮವು ಗ್ರಾಹಕರಿಗೆ ಒಂದೇ ದಿನದಲ್ಲಿ ಮೊಬೈಲ್ ಫೋನ್‌ಗಳು, ಫ್ಯಾಷನ್, ಸೌಂದರ್ಯ ಉತ್ಪನ್ನಗಳು, ಲೈಫ್‌ಸ್ಟೈಲ್, ಪುಸ್ತಕಗಳು, ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳಂತಹ ಉತ್ಪನ್ನಗಳ ಆರ್ಡರ್‌ಗಳನ್ನು ಸ್ವೀಕರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಫ್ಲಿಪ್‌ಕಾರ್ಟ್ ತನ್ನ ಪೂರೈಕೆ ಸರಪಳಿಯನ್ನು ಬಳಕೆ ಮಾಡಿಕೊಂಡು ಪೂರೈಸುವಿಕೆ ಕೇಂದ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲಿದೆ. ಈ ಮೂಲಕ ಒಂದೇ ದಿನದ ವಿತರಣೆಯನ್ನು ಸಾಧಿಸುತ್ತದೆ. ನಿಖರವಾದ ಮಾರ್ಗ ಯೋಜನೆ, ಆಪ್ಟಿಮೈಸ್ ಮಾಡಿದ ವಿತರಣಾ ಮಾರ್ಗಗಳು ಮತ್ತು ಎಮ್‌ಎಲ್ ಮಾದರಿಗಳ ಮೂಲಕ ವೇಗವಾಗಿ ವಿಂಗಡಣೆ ಮಾಡುವ ಮೂಲಕ, ಫ್ಲಿಪ್‌ಕಾರ್ಟ್ ಹತ್ತಿರದ ಕೇಂದ್ರದಿಂದ ಆರ್ಡರ್‌ಗಳನ್ನು ಪೂರೈಸುವುದನ್ನು ಖಚಿತಪಡಿಸುತ್ತದೆ.
ಇನ್ನು ಫ್ಲಿಪ್‌ಕಾರ್ಟ್ ಇತರೆ ವಿತರಣಾ ಆಯ್ಕೆಗಳನ್ನು ಸಹ ನೀಡುತ್ತದೆ, ಅದೇನೆಂದರೆ ಫ್ಲಿಪ್‌ಕಾರ್ಟ್ ಕ್ವಿಕ್(Flipkart Quick). ಇದು ಹೈಪರ್‌ಲೋಕಲ್ ಡೆಲಿವರಿ ಸೇವೆಯಾಗಿದ್ದು, 90 ನಿಮಿಷಗಳಲ್ಲಿ 2,500 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಲುಪಿಸುತ್ತದೆ. ಇದು ದಿನಸಿ, ಎಲೆಕ್ಟ್ರಾನಿಕ್ಸ್, ಮಗುವಿನ ಆರೈಕೆ ಮತ್ತು ಹೆಚ್ಚಿನದನ್ನು ಹೊಂದಿರುತ್ತದೆ.


Click it and Unblock the Notifications








