Home
ಸುದ್ದಿಜಾಲ

iPhone: ಐಫೋನ್ 15 ಗೆ 12,000 ರೂ.ಗಿಂತ ಹೆಚ್ಚಿನ ರಿಯಾಯಿತಿ! ಎಲ್ಲಿ ಈ ಆಫರ್?

ಐಫೊನ್‌ (iPhone) ಸೇರಿದಂತೆ ಇತರೆ ಪ್ರೀಮಿಯಂ ಫೋನ್‌ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಇದೆ. ಅದರಲ್ಲೂ ಐಫೋನ್‌ಗಳನ್ನು ಹೇಗಾದರೂ ಮಾಡಿ ಖರೀದಿ ಮಾಡಲೇಬೇಕು ಅನ್ನೋ ಗ್ರಾಹಕ ವಲಯ ಭಾರತದಲ್ಲಿ ಇದ್ದು, ಈ ಕಾರಣಕ್ಕೆ ಇಲ್ಲಿ ಈ ಫೋನ್‌ಗಳು ಭದ್ರ ನೆಲೆ ಕಂಡುಕೊಂಡಿವೆ. ಈ ಬೆಳವಣಿಗೆ ನಡುವೆ ಈಗ ಹೊಸ ಐಫೋನ್‌ಗೆ 12,000 ರೂ.ಗಿಂತ ಹೆಚ್ಚಿನ ರಿಯಾಯಿತಿ ಸಿಗುತ್ತಿದೆ.

ಹೌದು, ಐಫೋನ್ 15 (iPhone 15) ಅನ್ನು ಇದೀಗ ಭಾರೀ ಆಫರ್‌ನೊಂದಿಗೆ ಖರೀದಿ ಮಾಡಬಹುದಾಗಿದೆ. ಪ್ರೇಮಿಗಳ ದಿನದ ಹಿನ್ನೆಲೆ ಈ ಸ್ಮಾರ್ಟ್‌ಫೋನ್ ಜೊತೆಗೆ ಇತರೆ ಸ್ಮಾರ್ಟ್‌ಫೋನ್‌ಗಳನ್ನೂ ಸಹ ಆಫರ್ ಬೆಲೆಗೆ ನೀಡಲಾಗುತ್ತಿದೆ. ಇದರಿಂದ ನಿಮ್ಮ ಸಂಗಾತಿಗೆ ಉತ್ತಮ ಉಡುಗೊರೆ ನೀಡಲು ಅನುವು ಮಾಡಿಕೊಡಲಾಗಿದೆ. ಹಾಗಿದ್ರೆ, ಈ ಆಪಲ್‌ ಫೋನ್‌ಗೆ ಏನೆಲ್ಲಾ ಆಫರ್ ಇದೆ?, ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಐಫೋನ್ 15 ಗೆ 12,000 ರೂ.ಗಿಂತ ಹೆಚ್ಚಿನ ರಿಯಾಯಿತಿ! ಎಲ್ಲಿ ಈ ಆಫರ್?

ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಆಫರ್: ಪ್ರಮುಖ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌(Flipkart) ಇದೀಗ ಐಫೋನ್ 15 ಸೇರಿದಂತೆ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತಿದೆ. ಈ ವಿಶೇಷ ಸೇಲ್‌ ಫೆಬ್ರವರಿ 9 ರಿಂದ ಫೆಬ್ರವರಿ 15 ರವರೆಗೆ ಲೈವ್ ಆಗಿರಲಿದೆ. ಹಾಗೆಯೇ ಈ ಸೇಲ್‌ ಅನ್ನು ಮೊಬೈಲ್ ಬೊನಾನ್ಜಾ ಎಂದು ಕರೆಯಲಾಗಿದೆ.

ಈ ವಿಶೇಷ ಸೇಲ್‌ನಲ್ಲಿ 63,999ರೂ.ಗಳ ಬೆಲೆ ಆರಂಭದೊಂದಿಗೆ ಐಫೋನ್ 15 ಅನ್ನು ಖರೀದಿ ಮಾಡಬಹುದಾಗಿದೆ. ಈ ಫೋನ್‌ಗಳ ಸಾಮಾನ್ಯ ದರ 79,900 ರೂ.ಗಳಾಗಿದೆ. ಅದರಂತೆ ಈಗ ಐಫೋನ್‌ 15 128GB ಸ್ಟೋರೇಜ್ ವೇರಿಯಂಟ್‌ ಅನ್ನು 63,999 ರೂ.ಗಳಿಂದ ಖರೀದಿ ಮಾಡಬಹುದಾಗಿದೆ. ಅಂದರೆ ಬ್ಯಾಂಕ್ ಕೊಡುಗೆಗಳಿಲ್ಲದೆ 11901 ರೂ.ಗಳ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಆದಾಗ್ಯೂ, ಬಳಕೆದಾರರು ಬ್ಯಾಂಕ್‌ ಬಾಬ್‌ ಕಾರ್ಡ್‌ ಮೂಲಕ 10 ರಷ್ಟು ರಿಯಾಯಿತಿಯನ್ನು ಪಡೆಯಬಹುದು.

ಐಫೋನ್ 15 ಗೆ 12,000 ರೂ.ಗಿಂತ ಹೆಚ್ಚಿನ ರಿಯಾಯಿತಿ! ಎಲ್ಲಿ ಈ ಆಫರ್?

ಫ್ಲಿಪ್‌ಕಾರ್ಟ್ ಬಾಬ್ ಕಾರ್ಡ್‌ನೊಂದಿಗೆ ಇಎಂಐ ಆಯ್ಕೆಯ ಮೇಲೆ ಶೇಕಡಾ 10 ರಷ್ಟು ರಿಯಾಯಿತಿ ಮತ್ತು ಸಿಟಿ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಇಎಂಐ ವ್ಯವಹಾರದ ಮೇಲೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಜೊತೆಗೆ ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್ ಕಾರ್ಡ್ ಬಳಕೆದಾರರು 5 ಕ್ಯಾಶ್‌ಬ್ಯಾಕ್ ಸಹ ಪಡೆದುಕೊಳ್ಳಬಹುದಾಗಿದೆ. ಈ ವೇಳೆ ನಿಮ್ಮ ಹಳೆಯ ಐಫೋನ್ ಅನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳಲು ಮುಂದಾದರೆ 54,900 ರೂ.ಗಳ ವರೆಗೆ ಆಫರ್ ಪಡೆಯಬಹುದಾಗಿದೆ.

ಇದರಲ್ಲಿ ಗಮನಿಸಬೇಕಾದ ಮಾಹಿತಿ ಏನೆಂದರೆ ನೀವು ಸೇಲ್‌ ಮಾಡುತ್ತಿರುವ ಫೋನ್‌ನ ಸ್ಥಿತಿ ಮತ್ತು ಮಾದರಿಯನ್ನು ಅವಲಂಬಿಸಿ ಬೆಲೆಯನ್ನು ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ ನೀವು ದೋಷರಹಿತ ಸ್ಥಿತಿಯಲ್ಲಿರುವ ನಿಮ್ಮ ಹಳೆಯ ಐಫೋನ್‌ 13 ಅನ್ನು ಸೇಲ್‌ ಮಾಡಲು ಮುಂದಾಗಿದ್ದರೆ 26,000 ರೂ.ವರೆಗೆ ರಿಯಾಯಿತಿ ಪಡೆಯಬಹುದಾಗಿದೆ ಅಲ್ಲದೆ ಈ ವೇಳೆ ಐಫೋನ್‌ 14 ಪ್ರೊ ಮ್ಯಾಕ್ಸ್‌ ನ ಟ್ರೇಡ್-ಇನ್‌ನೊಂದಿಗೆ ಗರಿಷ್ಠ ರಿಯಾಯಿತಿ ಸಿಗಲಿದೆ.

ಈ ವಿಶೇಸ ಸೇಲ್‌ನಲ್ಲಿ ಐಫೋನ್ 15 ಅನ್ನು ಖರೀದಿಸಲು ಕಾರಣಗಳು:
ನೀವು ಹೊಸ ಫೋನ್ ಖರೀದಿಸಲು ಅಥವಾ ಐಫೋನ್ ವಿಭಾಗಕ್ಕೆ ಎಂಟ್ರಿ ಕೊಡಬೇಕು ಎಂದು ಯೋಚಿಸುತ್ತಿದ್ದರೆ, ಇದು ಪರಿಪೂರ್ಣ ಅವಕಾಶವಾಗಿದೆ. ಹೊಸ ಐಫೋನ್‌ 15 ಇತ್ತೀಚಿನ ಜನ್ ಆಪಲ್‌ ಡಿವೈಸ್‌ ಆಗಿದೆ ಮತ್ತು ಕಂಪನಿಯು ಕ್ಯುರೇಟೆಡ್ ಪ್ರೀಮಿಯಂ ಅನುಭವವನ್ನು ನೀಡುತ್ತದೆ.

ಐಫೋನ್ 15 ಗೆ 12,000 ರೂ.ಗಿಂತ ಹೆಚ್ಚಿನ ರಿಯಾಯಿತಿ! ಎಲ್ಲಿ ಈ ಆಫರ್?

ಈ ಫೋನ್‌ನ ಡಿಸ್‌ಪ್ಲೇ 6.1 ಇಂಚುಗಳಷ್ಟು ಗಾತ್ರದಲ್ಲಿದೆ ಮತ್ತು ಐದು ವಿಭಿನ್ನ ಬಣ್ಣಗಳಾದ ಗುಲಾಬಿ, ಹಳದಿ, ಹಸಿರು, ನೀಲಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯ ಇದೆ. ಈ ಐಫೋನ್ 14 ಪ್ರೊ ಸರಣಿಯಲ್ಲಿ ಮೊದಲು ಪರಿಚಯಿಸಲಾದ ಡೈನಾಮಿಕ್ ಐಲ್ಯಾಂಡ್ ನಾಚ್ ಹೊರತುಪಡಿಸಿ ವಿನ್ಯಾಸವು ಹಿಂದಿನ ಐಫೋನ್ ಮಾದರಿಗಳಿಗೆ ಹೋಲುತ್ತದೆ. ಜೊತೆಗೆ ಐಫೋನ್ 14 ನ 12-ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸಿಸ್ಟಮ್‌ಗೆ ಹೋಲಿಸಿದರೆ ಇದು 48 ಮೆಗಾಪಿಕ್ಸೆಲ್ ಮುಖ್ಯ ಸೆನ್ಸರ್‌ ಆಯ್ಕೆ ಪಡೆದಿದೆ.

ಈ ನಡುವೆ ಪ್ರೊಸೆಸರ್ ಮತ್ತೊಂದು ಅಪ್‌ಗ್ರೇಡ್ ಆಗಿದೆ. ಐಫೋನ್‌ 15 A16 ಬಯೋನಿಕ್ ಚಿಪ್‌ನಲ್ಲಿ ಕೆಲಸ ಮಾಡಲಿದ್ದು, ಐಫೋನ್‌ 14 ಮತ್ತು ಐಫೋನ್‌ 14 ಪ್ಲಸ್‌ ನಲ್ಲಿ ಬಳಸಿದ A15 ಚಿಪ್‌ಗಿಂತ ವೇಗವಾಗಿ ಮತ್ತು ಶಕ್ತಿಯುತವಾಗಿದೆ. A16 ಚಿಪ್ ಅನ್ನು ಹಿಂದೆ ಪ್ರೊ ಮಾದರಿಗಳಿಗೆ ಮಾತ್ರ ನೀಡಲಾಗಿತ್ತು. ಉಳಿದಂತೆ ಈ ಫೋನ್ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದ್ದು, ಉತ್ತಮ ಬ್ಯಾಟರಿ ಬ್ಯಾಕಪ್‌ ಪಡೆದಿದೆ.

Best Mobiles in India

English summary
iPhone 15 can now be bought with a huge offer on flipkart Valentine's Day sale. Along with this smartphone, other smart phones are also being offered.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+