Flipkart: ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್ 2023 ಆರಂಭ ! ಐಫೋನ್ 14, ಪಿಕ್ಸೆಲ್ 7 ಜೊತೆ ಹಲವು ಫೋನ್‌ಗಳಿಗೆ ಆಫರ್
ಫ್ಲಿಪ್‌ಕಾರ್ಟ್ (Flipkart) ಆಗಾಗ್ಗೆ ವಿಶೇಷ ಸೇಲ್‌ಗಳನ್ನು ಆಯೋಜನೆ ಮಾಡುವ ಮೂಲಕ ಸ್ಮಾರ್ಟ್ ಗ್ಯಾಜೆಟ್‌ಗಳಿಗೆ ಭರ್ಜರಿ ಆಪರ್ ಗಳನ್ನು ಘೋಷಣೆ ಮಾಡುತ್ತಲೇ ಇರುತ್ತದೆ. ಅದರಂತೆ ಈಗ ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್ 2023 (Flipkart Year End sale 2023) ಬಗ್ಗೆ ಘೋಷಣೆ ಮಾಡಿದ್ದು, ಈ ಮೂಲಕ ಐಫೋನ್ 14, ಪಿಕ್ಸೆಲ್ 7 ಫೋನ್ ಸೇರಿದಂತೆ ಅನೇಕ ಫೋನ್‌ಗಳಿಗೆ ದೊಡ್ಡ ಮಟ್ಟದ ಆಫರ್ ನೀಡಲಿದೆ.
ಹೌದು, ಫ್ಲಿಪ್‌ಕಾರ್ಟ್ ಇದೀಗ ಬಿಗ್ ಇಯರ್ ಎಂಡ್ ಸೇಲ್ ಅನ್ನು ಘೋಷಣೆ ಮಾಡಿದೆ. ಇದು ಡಿಸೆಂಬರ್ 9 ರಂದು ಅಂದರೆ ನಾಳೆಯಿಂದ ಪ್ರಾರಂಭವಾಗುತ್ತದೆ ಹಾಗೂ ಡಿಸೆಂಬರ್ 16 ರವರೆಗೆ ಮುಂದುವರಿಯುತ್ತದೆ. ವಿಶೇಷ ಏನೆಂದರೆ ಎಂದಿನಂತೆ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯತ್ವ (Flipkart Plus Membership) ಹೊಂದಿರುವ ಬಳಕೆದಾರರು ಒಂದು ದಿನ ಮುಂಚಿತವಾಗಿ ಈ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಈ ವಿಶೇಷ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಆಫರ್ ಇದೆ ಅನ್ನೋದನ್ನು ತಿಳಿಯೋಣ ಬನ್ನಿ.

ಫ್ಲಿಪ್‌ಕಾರ್ಟ್ ಬಿಗ್ ಇಯರ್ ಎಂಡ್ ಸೇಲ್: ಈ ವಿಶೇಷ ಸೇಲ್‌ನಲ್ಲಿ ಐಫೋನ್ 14, ನಥಿಂಗ್ ಫೋನ್ (2), ಪಿಕ್ಸೆಲ್ 7, ಮೊಟೊ G54 5G, ರಿಯಲ್‌ಮಿ C53, ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G, ಪೊಕೊ M6 ಪ್ರೊ 5G, ಮೊಟೊರೊಲಾ ಎಡ್ಜ್ 40 ನಿಯೋ, ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5G ಸೇರಿದಂತೆ ಅನೇಕ ಫೋನ್‌ಗಳನ್ನು ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ.
ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್‌ಗೆ (Samsung Galaxy S22 smartphone) ದೊಡ್ಡ ಮೊತ್ತದ ಆಫರ್ ಇದೆ ಎಂದು ತಿಳಿದುಬಂದಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ನ ಟೀಸರ್‌ನಲ್ಲಿ ಉಲ್ಲೇಖ ಈ ಫೋನ್ ದೊಡ್ಡ ಮಟ್ಟದ ಆಫರ್ ಪಡೆಯಲಿದೆ ಎನ್ನಲಾಗಿದೆ. ಈಗಾಗಲೇ ಈ ಫೋನ್ 40,000ರೂ.ಗಳಿಗೆ ಲಭ್ಯವಿದೆ. ಈ ಫೋನ್‌ನ ಸಾಮಾನ್ಯ ದರ 49,999ರೂ.ಗಳಾಗಿದೆ. ಆದರೆ ಗ್ಯಾಲಕ್ಸಿ S 23 ಸರಣಿಯಲ್ಲಿ ಈ ರೀತಿಯ ಆಫರ್ ಇರಲಿದೆಯೇ ಅನ್ನೋದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಫ್ಲಿಪ್‌ಕಾರ್ಟ್ ನಲ್ಲಿ ಐಫೋನ್ 14 (iPhone 14) ಅನ್ನು ಆಫರ್ ಬೆಲೆಯೊಂದಿಗೆ ಲಿಸ್ಟ್ ಮಾಡಲಾಗಿದೆ. ಅದಾಗ್ಯೂ ಹೊಸ ಐಫೋನ್ 15 (iPhone 15 ) ಸಹ ಈ ವೇಳೆ ಆಫರ್‌ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆಯಾದರೂ ಈ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಿಲ್ಲ. ಕ್ರೋಮಾ ಮತ್ತು ಇನ್‌ವೆಂಟ್ ಸ್ಟೋರ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಇತ್ತೀಚೆಗೆ ಗಮನಿಸಿದಂತೆ ಮುಂದಿನ ವರ್ಷದ ಆರಂಭದಿಂದ ಐಫೋನ್ 15 ಸರಣಿಯಲ್ಲಿ ಆಫರ್ ಲಭ್ಯವಾಗಬಹುದು ಎನ್ನಲಾಗಿದೆ.
ಈ ಸ್ಮಾರ್ಟ್‌ಫೋನ್‌ಗಳ ಹೊರತಾಗಿ, ಈ ವಿಶೇಷ ಸೇಲ್‌ನಲ್ಲಿ ಟಿವಿಗಳು ಮತ್ತು ಇತರೆ ಟೂಲ್ಸ್ ಮೇಲೆ 75 % ರಿಯಾಯಿತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಅದರಲ್ಲೂ ಚಳಿ ಆರಂಭವಾಗಿದ್ದು, ಗೀಸರ್‌ಗಳು ಮತ್ತು ವಾಟರ್ ಹೀಟರ್‌ಗಳು ಹಾಗೂ ರೂಂ ಹೀಟರ್‌ಗಳು ಸೇರಿದಂತೆ ಅನೇಕ ಸ್ಮಾರ್ಟ್ ಡಿವೈಸ್‌ಗಳನ್ನು ಅಗ್ಗದ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ಮೂಲಕ ಚಳಿಯಿಂದ ಬಚಾವ್ ಆಗುವುದಲ್ಲದೆ, ಹಣವನ್ನೂ ಉಳಿತಾಯ ಮಾಡಬಹುದಾಗಿದೆ.

ಉಳಿದಂತೆ ಇತರೆ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳು ಮತ್ತು ಡಿವೈಸ್‌ಗಳ ಶೇಕಡಾ 50 ರಿಂದ 80 ರಷ್ಟು ರಿಯಾಯಿತಿ ಸಿಗಲಿದೆ ಎಂದು ತಿಳಿದುಬಂದಿದೆ. ವಿಷಯ ಏನೆಂದರೆ ಕಳೆದ ಬಿಗ್ ಇಯರ್ ಎಂಡ್ ಸೇಲ್‌ನಲ್ಲಿ, ಲ್ಯಾಪ್‌ಟಾಪ್‌ಗಳನ್ನು 9,990 ರೂ.ಗಳ ಆರಂಭಿಕ ಬೆಲೆಯೊಂದಿಗೆ ಸೇಲ್‌ಗೆ ಮುಕ್ತ ಮಾಡಿತ್ತು. ಅದರಂತೆ ಈ ಬಾರಿಯೂ ಸಹ ಇದೇ ರೀತಿ ಕಡಿಮೆ ದರದಲ್ಲಿ ಈ ರೀತಿಯ ಡಿವೈಸ್‌ಗಳನ್ನು ಖರೀದಿ ಮಾಡಲು ಅನುಕೂಲ ಮಾಡಿಕೊಡಲಿದೆ ಎಂಬ ಮಾಹಿತಿ ತಿಳಿದುಬಂದಿದೆ. ಈ ವಿಶೇಷ ಸೇಲ್‌ನಲ್ಲಿ ಗ್ರಾಹಕರು ನೇರ ಆಫರ್‌ನೊಂದಿಗೆ ಬ್ಯಾಂಕ್ ಆಪರ್ ಹಾಗೂ ಕ್ಯಾಶ್ ಬ್ಯಾಕ್ ಆಫರ್ ಅನ್ನೂ ಸಹ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








