ಮಾರುಕಟ್ಟೆಯ ದರ ಸಮರದಿಂದ ದೂರ ಉಳಿಯಲು ಸೋನಿ ನಿರ್ಧಾರ!.ಮುಂದಿನ ನಡೆ ಏನು?

|

ಚೀನಾ ಮೂಲದ ಕಂಪನಿಗಳಿಗೆ ಭಾರತೀಯ ಮಾರುಕಟ್ಟೆಯೆ ಆಧಾರ ಎನ್ನುವಂತಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಕಂಪನಿಗಳ ನಡುವೆ ಪೈಪೋಟಿ ತೀವ್ರವಾಗಿದ್ದು, ಚೀನಾ ಕಂಪನಿಗಳು ಗಟ್ಟಿಯಾಗಿ ನೆಲೆಯೂರಬೇಕೆಂದು ಕೊಂಡಿದ್ದರೆ, ಪ್ರಮುಖ ಕಂಪನಿಗಳು ತಮ್ಮ ಅಸ್ಥಿತ್ವ ಉಳಿಸಿಕೊಳ್ಳು ಹೋರಾಡಬೇಕಾದ ಅನಿವಾರ್ಯವಿದೆ. ಆದರೆ ಸೋನಿ ದರ ಸಮರದ ಹೋರಾಟದಿಂದ ಹಿಂದೆ ಸರಿದಿದೆ.

ಮಾರುಕಟ್ಟೆಯ ದರ ಸಮರದಿಂದ ದೂರ ಉಳಿಯಲು ಸೋನಿ ನಿರ್ಧಾರ!.ಮುಂದಿನ ನಡೆ ಏನು?

ಹೌದು, ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಅಗ್ಗದ ಬೆಲೆಯಲ್ಲಿ ಉತ್ಪನ್ನಗಳನ್ನು ಪರಿಚಯಿಸಿ ಮಾರುಕಟ್ಟೆಯನ್ನು ತಮ್ಮ ಹಿಡಿತಕ್ಕೆ ಪಡೆದುಕೊಳ್ಳುತ್ತಲಿದ್ದು, ಹೀಗಾಗಿ ಸೋನಿ ಸೇರಿದಂತೆ ಪ್ರಮುಖ ಕಂಪನಿಗಳು ಹಿನ್ನಡೆ ಅನುಭವಿಸುವಂತಾಗಿದೆ. ಜೊತೆಗೆ ಆನ್‌ಲೈನ್‌ ಉತ್ಪನ್ನಗಳಗಳು ಸಹ ಗ್ರಾಹಕರನ್ನು ಸೆಳೆಯುತ್ತಿದ್ದು, ಪ್ರಮುಖ ಕಂಪನಿಗಳು ಹೆಚ್ಚಿನ ಬೆಲೆ ಇಳಿಸಲಾಗದ ಪರಿಸ್ಥಿತಿಗೆ ಬಂದು ನಿಂತಿವೆ.

ಮಾರುಕಟ್ಟೆಯ ದರ ಸಮರದಿಂದ ದೂರ ಉಳಿಯಲು ಸೋನಿ ನಿರ್ಧಾರ!.ಮುಂದಿನ ನಡೆ ಏನು?

ಚೀನಾ ಮೂಲಕದ ಕಂಪನಿಗಳ ಮತ್ತು ಆನ್‌ಲೈನ್‌ ಕಂಪನಿಗಳೊಂದಿಗೆ ದರ ಸಮರ ಮಾಡದಿಲು ಸೋನಿ ಕಂಪನಿ ನಿರ್ಧರಿಸಿದೆ ಹಾಗೂ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಗಳಿಸುವ ಗುರಿಯನ್ನು ಹೊಂದಿದೆ ಎಂದು ಕಂಪನಿಯ ಮ್ಯಾನೆಜಿಂಗ್ ಡೈರೆಕ್ಟರ್ ಸುನೀಲ್ ನಯ್ಯರ್ ಹೇಳಿದ್ದಾರೆ. ಹಾಗಾದರೇ ಸೋನಿ ಕಂಪನಿಯ ಮುಂದಿನ ನಡೆಯ ಕೆಲವು ಮಾಹಿತಿಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಸೋನಿಯೇ ಮುಂದಿದೆ

ಸೋನಿಯೇ ಮುಂದಿದೆ

ಕಳೆದ ವರ್ಷಕ್ಕೆ ಹೋಲಿಸಿದರೆ ಸೋನಿ ಪ್ರೀಮಿಯಮ್ ಸೆಗ್ಮೆಟ್‌ ಸ್ಮಾರ್ಟ್‌ಟಿವಿಯಲ್ಲಿ ತನ್ನ ಸ್ಥಾನ ಗಟ್ಟಿ ಉಳಿಸಿಕೊಂಡಿದೆ. 55 ಇಂಚು ಮತ್ತು 55 ಇಂಚಿನ ನಂತರದ ಡಿಸ್‌ಪ್ಲೇ ಮಾದರಿಯ ಸ್ಮಾರ್ಟ್‌ಟಿವಿಗಳಲ್ಲಿ ಕಂಪನಿಯು ಶೇ.40%ರಷ್ಟು ಮುಂದಿದೆ. ಹಾಗೇ ಸೌಂಡ್‌ಬಾರ್‌, ನೋಯ್ಸ್‌ಲೆಸ್‌ ಹೆಡ್‌ಪೋನ್‌ಗಳಲ್ಲಿಯೂ ಲಾಭದತ್ತವಿದೆ.

ಬಿಗ್‌ ಸ್ಕ್ರೀನ್‌ ಸ್ಮಾರ್ಟ್‌ಟಿವಿ ದರ ಇಳಿಸಲ್ಲ

ಬಿಗ್‌ ಸ್ಕ್ರೀನ್‌ ಸ್ಮಾರ್ಟ್‌ಟಿವಿ ದರ ಇಳಿಸಲ್ಲ

ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳು ಮತ್ತು ಆನ್‌ಲೈನ್ ಕಂಪನಿಗಳು ಅಗ್ಗದ ದರದಲ್ಲಿ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡುತ್ತಿವೆ. ಆದರೆ ಉತ್ತಮ ಗುಣಮಟ್ಟ ಉತ್ಪನ್ನಗಳನ್ನು ಹೊಂದಿರುವ ಸೋನಿ ದರ ಸಮರಕ್ಕೆ ಇಳಿಯಲಾರದು. ತನ್ನ ಬಿಗ್‌ ಡಿಸ್‌ಪ್ಲೇಯ ಸ್ಮಾರ್ಟ್‌ಟಿವಿಗಳ ದರ ಸಹ ಇಳಿಸದಿರಲು ಕಂಪನಿ ನಿರ್ಧರಿಸಿದ್ದು, ತನ್ನ ಲೀಡರ್‌ಶಿಫ್ ಸ್ಥಾನ ಕಾಯ್ದುಕೊಳ್ಳಲಿದೆ.

ಮೇಡ್ ಇನ್‌ ಇಂಡಿಯಾ

ಮೇಡ್ ಇನ್‌ ಇಂಡಿಯಾ

ಮೇಡ್‌ ಇನ್‌ ಇಂಡಿಯಾ ಕಾನ್ಸೆಪ್ಟ್‌ಗೆ ಬೆಂಬಲ ನೀಡಿರುವ ಸೋನಿ ಕಂಪನಿಯು ದೇಶದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪನ್ನಗಳನ್ನು ಉತ್ಪದನೆ ಮಾಡಲು ಯೋಜಿಸಿದೆ. ಈಗಾಗಲೇ ಸ್ಮಾರ್ಟ್‌ಟಿವಿ ಉತ್ಪನ್ನಗಳ ಉತ್ಪಾದನೆಯಲ್ಲಿ ಹೆಚ್ಚಳವಾಗಿದ್ದು, ಹಾಗೇ ಉಳಿದ ಉತ್ಪನ್ನಗಳ ಉತ್ಪಾದನೆಯ ಪ್ರಮಾಣವನ್ನು ವೃದ್ಧಿಸಲಿದೆ.

4K ಟಿವಿ ಅಭಿವೃದ್ದಿ

4K ಟಿವಿ ಅಭಿವೃದ್ದಿ

ಕಂಪನಿಯು ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 4K ಸ್ಮಾರ್ಟ್‌ಟಿವಿಯ ಅಭಿವೃದ್ದಿ ಮಾಡುವತ್ತ ಹೆಚ್ಚಿನ ಗಮನ ನೀಡಲಿದೆ. ಚೀನಾ ಕಂಪನಿಗಳ ಸ್ಮಾರ್ಟ್‌ಟಿವಿಗಳಿಗಿಂತ ಸೋನಿ ಸ್ಮಾರ್ಟ್‌ಟಿವಿಗಳು ಹೇಗೆ ಭಿನ್ನ ಮತ್ತು ಉತ್ತಮ ಎಂಬುದರ ಬಗ್ಗೆ ಗ್ರಾಹಕರಿಗೆ ತಿಳುವಳಿಕೆ ಮೂಡಿಸುವ ಆಲೋಚನೆ ಇದೆ ಎಂದು ಸುನೀಲ್ ನಯ್ಯರ್ ಅವರು ತಿಳಿಸಿದ್ದಾರೆ.

ಭಾರತ ನಾಲ್ಕನೇ ದೊಡ್ಡ ಮಾರುಕಟ್ಟೆ

ಭಾರತ ನಾಲ್ಕನೇ ದೊಡ್ಡ ಮಾರುಕಟ್ಟೆ

ಸೋನಿ ಕಂಪನಿಗೆ ಭಾರತ ನಾಲ್ಕನೇ ದೊಡ್ಡ ಮಾರುಕಟ್ಟೆ ಆಗಿದ್ದು, ಕಂಪನಿಯ ಉತ್ಪನ್ನಗಳಿಗೆ ಇಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದರೆ ಸದ್ಯ ಚೀನಾ ಕಂಪನಿಗಳ ದರ ಸಮರ ನಡೆಸುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿವೆ. ಕಂಪನಿಯ ಲಾಭದಲ್ಲಿ ಇಳಿಕೆ ಕಂಡಿರಬಹುದು ಆದರೆ ಸೋನಿ ಕಂಪನಿಯು ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ ಮತ್ತು ಹೆಚ್ಚಿನ ಲಾಭವನ್ನು ಕಂಡುಕೊಳ್ಳು ಹೆಜ್ಜೆ ಇಡಲಿದೆ.

ಓದಿರಿ : ಏರ್‌ಟೆಲ್‌ನ ಡಿಜಿಟಲ್ ನಡೆ!..ಹೊಸದಾಗಿ 'ಇ-ಪುಸ್ತಕ' ಸೇವೆ ಆರಂಭ! ಓದಿರಿ : ಏರ್‌ಟೆಲ್‌ನ ಡಿಜಿಟಲ್ ನಡೆ!..ಹೊಸದಾಗಿ 'ಇ-ಪುಸ್ತಕ' ಸೇವೆ ಆರಂಭ!

Best Mobiles in India

English summary
Focused on profits, Sony to stay away from pricing war.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X