Home
ಸುದ್ದಿಜಾಲ

ಶೀಘ್ರವೇ ಬರಲಿದೆಯಂತೆ ಮಡುಚಬಲ್ಲ ಸ್ಕ್ರೀನ್ ಇರುವ ಸ್ಮಾರ್ಟ್‌ಫೋನ್!!

ಮಡುಚಬಲ್ಲ ಸ್ಮಾರ್ಟ್‌ಫೋನ್ ತಯಾರಿಕೆ ಪೇಟೆಂಟ್ ಪಡೆದಿರುವ ಚೀನಾದ ಮೊಬೈಲ್ ಕಂಪೆನಿಯೊಂದು ಆ ತಂತ್ರಜ್ಞಾನ ಅಭಿವೃದ್ದಿಯಲ್ಲಿ ಭಾಗಶಃ ಯಶಸ್ವಿಯಾಗಿದೆ ಎಂದು ವರದಿಯೊಂದು ಹೇಳಿದೆ.

By Bhaskar N J

ಮೊಬೈಲ್ ಜಗತ್ತು ನಾವು ಊಹಿಸಲು ಸಾಧ್ಯವಾಗದೇ ಇರುವಷ್ಟು ದಿನದಿಂದ ದಿನಕ್ಕೆ ಬೆಳವಣಿಯಾಗುತ್ತಿದೆ ಎಂಬುದು ನಿಮಗೆ ತಿಳಿದಿದೆ. ಕೇವಲ ಒಂದು ವಾರದ ಹಿಂದಷ್ಟೆ ಬಿಡುಗಡೆಯಾದ ಫೋನ್ ಫೀಚರ್ಸ್ ಇಂದು ಹಳೆಯ ಫೀಚರ್ಸ್ ಆಗಿರುತ್ತವೆ ಎಂದರೆ ಸ್ಮಾರ್ಟ್‌ಪೋನ್ ಪ್ರಪಂಚದ ಬದಲಾವಣೆಗಳನ್ನು ನಾವು ಬಹಳ ಸುಲಭವಾಗಿ ಊಹಿಸಲು ಸಾಧ್ಯವಿಲ್ಲ ಎಂದು ಹೇಳಬಹುದು.!

ಕೆಲವೇ ದಿನಗಳ ಹಿಂದಷ್ಟೆ ಅಭಿವೃದ್ದಿಯಾಗಿರುವ ಬೆಜೆಲ್ ಲೆಸ್ ಸ್ಮಾರ್ಟ್‌ಫೋನ್ ಸ್ಕ್ರೀನ್‌ಗಳು ಇನ್ನು ಸಾಮಾನ್ಯರನ್ನು ತಲುಪುವ ಮೊದಲೇ ಮೊಬೈಲ್ ಪ್ರಪಂಚ ಭಾರೀ ನಿರೀಕ್ಷೆಯನ್ನು ಹೊತ್ತಿರುವ ಮಡುಚಬಲ್ಲ ಸ್ಮಾರ್ಟ್‌ಫೋನ್ ತಯಾರಿಕೆ ಪೇಟೆಂಟ್ ಪಡೆದಿರುವ ಚೀನಾದ ಮೊಬೈಲ್ ಕಂಪೆನಿಯೊಂದು ಆ ತಂತ್ರಜ್ಞಾನ ಅಭಿವೃದ್ದಿಯಲ್ಲಿ ಭಾಗಶಃ ಯಶಸ್ವಿಯಾಗಿದೆ ಎಂದು ವರದಿಯೊಂದು ಹೇಳಿದೆ.

ಶೀಘ್ರವೇ ಬರಲಿದೆಯಂತೆ ಮಡುಚಬಲ್ಲ ಸ್ಕ್ರೀನ್ ಇರುವ ಸ್ಮಾರ್ಟ್‌ಫೋನ್!!

ಮೊಬೈಲ್ ತಯಾರಿಕೆಯಲ್ಲಿ ವಿಶ್ವದ ಮೂರನೇ ಬಹುದೊಡ್ಡ ಕಂಪೆನಿ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಹುವಾವೆ ಮಡುಚಬಲ್ಲ ಸ್ಮಾರ್ಟ್‌ಫೋನ್ ತಯಾರಿಕೆ ತಂತ್ರಜ್ಞಾನದಲ್ಲಿ ಮುಂದಡಿ ಹೆಜ್ಜೆ ಇಟ್ಟಿದೆ. ಸ್ಯಾಮ್‌ಸಂಗ್ ಮತ್ತು ಆಪಲ್ ಮೊಬೈಲ್ ಕಂಪೆನಿಗಳನ್ನು ಮೀರಿ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ತನ್ನದೇ ಚಾಪು ಮೂಡಿಸುವ ನಿಟ್ಟಿನಲ್ಲಿ ಹುವಾವೆ ಭವಿಷ್ಯದ ತಂತ್ರಜ್ಞಾನ ಅಭಿವೃದ್ದಿಯಲ್ಲಿ ತೊಡಗಿಕೊಂಡಿದೆ.

ಶೀಘ್ರವೇ ಬರಲಿದೆಯಂತೆ ಮಡುಚಬಲ್ಲ ಸ್ಕ್ರೀನ್ ಇರುವ ಸ್ಮಾರ್ಟ್‌ಫೋನ್!!

ಲ್ಯಾಪ್‌ಟಾಪ್‌ನಷ್ಟು ದೊಡ್ಡದಾದ ಸ್ಕ್ರೀನ್ ಅನ್ನು ಮಡುಚಿ ಜೇಬಿನಲ್ಲಿ ಇಟ್ಟುಕೊಳ್ಳಬಹುದಾದ ಸ್ಮಾರ್ಟ್‌ಫೋನ್ ಅನ್ನು ತಯಾರಿಸುವ ಗುರಿಯನ್ನು ಹೊತ್ತಿರುವ ವಿಶ್ವದ ಟಾಪ್ ಕಂಪೆನಿಗಳೆಲ್ಲವೂ ಈಗ ಮಡುಚಬಲ್ಲ ಸ್ಮಾರ್ಟ್‌ಫೋನ್ ತಯಾರಿಕೆಗೆ ಈಗಾಗಲೇ ಒಲವು ತೋರಿವೆ. ಹಾಗಾಗಿ, ಯಾವ ಮೊಬೈಲ್ ಕಂಪೆನಿ ಮೊದಲು ಮಡುಚಬಲ್ಲ ಸ್ಮಾರ್ಟ್‌ಫೋನ್ ತಯಾರಿಸುತ್ತದೆ ಎಂಬುದನ್ನು ಕುತೋಹಲದಿಂದ ನೋಡುವ ಸರದಿ ನಮ್ಮದು.!

ಓದಿರಿ: ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌8 ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆ ಭಾರೀ ಇಳಿಕೆ!!

Best Mobiles in India

English summary
Foldable screen smartphone coming soon! And no, it’s not from Samsung or Apple. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+