Subscribe to Gizbot

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌8 ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆ ಭಾರೀ ಇಳಿಕೆ!!

Written By:

ಸ್ಯಾಮ್‌ಸಂಗ್ ಕಂಪೆನಿಯ ನೂತನ ಗ್ಯಾಲಾಕ್ಸಿ ಎಸ್‌9 ಸರಣಿ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾದ ನಂತರ ಸ್ಯಾಮ್‌ಸಂಗ್ ಕಂಪೆನಿ ತನ್ನ ಹಳೆಯ ಗ್ಯಾಲಾಕ್ಸಿ ಸ್ಮಾರ್ಟ್‌ಪೋನ್‌ಗಳ ಬೆಲೆಗಳನ್ನು ಕಡಿಮೆ ಮಾಡಿದೆ. 2017 ರಲ್ಲಿ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿದ್ದ ಗ್ಯಾಲಾಕ್ಸಿ ಎಸ್‌8 ಮತ್ತು ಗ್ಯಾಲಾಕ್ಸಿ ಎಸ್‌8 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆಗಳು ಇಳಿಕೆಯಾಗಿವೆ.!

ಗ್ಯಾಲಾಕ್ಸಿ ಎಸ್‌8 ಸರಣಿ ಸ್ಮಾರ್ಟ್‌ಫೋನ್ ಇದೇ ಮೊದಲ ಬಾರಿಗೆ 50 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗ್ಯಾಲಾಕ್ಸಿ ಎಸ್‌8 ಸ್ಮಾರ್ಟ್‌ಫೋನ್ ಅನ್ನು ಇದೀಗ ಕೇವಲ 49,990 ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಇನ್ನು ಗ್ಯಾಲಾಕ್ಸಿ ಎಸ್‌8 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ ಕೇವಲ 53,990 ರೂಪಾಯಿಗಳಾಗಿವೆ.!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌8 ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆ ಭಾರೀ ಇಳಿಕೆ!!

ಇಂದಿಗೂ ಸಹ ತನ್ನ ಚಾಪನ್ನು ಉಳಿಸಿಕೊಂಡಿರುವ ಗ್ಯಾಲಾಕ್ಸಿ ಎಸ್‌8 ಸರಣಿ ಸ್ಮಾರ್ಟ್‌ಫೋನ್‌ಗಳು ಪ್ರಸ್ತುತ ಬೆಲೆಗೆ ಖರೀದಿಸಲು ಯೋಗ್ಯವಾಗಿದ್ದು, ಹಾಗಾದರೆ, ಭಾರೀ ಫೀಚರ್ಸ್ ಹೊಂದಿರುವ ಗ್ಯಾಲಾಕ್ಸಿ ಎಸ್‌8 ಸರಣಿ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಯಾವುವು? ಈಗ ಖರೀದಿಸಿದರೂ ಸಹ ಏನೆಲ್ಲಾ ಲಾಭವಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.8 ಇಂಚಿನ QHD ಡಿಸ್‌ಪ್ಲೇ

5.8 ಇಂಚಿನ QHD ಡಿಸ್‌ಪ್ಲೇ

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌ 8 ಸ್ಮಾರ್ಟ್‌ಫೋನಿನಲ್ಲಿ 5.8 ಇಂಚಿನ QHD ರೆಸಲ್ಯೂಷನ್ ಹೊಂದಿರುವ ಸೂಪರ್ ಆಮೋಲೈಡ್ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಇದೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌ 8 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 6.2 ಇಂಚಿನ QHD ರೆಸಲ್ಯೂಷನ್ ಹೊಂದಿರುವ ಸುಪರ್ ಆಮೋಲೈಡ್ ಡಿಸ್‌ಪ್ಲೇ ಕಾಣಬಹುದಾಗಿದೆ. ಎರಡು ಪೋನಿನ ಡಿಸ್‌ಪ್ಲೇ ರಕ್ಷಣೆಗಾಗಿ ಗೂರಿಲ್ಲ ಗ್ಲಾಸ್ 5 ನೀಡಲಾಗಿದೆ.

ಕ್ವಾಲ್ಕಮ್ 835 ಪ್ರೋಸೆಸರ್

ಕ್ವಾಲ್ಕಮ್ 835 ಪ್ರೋಸೆಸರ್

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌ 8 ಮತ್ತು ಗ್ಯಾಲೆಕ್ಸಿ ಎಸ್ 8 ಪ್ಲಸ್ ಸ್ಮಾರ್ಟ್‌ಫೋನುಗಳಲ್ಲಿ ವೇಗದ ಕಾರ್ಯನಿರ್ವಹಣೆಗಾಗಿ ಟಾಪ್‌ ಎಂಡ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 4GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಹೊಂದಿದೆ. ಅಲ್ಲದೇ ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಉತ್ತಮ ಪೋಟೋಗ್ರಫಿಗಾಗಿಯೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌8 ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ಫೋನಿನಲ್ಲಿ ಗುಣಮಟ್ಟದ ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ ಸೆಲ್ಫಿ ತೆಗೆಯುವ ಸಲುವಾಗಿ ಆಟೋ ಪೋಕಸ್ ಹೊಂದಿರುವ 8 MP ಕ್ಯಾಮೆರಾವನ್ನು ಹಿಂಭಾಗದಲ್ಲಿ 12 MP ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಒಳ್ಳೆಯ ಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯಕಾರಿಯಾಗಿದೆ.

ವಾಟರ್‌ಪ್ರೂಫ್-ಡಸ್ಟ್ ಫ್ರೂಪ್

ವಾಟರ್‌ಪ್ರೂಫ್-ಡಸ್ಟ್ ಫ್ರೂಪ್

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌8 ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ಫೋನುಗಳು IP68 ವಾಟರ್‌ಪ್ರೂಫ್ ಮತ್ತು ಡಸ್ಟ್ ಫ್ರೂಪ್ ಆಗಿದ್ದು, ನೀರಿನಲ್ಲಿ ಬಿದ್ದರು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಧೂಳಿನಲ್ಲಿ ಓಡಾಡಿದರು ಫೋನು ಏನು ಆಗುವುದಿಲ್ಲ. ಈ ಪೋನುಗಳು ಮಿಡ್‌ನೈಟ್ ಬ್ಲಾಕ್, ಆರ್ಕಿಡ್ ಗ್ರೇ, ಆರ್ಕ್ಟಿಕ್ ಸಿಲ್ವರ್, ಕೋರಲ್ ನೀಲಿ ಮತ್ತು ಮ್ಯಾಪಲ್ ಗೋಲ್ಡ್ ಬಣ್ಣಗಳಲ್ಲಿ ದೊರೆಯಲಿದೆ.

4,000ಕ್ಕೂ ಹೆಚ್ಚಿನ ಡಿಸ್ಕ್ಂಟ್ಸ್!

4,000ಕ್ಕೂ ಹೆಚ್ಚಿನ ಡಿಸ್ಕ್ಂಟ್ಸ್!

ಹೆಚ್‌ಡಿಎಫ್‌ಸಿ ಗ್ರಾಹಕರಿಗೂ ಕೂಡ ಸ್ಯಾಮ್‌ಸಂಗ್ ಭಾರಿ ಆಫರ್ ನೀಡಿದ್ದು, ಹೆಚ್‌ಡಿಎಫ್‌ಸಿ ಗ್ರಾಹಕರು ಗ್ಯಾಲಾಕ್ಸಿ ಎಸ್ 8 ಮತ್ತು ಗ್ಯಾಲಾಕ್ಸಿ ಎಸ್ 8 ಪ್ಲಸ್ ಸ್ಮಾರ್ಟ್‌ಫೋನ್‌ಗಳ ಮೇಲೆ 4,000ಕ್ಕೂ ಹೆಚ್ಚಿನ ಡಿಸ್ಕ್ಂಟ್ಸ್ ಪಡೆಯಬಹುದು ಎಂದು ಹೇಳಿದೆ.! ಆದರೆ, ಸ್ಯಾಮ್‌ಸಂಗ್ ಅಫಿಷಿಯಲ್‌ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಇನ್ನು ಪ್ರಕಟಿಸಲಾಗಿಲ್ಲ.!!

ಆಂಡ್ರಾಯ್ಡ್‌ ನ್ಯೂಗಾ!

ಆಂಡ್ರಾಯ್ಡ್‌ ನ್ಯೂಗಾ!

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌8 ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ಸ್ಮಾರ್ಟ್‌ಫೋನುಗಳು ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿವೆ, ಅಲ್ಲದೇ ಗ್ಯಾಲೆಕ್ಸಿ ಎಸ್‌8 ನಲ್ಲಿ 3,000mAh ಬ್ಯಾಟರಿ ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್‌ ನಲ್ಲಿ 3,500mAh ಯನ್ನು ಅಳವಡಿಸಲಾಗಿದೆ. ಹಾಗಾಗಿ, ಪ್ರಸ್ತುತವೂ ಗ್ಯಾಲೆಕ್ಸಿ ಎಸ್8 ಸರಣಿ ಸ್ಮಾರ್ಟ್‌ಪೋನ್‌ಗಳು ಬೆಸ್ಟ್ ಸ್ಮಾರ್ಟ್‌ಫೋನ್‌ಗಳು ಎನ್ನಬಹುದು.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung cuts prices of Galaxy S8, S8+ following launch of Galaxy S9 lineup. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot