Foldable washing machine: ಫೋಲ್ಡಬಲ್ ವಾಷಿಂಗ್ ಮೆಷಿನ್‌ನಿಂದ ಸಾಕಷ್ಟು ಅನುಕೂಲ, ಬೆಲೆಯೂ ಅಗ್ಗ!
ಸ್ಮಾರ್ಟ್‌ಗ್ಯಾಜೆಟ್‌ಗಳು ಇಂದಿನ ಜೀವನ ಶೈಲಿಗೆ ಅತ್ಯಗತ್ಯವಾಗಿದ್ದು, ಅದರಲ್ಲೂ ಫೋಲ್ಡಬಲ್ ವಾಷಿಂಗ್ ಮೆಷಿನ್ ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಇದು ಸಾಮಾನ್ಯ ವಾಷಿಂಗ್ ಮೆಷಿನ್ ನಂತಿರದೆ ವಿಶೇಷ ಶೈಲಿಯಲ್ಲಿ ಕಾಣಿಸಿಕೊಂಡಿದ್ದು, ಯುವಕರಿಗೆ, ಪಿಜಿಯಲ್ಲಿ ವಾಸ ಮಾಡುವವರು, ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸ ಮಾಡುವವರಿಗೆ ಇದು ತುಂಬಾನೆ ಪ್ರಯೋಜನಕಾರಿ.
ಹೌದು, ಒಂದು ಕಾಲದಲ್ಲಿ ಬಟ್ಟೆ ಒಗೆಯುವುದೇ ಒಂದು ದೊಡ್ಡ ಕೆಲಸವಾಗಿತ್ತು. ಬಕೆಟ್ ನೀರಿನಲ್ಲಿ ಬಟ್ಟೆಗಳನ್ನು ನೆನೆಸಿ ಇದಾದ ಅರ್ಧ ಅಥವಾ ಒಂದು ಗಂಟೆ ನಂತರ ಬಟ್ಟೆ ತೊಳೆಯುತ್ತಿದ್ದೆವು. ಆದರೀಗ ವಾಷಿಂಗ್ ಮೆಷಿನ್ಗಳ ಬಳಕೆ ಹೆಚ್ಚಾಗಿದೆ. ಆದರೂ ದೊಡ್ಡ ಗಾತ್ರದಲ್ಲಿರುವ ಅವುಗಳನ್ನು ಬೇಕೆಂದಲ್ಲಿಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಈಗ ಈ ಫೋಲ್ಡಬಲ್ ವಾಷಿಂಗ್ ಮೆಷಿನ್ (Foldable Washing Machine) ಬಂದಿವೆ. ಇವುಗಳ ಬಗ್ಗೆ ತಿಳಿದ್ರೆ ನೀವು ಖಂಡಿತಾ ವಾವ್ ಎನ್ನುತ್ತೀರಿ.

ನೀವು ಕೆಲವು ದಿನಗಳವರೆಗೆ ಹೊರಗೆ ಹೋಗುತ್ತಿದ್ದರೆ ಅಥವಾ ನೀವು ವಿದ್ಯಾರ್ಥಿಯಾಗಿದ್ದರೆ ಇವು ನಿಮಗೆ ಖಂಡಿತಾ ಪ್ರಯೋಜನ ನೀಡುತ್ತವೆ. ಯಾಕೆಂದರೆ ಇವು ಪೋರ್ಟಬಲ್ ಆಗಿದ್ದು, ಗಾತ್ರದಲ್ಲಿ ಕಾಂಪ್ಯಾಕ್ಟ್ ಆಗಿದೆ. ಈ ಮೂಲಕ ಮೆಷಿನ್ ಗಳನ್ನು ನೀವು ಎಲ್ಲಿ ಬೇಕೆಂದರೂ ಇಡಬಹುದು. ಹೀಗಾಗಿ ಇದಕ್ಕೆಂದೇ ಬೇರೆ ಸ್ಥಳಾವಕಾಶದ ಅವಶ್ಯಕತೆ ಇರುವುದಿಲ್ಲ. ಹಾಗಿದ್ರೆ, ಬನ್ನಿ ಕೆಲವು ಫೋಲ್ಡಬಲ್ ವಾಷಿಂಗ್ ವಿವರ ತಿಳಿಯೋಣ.
ಬ್ಲಿಂಗ್ ಸ್ಟೋರ್ಸ್ ಮಿನಿ ಫೋಲ್ಡಬಲ್ ವಾಷಿಂಗ್ ಮೆಷಿನ್: ಈ ವಾಷಿಂಗ್ ಮೆಷಿನ್ ಮೂಲಕ ಒಳ ಉಡುಪುಗಳು ಹಾಗೂ ಸಣ್ಣ ಪ್ರಮಾಣದ ಬಟ್ಟೆಗಳನ್ನು ತೊಳೆದುಕೊಳ್ಳಬಹುದು. ಬ್ಲಿಂಗ್ ಸ್ಟೋರ್ಸ್‌ನ ಈ ಪೋರ್ಟಬಲ್ ತೊಳೆಯುವ ಯಂತ್ರವು ಸಾಮಾನ್ಯ ತೊಳೆಯುವ ಯಂತ್ರಗಳಿಗೆ ಹೋಲಿಸಿದರೆ ಮೂರನೇ ಒಂದು ಭಾಗದಷ್ಟು ನೀರಿನ ಬಳಕೆಯನ್ನು ಉಳಿಸುತ್ತದೆ. ಜೊತೆಗೆ ವಿದ್ಯುತ್ ಉಳಿತಾಯವನ್ನೂ ಸಹ ಮಾಡುತ್ತದೆ. ಇದನ್ನು ಪ್ರಯಾಣ ಮಾಡುವಾಗ ಎಲ್ಲಿಗೆ ಬೇಕೆಂದರೂ ಸಹ ಕೊಂಡೊಯ್ಯಬಹುದು. ಇದು ಅಮೆಜಾನ್‌ನಲ್ಲಿ 3,399ರೂ.ಗಳ ಬೆಲೆ ಹೊಂದಿದೆ.

ಷೋಪೆಕಾಮ್ ಮಿನಿ ಫೋಲ್ಡಬಲ್ ಹೈ-ಫ್ರೀಕ್ವೆನ್ಸಿ ವಾಷಿಂಗ್ ಮೆಷಿನ್: ಇದೂ ಸಹ ಫೋಲ್ಡಬಲ್ ವಾಷಿಂಗ್ ಮೆಷಿನ್ ಆಗಿದ್ದು, ಇದರಲ್ಲಿ ನಿಮ್ಮ ಒಳಉಡುಪುಗಳು ಹಾಗೂ ಕೆಲವು ಸಣ್ಣ ಗಾತ್ರದ ಬಟ್ಟೆಗಳನ್ನು ತೊಳೆದುಕೊಳ್ಳಬಹುದು. ಈ ಡಿವೈಸ್ ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಉತ್ತಮ ಆಯ್ಕೆಯಾಗಿದೆ. ವಿದ್ಯಾರ್ಥಿಗಳು ಹಾಸ್ಟೆಲ್ ಅಥವಾ ಪಿಜಿಯಲ್ಲಿ ಸೀಮಿತ ಜಾಗವನ್ನು ಹೊಂದಿರುವುದರಿಂದಾಗಿ ಈ ಡಿವೈಸ್ ಹೊಂದಾಣಿಕೆ ಆಗುತ್ತವೆ. ಇದನ್ನೂ ಸಹ ಅಮೆಜಾನ್‌ನಲ್ಲಿ 4,000ರೂ.ಗಳ ಆಸುಪಾಸಿನಲ್ಲಿ ಖರೀದಿ ಮಾಡಬಹುದು.
DMR ಪೋರ್ಟಬಲ್ ಸೆಮಿ ಆಟೋಮ್ಯಾಟಿಕ್ ಟಾಪ್-ಲೋಡಿಂಗ್ ಮಿನಿ ವಾಷಿಂಗ್ ಮೆಷಿನ್: ಇದು ಪೋರ್ಟಬಲ್ ವಾಷಿಂಗ್ ಮೆಷಿನ್ ಆಗಿದ್ದು, 3 ಕೆಜಿ ಸಾಮರ್ಥ್ಯದ ಈ ಯಂತ್ರವು ಅರೆ-ಪಾರದರ್ಶಕ ಮುಚ್ಚಳದೊಂದಿಗೆ ಬರುತ್ತದೆ. ಇದರ ಮೂಲಕ ಯಂತ್ರವು ಹೇಗೆಲ್ಲಾ ತೊಳೆಯುತ್ತವೆ ಮತ್ತು ಡ್ರೈ ಮಾಡುತ್ತದೆ ಎಂಬುದನ್ನು ಮೇಲ್ವಿಚಾರಣೆ ಮಾಡಬಹುದು. ಅದರಲ್ಲೂ ಇದು ಪ್ರದಕ್ಷಿಣಾಕಾರವಾಗಿ ಮೋಟಾರ್ ಕೆಲಸ ಮಾಡಲಿದ್ದು, ಈ ಮೂಲಕ ಎಂತಹ ಕೊಳೆಯನ್ನಾದರೂ ತೆಗೆದುಹಾಕುವ ಸಾಮರ್ಥ್ಯ ಪಡೆದಿದೆ.
ರೋಕಿ ಮಿನಿ ಪೋರ್ಟಬಲ್ ಟಾಪ್ ಲೋಡ್ ವಾಷಿಂಗ್ ಮೆಷಿನ್: ಭಾರತದಲ್ಲಿನ ಅತ್ಯುತ್ತಮ ಗುಣಮಟ್ಟದ ಮಿನಿ ಪೋರ್ಟಬಲ್ ವಾಷಿಂಗ್ ಮೆಷಿನ್‌ಗಳ ಲಿಸ್ಟ್‌ನಲ್ಲಿ ಇದೂ ಸಹ ಇದೆ. ಈ ರೋಕಿ ಮಿನಿ ಪೋರ್ಟಬಲ್ ಟಾಪ್ ಲೋಡ್ ವಾಷಿಂಗ್ ಮೆಷಿನ್ 3-4 ಬಟ್ಟೆಗಳನ್ನು ಒಮ್ಮೆಲೆ ಸುಲಭವಾಗಿ ತೊಳೆಯುತ್ತದೆ. ಇದನ್ನು ಪ್ರಯಾಣದ ಸಮಯದಲ್ಲಿ ಕೊಂಡೊಯ್ಯಲು ಸುಲಭವಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗಂತೂ ಸಾಕಷ್ಟು ಪ್ರಯೋಜನ. ಇದನ್ನೂ ಸಹ ಅಮೆಜಾನ್‌ನಲ್ಲಿ 3,999ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಹಿಲ್ಟನ್ 3 ಕೆಜಿ ಸಿಂಗಲ್-ಟಬ್ ವಾಶಿಂಗ್ ಮೆಷಿನ್, ಸ್ಪಿನ್ ಡ್ರೈಯರ್: ಈ ಮೆಷಿನ್ ನಿಮಗೆ ಬಟ್ಟೆ ತೊಳೆಯುವುದು ಮಾತ್ರವಲ್ಲದೆ ಸ್ಪಿನ್ ಡ್ರೈಯರ್‌ನೊಂದಿಗೆ ಕಾಣಿಸಿಕೊಂಡಿದ್ದು, 3 ಕೆಜಿ ಲೋಡ್ ಸಾಮರ್ಥ್ಯ ಮತ್ತು 1 ಕೆಜಿ ಡ್ರೈಯರ್ ಸಾಮರ್ಥ್ಯವನ್ನು ಹೊಂದಿದೆ. ಡ್ರೈಯರ್ ಆಯ್ಕೆ ಮೂಲಕ ಬಟ್ಟೆಗಳನ್ನು 30-40% ವರೆಗೆ ಒಣಗಬಹುದು. ಈ ಮೂಲಕ ಸಣ್ಣ ಕುಟುಂಬಗಳಿಗೆ ಸೂಕ್ತವಾದ ವಾಶಿಂಗ್ ಮೆಷಿನ್ ಆಗಿದೆ. ಇದರೊಂದಿಗೆ 190w ನ ವಾಶ್ ಮತ್ತು ಸ್ಪಿನ್ ಶಕ್ತಿಯನ್ನು ಹೊಂದಿದೆ. ಇದನ್ನು ಅಮೆಜಾನ್‌ನಲ್ಲಿ 4,989ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.


Click it and Unblock the Notifications








