Home
ಸುದ್ದಿಜಾಲ

ಸ್ಮಾರ್ಟ್‌ಫೋನ್ ಬಳಸುವಾಗ ಈ ನಾಲ್ಕು ನಿಯಮ ಅನುಸರಿಸಿ, ಇಲ್ಲವಾದ್ರೆ ಜೈಲು ಸೇರ್ತೀರಾ!

ಸ್ಮಾರ್ಟ್‌ಫೋನ್‌ ನೀಡುವ ಸೌಲಭ್ಯ ಬಳಸಿಕೊಂಡು ಅದೆಷ್ಟೋ ಜನ ಸಮಾಜದಲ್ಲಿ ಉತ್ತಮರೆಸಿನಿಕೊಂಡಿದ್ದಾರೆ. ಹಾಗೆಯೆ ಹಲವು ಜನರು ಅದನ್ನು ದುರಪಯೋಗಪಡಿಸಿಕೊಂಡು ಕಾನೂನು ಕ್ರಮಕ್ಕೆ ಒಳಗಾಗಿದ್ದಾರೆ. ಈ ವಿಷಯ ಯಾಕೆ ಹೇಳ್ತಾ ಇದ್ದೇವೆ ಅಂದ್ರೆ ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ನಾವು ನೀವೆಲ್ಲಾ ಈ ನಾಲ್ಕು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಲಿಲ್ಲ ಎಂದರೆ ಜೈಲು ಸೇರೋದು ಪಕ್ಕಾ.

ಹೌದು, ಸ್ಮಾರ್ಟ್‌ಫೋನ್‌ಗಳು ಇಂದು ಕರೆ ಸೌಲಭ್ಯದೊಂದಿಗೆ ಎಲ್ಲಾ ರೀತಿಯಲ್ಲೂ ಸಹಕಾರಿಯಾಗಿವೆ. ಅಂದರೆ ಈ ಫೋನ್‌ ಬಳಕೆ ಮಾಡಿಕೊಂಡು ಜಗತ್ತಿನ ಯಾವ ಮೂಲೆಯಲ್ಲಿರುವ ವ್ಯಕ್ತಿಗಳನ್ನಾದರೂ ಸಂಪರ್ಕಿಸಬಹುದು. ಜೊತೆಗೆ ಸಮಾಜದಲ್ಲಿ ನಡೆಯುವ ವಿಷಯಗಳಿಗೆ ಪ್ರತಿಕ್ರಿಯೆ ನೀಡಬಹುದು, ಬ್ಯಾಂಕಿಂಗ್‌ ವ್ಯವಹಾರಗಳನ್ನು ಮಾಡಬಹುದು. ಅದಾಗ್ಯೂ ನಾವು ಏನು ಮಾಡಬಾರದು ಎಂಬುದನ್ನೂ ಸಹ ಈ ವೇಳೆ ತಿಳಿದುಕೊಂಡರೆ ಒಳಿತಲ್ಲವೆ.

ಸ್ಮಾರ್ಟ್‌ಫೋನ್ ಬಳಸುವಾಗ ಈ ನಾಲ್ಕು ನಿಯಮ ಅನುಸರಿಸಿ,ಇಲ್ಲವಾದ್ರೆ ಜೈಲು ಸೇರ್ತೀರಾ!

ಪ್ರಸ್ತುತ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾರೆ. ಬಳಕೆ ಮಾಡುವುದೇನೋ ಸರಿ ಆದರೆ ಈ ಫೋನ್ ಗಳನ್ನು ಬಳಸುವಾಗ ಎಚ್ಚರಿಕೆ ವಹಿಸುವುದು ಅತ್ಯಂತ ಪ್ರಮುಖವಾದ ವಿಷಯ. ಅಂದರೆ ಫೋನ್‌ಗಳ ಬಗ್ಗೆ ನಮಗೆ ನಿಖರವಾದ ನಿಯಮಗಳು ತಿಳಿದಿಲ್ಲವಾದ್ದರಿಂದ, ನಮ್ಮ ಸ್ವಂತ ಫೋನ್‌ಗಳಿಂದಲೇ ನಾವು ಸಾಕಷ್ಟು ತೊಂದರೆಗೆ ಸಿಲುಕಬಹುದು. ಹಾಗಿದ್ರೆ, ಯಾವುವು ಆ ನಾಲ್ಕು ಎಚ್ಚರಿಕೆ ವಿಷಯಗಳು ನೋಡೋಣ ಬನ್ನಿ.

ಫೋನ್‌ನಲ್ಲಿ ಮಾತನಾಡುವಾಗ ಕೆಟ್ಟ ಮಾತುಗಳ ಬಳಕೆ ಬೇಡ: ದಿನದಲ್ಲಿ ಹಲವು ಬಾರಿಯಾದೂ ನಾವು ಫೋನ್‌ನಲ್ಲಿ ಯಾರೊಂದಿಗಾದರೂ ಮಾತಾಡುತ್ತೇವೆ. ಕೆಲವು ಸಮಯ ಅಪರಿಚಿತ ಜೊತೆಗೆ ನಮ್ಮ ಸಂಪರ್ಕ ಇರುತ್ತದೆ. ಆ ವೇಳೆ ಅನಗತ್ಯವಾಗಿ ನಿಂದಿಸಬಾರದು, ಕೊಲೆ ಬೆದರಿಕೆ ಹಾಕಬಾರದು. ಯಾಕೆಂದರೆ ಸುಖಾಸುಮ್ಮನೆ ಮಾತನಾಡಿದ ಈ ಮಾತುಗಳು ಮುಂದೆ ಸಾಕ್ಷ್ಯವಾಗಿ ಬಳಕೆ ಆಗಲಿದ್ದು ನಿಮ್ಮನ್ನು ಜೈಲಿಗೆ ತಳ್ಳಲು ಕಾರಣವಾಗುತ್ತದೆ. ಜೊತೆಗೆ ಈ ರೀತಿಯ ಸಂದೇಶವನ್ನೂ ಸಹ ಯಾರಿಗೂ ಕಳುಹಿಸಬೇಡಿ.

ಸಾಮಾಜಿಕ ಮಾಧ್ಯಮವನ್ನು ಎಚ್ಚರಿಕೆಯಿಂದ ಬಳಸಬೇಕು: ಇಂದು ಹಲವಾರು ಸಾಮಾಜಿಕ ಮಾಧ್ಯಮಗಳು ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದು, ಈ ವೇಳೆ ಫೋನ್‌ನಲ್ಲಿ ಸರ್ಫಿಂಗ್ ಮಾಡುವಾಗ ಜಾಗರೂಕರಾಗಿರಬೇಕಿದೆ. ಯಾಕೆಂದರೆ ಸರ್ಕಾರ ಕೆಲವು ವಿಷಯಗಳನ್ನು ನಿಷೇಧಿಸಿದೆ. ಇದನ್ನು ವಿವರಿಸಿ ಹೇಳುವುದಾದರೆ ಯಾವುದಾದರೂ ದೇಶದಲ್ಲಿ ಯಾವುದೋ ಸಿನಿಮಾ ನಿಷೇಧಿಸಿದ್ದಾರೆ ಎಂದು ಇಟ್ಟುಕೊಳ್ಳಿ, ನೀವು ಆ ಚಲನಚಿತ್ರದ ಲಿಂಕ್ ಅನ್ನು ಬಳಕೆ ಮಾಡಿದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಭಾರತದಲ್ಲಿ ಅತ್ಯಾಚಾರಕ್ಕೊಳಗಾದವರ ಹೆಸರನ್ನು ಬಹಿರಂಗಪಡಿಸುವುದು ಸಹ ಅಪರಾಧ.

ಸ್ಮಾರ್ಟ್‌ಫೋನ್ ಬಳಸುವಾಗ ಈ ನಾಲ್ಕು ನಿಯಮ ಅನುಸರಿಸಿ,ಇಲ್ಲವಾದ್ರೆ ಜೈಲು ಸೇರ್ತೀರಾ!

ಗಲಭೆಗಳನ್ನು ಪ್ರಚೋದಿಸಬಾರದು: ಭಾರತದಲ್ಲಿ ಈ ರೀತಿಯ ಘಟನೆಗಳು ಫೋನ್‌ನಿಂದಲೇ ಹೆಚ್ಚು. ಆದರೆ ಗಲಭೆಗಳನ್ನು ಪ್ರಚೋದಿಸಲು ಸಾಮಾಜಿಕ ಮಾಧ್ಯಮ ಅಥವಾ ಯಾವುದೇ ಫೋನ್ ಬಳಕೆ ಮಾಡಿದರೆ ನೀವು ಜೈಲು ಸೇರೋದು ಪಕ್ಕಾ ಎಂದುಕೊಳ್ಳಿ. ಅಷ್ಟೇ ಅಲ್ಲ ನೀವು ಜಾತಿ-ಧರ್ಮದ ಬಗ್ಗೆ ಹೇಳಿಕೆ ನೀಡಿ ಅಥವಾ ಕರೆ ಮಾಡಿ ಗಲಭೆ ಎಬ್ಬಿಸಿದರೆ ನಿಮ್ಮ ಮೇಲೆ ದೇಶದ್ರೋಹದ ಮೊಕದ್ದಮೆ ದಾಖಲಾಗಬಹುದು. ಈ ಪ್ರಕರಣಗಳಿಗೆ ಜಾಮೀನು ಸಹ ಸಿಗುವುದಿಲ್ಲ ಎಂಬುದು ನಿಮ್ಮ ಗಮನಕ್ಕೆ ಇರಲಿ.

ಸ್ಮಾರ್ಟ್‌ಫೋನ್ ಬಳಸುವಾಗ ಈ ನಾಲ್ಕು ನಿಯಮ ಅನುಸರಿಸಿ,ಇಲ್ಲವಾದ್ರೆ ಜೈಲು ಸೇರ್ತೀರಾ!

ಫೋನ್ ಮೂಲಕ ಕಿರುಕುಳ ಅಥವಾ ನಿಂದನೆ: ಭಾರತದಲ್ಲಿ ಅಥವಾ ನಮ್ಮ ಸುತ್ತಮುತ್ತಲು ಈ ರೀತಿಯ ಘಟನೆಗಳು ಸರ್ವೇ ಸಾಮಾನ್ಯವಾಗಿವೆ. ಆದರೆ ,ಇದರ ವಿರುದ್ಧ ಗಭೀರ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎನ್ನುವುದು ನಿಮಗೆ ಗೊತ್ತಿರಲಿ. ಜೊತೆಗೆ ಅನುಮತಿಯಿಲ್ಲದೆ ಯಾರದೇ ಫೋನ್‌ನಿಂದ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ಕೂಡ ಅಪರಾಧ ನೀವು ಸಾಮಾಜಿಕ ಮಾಧ್ಯಮದಲ್ಲಿ ಯಾರಿಗಾದರೂ ಕೆಟ್ಟ ಮೆಸೆಜ್‌ ಅಥವಾ ಅಶ್ಲೀಲ ಮೆಸೆಜ್‌ ಕಳುಹಿಸಿದರೆ ನೀವು ಜೈಲು ಸೇರಲು ಸರಳ ಮಾರ್ಗ ಕಂಡುಕೊಂಡಿದ್ದೀರಿ ಎಂದರ್ಥ.

Best Mobiles in India

English summary
Smartphones today are very helpful with many facility in every way. But if these are not used in the right way, you will have to go to jail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+