Home
ಸುದ್ದಿಜಾಲ

ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿನ ಆಫರ್‌ಗಳಿಗೆ ಮಾರುಹೋಗೋ ಮುನ್ನ ಎಚ್ಚರ: ಮೊದಲು ಇದನ್ನು ಮಾಡಿ!

ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಈಗಾಗಲೇ ವಿಶೇಷ ಸೇಲ್‌ ಅನ್ನು ಘೋಷಣೆ ಮಾಡಲಾಗಿದೆ. ನಾಳೆಯಿಂದ ಈ ಎರಡೂ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ಸೇಲ್‌ ಲೈವ್‌ ಆಗಲಿದೆ. ಅಂದರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ (Amazon Great Indian Festival and Flipkart Big Billion Days Sale) ಅಕ್ಟೋಬರ್ 8 ರಂದು ಅಧಿಕೃತವಾಗಿ ಪ್ರಾರಂಭವಾಗಲಿದೆ.

ಹೌದು, ಈ ವಿಶೇಷ ದಿನಕ್ಕಾಗಿ ಭಾರತದಲ್ಲಿ ಸಾಕಷ್ಟು ಜನರು ಕಾತುರದಿಂದ ಕಾಯುತ್ತಿದ್ದಾರೆ. ಯಾಕೆಂದರೆ ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ ಸೇರಿದಂತೆ ಎಲ್ಲಾ ಅಗತ್ಯ ಸ್ಮಾರ್ಟ್‌ ಡಿವೈಸ್‌ಗಳಿಗೆ ದೊಡ್ಡ ಮಟ್ಟದಲ್ಲಿ ಆಫರ್ ನೀಡಲಾಗುತ್ತದೆ. ಆಫರ್‌ ಬೆಲೆಗೆ ಎಲ್ಲವೂ ದೊರೆಯುತ್ತವೆ ಎಂಬ ಆಸೆಯಿಂದ ನೀವು ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೆ ಶಾಪಿಂಗ್‌ ಮಾಡಲು ಮುಂದಾದರೆ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ.

ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿನ ಆಫರ್‌ಗಳಿಗೆ ಮಾರುಹೋಗೋ ಮುನ್ನ ಎಚ್ಚರ...

ಆನ್‌ಲೈನ್ ಶಾಪಿಂಗ್‌ನ ಅಸಂಖ್ಯಾತ ಪ್ರಯೋಜನಗಳ ಜೊತೆಗೆ ವಿವಿಧ ಸೈಬರ್ ವಂಚನೆ ಸಹ ಈ ವೇಳೆ ನಡೆಯುವುದು ಸಾಮಾನ್ಯವಾದ ವಿಷಯ. ಈ ಹಬ್ಬದ ಋತುವಿನಲ್ಲಿ ಸುರಕ್ಷಿತ ಮತ್ತು ಆನಂದದಾಯಕ ಆನ್‌ಲೈನ್ ಶಾಪಿಂಗ್ ಅನುಭವವನ್ನು ಪಡೆಯಬೇಕು, ಯಾವುದೇ ಸಮಸ್ಯೆಗಳಿಗೆ ಸಿಲುಕಬಾರದು ಎಂದರೆ ನೀವು ಇಲ್ಲಿ ತಿಳಿಸಿಕೊಟ್ಟಿರುವ ಕೆಲವು ಮೂಲಭೂತ ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಳ್ಳಿ.

ದೃಢವಾದ ಪಾಸ್‌ವರ್ಡ್‌ ಬಳಕೆ: ಆನ್‌ಲೈನ್ ಭದ್ರತೆಯನ್ನು ಬಲಪಡಿಸಲು ಪಾಸ್‌ವರ್ಡ್‌ ಅಗತ್ಯವಾಗಿದೆ. ಜನ್ಮದಿನಗಳು ಅಥವಾ ಸಾಮಾನ್ಯ ಪದಗಳಂತಹ ಸುಲಭವಾಗಿ ಊಹಿಸಬಹುದಾದ ಮಾಹಿತಿಯನ್ನು ಈ ವೇಳೆ ಬಳಕೆ ಮಾಡಬೇಡಿ. ಬದಲಾಗಿ, ದೊಡ್ಡಕ್ಷರ ಮತ್ತು ಸಣ್ಣ ಅಕ್ಷರಗಳು, ಅಂಕಿಗಳು ಮತ್ತು ವಿಶೇಷ ಅಕ್ಷರಗಳ ಮಿಶ್ರಣವನ್ನು ಒಳಗೊಂಡಿರುವ ಸಂಕೀರ್ಣವಾದ ಪಾಸ್‌ವರ್ಡ್‌ಗಳನ್ನು ಬಳಕೆ ಮಾಡಿ. ನಿಮ್ಮ ಪಾಸ್‌ವರ್ಡ್‌ಗಳನ್ನು ರಚಿಸಲು ಮತ್ತು ಸುರಕ್ಷಿತವಾಗಿ ಸಂಗ್ರಹಿಸಲು ವಿಶ್ವಾಸಾರ್ಹ ಪಾಸ್‌ವರ್ಡ್ ನಿರ್ವಾಹಕರನ್ನು ಪರಿಗಣಿಸಿ.

ಮಲ್ಟಿ-ಫ್ಯಾಕ್ಟರ್ ದೃಢೀಕರಣವನ್ನು ಸಕ್ರಿಯಗೊಳಿಸಿ: ಬಹು-ಅಂಶ ದೃಢೀಕರಣವನ್ನು (MFA) ಅಳವಡಿಸುವ ಮೂಲಕ ನಿಮ್ಮ ಆನ್‌ಲೈನ್ ಖಾತೆಗಳ ಸುರಕ್ಷತೆಯನ್ನು ಹೆಚ್ಚಿಗೆ ಮಾಡಿಕೊಳ್ಳಬಹುದು. MFA ಸಕ್ರಿಯವಾಗಿರುವಾಗ ಹ್ಯಾಕರ್‌ಗಳು ನಿಮ್ಮ ಡಿವೈಸ್‌ಗೆ ಎಂಟ್ರಿ ನೀಡಲು ಅಸಾಧ್ಯ. ಆದರೂ ಅವರು ನಿಮ್ಮ ಪಾಸ್‌ವರ್ಡ್‌ ಅನ್ನು ಕದ್ದಿದ್ದರೂ ಸಹ ನಿಮ್ಮ ಫೋನ್‌ನಲ್ಲಿ ಮೋಸ ಮಾಡಲು ಅವರಿಗೆ ಆಗುವುದಿಲ್ಲ. MFA ಆಯ್ಕೆ ಎಲ್ಲಿಯೇ ಇದ್ದರು ಇದನ್ನು ಯಾವಾಗಲೂ ಸಕ್ರಿಯಗೊಳಿಸಿ, ವಿಶೇಷವಾಗಿ ನಿಮ್ಮ ಆನ್‌ಲೈನ್ ಶಾಪಿಂಗ್ ಖಾತೆಗಳಿಗೆ.

ವಿಶ್ವಾಸಾರ್ಹ ಶಾಪಿಂಗ್ ಸೈಟ್‌ ಬಳಸಿ: ಇದು ಪ್ರಮುಖವಾಗಿ ಗಮನಿಸಬೇಕಾದ ವಿಷಯ. ಈಗಾಗಲೇ ಸಾಕಷ್ಟು ನಕಲಿ ಸೈಟ್‌ಗಳು ಅಗ್ಗದ ದರದಲ್ಲಿ ಡಿವೈಸ್‌ಗಳನ್ನು ತೋರಿಸುವ ಮೂಲಕ ಜನರನ್ನು ವಂಚನೆ ಮಾಡುತ್ತಿವೆ. ಅದೂ ಸಹ ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ ಹೆಸರಲ್ಲಿ. ಆದ ಕಾರಣ ನೀವು ಅಧಿಕೃತ ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ ಉತ್ತಮ ಶಾಪಿಂಗ್‌ ನಿಮ್ಮದಾಗಿಸಿಕೊಳ್ಳಿ. ಸುರಕ್ಷಿತ ಸರ್ಚ್‌ಗಾಗಿ https:// ದೃಢಪಡಿಸಿಕೊಳ್ಳಿ.

ಡಿವೈಸ್‌ಗಳ ನವೀಕರಣ ಅಗತ್ಯ: ಇತ್ತೀಚಿನ ಭದ್ರತಾ ಪ್ಯಾಚ್‌ಗಳು ಮತ್ತು ನವೀಕರಣಗಳನ್ನು ನಿಯಮಿತವಾಗಿ ಮಾಡುವ ಮೂಲಕ ನಿಮ್ಮ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮತ್ತು ಇತರ ಸಾಧನಗಳು ನವೀಕೃತವಾಗಿರುತ್ತವೆ ಎಂದು ಖಚಿತಪಡಿಸಿಕೊಳ್ಳಿ. ಸೈಬರ್ ಅಪರಾಧಿಗಳು ಹಳತಾದ ಸಾಫ್ಟ್‌ವೇರ್ ಅಥವಾ ಆಪರೇಟಿಂಗ್ ಸಿಸ್ಟಂನಲ್ಲಿ ಕಂಡುಬರುವ ದೋಷಗಳನ್ನು ಆಗಾಗ್ಗೆ ಬಳಸಿಕೊಳ್ಳುತ್ತಾರೆ. ಆಟೋಮ್ಯಾಟಿಕ್‌ ನವೀಕರಣಗಳನ್ನು ಸಕ್ರಿಯಗೊಳಿಸುವುದು ಸಂಭಾವ್ಯ ಬೆದರಿಕೆಗಳ ವಿರುದ್ಧ ನಿಮ್ಮ ಡಿವೈಸ್‌ ಅನ್ನು ರಕ್ಷಣೆ ಮಾಡಲು ಸಹಕಾರಿ.

ಸುರಕ್ಷಿತ ಪಾವತಿ ಚಾನಲ್‌ ಆಯ್ಕೆಮಾಡಿ: ಆನ್‌ಲೈನ್ ವಹಿವಾಟು ಮಾಡುವಾಗ ಸುರಕ್ಷಿತ ಪಾವತಿ ವಿಧಾನಗಳನ್ನು ಆರಿಸಿಕೊಳ್ಳಿ. ಕ್ರೆಡಿಟ್ ಕಾರ್ಡ್‌ಗಳು ಮತ್ತು ಉತ್ತಮವಾಗಿ ಪರಿಗಣಿಸಲ್ಪಟ್ಟ ಪಾವತಿ ಗೇಟ್‌ವೇಗಳು ಹೆಚ್ಚುವರಿ ರಕ್ಷಣೆಯ ಪದರವನ್ನು ನೀಡುತ್ತವೆ. ಆಗಾಗ್ಗೆ ವಂಚನೆ-ವಿರೋಧಿ ಕ್ರಮಗಳನ್ನು ಹೊಂದಿರುತ್ತವೆ. ಆನ್‌ಲೈನ್ ಶಾಪಿಂಗ್‌ಗಾಗಿ ಡೆಬಿಟ್ ಕಾರ್ಡ್‌ಗಳನ್ನು ಬಳಸುವುದರಿಂದ ದೂರವಿರಿ.

ಫಿಶಿಂಗ್ ಹಗರಣಗಳ ವಿರುದ್ಧ ಜಾಗರೂಕರಾಗಿರಿ: ಫಿಶಿಂಗ್ ಹಗರಣಗಳು ಸೂಕ್ಷ್ಮ ಮಾಹಿತಿಯನ್ನು ಕದಿಯಲು ಸೈಬರ್ ಅಪರಾಧಿಗಳ ನಡುವೆ ಅನುಕೂಲಕರವಾದ ತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಅಪೇಕ್ಷಿಸದ ಇಮೇಲ್‌ಗಳು, ಟೆಕ್ಸ್‌ ಮೆಸೆಜ್‌ಗಳು ಅಥವಾ ವೈಯಕ್ತಿಕ, ಹಣಕಾಸಿನ ವಿವರಗಳನ್ನು ಕೋರುವ ಪಾಪ್-ಅಪ್ ಜಾಹೀರಾತುಗಳನ್ನು ತೆರೆಯುವಾಗ ಎಚ್ಚರಿಕೆ ವಹಿಸಿ. ಅಧಿಕೃತ ಸಂಪರ್ಕ ಚಾನೆಲ್‌ಗಳ ಮೂಲಕ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸುವ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿನ ಆಫರ್‌ಗಳಿಗೆ ಮಾರುಹೋಗೋ ಮುನ್ನ ಎಚ್ಚರ...

ಖಾತೆ ಮಾನಿಟರಿಂಗ್: ಅನಧಿಕೃತ ಅಥವಾ ಅನುಮಾನಾಸ್ಪದ ವಹಿವಾಟುಗಳ ಯಾವುದೇ ಸೂಚನೆಗಳಿಗಾಗಿ ನಿಯಮಿತವಾಗಿ ನಿಮ್ಮ ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ಹೇಳಿಕೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಿ. ನೀವು ಯಾವುದೇ ಅಕ್ರಮಗಳನ್ನು ಪತ್ತೆಮಾಡಿದರೆ, ತಕ್ಷಣವೇ ಅವುಗಳನ್ನು ನಿಮ್ಮ ಹಣಕಾಸು ಸಂಸ್ಥೆಗೆ ವರದಿ ಮಾಡಿ. ಸಂಭಾವ್ಯ ಮೋಸದ ಚಟುವಟಿಕೆಗಳನ್ನು ನೀವು ಎಷ್ಟು ಬೇಗ ವರದಿ ಮಾಡುತ್ತೀರೋ ಅಷ್ಟು ವೇಗವಾಗಿ ಅವುಗಳನ್ನು ಪರಿಹರಿಸಬಹುದು.

Best Mobiles in India

English summary
The special sale has already been announced on Amazon and Flipkart. But before buying you should follow some solid tips.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+