ಬೇಸಿಗೆ ಕಾಲದಲ್ಲಿ ನಿಮ್ಮ ಫೋನ್‌ಗಳು ಸ್ಫೋಟವಾಗದಂತೆ ತಡೆಯಲು ಈ ಕ್ರಮ ಅನುಸರಿಸಿ!
ಬೇಸಿಗೆ ಆರಂಭ ಆಗುತ್ತಿದ್ದು, ಒಂದೆಡೆ ದೇಹಕ್ಕೆ ದಗೆ ಉಂಟಾದರೆ ಮತ್ತೊಂದೆಡೆ ನಮ್ಮ ಸ್ಮಾರ್ಟ್ ಡಿವೈಸ್‌ಗಳಿಗೂ ಅಪಾಯ ಎದುರಾಗಲಿದೆ. ಅದರಂತೆ ಕೆಲವು ದಿನಗಳ ಹಿಂದೆ ಜನಪ್ರಿಯ ಕಂಪೆನಿಯ ಸ್ಮಾರ್ಟ್‌ಫೋನ್ ಸ್ಫೋಟ ಆಗಿದೆ. ಹಾಗಿದ್ರೆ, ಬೇಸಿಗೆ ಸಮಯದಲ್ಲಿ ಯಾಕೆ ಸ್ಫೋಟ ಆಗುತ್ತವೆ ಎಂಬುದನ್ನು ತಿಳಿದುಕೊಳ್ಳಿ.
ಹೌದು, ಸಾಮಾನ್ಯವಾಗಿ ಮೊಬೈಲ್‌ಗಳು ಸ್ಫೋಟವಾದ ಸುದ್ದಿಯನ್ನು ಆಗಾಗ್ಗೆ ಕೇಳಿರುತ್ತೇವೆ. ಹಾಗೆಯೇ ಇದು ಸಾಮಾನ್ಯ ಎಂದು ಅಂದು ಕೊಂಡು ನಮ್ಮ ಪಾಡಿಗೆ ನಾವು ಇರುತ್ತೇವೆ. ಅದಾಗ್ಯೂ ಈ ಸಮಯದಲ್ಲಿ ಅಂದರೆ ಬೇಸಿಗೆ ಸಮಯದಲ್ಲಿ ಈ ಬಗ್ಗೆ ತಿರಸ್ಕಾರ ಸಲ್ಲದು. ಹಾಗಿದ್ರೆ, ನಿಮ್ಮ ಬಳಿ ಇರುವ ಸ್ಮಾರ್ಟ್‌ಡಿವೈಸ್‌ಗಳು ಹಾನಿಯಾಗದಂತೆ ಕಾಪಾಡಿಕೊಳ್ಳುವುದು ಹೇಗೆ?, ಯಾವ ಸಮಸ್ಯೆಯಿಂದ ಡಿವೈಸ್‌ಗಳು ಸ್ಫೋಟವಾಗುತ್ತವೆ ಎಂಬ ಮಾಹಿತಿಯನ್ನು ನೀಡಲಾಗಿದೆ ಈ ಲೇಖನ ಓದಿ.

ಮೊಬೈಲ್‌ಗಳನ್ನು ಚಾರ್ಜಿಂಗ್‌ಗೆ ಹಾಕಿರುವಾಗಲೇ ಹೆಚ್ಚು ಸ್ಫೋಟವಾತ್ತವೆ ಎಂಬುದು ಎಲ್ಲರಿಗೂ ಸಾಮಾನ್ಯವಾಗಿ ತಿಳಿದ ವಿಚಾರ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಮೊಬೈಲ್ ಅನ್ನು ಚಾರ್ಜಿಂಗ್ ಹಾಕದೇ ಇದ್ದರೂ ಸಹ ಬಹಳ ದೊಡ್ಡ ಮಟ್ಟದಲ್ಲಿ ಸ್ಫೋಟವಾಗಿದೆ. ಈ ಘಟನೆ ಬಿಹಾರದಲ್ಲಿ ಜರುಗಿದ್ದು, ಮೊಬೈಲ್ ಸ್ಫೋಟವಾಗುವಾಗ ಮನೆಯಲ್ಲಿ ಯಾರೂ ಇರದ ಕಾರಣ ಭಾರೀ ಅನಾಹುತ ತಪ್ಪಿದಂತೆ ಆಗಿದೆ. ಹಾಗಿದ್ರೆ ಯಾವೆಲ್ಲಾ ಕಾರಣಕ್ಕೆ ಈ ರೀತಿಯಾಗುತ್ತದೆ ಎಂಬುದನ್ನು ಗಮನಿಸಿ.
- * ಫೋನ್ ಬ್ಯಾಟರಿ ಸ್ಫೋಟವಾಗಲು ಹಲವಾರು ಕಾರಣಗಳಿದ್ದು, ಇದರಲ್ಲಿ ಸಾಮಾನ್ಯ ಕಾರಣ ಎಂದರೆ ಅತಿಯಾದ ಶಾಖ. ಫೋನ್ ಅನ್ನು ಚಾರ್ಜಿಂಗ್ ನಲ್ಲಿ ಇಟ್ಟಿರುವಾಗ ಸಾಮಾನ್ಯವಾಗಿ ಹೆಚ್ಚಿಗೆ ಬಿಸಿಯಾಗುತ್ತದೆ. ಈ ಮೂಲಕ ಬ್ಯಾಟರಿಯ ರಾಸಾಯನಿಕ ಸಂಯೋಜನೆಯು ಹಾನಿಗೊಂಡು ಥರ್ಮಲ್ ರನ್‌ಅವೇ ಎಂಬ ಕ್ರಿಯೆಗೆ ಕಾರಣವಾಗುತ್ತದೆ. ಹೀಗಾಗಿ ಅದು ಸ್ಫೋಟವಾಗುತ್ತದೆ.

- * ಹಾಗೆಯೇ ಮತ್ತೊಂದು ಕಾರಣ ಏನೆಂದರೆ ಭೌತಿಕ ಹಾನಿ. ಫೋನ್ ಅನ್ನು ಎಷ್ಟು ಕ್ಷೇಮವಾಗಿ ನೋಡಿಕೊಳ್ಳುತ್ತೇವೆಯೋ ಅಷ್ಟೇ ಸರಳವಾಗಿ ಅದರ ಬಳಕೆಗೆ ಫೋನ್ ಅನುಕೂಲ ಮಾಡಿಕೊಡುತ್ತದೆ. ಅಂದರೆ ನೀವು ಫೋನ್ ಅನ್ನು ಎಲ್ಲೂ ಬೀಳಿಸದಂತೆ ಹಾಗೂ ಸಿಕ್ಕಸಿಕ್ಕಲ್ಲಿ ಎಸೆಯುವುದನ್ನು ಬಿಡಬೇಕು. ಇದರಿಂದ ನೀವು ಕ್ಷೇಮ,ಪೋನ್ ಸಹ ಕ್ಷೇಮ.
- * ಇನ್ನು ಫೋನ್ ಸ್ಫೋಟವಾಗಲು ಇರುವ ಪ್ರಮುಖ ಕಾರಣಗಳಲ್ಲಿ ಬೇಸಿಗೆ ಕಾಲವೂ ಒಂದು. ಈ ವೇಳೆ ಫೋನ್ ಅನ್ನು ಹೆಚ್ಚು ಸೂರ್ಯನ ಶಾಖಕ್ಕೆ ಒಳಗಾಗುವಂತೆ ಮಾಡಿದರೆ ಬ್ಯಾಟರಿ ವಿಭಾಗಕ್ಕೆ ಹಾನಿಯಾಗುವುದರ ಜೊತೆಗೆ ನಿಧಾನವಾಗಿ ಅದು ಸ್ಫೋಟವಾಗಲು ಮುಮದಾಗುತ್ತದೆ. ಅಥವಾ ಫೋನ್‌ನ ಇನ್ನಿತರೆ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗುತ್ತದೆ. ಹಾಗೆಯೇ ಈ ವೇಳೆಯಲ್ಲಿ ಬ್ಯಾಟರಿ ಊದಿಕೊಳ್ಳುತ್ತದೆ. ಹಾಗಿದ್ರೆ ಈ ಸಮಸ್ಯೆಯಿಂದ ರಕ್ಷಣೆ ಪಡೆಯುವುದು ಹೇಗೆ ಎಂದೂ ಸಹ ತಿಳಿದುಕೊಳ್ಳಿ.
- * ಯಾವುದೇ ಸ್ಮಾರ್ಟ್‌ಫೋನ್‌ಗಳು ದಿಢೀರನೇ ಸ್ಫೋಟವಾಗುವುದಿಲ್ಲ. ಬದಲಾಗಿ ಇದಕ್ಕೂ ಮೊದಲು ಕೆಲವು ಸಣ್ಣಪುಟ್ಟ ತೊಂದರೆಗಳು ಅಂದರೆ ಫೋನ್ ಆಗಾಗ್ಗೆ ಬಿಸಿಯಾಗುತ್ತದೆ ಜೊತೆಗೆ ಫೋನ್‌ನಲ್ಲಿ ಸುಟ್ಟ ಪ್ಲಾಸ್ಟಿಕ್ ವಾಸನೆ ಬಂದರೆ ಮೊದಲು ಫೋನ್ ಅನ್ನು ಸ್ವಿಚ್ ಆಫ್ ಮಾಡಿ ರಿಪೇರಿ ಅಂಗಡಿಗೆ ತೆಗೆದುಕೊಂಡು ಹೋಗಿ.
- * ಯಾವುದೇ ಕಾರಣಕ್ಕೂ ನಿಮ್ಮ ಫೋನ್‌ಗೆ ಭೌತಿಕ ಹಾನಿ ಮಾಡಬೇಡಿ. ಯಾಕೆಂದರೆ ಕೆಲವರು ಕೋಪ ಬಂದಾಗ ಮೊಬೈಲ್ ಬಿಸಾಡುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಈ ರೀತಿ ಮಾಡುವುದರಿಂದ ಮುಂದೆ ನೀವೆ ನಿಮ್ಮ ಫೋನ್ ಸ್ಫೋಟವಾಗಲು ನೀವೇ ಕಾರಣಕರ್ತರಾಗುತ್ತೀರಿ.

- * ಸದ್ಯಕ್ಕೆ ಬೇಸಿಗೆ ಕಾಲ ಆರಂಭ ಆಗುತ್ತಿದ್ದು, ಈ ವೇಳೆ ಹೆಚ್ಚಿನ ತಾಪಮಾನ ಇರುವುದರಿಂದ ಸಾಮಾನ್ಯವಾಗಿ ಬಿಸಿಲಿನಲ್ಲಿ ಫೋನ್ ಬಳಕೆ ಮಾಡಲು ಮುಂದಾಗಬೇಕಿ. ಇಲ್ಲವಾದರೆ ನಿಮ್ಮ ಫೋನ್ ಹೆಚ್ಚು ಬಿಸಿಯಾಗುತ್ತದೆ. ಈ ಕಾರಣಕ್ಕೆ ಇದನ್ನು ತಪ್ಪಿಸುವುದು ಉತ್ತಮ ಮಾರ್ಗವಾಗಿದೆ. ಈ ಮೂಲಕ ಬ್ಯಾಟರಿ ನೈರ್ಮಲ್ಯವನ್ನು ಕಾಪಾಡಿಕೊಂಡಂತೆ ಆಗುತ್ತದೆ.
- * ನೀವು ಫೋನ್ ಖರೀದಿ ಮಾಡುವಾಗ ನೀಡಿದ ಕೇಬಲ್ ಗಳನ್ನೇ ಬಳಕೆ ಮಾಡಿದರೆ ಇನ್ನೂ ಉತ್ತಮ. ಅದರ ಬದಲು ಬೇರೆ ಯಾವುದೋ ಚಾರ್ಜಿಂಗ್ ಕೇಬಲ್ ಬಳಕೆ ಮಾಡಿಕೊಂಡು ಮೊಬೈಲ್ ಚಾರ್ಜಿಂಗ್ ಮಾಡಬೇಡಿ. ಹಾಗೆಯೇ ಬ್ಯಾಟರಿಯನ್ನು ಹಾನಿಗೊಳಿಸಬಹುದಾದ ಮಾಲ್‌ವೇರ್ ಸಹ ಇದ್ದು, ಇವುಗಳಿಂದ ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿ ರಕ್ಷಿಸಿ.


Click it and Unblock the Notifications








