Home
ಸುದ್ದಿಜಾಲ

ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡುವಾಗ ಎಚ್ಚರ... ಅಮೆಜಾನ್‌ ನೀಡಿದ ಎಚ್ಚರಿಕೆ ಏನು?

ಪ್ರಮುಖ ಇ-ಕಾಮರ್ಸ್‌ (E-commerce) ಸೈಟ್‌ಗಳು ನೀಡುವ ಸೇವೆಗೆ ಜನರು ಮಾರುಹೋಗುತ್ತಿದ್ದಾರೆ. ಅದರಲ್ಲೂ ಇ-ಕಾಮಾರ್ಸ್‌ ದೈತ್ಯ ಅಮೆಜಾನ್‌ (Amazon) ಮೂಲಕ ಸಾಕಷ್ಟು ಜನರು ತಮ್ಮಿಷ್ಟದ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಈ ನಡುವೆ ನೀವು ತುಂಬಾ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

ಹೌದು, ಆನ್‌ಲೈನ್‌ ಶಾಪಿಂಗ್‌ (Online shopping) ಇಂದಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಸ್ಕ್ಯಾಮರ್‌ಗಳೂ ಈ ಮೂಲಕವೂ ನಿಮ್ಮನ್ನು ದೋಚಲು ಹೊಂಚು ಹಾಕುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜನರು ಹಣವನ್ನು ಕಳೆದುಕೊಂಡ ವರದಿಗಳು ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಹಾಗಿದ್ರೆ, ಅಮೆಜಾನ್‌ನಲ್ಲಿ ಶಾಪಿಂಗ್‌ ಮಾಡುವಾಗ ವಹಿಸಬೇಕಾದ ಎಚ್ಚರಿಕೆಗಳು ಏನು?, ಸ್ಕ್ಯಾಮರ್‌ಗಳಿಂದ (Scammer) ಪಾರಾಗುವುದು ಹೇಗೆ? ಎಂಬ ಅಗತ್ಯ ಮಾಹಿತಿ ಇಲ್ಲಿದೆ ನೋಡಿ.

ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡುವಾಗ ಎಚ್ಚರ... ಅಮೆಜಾನ್‌ ನೀಡಿದ ಎಚ್ಚರಿಕೆ ಏನು?

ಅಮೆಜಾನ್ ಒಡೆತನದ ಚಾನಲ್‌ಗಳನ್ನು ಮಾತ್ರ ನಂಬಿರಿ: ಇ-ಕಾಮರ್ಸ್ ದೈತ್ಯ ಅಮೆಜಾನ್‌ ಬಳಕೆದಾರರ ಭದ್ರತೆಗಾಗಿ ಸಾಕಷ್ಟು ಸೌಲಭ್ಯಗಳಲ್ಲಿ ಕಲ್ಪಿಸಿದೆ. ಅದಾಗ್ಯೂ ಕೆಲವು ಮೋಸದ ಪ್ರಕರಣಗಳು ವರದಿಯಾಗುತ್ತಿದ್ದು, ಈ ನಡುವೆ ಅಮೆಜಾನ್‌ನ ಅಧಿಕೃತ ಆಪ್‌ ಹಾಗೂ ವೆಬ್‌ಸೈಟ್‌ ಮೂಲಕ ಮಾತ್ರ ವ್ಯವಹಾರ ನಡೆಸಬೇಕು ಎಂದು ತಿಳಿಸಿದೆ. ಜೊತೆಗೆ ಗ್ರಾಹಕ ಸೇವೆ ಹಾಗೂ ಟೆಕ್‌ ಬೆಂಬಲ ಈ ಮೂಲಕ ಲಭ್ಯ ಎಂದು ಹೇಳಿದೆ.

ಸುಳ್ಳನ್ನು ನಂಬಬೇಡಿ: ಸ್ಕ್ಯಾಮರ್‌ಗಳು ತುರ್ತು ಪ್ರಜ್ಞೆಯನ್ನು ಸೃಷ್ಟಿಸಲು ಯಾವಾಗಲೂ ಪ್ರಯತ್ನಿಸುತ್ತಿರುತ್ತಾರೆ. ಅದರಲ್ಲೂ ಅಮೆಜಾನ್‌ ಹೆಸರು ಹೇಳಿಕೊಂಡು ನೀವು ಆ ಕೆಲಸವನ್ನು ಈಗಲೇ ಮಾಡಬೇಕು, ಇಲ್ಲವಾದರೆ ಹಾಗಾಗುತ್ತದೆ, ಹೀಗಾಗುತ್ತದೆ, ಆಫರ್‌ಗಳನ್ನು ಕಳೆದುಕೊಳ್ಳುತ್ತೀರಾ ಎಂದು ನಿಮಗೆ ಮನವರಿಕೆ ಮಾಡಲು ಪ್ರಯತ್ನಿಸಿದಾಗ ಜಾಗರೂಕರಾಗಿರಿ. ಅಗ್ಗದ ಡೀಲ್‌ಗಳು ಅಥವಾ ಉತ್ತಮ ರಿಯಾಯಿತಿಗಳನ್ನು ಹುಡುಕುವ ಆಮಿಷದಲ್ಲಿ ಯಾವುದೇ ವಹಿವಾಟುಗಳನ್ನು ಮಾಡಬೇಡಿ.

ಪಾವತಿಸುವ ಮೊದಲು ಯೋಚಿಸಿ: ಫೋನ್ ಮೂಲಕ ಉತ್ಪನ್ನಗಳು ಅಥವಾ ಸೇವೆಗಳಿಗೆ ಉಡುಗೊರೆ ಕಾರ್ಡ್‌ಗಳು ಸೇರಿದಂತೆ ಪಾವತಿ ಮಾಹಿತಿಯನ್ನು ಒದಗಿಸಲು ಅಮೆಜಾನ್‌ ನಿಮ್ಮನ್ನು ಎಂದಿಗೂ ಕೇಳುವುದಿಲ್ಲ ಎಂಬುದು ಗೊತ್ತಿರಲಿ. ಪರಿಣಾಮ ಯಾರಾದರೂ ಆ ರೀತಿ ಮಾಡುತ್ತಿದ್ದರೆ ಅದು ವಂಚನೆಗೆ ಭಾಗವಾಗಿದೆ ಎಂದರ್ಥ. ಆ ವೇಳೆ ಅಮೆಜಾನ್‌ ಅಧಿಕೃತ ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಲಿಂಕ್‌ಗಳನ್ನು ಪರಿಶೀಲಿಸಿ: ಇದು ಪ್ರತಿಯೊಬ್ಬರು ಮಾಡಬೇಕಾದ ಕೆಲಸವಾಗಿದೆ. ಯಾಕೆಂದರೆ ಅಮೆಜಾನ್‌ ಡಿವೈಸ್‌ಗಳು ಹಾಗೂ ಸೇವೆಗಳು, ಆರ್ಡರ್‌ಗಳು ಅಥವಾ ಅವರ ಖಾತೆಗೆ ಬದಲಾವಣೆಗಳನ್ನು ಮಾಡಲು ಸಹಾಯವನ್ನು ಪಡೆಯಲು ಬಳಕೆದಾರರು ನೇರವಾಗಿ ಅಮೆಜಾನ್‌ ವೆಬ್‌ಸೈಟ್‌ಗೆ ಮಾತ್ರ ಹೋಗಬೇಕು. ಅಮೆಜಾನ್‌ ಯಾವುದೇ ಥರ್ಡ್-ಪಾರ್ಟಿ ಆನ್‌ಲೈನ್‌ ಮಾರಾಟಗಾರ ಅಥವಾ ಚಿಲ್ಲರೆ ವ್ಯಾಪಾರಿಗಳಿಗೆ ಈ ರೀತಿಯ ಅಧಿಕಾರಕ್ಕೆ ಅನುವು ಮಾಡಿಕೊಟ್ಟಿಲ್ಲ.

ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡುವಾಗ ಎಚ್ಚರ... ಅಮೆಜಾನ್‌ ನೀಡಿದ ಎಚ್ಚರಿಕೆ ಏನು?

ಇಮೇಲ್ ಅಥವಾ ಸಂದೇಶವನ್ನು ಸರಿಯಾಗಿ ಪರಿಶೀಲಿಸಿ: ಎಲ್ಲಕ್ಕಿಂತ ಮಿಗಿಲಾಗಿ ಅಮೆಜಾನ್‌ ಹೆಸರಿನ ಅನೇಕ ಇಮೇಲ್‌ಗಳು ಬರುತ್ತಿದ್ದರೆ ಅವುಗಳಿಂದ ಎಚ್ಚರಿಕೆ ವಹಿಸಿ. ಅದರಲ್ಲೂ ಅನುಮಾನಾಸ್ಪದವಾಗಿ ಕಂಡುಬರುವ ಲಿಂಕ್‌ಗಳು ಅಥವಾ ಲಗತ್ತುಗಳೊಂದಿಗೆ ಇಮೇಲ್ ಅಥವಾ ಪಠ್ಯ ಮೆಸೆಜ್‌ ಅನ್ನು ನೀವು ಸ್ವೀಕರಿಸಿದರೆ, ಅವುಗಳನ್ನು ಎಂದಿಗೂ ಓಪನ್ ಮಾಡಬೇಡಿ. ಇವು ನಿಮ್ಮನ್ನು ವಂಚಿಸಲು ವಿನ್ಯಾಸಗೊಳಿಸಲಾದ ಮೇಲ್‌ಗಳಾಗಿವೆ.

ಖಾತೆ ಅಮಾನತುಗೊಳಿಸಲಾಗಿದೆ..: ಈ ರೀತಿಯ ಸಂದೇಶವನ್ನು ಯಾರಾದರೂ ಒಮ್ಮೆಯಾದರೂ ಸ್ವೀಕಾರ ಮಾಡೇ ಇರುತ್ತಾರೆ. ನಿಮ್ಮ ಖಾತೆಯನ್ನು ಅಮಾನತುಗೊಳಿಸಲಾಗುವುದು ಅಥವಾ ಅಳಿಸಲಾಗುವುದು ಎಂದು ಹೇಳುವ ಮೆಸೆಜ್‌, ಇಮೇಲ್‌ಗಳು ಮತ್ತು ಫೋನ್ ಕರೆಗಳನ್ನು ಸ್ವೀಕಾರ ಮಾಡಿದ್ದರೆ ಅದಕ್ಕೆ ಎಂದಿಗೂ ಪ್ರತಿಕ್ರಿಯೆ ನೀಡಬೇಡಿ. ಅಮೆಜಾನ್‌ ಎಂದಿಗೂ ಯಾರ ಖಾತೆಯನ್ನು ಅಮಾನತುಗೊಳಿಸುವ ಕೆಲಸ ಮಾಡುವುದಿಲ್ಲ.

ಪ್ರೈಮ್ ಸದಸ್ಯತ್ವ ಹಗರಣ: ಇದರೊಂದಿಗೆ ಅನಿರೀಕ್ಷಿತ ಕರೆಗಳು/ಪಠ್ಯಗಳು/ಇಮೇಲ್‌ಗಳು ದುಬಾರಿ ಸದಸ್ಯತ್ವ ಶುಲ್ಕ ಅಥವಾ ನಿಮ್ಮ ಸದಸ್ಯತ್ವದ ಸಮಸ್ಯೆಯನ್ನು ಉಲ್ಲೇಖಿಸುತ್ತವೆ. ಶುಲ್ಕವನ್ನು ಖಚಿತಪಡಿಸಲು ಅಥವಾ ರದ್ದುಗೊಳಿಸಲು ನಿಮ್ಮನ್ನು ಈ ವೇಳೆ ಕೇಳಲಾಗುತ್ತದೆ. ಈ ಸ್ಕ್ಯಾಮರ್‌ಗಳು ಸದಸ್ಯತ್ವವನ್ನು ಮರುಸ್ಥಾಪಿಸಲು ಪಾವತಿ ಅಥವಾ ಬ್ಯಾಂಕ್ ಖಾತೆಯ ಮಾಹಿತಿಯನ್ನು ಒದಗಿಸಲು ನಿಮಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಾರೆ ಇದರಿಂದ ಎಚ್ಚರಿಕೆ ವಹಿಸಿ.

ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ: ಉಳಿದಂತೆ ನೀವು ಯಾವುದೇ ವೈಯಕ್ತಿಕ ಮಾಹಿತಿಯನ್ನು ಅಮೆಜಾನ್‌ ಎಂದು ಕರೆ ಮಾಡುವವರ ಜೊತೆಗೆ ಹಂಚಿಕೊಳ್ಳಬೇಡಿ. ಅಮೆಜಾನ್‌ ಎಂದಿಗೂ ಸಹ ಕರೆ ಮಾಡಿ ನಿಮ್ಮ ಬ್ಯಾಂಕ್‌ ಹಾಗೂ ಇನ್ನಿತರೆ ಮಾಹಿತಿಯನ್ನು ಕೇಳುವುದಿಲ್ಲ. ಅಕಸ್ಮಾತ್‌ ಈ ರೀತಿಯ ಕರೆ ಸ್ವೀಕಾರ ಮಾಡಿದ್ದಲ್ಲಿ ನೀವು ಅಧಿಕೃತ ವೆಬ್‌ಸೈಟ್‌ಗೆ ಬಂದು ದೂರು ದಾಖಲಿಸಿ.

Best Mobiles in India

English summary
Online shopping is getting more popular these days. Some scammers capitalizing on this are also lying in wait to rob you. Accordingly, Amazon has issued some warnings to its customers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+