ಸ್ಮಾರ್ಟ್‌ಫೋನ್‌ಗಳೊಂದಿಗೆ ಈ ರೀತಿ ಆರೋಗ್ಯಕರ ಸಂಬಂಧ ಬೆಳೆಸಿಕೊಳ್ಳಿ! ಇಲ್ಲವಾದ್ರೆ ಕಷ್ಟ
ಸಾಮಾನ್ಯವಾಗಿ ನೀವು ಪ್ರತಿದಿನ ಎಷ್ಟು ಹೊತ್ತು ಡಿಸ್‌ಪ್ಲೇ ನೋಡುತ್ತಿದ್ದೀರಿ ಎಂದು ಗೊತ್ತಿದೆಯಾ?. ಬಹುಪಾಲು ಮಂದಿಗೆ ಈ ವಿಷಯ ಗೊತ್ತಿರುವುದಿಲ್ಲ. ಆದರೆ, ವ್ಯಕ್ತಿಯೋರ್ವ ದಿನಕ್ಕೆ ಸರಾಸರಿ ಏಳು ಗಂಟೆಗಳನ್ನು ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವ ಡಿವೈಸ್ ಮೇಲೆ ಮೇಲೆ ಕಳೆಯುತ್ತಾನೆ ಎಂದು ವರದಿಯಿಂದ ತಿಳಿದುಬಂದಿದೆ. ಅದರಲ್ಲೂ ಕಂಪ್ಯೂಟರ್ ಮೂಲಕ ಕೆಲಸ ಮಾಡುವವರೂ ಇನ್ನೂ ಹೆಚ್ಚಿನ ಸಮಯವನ್ನು ಇದರಲ್ಲಿ ಕಳೆಯುತ್ತಾರೆ.
ಹೌದು, ಸ್ಮಾರ್ಟ್‌ಫೋನ್‌ಗಳು ಅಥವಾ ಸ್ಮಾರ್ಟ್‌ಡಿವೈಸ್‌ಗಳು ಇಂದು ಬಳಕೆದಾರರ ಅವಿಭಾಜ್ಯ ಅಂಗವಾಗಿವೆ. ಯಾಕೆಂದರೆ ಇಂದು ಕರೆ ಮಾಡುವುದರಿಂದ ಹಿಡಿದು ಬ್ಯಾಂಕಿಂಗ್ ವ್ಯವಹಾರದ ವರೆಗೂ ಎಲ್ಲಾ ಕೆಲಸವನ್ನೂ ಸುಲಭಗೊಳಿಸಿವೆ. ಈ ನಡುವೆ ನೀವು ಅಗತ್ಯವಾಗಿ ಸ್ಮಾರ್ಟ್‌ಫೋನ್‌ನೊಂದಿಗೆ ಆರೋಗ್ಯಕರ ಸಂಬಂಧ ಬೆಳೆಸಿಕೊಳ್ಳಬೇಕಿದೆ. ಅರೇ ಏನಿದು ಆರೋಗ್ಯಕರ ಸಂಬಂಧ?, ಅದೇಗೆ ಸಂಬಂಧ ಬೆಳೆಸಿಕೊಳ್ಳುವುದು? ಎಂಬ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಇಲ್ಲಿದೆ ನೋಡಿ ಸಂಫೂರ್ಣ ವಿವರ.

ಸ್ಮಾರ್ಟ್‌ಫೋನ್ ಬಳಕೆಯಿಂದ ಕಣ್ಣಿನ ಆಯಾಸ, ಕುತ್ತಿಗೆ ನೋವು, ಕಳಪೆ ನಿದ್ರೆ, ಒತ್ತಡ ಸೇರಿದಂತೆ ಹಲವು ಸಮಸ್ಯೆ ಎದುರಾಗುತ್ತವೆ. ಅದರಂತೆ ವಿಶ್ವದಲ್ಲಿ ಸ್ಮಾರ್ಟ್‌ಫೋನ್‌ನಿಂದ ಆಗುವ ಅನುಕೂಲ ಹಾಗೂ ಅನಾನುಕೂಲಗಳ ಮೇಲೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಅದಾಗ್ಯೂ ನೀವು ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಂಡು ಸಂಸಾರ ಹಾಗೂ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಈ ಕ್ರಮ ಅನುಸರಿಸಿ.
ವಿಶ್ರಾಂತಿ ಪಡೆಯುವಾಗ ಸ್ಮಾರ್ಟ್‌ಫೋನ್ ದೂರ ಇಡಿ: ನೀವು ಉತ್ತಮವಾದ ನಿದ್ದೆ ಮಾಡಬೇಕು ಎಂದರೆ ಸ್ಮಾರ್ಟ್‌ಫೋನ್ ಅನ್ನು ನಿಮ್ಮಿಂದ ದೂರ ಇಡಬೇಕು. ಕೆಲವರು ಅಲಾರಾಂ ಉದ್ದೇಶಕ್ಕೆ ಪಕ್ಕದಲ್ಲೇ ಇಟ್ಟು ಮಲಗುತ್ತಾರೆ. ಇದರ ಬದಲು ಒಂದು ಅಲಾರಂ ಆಯ್ಕೆ ಇರುವ ಗಡಿಯಾರವನ್ನೇ ಕೊಂಡುಕೊಳ್ಳಿ. ಹೀಗಾಗಿ ಅಲಾರಂ ನೆಪದಲ್ಲಿ ಫೋನ್ ಅನ್ನು ತಡರಾತ್ರಿವರೆಗೂ ಬಳಕೆ ಮಾಡುವುದು ತಪ್ಪುತ್ತದೆ. ಹಾಗೆಯೇ ಫೋನ್ ಅನ್ನು ಪಕ್ಕದಲ್ಲಿಟ್ಟುಕೊಂಡೇ ಟಿವಿ ನೋಡುವ ಅಭ್ಯಾಸದಿಂದ ಹೊರಬನ್ನಿ.
ಸ್ಕ್ರೀನ್ ಲಿಮಿಟ್ ಅನ್ನು ನೀವೆ ಹೊಂದಿಸಿಕೊಳ್ಳಿ: ಸಾಮಾನ್ಯವಾಗಿ ಹೆಚ್ಚು ಸ್ಕ್ರೀನ್ ಟೈಮ್ ನಿಮಗೆ ಖಂಡಿತಾ ತಲೆನೋವು ತರುತ್ತದೆ. ಮೆಸೆಜ್ ಮಾಡುವ ಬದಲಾಗಿ ವಾಯ್ಸ್ ನೋಟ್ ಅಥವಾ ಕರೆ ಸೌಲಭ್ಯಗಳನ್ನು ಈ ವೇಳೆ ಬಳಕೆ ಮಾಡಿಕೊಳ್ಳಿ. ಇದರಿಂದ ನೀವು ದೀರ್ಘಕಾಲದವರೆಗೆ ಡಿಸ್‌ಪ್ಲೇ ನೋಡುವುದು ತಪ್ಪಿದಂತೆ ಆಗುತ್ತದೆ. ಈ ಮೂಲಕ ನಿಮ್ಮ ಕಣ್ಣಿನ ಹಾಗೂ ದೇಹದ ಆರೋಗ್ಯವನ್ನೂ ಸಹ ಕಾಪಾಡಿಕೊಂಡಂತೆ ಆಗುತ್ತದೆ.
ಡಿಜಿಟಲ್ ಲೋಕದಿಂದ ಹೊರಬನ್ನಿ: ಸ್ಮಾರ್ಟ್‌ಡಿವೈಸ್‌ಗಳು ನಿಮಗೆ ಎಲ್ಲವನ್ನೂ ನೀಡುತ್ತವೆಯಾದರೂ ಸಹ ಖಿನ್ನತೆ ಮತ್ತು ಆತಂಕ ಇದರಿಂದ ಉಂಟಾಗುತ್ತದೆ ಎಂಬುದು ತಿಳಿದಿರಲಿ. ಹೀಗಾಗಿ ಸ್ವಲ್ಪ ಸಮಯದವರೆಗೆ ನಿಮ್ಮ ಡಿಜಿಟಲ್ ಪ್ರಪಂಚದಿಂದ ದೂವಿದ್ದು, ಪ್ರಕೃತಿಯಲ್ಲಿ ಬರೆಯಲು ಮುಂದಾಗಿ, ಪುಸ್ತಕವನ್ನು ಓದಿ, ಬೈಕ್ ಸವಾರಿ ಮಾಡಿ ಅಥವಾ ನೀವು ಹಳ್ಳಿಯಲ್ಲಿದ್ದರೆ ಕರೆ, ಕಟ್ಟೆ, ಜಮೀನಿನ ಕಡೆ ನಿಮ್ಮ ಸಂಚಾರ ನಿಯಮಿತವಾಗಿ ಇರಲಿ.

ಅಗತ್ಯ ಆಪ್‌ಗಳನ್ನು ಬಳಕೆ ಮಾಡಿ: ಈಗಂತೂ ಬಳಕೆದಾರರಿಗೆ ಸಾಕಷ್ಟು ಆಪ್‌ಗಳು ಲಭ್ಯ ಇದ್ದು, ಜನರಿಗೆ ವಿವಿಧ ರೀತಿಯ ಸೇವೆ ನೀಡುತ್ತವೆ. ಅದರಂತೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಎಷ್ಟು ಸಮಯ ತೊಡಗಿಸಿಕೊಂಡಿದ್ದೀರಿ?, ಎಷ್ಟು ಸಮಯ ತೊಡಗಿಸಿಕೊಳ್ಳಬೇಕು?, ಯಾವ ಸಮಯದಲ್ಲಿ ಏನು ಮಾಡಬೇಕು ಎಂಬಿತ್ಯಾದಿ ಮಾಹಿತಿ ನೀಡುವ ಆಪ್‌ಗಳಿಗೆ. ಅವುಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಮೂಲಕ ನಿಮಗೆ ನೀವೇ ನಿಯಂತ್ರಣ ಮಾಡಿಕೊಳ್ಳಿ.
ಸ್ಮಾರ್ಟ್ ಡಿವೈಸ್ ಬಳಕೆ ಮಾಡುವಾಗ ಸರಿಯಾಗಿ ಕುಳಿತುಕೊಳ್ಳಿ: ಮೊನ್ನೆಯಷ್ಟೇ ಒಂದು ವರದಿ ಬಂದಿದ್ದು, ಇದರ ಪ್ರಕಾರ ಮೂರು ಗಂಟೆಗಳಿಗಿಂತ ಹೆಚ್ಚಿನ ಸಮಯ ಸ್ಮಾರ್ಟ್‌ಫೋನ್ ಬಳಕೆ ಮಾಡಿದರೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಲಾಗಿದೆ. ಈ ಕಾರಣಕ್ಕೆ ಸ್ಮಾರ್ಟ್ ಡಿವೈಸ್ ಬಳಕೆ ಮಾಡುವಾಗ ನೀವು ಕೂರುವ ಅಥವಾ ನಿಲ್ಲುವ ಪ್ರತಿಯೊಂದು ವಿಷಯಗಳೂ ಸಹ ಪ್ರಮುಖವಾಗುತ್ತವೆ. ಹೀಗಾಗಿ ಆಗಾಗ್ಗೆ ಸಣ್ಣದಾಗಿ ವ್ಯಾಯಾಮ ಮಾಡಿ.


Click it and Unblock the Notifications








