Online Shopping: ಸುರಕ್ಷಿತ ಆನ್‌ಲೈನ್ ಶಾಪಿಂಗ್ ಮಾಡಲು ಈ ಸಲಹೆ ಅನುಸರಿಸಿ!
ಆನ್‌ಲೈನ್ ನಲ್ಲಿ ಏನೇ ಖರೀದಿ ಮಾಡುವ ಮುನ್ನ ನಾವು ಜಾಗರೂಕತೆ ವಹಿಸಬೇಕಿದೆ. ಈ ಮೂಲಕ ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಯಾಕೆಂದರೆ ಸೈಬರ್ ಕ್ರಿಮಿನಲ್ಸ್‌ಗಳು ಜನರ ದುರ್ಬಲತೆಗಳನ್ನು ಹೈಜಾಕ್ ಮಾಡುವ ಮೂಲಕ ಅವರ ಖಾಸಗಿ ವಿಚಾರ ಹಾಗೂ ಅವರ ಬ್ಯಾಂಕ್ ವಿವರವನ್ನು ಕದಿಯುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಸಂಭಾವ್ಯ ಬೆದರಿಕೆಗಳ ವಿರುದ್ಧ ಹೋರಾಡಲು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಈ ಪ್ರಮುಖ ವಿಷಯಗಳ ಕಡೆ ಗಮನಹರಿಸಿ.
ಈಗಂತೂ ಆನ್‌ಲೈನ್ ಶಾಪಿಂಗ್ ಭರಾಟೆ ಜೋರಾಗಿದೆ. ಅದರಲ್ಲೂ ಹಲವಾರು ಇ-ಕಾಮರ್ಸ್ ಸೈಟ್‌ಗಳು ಒಂದಕ್ಕೊಂದು ಪೈಪೋಟಿಯಲ್ಲಿ ಸ್ಮಾರ್ಟ್ ಡಿವೈಸ್ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಮೇಲೆ ಬೃಹತ್ ರಿಯಾಯಿತಿ ನೀಡುತ್ತಿರುವ ಪರಿಣಾಮ ಜನರು ಈ ಕಡೆ ಮುಖ ಮಾಡುತ್ತಿದ್ದಾರೆ. ಈ ನಡುವೆ ಆನ್‌ಲೈನ್ ಶಾಪಿಂಗ್ ಮಾಡುವವರು ಈ ವಿಷಯದ ಕಡೆ ಗಮನಹರಿಸಬೇಕಿದೆ.

ಹೌದು, ಆನ್‌ಲೈನ್ ನಲ್ಲಿ ಏನೇ ಖರೀದಿ ಮಾಡುವ ಮುನ್ನ ನಾವು ಜಾಗರೂಕತೆ ವಹಿಸಬೇಕಿದೆ. ಈ ಮೂಲಕ ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಯಾಕೆಂದರೆ ಸೈಬರ್ ಕ್ರಿಮಿನಲ್ಸ್‌ಗಳು ಜನರ ದುರ್ಬಲತೆಗಳನ್ನು ಹೈಜಾಕ್ ಮಾಡುವ ಮೂಲಕ ಅವರ ಖಾಸಗಿ ವಿಚಾರ ಹಾಗೂ ಅವರ ಬ್ಯಾಂಕ್ ವಿವರವನ್ನು ಕದಿಯುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಸಂಭಾವ್ಯ ಬೆದರಿಕೆಗಳ ವಿರುದ್ಧ ಹೋರಾಡಲು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಈ ಪ್ರಮುಖ ವಿಷಯಗಳ ಕಡೆ ಗಮನಹರಿಸಿ.
ಮಲ್ಟಿಫ್ಯಾಕ್ಟರ್ ದೃಢೀಕರಣವನ್ನು ಆನ್ ಮಾಡಿ: ಮಲ್ಟಿಫ್ಯಾಕ್ಟರ್ ದೃಢೀಕರಣ 99% ಪಾಸ್‌ವರ್ಡ್ ದಾಳಿಯನ್ನು ನಿರ್ಬಂಧಿಸಲು ಸಹಾಯ ಮಾಡಲಿದ್ದು, ಹ್ಯಾಕರ್ಸ್‌ಗಳು ಸುಲಭವಾಗಿ ನಿಮ್ಮ ಡಿವೈಸ್‌ಗೆ ಎಂಟ್ರಿ ಆಗಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ತಜ್ಞರು ಈ ಬಗ್ಗೆ ಹೆಚ್ಚಿನ ಸಲಹೆ ನೀಡುತ್ತಾರೆ. ಅದರಂತೆ ಯಾವಾಗೆಲ್ಲಾ ಲಾಗಿನ್‌ಆಗಲು ಮುಂದಾಗುತ್ತೀರೋ ಆಗ ನೀವು ಪಠ್ಯ, ಇಮೇಲ್ ಅಥವಾ ಇನ್ನೊಂದು ಮೂಲಕ ನೋಟಿಫಿಕೇಶನ್ ಪಡೆಯುತ್ತೀರ. ಇದರಿಂದಾಗಿ ನಿಮ್ಮನ್ನು ಹೊರತುಪಡಿಸಿ ಯಾರೇ ನಿಮ್ಮ ಇ-ಕಾಮರ್ಸ್ ಸೈಟ್‌ಗೆ ಲಾಗಿನ್ ಆಗಲು ಮುಂದಾದರೆ ಎಚ್ಚೆತ್ತುಕೊಳ್ಳಬಹುದು.
ವಿಶ್ವಾಸಾರ್ಹ ಸಾಧನಗಳನ್ನು ಬಳಸಿ: ಪ್ರಮುಖವಾಗಿ ಹಲವಾರು ಸರ್ಚ್ ಇಂಜಿನ್‌ಗಳು ಹೆಚ್ಚಿನ ಭದ್ರತಾ ಫೀಚರ್ಸ್‌ನೊಂದಿಗೆ ಕೆಲಸ ಮಾಡುತ್ತವೆಯಾದರೂ ಕೆಲವಾರು ಸಂದರ್ಭದಲ್ಲಿ ಇವೂ ಸಹ ಹ್ಯಾಕರ್ಸ್ ದಾಳಿಗೆ ತುತ್ತಾಗುವುದು ಸಾಮಾನ್ಯ. ಇದರಿಂದಾಗಿ ಮೈಕ್ರೋಸಾಫ್ಟ್ ಎಡ್ಜ್ ನಿಮ್ಮ ಆನ್‌ಲೈನ್ ಶಾಪಿಂಗ್ ಸುರಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಉಚಿತ ಫೀಚರ್ಸ್‌ಗಳ ಶ್ರೇಣಿಯನ್ನು ನೀಡುತ್ತದೆ.

ಅಂದರೆ ನಿಮ್ಮ ಪಾಸ್‌ವರ್ಡ್ ಮಾನಿಟರ್‌ನೊಂದಿಗೆ ಯಾವುದೇ ಉಳಿಸಿದ ಲಾಗಿನ್‌ಗಳಲ್ಲಿ ಏನಾದರೂ ಗೊಂದಲ ಕಂಡುಬಂದರೆ ನೋಟಿಫಿಕೇಶನ್ ಸ್ವೀಕರಿಸುತ್ತೀರಿ. ಜೊತೆಗೆ ಒನ್-ಕ್ಲಿಕ್ ಈಸಿ ಅಪ್‌ಡೇಟ್ ಫೀಚರ್ಸ್ ಬಳಕೆ ಮಾಡಿಕೊಂಡು ಪಾಸ್‌ವರ್ಡ್ ಅನ್ನು ತ್ವರಿತವಾಗಿ ನವೀಕರಿಸಲು ಇದು ಅನುವು ಮಾಡಿಕೊಡುತ್ತದೆ. ಅದರಂತೆ ನೀವು ಹೊಸ ಖಾತೆಗಳನ್ನು ಕ್ರಿಯೇಟ್ ಮಾಡಿದಾಗ ಆಟೋಮ್ಯಾಟಿಕ್ ಆಗಿ ಅನನ್ಯವಾದ ಪಾಸ್‌ವರ್ಡ್ ಸಲಹೆಗಳನ್ನು ನೀಡುತ್ತದೆ.
ಪಾಸ್‌ವರ್ಡ್ ಅಳಿಸಿ: ನೀವು ಒಮ್ಮೆ ಇ-ಕಾಮರ್ಸ್ ಸೈಟ್‌ಗೆ ಲಾಗಿನ ಆದ ನಂತರ ಅದನ್ನು ಸೇವ್ ಮಾಡಿರಲೇ ಬೇಕು ಅಂತೇನು ಇಲ್ಲ. ಬದಲಾಗಿ ಯಾವಾಗೆಲ್ಲಾ ಅದನ್ನು ಬಳಕೆ ಮಾಡಲು ಮುಂದಾಗುತ್ತೀರೋ ಆಗ ಲಾಗಿನ್ ಆಗಬಹುದು. ಈ ಕಾರಣಕ್ಕೆ ನೀವು ಲಾಗಿನ ವಿವರವನ್ನು ಸೇವ್ ಮಾಡಿರದೆ ಇರುವುದೇ ಒಳ್ಳೆಯದು. ಜೊತೆಗೆ ಖರೀದಿ ನಂತರ ಲಾಗಿನ್ ಇತಿಹಾಸ ಅಳಿಸಿಹಾಕಿ.
ಆಫರ್‌ಗಳಿಗೆ ಮಾರುಹೋಗಬೇಡಿ: ಇದೆಲ್ಲಕ್ಕೂ ಮಿಗಿಲಾಗಿ ಇತ್ತೀಚಿನ ದಿನಗಳಲ್ಲಿ ಒಂದು ಕೊಂಡರೆ ಒಂದು ಫ್ರೀ, 50% ಆಫರ್ ಎಂದೆಲ್ಲಾ ಜನರನ್ನು ವಂಚನೆ ಮಾಡುವ ಜಾಲ ದೊಡ್ಡದಾಗಿ ಬೆಳೆಯುತ್ತಿದೆ. ಈ ಬಲೆಗೆ ನೀವು ಬೀಳಬಾರದು ಎಂದರೆ ನಿಮ್ಮ ಸ್ಮಾರ್ಟ್‌ಫೋನ್‌ಗೆ ಬರುವ ಅನಗತ್ಯ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಈ ರೀತಿಯ ಅದೆಷ್ಟೋ ಘಟನೆಗಳು ಭಾರತದಲ್ಲಿ ಹೆಚ್ಚಾಗಿ ಜರುಗುತ್ತಿದ್ದು, ಪೊಲೀಸರು ಸಹ ತನಿಖೆ ನಡೆಸಿ ಕೆಲವರನ್ನು ಬಂಧಿಸುತ್ತಿದ್ದಾರೆ.
ವೈಯಕ್ತಿಕ ಮಾಹಿತಿಯೊಂದಿಗೆ ಜಾಗರೂಕರಾಗಿರಿ: ಇನ್ನು ನೀವು ಏನನ್ನೇ ಖರೀದಿ ಮಾಡಲು ಮುಂದಾದರೂ ಸಹ ಅಗತ್ಯ ವೈಯಕ್ತಿಕ ಮಾಹಿತಿಯನ್ನು ಮಾತ್ರ ಒದಗಿಸಿ. ಸಂಪೂರ್ಣವಾಗಿ ಅಗತ್ಯವಿಲ್ಲದಿದ್ದರೆ ನಿಮ್ಮ ಸಾಮಾಜಿಕ ಭದ್ರತೆ ಸಂಖ್ಯೆ ಅಥವಾ ಪೂರ್ಣ ಜನ್ಮ ದಿನಾಂಕದಂತಹ ಸೂಕ್ಷ್ಮ ಡೇಟಾವನ್ನು ಶೇರ್ ಮಾಡಿಕೊಳ್ಳಬೇಡಿ. ಈ ಮಾಹಿತಿ ನಿಜವಾದ ಇ-ಕಾಮರ್ಸ್ ಸೈಟ್‌ಗಳಿಗೆ ಅಗತ್ಯವೂ ಇರುವುದಿಲ್ಲ.
ಸುರಕ್ಷಿತ ಸಂಪರ್ಕಗಳಿಗಾಗಿ ಪರಿಶೀಲಿಸಿ: ಇದೆಲ್ಲಕ್ಕೂ ಮಿಗಿಲಾಗಿ ಯಾವುದೇ ಪಾವತಿ ಮಾಹಿತಿಯನ್ನು ಎಂಟ್ರಿ ಮಾಡುವ ಮುನ್ನ ವೆಬ್‌ಸೈಟ್ ಸುರಕ್ಷಿತ ಸಂಪರ್ಕವನ್ನು ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದರಂತೆ URL "http://" ಬದಲಿಗೆ "https://" ಇರುವುದನ್ನು ಖಚಿತಪಡಿಸಿಕೊಳ್ಳಿ. ಹೀಗಿದ್ದರೆ ಮಾತ್ರ ನಿಮ್ಮ ಸ್ಮಾರ್ಟ್ ಡಿವೈಸ್ ನೊಂದಿಗೆ ನಿಮ್ಮ ಬ್ಯಾಂಕ್ ಸಹ ಭದ್ರವಾಗಿರುತ್ತದೆ.


Click it and Unblock the Notifications








