Home
ಸುದ್ದಿಜಾಲ

Washing Machine tips: ವಾಷಿಂಗ್ ಮೆಷಿನ್ ವಿಚಾರದಲ್ಲಿ ಈ ಸಲಹೆ ಪಾಲಿಸಿ, ನೀವು ಸೇಫ್‌, ಯಂತ್ರವೂ ಸೇಫ್‌!

ಮಳೆಗಾಲ ಆರಂಭ ಆಗಿದ್ದು, ಈ ನಡುವೆ ವಾಷಿಂಗ್ ಮೆಷಿನ್(washing machine) ಬಳಕೆ ಸಹ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಮುಖ ಕಂಪೆನಿಗಳು ವಿವಿಧ ಸ್ಮಾರ್ಟ್‌ ಫೀಚರ್ಸ್‌(Smart features) ಆಯ್ಕೆಯ ವಾಷಿಂಗ್ ಮೆಷಿನ್ ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಕೆಲವೆಡೆ ಈ ವಾಷಿಂಗ್ ಮೆಷಿನ್ ಗಳಿಂದ ಭಾರೀ ಅನಾಹುತಗಳೇ ನಡೆಯುತ್ತಿವೆ.

ಹೌದು, ಯಾವುದೇ ಡಿವೈಸ್‌ ಆದರೂ ಸರಿ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಇಲ್ಲವಾದರೆ ಅವು ಬಳಕೆದಾರರ ಪ್ರಾಣಕ್ಕೆ ಕುತ್ತು ತಂದುಬಿಡುತ್ತವೆ. ಅದರಂತೆ ವಾಷಿಂಗ್ ಮೆಷಿನ್ ಈ ಸಾಲಿನಲ್ಲಿ ಪ್ರಮುವಾಗಿದ್ದು, ಇದನ್ನು ತುಂಬಾ ಜಾಗರೂತೆಯಿಂದ ಬಳಕೆ ಮಾಡಬೇಕಾಗಿದೆ. ಹಾಗಿದ್ರೆ, ವಾಷಿಂಗ್ ಮೆಷಿನ್ ಅನ್ನು ಹೇಗೆ ಬಳಕೆ ಮಾಡಬೇಕು?, ಇದು ಬಾಂಬ್‌ನಂತೆ ಬ್ಲಾಸ್ಟ್‌ ಆಗದೆ ಇರಲು ಏನು ಮಾಡಬೇಕು? ಎಂದು ತಿಳಿಸಿಕೊಡಲಾಗಿದೆ ಓದಿರಿ.

ವಾಷಿಂಗ್ ಮೆಷಿನ್ ವಿಚಾರದಲ್ಲಿ ಈ ಸಲಹೆ ಪಾಲಿಸಿ, ನೀವು ಸೇಫ್‌, ಯಂತ್ರವೂ ಸೇಫ್‌!

ಬಾಂಬ್‌ನಂತೆ ಸಿಡಿಯುವ ವಾಷಿಂಗ್ ಮೆಷಿನ್: ವಾಷಿಂಗ್ ಮೆಷಿನ್ ಹಳ್ಳಿಗಳಿಂದ ನಗರಗಳವರೆಗೆ ಅನೇಕ ಮನೆಗಳಲ್ಲಿ ಬಳಕೆ ಆಗುತ್ತಿದೆ. ಪ್ರತಿಯೊಬ್ಬರೂ ಈ ಬಿಡುವಿಲ್ಲದ ಜೀವನದಲ್ಲಿ ಅವರವರ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಸೂಕ್ತವಾದ ವಾಷಿಂಗ್ ಮೆಷಿನ್ ಗಳನ್ನು ಖರೀದಿಸಿ ಮಾಡಿ ಬಳಕೆ ಮಾಡುತ್ತಿದ್ದಾರೆ. ಈ ನಡುವೆ ಕೆಲವು ವಾಷಿಂಗ್ ಮೆಷಿನ್‌ಗಳು ಬಾಂಬ್‌ಗಳಂತೆ ಸ್ಫೋಟಗೊಳ್ಳುವ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ.

ಇತ್ತೀಚೆಗಷ್ಟೇ ಲಕ್ನೋದಲ್ಲಿ ವಾಷಿಂಗ್ ಮೆಷಿನ್ ಬಳಸುವಾಗ ಮಹಿಳೆಯೊಬ್ಬರು ಶಾಕ್‌ಗೆ ಒಳಗಾಗಿ ಸಾವಿಗೀಡಾಗಿದ್ದಾರೆ. ಈ ಕಾರಣಕ್ಕಾಗಿಯೇ ಈ ವಾಷಿಂಗ್ ಮೆಷಿನ್ ಬಳಕೆ ಮಾಡುವಾಗ ತುಂಬಾ ಎಚ್ಚರಿಕೆ ವಹಿಸುವುದು ಅನಿವಾರ್ಯ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಏನೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೆ ಈ ವಾಷಿಂಗ್ ಮೆಷಿನ್‌ನಲ್ಲಿ ಸಮಸ್ಯೆ ಆಗುವುದಿಲ್ಲ ಎಂಬುದನ್ನು ತಿಳಿಯೋಣ.

ವೈರ್‌ಗಳ ಕಡೆ ಗಮನಹರಿಸಿ: ವಾಷಿಂಗ್ ಮೆಷಿನ್‌ಗಳಿಗೆ ಸಂಬಂಧಿಸಿದ ಯಾವುದೇ ವೈರ್‌ಗಳು ತುಂಡಾಗಿದ್ದರೆ ತಕ್ಷಣವೇ ಸಂಬಂಧಪಟ್ಟ ತಂತ್ರಜ್ಞರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ. ಜೊತೆಗೆ ಕಾಲಕಾಲಕ್ಕೆ ಪ್ಲಗ್‌ಗೆ ವೈರ್‌ಗಳನ್ನು ಸಹ ಪರಿಶೀಲಿಸಿ. ಅದು ತುಂಡಾಗಿದೆ ಎಂದು ತೋರುತ್ತಿದ್ದರೆ, ತಕ್ಷಣ ಅದನ್ನು ಬದಲಾಯಿಸಿ. ಇಲ್ಲದಿದ್ದರೆ, ತೊಳೆಯುವ ಯಂತ್ರದಲ್ಲಿ ವಿದ್ಯುದಾಘಾತವಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಕಂಟ್ರೋಲ್‌ ಪ್ಯಾನಲ್‌ ಗಮನಿಸಿ: ಇತ್ತೀಚಿನ ಸ್ಮಾರ್ಟ್‌ ವಾಷಿಂಗ್ ಮೆಷಿನ್‌ಗಳು ವಿವಿಧ ರೀತಿಯ ಕಂಟ್ರೋಲ್ ಪ್ಯಾನಲ್‌ ಆಯ್ಕೆ ಹೊಂದಿರುತ್ತವೆ. ಈ ಪ್ಯಾನಲ್‌ಗೆ ಯಾವುದೇ ಕಾರಣಕ್ಕೂ ನೀರು ಬೀಳಬಾರದು. ಏನಾಗುವುದಿಲ್ಲ ಎಂದು ಹೇಳಿ ಅಲ್ಲಿ ನೀರು ನಿಲ್ಲುವಂತೆ ಮಾಡಿದರೆ ಅಥವಾ ಅಲ್ಲಿ ಏನಾದರೂ ಡ್ಯಾಮೇಜ್‌ ಆದ ಜಾಗದಲ್ಲಿ ಕೈ ಇಟ್ಟರೆ ಖಂಡಿತಾ ನಿಮಗೂ ಶಾಕ್‌ ಹೊಡೆಯುತ್ತದೆ. ಜೊತೆಗೆ ಮೆಷಿನ್‌ ಸಹ ಹಾಳಾಗುತ್ತದೆ.

ಅನುಭವಿಗಳಿಂದಲೇ ರಿಪೇರಿ ಮಾಡಿಸಿ: ಕೆಲವರು ಹಣ ಉಳಿಸುವ ಉದ್ದೇಶದಿಂದ ಸಣ್ಣ ಪುಟ್ಟ ಎಲೆಕ್ಟ್ರಿಕ್‌ ಕೆಲಸಗಾರರಿಂದಲೇ ವಾಷಿಂಗ್ ಮೆಷಿನ್‌ ರಿಪೇರಿ ಮಾಡಿಸುತ್ತಾರೆ. ಆದರೆ ಕೆಲವರು
ಯಂತ್ರದೊಳಗಿನ ತಂತಿಗಳನ್ನು ಟೇಪ್ ಮಾಡಲು ಮರೆತುಬಿಡುವ ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ. ಅಲ್ಲದೆ ಕೆಲವೊಮ್ಮೆ ಮೋಟಾರ್ ಸ್ಕ್ರೂಗಳನ್ನು ಸರಿಯಾಗಿ ಬಿಗಿಗೊಳಿಸಲು ಮರೆತುಬಿಡುತ್ತಾರೆ. ಈ ರೀತಿಯಾದಾಗ ವಾಷಿಂಗ್ ಮೆಷಿನ್‌ನಲ್ಲಿ ಅಪಾಯಗಳು ಹೆಚ್ಚಾಗುತ್ತವೆ.

ವಾಷಿಂಗ್ ಮೆಷಿನ್ ವಿಚಾರದಲ್ಲಿ ಈ ಸಲಹೆ ಪಾಲಿಸಿ, ನೀವು ಸೇಫ್‌, ಯಂತ್ರವೂ ಸೇಫ್‌!

ಸರ್ವಿಸ್‌ ಮಾಡಿಸಿ: ಬೇರೆ ಯಾವುದೇ ಡಿವೈಸ್‌ ತೆಗೆದುಕೊಂಡರೂ ಸಹ ಜನರು ಅದನ್ನು ಕಾಲಕಾಲಕ್ಕೆ ಸರ್ವಿಸ್ ಮಾಡಿಸುತ್ತಾರೆ. ಆದರೆ ವಾಷಿಂಗ್ ಮೆಷಿನ್‌ ವಿಚಾರಕ್ಕೆ ಬಂದಾಗ ಈ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಕಾರಣ ಇವು ದೊಡ್ಡ ಆಕಾರದಿಂದ ಕೂಡಿರುವುದಲ್ಲದೆ ಹೆಚ್ಚಿನ ತೂಕ ಸಹ ಹೊಂದಿರುತ್ತವೆ. ಆದರೆ ನೀವು ಕಾಲಕಾಲಕ್ಕೆ ಸರ್ವಿಸ್‌ ಮಾಡಿಸದೆ ಇದ್ದರೆ ವಾಷಿಂಗ್ ಮೆಷಿನ್ ಬೇಗನೇ ಹಾಳಾಗುವುದರ ಜೊತೆಗೆ ಹಲವಾರು ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂಬುದು ನಿಮಗೆ ಗೊತ್ತಿರಲಿ.

Best Mobiles in India

English summary
Nowadays the use of washing machine is increasing and the problems caused by this machine are also increasing. In the meantime, learn how to use the washing machine wisely.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+