Home
ಸುದ್ದಿಜಾಲ

ಮನೆಯ ಹೊರಗೆ ವಾಷಿಂಗ್ ಮೆಷಿನ್‌ ಬಳಕೆ ಮಾಡುತ್ತೀರಾ? ಈ ವಿಷಯ ನಿಮ್ಮ ಗಮನಕ್ಕೆ!

ವಾಷಿಂಗ್ ಮೆಷಿನ್‌ಗಳು (Washing machine) ಇಂದು ಪ್ರತಿಯೊಂದು ಮನೆಯ ಅಗತ್ಯ ಸಾಧನಗಳಲ್ಲಿ ಒಂದಾಗಿವೆ. ಅದರಲ್ಲೂ ಸುಧಾರಿತ ಫೀಚರ್ಸ್ ಆಯ್ಕೆಯ ಮೂಲಕ ಈ ಮೆಷಿನ್‌ ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ಬಳಕೆದಾರರ ಅಗತ್ಯತೆಗಳನ್ನು ಪೂರೈಕೆ ಮಾಡುತ್ತಿವೆ. ಅಷ್ಟೇ ಅಲ್ಲದೆ ಈಗಂತೂ ಹಳ್ಳಿಗಳಲ್ಲೂ ಸಹ ಇದರ ಬಳಕೆ ಹೆಚ್ಚುತ್ತಿದೆ.

ಹೌದು, ಯಾವುದೇ ಡಿವೈಸ್‌ ಅನ್ನು ಖರೀದಿ ಮಾಡಿದರಷ್ಟೇ ಸಾಲುವುದಿಲ್ಲ, ಬದಲಾಗಿ ಅದನ್ನು ಹೇಗೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂಬ ಸಾಮಾನ್ಯ ಅರಿವು ಸಹ ಇರಬೇಕು. ಯಾಕೆಂದರೆ ಕೆಲವೊಂದು ಡಿವೈಸ್‌ಗಳು ಬ್ಲಾಸ್ಟ್‌ ಆಗುವ ಸಾಧ್ಯತೆಯೂ ಇದೆ, ಇನ್ನೂ ಕೆಲವು ಕೆಲವೇ ದಿನಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಅಷ್ಟೇ ಅಲ್ಲದೆ ಬಳಕೆದಾರರಿಗೆ ಹಲವಾರು ರೀತಿಯಲ್ಲಿ ಸಮಸ್ಯೆ ಉಂಟು ಮಾಡುತ್ತವೆ. ಈ ಕಾರಣಕ್ಕೆ ನಿಮ್ಮ ಮನೆಯಲ್ಲಿ ಏನಾದರೂ ವಾಷಿಂಗ್ ಮೆಷಿನ್‌ ಇದ್ದರೆ ಈ ಸಲಹೆಗಳನ್ನು ಪಾಲಿಸಿ.

ಮನೆಯ ಹೊರಗೆ ವಾಷಿಂಗ್ ಮೆಷಿನ್‌ ಬಳಕೆ ಮಾಡುತ್ತೀರಾ? ಈ ವಿಷಯ ನಿಮ್ಮ ಗಮನಕ್ಕೆ!

ವಾಷಿಂಗ್ ಮೆಷಿನ್ ಅನ್ನು ಸರಿಯಾದ ಜಾಗದಲ್ಲಿ ಇರಿಸಿ: ಹಲವಾರು ಜನರಿಗೆ ವಾಷಿಂಗ್ ಮೆಷಿನ್‌ ಅನ್ನು ಎಲ್ಲಿ ಇಡುವುದು ಎಂಬ ಗೊಂದಲ ಇರುತ್ತದೆ. ಆದರೂ ಸಹ ಬಹುಪಾಲು ಮಂದಿ ಅದನ್ನು ಬಾಲ್ಕನಿಯಲ್ಲಿ ಇರಿಸಬಹುದು. ಇನ್ನೂ ಕೆಲವರು ಮನೆಯ ಹೊರಗೆ ಇಡಬಹದು. ಅದರಲ್ಲೂ ಬಾಲ್ಕನಿಯಲ್ಲಿ ಇಡುವುದು ತಪ್ಪೇನಿಲ್ಲ. ಆದರೆ ಇದಕ್ಕೂ ಮೊದಲು ಕೆಲವು ಉಪಾಯಗಳು ನಿಮ್ಮಲ್ಲಿ ಇರಬೇಕು. ಇದಕ್ಕಾಗಿ, ಒಂದು ಮೂಲೆಯಲ್ಲಿ ಸ್ವಲ್ಪ ಎತ್ತರದ ಸ್ಥಳವನ್ನು ಆಯ್ಕೆಮಾಡಿ. ಯಾಕೆಂದರೆ ಬಾಲ್ಕನಿಯಲ್ಲಿ ಮಳೆ ನೀರು ತುಂಬಿದಾಗ ನೀರು ಮಿಷನ್‌ಗೆ ತಾಗುವುದಿಲ್ಲ.

ಪ್ಲೇಯರ್ ಅನ್ನು ಮುಚ್ಚಿ: ಅಷ್ಟಲ್ಲದೆ ವಾಷಿಂಗ್ ಮೆಷಿನ್‌ ಯಾವ ಕಾರಣಕ್ಕೂ ನೇರ ಸೂರ್ಯನ ಬೆಳಕು ಅಥವಾ ಬಾಲ್ಕನಿಯಿಂದ ನೇರ ಮಳೆನೀರಿಗೆ ಒಡ್ಡಿಕೊಳ್ಳಬಾರದು. ಈ ರೀತಿ ಆದರೆ
ಯಂತ್ರಕ್ಕೆ ಹಾನಿ ಉಂಟಾಗುತ್ತದೆ. ಇದರಿಂದಾಗಿ ಕೆಲವೇ ವರ್ಷಗಳಲ್ಲಿ ವಾಷಿಂಗ್ ಮೆಷಿನ್ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಅಷ್ಟೇ ಅಲ್ಲದೆ ತಾಂತ್ರಿಕ ಸಮಸ್ಯೆಗಳನ್ನು ನಿರ್ಮಾಣ ಮಾಡುತ್ತದೆ.

ಸೊಳ್ಳೆ ಪರದೆ ಬಳಕೆ ಮಾಡಬಹುದು: ಯಾರದೇ ಮನೆಯಲ್ಲಾದರೂ ಈಗ ಸೊಳ್ಳೆ ಪರದೆ ಬಳಕೆ ಇದ್ದೇ ಇರುತ್ತದೆ. ಹೀಗಾಗಿ ವಾಷಿಂಗ್ ಮೆಷಿನ್ ಅನ್ನು ಬಳಕೆ ಮಾಡದಿದ್ದ ಸಂದರ್ಭದಲ್ಲಿ ಅದನ್ನು ಸೊಳ್ಳೆ ಪರದೆಯಿಂದ ಮುಚ್ಚಬಹುದು. ಇದು ಹೆಚ್ಚಿನ ಪ್ರಮಾಣದಲ್ಲಿ ಕೀಟಗಳಿಂದ ರಕ್ಷಿಸಲು ಸಹಾಯ ಮಾಡಲಿದೆ. ಅಂದರೆ ಸೊಳ್ಳೆ, ನೊಣ ಸೇರಿದಂತೆ ಇತರೆ ಸಣ್ಣ ಪುಟ್ಟ ಕೀಟಗಳು ವಾಷಿಂಗ್ ಮೆಷಿನ್ ಒಳಗೆ ಸೇರುವುದಿಲ್ಲ.

ವೈರಿಂಗ್ ಅನ್ನು ನಿರಂತರವಾಗಿ ಪರಿಶೀಲಿಸಿ: ಇನ್ನು ಈ ವಾಷಿಂಗ್ ಮೆಷಿನ್ ಅನ್ನು ಬಾಲ್ಕನಿಯಲ್ಲಿ ಇಡಲಾಗಿರುವುದರಿಂದ ತಿಂಗಳಿಗೊಮ್ಮೆ ಅದರ ವೈರಿಂಗ್ ಅನ್ನು ಗಮನಿಸಬೇಕು. ಇದರಿಂದ ನೀವು ಯಾವುದೇ ಅಪಾಯವನ್ನು ಪೂರ್ವದಲ್ಲಿಯೇ ತಪ್ಪಿಸಬಹುದು. ಯಾಕೆಂದರೆ ಇಲಿ ಅಥವಾ ಇನ್ನಿತರೆ ಸಣ್ಣ ಪುಟ್ಟ ಜೀವಿಗಳು ವೈರ್‌ಗಳನ್ನು ತುಂಡರಿಸಬಹುದು. ಆಗ ವಾಷಿಂಗ್ ಮೆಷಿನ್ ಗಂಭೀರವಾಗಿ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಮಳೆ ನಿರೋಧಕ ಶೀಟ್ ಅಳವಡಿಕೆ: ಇದೆಲ್ಲಕ್ಕಿಂತ ಮಿಗಿಲಾಗಿ ವಾಷಿಂಗ್ ಮೆಷಿನ್ ಮೇಲೆ ವಾಟರ್ ರೆಸಿಸ್ಟೆಂಟ್ ಕವರ್ ಹಾಕುವುದು ಸೂಕ್ತ. ಈ ಕಾರಣದಿಂದಾಗಿ, ನೀರು ನೇರವಾಗಿ ಯಂತ್ರಕ್ಕೆ ಬೀಳುವುದಿಲ್ಲ. ಪರಿಣಾಮ ಯಂತ್ರ ಯಾವುದೇ ಕಾರಣಕ್ಕೂ ಹಾನಿಗೆ ಒಳಗುವುದಿಲ್ಲ. ಇದರೊಂದಿಗೆ ನೀರು ಸರಿಯಾಗಿ ಅಲ್ಲಿಂದ ಎಲ್ಲಿ ಹೊರಹೋಗಬೇಕು ಎಂಬುದನ್ನು ಸಹ ಖಚಿತಪಡಿಸಿಕೊಳ್ಳಿ.

ವಿದ್ಯುತ್ ಸಂಪರ್ಕಗಳ ಕಡೆ ಗಮನ ಇರಲಿ: ನೀವು ಬಾಲ್ಕನಿಯಲ್ಲಿ ಸರಿಯಾದ ವಿದ್ಯುತ್ ಔಟ್ಲೆಟ್ ಅನ್ನು ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳುವುದು ಸಹ ಪ್ರಮುಖವಾದ ಕೆಲಸವಾಗಿದೆ. ವಿಸ್ತರಣಾ ವೈರ್‌ಗಳನ್ನು ಬಳಕೆ ಮಾಡುವುದು ಅಥವಾ ತಾತ್ಕಾಲಿಕ ವೈರ್‌ಗಳ ಮೂಲಕ ಸಂಪರ್ಕ ಪಡೆಯುವುದನ್ನು ಎಂದಿಗೂ ಮಾಡಬೇಡಿ. ಯಾಕೆಂದರೆ ಈ ಮಾರ್ಗ ಎಂದಿಗೂ ಅಪಾಯಕಾರಿ.

ಮನೆಯ ಹೊರಗೆ ವಾಷಿಂಗ್ ಮೆಷಿನ್‌ ಬಳಕೆ ಮಾಡುತ್ತೀರಾ? ಈ ವಿಷಯ ನಿಮ್ಮ ಗಮನಕ್ಕೆ!

ಶಬ್ದ ಮತ್ತು ಕಂಪನ ಕಂಟ್ರೋಲ್‌ ಮಾಡಿ: ವಾಷಿಂಗ್ ಮೆಷಿನ್ ಶಬ್ದ ಮತ್ತು ಕಂಪನವನ್ನು ಉಂಟುಮಾಡಬಹುದು. ಇದರಿಂದಾಗಿ ನೆರೆಹೊರೆಯವರಿಗೆ ನಿಮ್ಮ ಬಳಿ ಜಗಳಕ್ಕೆ ಬರುವ ಸಾಧ್ಯತೆ ಹೆಚ್ಚು. ಈ ರೀತಿಯ ಕಂಪನಗಳು ಮತ್ತು ಶಬ್ದವನ್ನು ಕಡಿಮೆ ಮಾಡಲು ಯಂತ್ರದ ಕೆಳಗೆ ಆಂಟಿ-ಕಂಪನ ಪ್ಯಾಡ್‌ಗಳು ಅಥವಾ ಮ್ಯಾಟ್‌ಗಳನ್ನು ಬಳಕೆ ಮಾಡುವುದು ಉತ್ತಮ
Best Mobiles in India

English summary
Buying any device is not enough, but rather having a general awareness of how to take care of it. Read on to learn how to use the washing machine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+